ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಸಭೆಯಲ್ಲಿ ನೀಡಿರುವ ಹೇಳಿಕೆ ಖಂಡಿಸಿ ಕಾಂಗ್ರೆಸ್ ನೇತೃತ್ವದಲ್ಲಿ ಇಂಡಿಯಾ ಮೈತ್ರಿಕೂಟದ ನಾಯಕರು ಇಂದು (ಡಿ.19) ಸಂಸತ್ ಬಳಿ ಪ್ರತಿಭಟನೆ ನಡೆಸಿದರು.
ಕೈಯಲ್ಲಿ ಅಂಬೇಡ್ಕರ್ ಫೋಟೋ ಹಿಡಿದು ಸಂಸತ್ ಆವರಣದ ಅಂಬೇಡ್ಕರ್ ಪ್ರತಿಮೆ ಬಳಿಯಿಂದ ಮೆರವಣಿಗೆ ನಡೆಸಿದ ಇಂಡಿಯಾ ಮೈತ್ರಿಕೂಟದ ನಾಯಕರು, ಅಮಿತ್ ಶಾ ಅವರು ಕ್ಷಮೆ ಯಾಚಿಸುವಂತೆ ಮತ್ತು ರಾಜೀನಾಮೆ ನೀಡುವಂತೆ ಆಗ್ರಹಿಸಿದರು. ಈ ವೇಳೆ ಬಹುತೇಕರು ನೀಲಿ ಬಣ್ಣದ ವಸ್ತ್ರ ಧರಿಸಿದ್ದರು.
#WATCH | Delhi | MPs of INDIA bloc, led by Lok Sabha LoP Rahul Gandhi and Congress MP Priyanka Gandhi Vadra, hold protest march at Babasaheb Ambedkar statue at the Parliament premises.
They are marching to Makar Dwar, demanding an apology and the resignation of Union Home… pic.twitter.com/QL1TU0Pwse
— ANI (@ANI) December 19, 2024
ಮೆರವಣಿಗೆ ಬಳಿಕ ಇಂಡಿಯಾ ನಾಯಕರು ಸಂಸತ್ತಿನ ಮಕರ ದ್ವಾರದ ಬಳಿ ಗೋಡೆ ಏರಿ ಅಮಿತ್ ಶಾ ಮತ್ತು ಕೇಂದ್ರದ ಎನ್‌ಡಿಎ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಸಂಸದರಿಂದ ಪ್ರತಿಭಟನೆ
ಇಂಡಿಯಾ ಮೈತ್ರಿಕೂಟದ ನಾಯಕರ ಪ್ರತಿಭಟನೆ ನಡುವೆ ಬಿಜೆಪಿ ಸಂಸದರು ಕೂಡ ಸಂಸತ್ತಿನ ಬಾಗಿಲ ಬಳಿ ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ಪೋಟೋಗಳನ್ನು ಹಿಡಿದು ಪ್ರತಿಭಟಿಸಿದರು. ಕಳೆದ 60 ವರ್ಷಗಳಲ್ಲಿ ಕಾಂಗ್ರೆಸ್ ಅಂಬೇಡ್ಕರ್ ಅವರನ್ನು ಅವಮಾನಿಸಿದೆ ಎಂದು ಘೋಷಣೆಗಳನ್ನು ಕೂಗಿದರು.
#WATCH | Delhi: BJP MPs protest in Parliament, alleging insult of Babasaheb Ambedkar by Congress party. pic.twitter.com/HRF2UFfucd
— ANI (@ANI) December 19, 2024
ರಾಹುಲ್ ಗಾಂಧಿ ತಳ್ಳಿದ್ರೂ ಎಂದ ಬಿಜೆಪಿ ಸಂಸದ
ಸಂಸತ್ ಬಳಿ ಬಿಜೆಪಿ-ಕಾಂಗ್ರೆಸ್ ಸಂಸದರು ಮುಖಾಮುಖಿಯಾದಾಗ ರಾಹುಲ್ ಗಾಂಧಿ ನನ್ನನ್ನು ತಳ್ಳಿದ್ರು ಎಂದು ಬಿಜೆಪಿ ಸಂಸದ ಪ್ರತಾಪ್ ಚಂದ್ರ ಸಾರಂಗಿ ಆರೋಪಿಸಿದರು. ರಾಹುಲ್ ಗಾಂಧಿ ತಳ್ಳಿದ್ರಿಂದ ನಾನು ನೆಲಕ್ಕೆ ಬಿದ್ದೆ ಎಂದು ಸಾರಂಗಿ ಮಾಧ್ಯಮಗಳ ಮುಂದೆ ಹೇಳಿದ್ದಾರೆ. ತಳ್ಳಾಟ-ನೂಕಾಟದಿಂದ ಸಾರಂಗಿ ಅವರ ಎಡಗಣ್ಣಿನ ಕಣ್ಣಿನ ಬಳಿ ಗಾಯವಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಗಳು ಹೇಳಿವೆ.
#WATCH | Delhi | BJP MP Pratap Chandra Sarangi says, "Rahul Gandhi pushed an MP who fell on me after which I fell down…I was standing near the stairs when Rahul Gandhi came and pushed an MP who then fell on me…" pic.twitter.com/xhn2XOvYt4
— ANI (@ANI) December 19, 2024
ಆರೋಪ ತಳ್ಳಿ ಹಾಕಿದ ರಾಹುಲ್ ಗಾಂಧಿ
ಸಂಸದ ಪ್ರತಾಪ್ ಚಂದ್ರ ಸಾರಂಗಿ ಅವರನ್ನು ತಳ್ಳಿದ್ದಾರೆ ಎಂಬ ಆರೋಪವನ್ನು ರಾಹುಲ್ ಗಾಂಧಿ ಅಲ್ಲಗಳೆದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ನಾನು ಸಂಸತ್ತಿನ ಒಳಗೆ ಹೋಗಲು ಪ್ರಯತ್ನಿಸುತ್ತಿದ್ದೆ. ಈ ವೇಳೆ ಬಿಜೆಪಿ ಸಂಸದರು ನನ್ನನ್ನು ತಡೆಯಲು ಪ್ರಯತ್ನಿಸಿದರು. ಇದು ಸಂಭವಿಸಿರುವುದು. ಇದು ಸಂಸತ್ ಭವನದ ಪ್ರವೇಶ ದ್ವಾರವಾಗಿದೆ. ಇಲ್ಲಿಂದ ಒಳಗೆ ಹೋಗಲು ನಮಗೆ ಹಕ್ಕಿದೆ” ಎಂದು ಸಂಸತ್ ಭವನದ ಬಾಗಿಲತ್ತ ಕೈ ತೋರಿಸಿದರು.
VIDEO | "I was just trying to go inside the Parliament and BJP MPs were trying to stop me. This is what has happened… This is the entrance of Parliament House and we have a right to go inside," says Lok Sabha LoP Rahul Gandhi (@RahulGandhi) as BJP leaders accuse him of shoving… pic.twitter.com/hHsZlaNAyM
— Press Trust of India (@PTI_News) December 19, 2024
ಇದನ್ನೂ ಓದಿ : ಅಂಬೇಡ್ಕರ್‌ಗೆ ಅವಮಾನ | ಅಮಿತ್ ಶಾ ವಿರುದ್ಧ ಟಿಎಂಸಿಯಿಂದ ಹಕ್ಕುಚ್ಯುತಿ ನೋಟಿಸ್


