ಬಿಹಾರ ಲೋಕಸೇವಾ ಆಯೋಗದ (ಬಿಪಿಎಸ್‌ಸಿ) ಆಕಾಂಕ್ಷಿಗಳ ಮೇಲೆ ಪೊಲೀಸರು ಬುಧವಾರ ಲಾಠಿ ಚಾರ್ಜ್ ಮಾಡಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನಲೆ ಆಕಾಂಕ್ಷಿಗಳು ಪರೀಕ್ಷೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಪಟ್ನಾದಲ್ಲಿರುವ ಆಯೋಗದ ಕಚೇರಿಗೆ “ಘೇರಾವ್” ಮಾಡಲು ಜಮಾಯಿಸಿದ ಪೊಲೀಸರು ಆಕಾಂಕ್ಷಿಗಳ ಮೇಲೆ ದಾಳಿ ಮಾಡಿದ್ದಾರೆ. ಲಾಠಿ ಚಾರ್ಜ್ ನಂತರ ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ಪೊಲೀಸರು, ಆಕಾಂಕ್ಷಿಗಳ ಮೇಲೆ “ಸೌಮ್ಯ ಬಲ”ವನ್ನು ಪ್ರಯೋಗಿಸಿರುವುದಾಗಿ ಹೇಳಿದ್ದು, ಯಾವುದೆ ವಿದ್ಯಾರ್ಥಿಗಳಿಗೆ ಗಾಯಗಳಾಗಿಲ್ಲ ಎಂದು ಹೇಳಿದ್ದಾರೆ. ಬಿಹಾರ ಪ್ರಶ್ನೆ ಪತ್ರಿಕೆ
ಅದಾಗ್ಯೂ, ಕೋಚಿಂಗ್ ಶಿಕ್ಷಕರು ಆಕಾಂಕ್ಷಿಗಳನ್ನು ಪ್ರತಿಭಟನೆಗೆ ಪ್ರೇರೇಪಿಸುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಆರೋಪಿಸಿದ್ದು, ವಿದ್ಯಾರ್ಥಿಗಳನ್ನು ದಾರಿ ತಪ್ಪಿಸುವ ಹಲವಾರು ಸಾಮಾಜಿಕ ಮಾಧ್ಯಮ ಖಾತೆಗಳನ್ನು ಹೆಸರಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಬಿಪಿಎಸ್‌ಸಿಯ ಪೂರ್ವಭಾವಿ ಪರೀಕ್ಷೆಯನ್ನು ರದ್ದುಗೊಳಿಸುವಂತೆ ಆಕಾಂಕ್ಷಿಗಳು ಡಿಸೆಂಬರ್ 18 ರಿಂದ ಗಾರ್ಡನಿಬಾಗ್‌ನ ಧರಣಿ ಸ್ಥಳದಲ್ಲಿ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವಿದ್ಯಾರ್ಥಿಗಳಿಗೆ ಕೆಲವು ಶಿಕ್ಷಕರು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಪ್ರಚೋದನೆ ನೀಡುತ್ತಿದ್ದಾರೆ. ಹೆಚ್ಚುವರಿಯಾಗಿ, ಅನೇಕ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳು ಅವರನ್ನು ದಾರಿತಪ್ಪಿಸುತ್ತಿವೆ ಮತ್ತು ಪ್ರಚೋದಿಸುತ್ತಿವೆ. ಎಂದು ಡಿಎಸ್ಪಿ ಅನು ಕುಮಾರಿ ಹೇಳಿದ್ದಾರೆ.
बिहार में BPSC परीक्षा में धांधली के खिलाफ प्रदर्शन कर रहे युवाओं पर पुलिस की लाठीचार्ज शर्मनाक है। ये सिर्फ बिहार नहीं, पूरे देश के युवाओं की स्थिति है। #BPSCStudentsProtestpic.twitter.com/69hQiKSH20
— Hansraj Meena (@HansrajMeena) December 25, 2024
“ಡಿಸೆಂಬರ್ 23 ರಂದು, ಅಭ್ಯರ್ಥಿಯೊಬ್ಬರು ಗಾರ್ಡನಿಬಾಗ್ ಆಸ್ಪತ್ರೆಯನ್ನು ಧ್ವಂಸಗೊಳಿಸಿದರು. ಇಂದು, ಡಿಸೆಂಬರ್ 25 ರಂದು, ನೂರಾರು BPSC ಆಕಾಂಕ್ಷಿಗಳು BPSC ಕಚೇರಿಯನ್ನು ಸುತ್ತುವರೆದರು. ಅನುಮತಿಯಿಲ್ಲದೆ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಗಳನ್ನು ಸೃಷ್ಟಿಸಲಾಯಿತು, ಇದು ಸಾರ್ವಜನಿಕರಿಗೆ ಅನಾನುಕೂಲತೆಯನ್ನು ಉಂಟುಮಾಡಿತು. ಅವರ ಮೇಲೆ ಆಡಳಿತವು ಸೌಮ್ಯವಾದ ಬಲವನ್ನು ಬಳಸಿದ್ದು, ಯಾರಿಗೂ ಯಾವುದೇ ಗಾಯಗಳಾಗಿಲ್ಲ” ಎಂದು ಅವರು ಪ್ರತಿಪಾದಿಸಿದ್ದಾರೆ. ಬಿಹಾರ ಪ್ರಶ್ನೆ ಪತ್ರಿಕೆ
ಆಕಾಂಕ್ಷಿಗಳಿಗೆ ಪ್ರಚೋದನೆ ನೀಡಿದವರ ವಿರುದ್ಧ ಸಂಬಂಧಪಟ್ಟ ಸೆಕ್ಷನ್‌ಗಳ ಅಡಿಯಲ್ಲಿ ಗಾರ್ಡನಿಬಾಗ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಡಿಎಸ್‌ಪಿ ತಿಳಿಸಿದ್ದಾರೆ.
कैंडिडेट्स हाथ जोड़कर कह रहे हैं कि हम लोग आतंकवादी हैं सर, जो इस तरह से किया जा रहा है। पटना में BPSC अभ्यर्थियों पर पुलिस ने किया लाठीचार्ज#BPSCReExamForAll #BPSC #BPSC_70th #BPSC70th #Bihar #Shiksha_Satyagrah #शिक्षा_सत्याग्रह #BPSC_NO_NORMALIZATION #BPSCStudentsProtest… pic.twitter.com/S6kD8YD8h4
— FirstBiharJharkhand (@firstbiharnews) December 25, 2024
”ಅಭ್ಯರ್ಥಿಗಳಿಗೆ ಪ್ರಚೋದನೆ ನೀಡಿ ಆಸ್ಪತ್ರೆ ಧ್ವಂಸ ಮಾಡಿದವರ ವಿರುದ್ಧ ಗಾರ್ಡನಿಬಾಗ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಕಾನೂನು ಕ್ರಮಕ್ಕಾಗಿ ಸಂಬಂಧಪಟ್ಟ ಎಲ್ಲರಿಗೂ ನೋಟಿಸ್ ಕಳುಹಿಸಲಾಗುತ್ತಿದೆ ಮತ್ತು ಪ್ರಕರಣಗಳನ್ನು ದಾಖಲಿಸಲಾಗುವುದು. ಇಂದು ಬಿಪಿಎಸ್‌ಸಿ ಕಚೇರಿ ಬಳಿ ನಡೆದ ಘಟನೆಗೆ ಸಂಬಂಧಿಸಿದಂತೆ ಅಕ್ರಮ ಕೂಟದಲ್ಲಿ ಭಾಗಿಯಾದವರನ್ನು ಗುರುತಿಸುತ್ತಿದ್ದೇವೆ,” ಎಂದು ಅವರು ಹೇಳಿದ್ದಾರೆ.
ಇದಕ್ಕೂ ಮುನ್ನ, ಮಂಗಳವಾರ, BPSC ಅಧ್ಯಕ್ಷ ಪರ್ಮಾರ್ ರವಿ ಮನುಭಾಯಿ ಅವರು ಈ ತಿಂಗಳ ಆರಂಭದಲ್ಲಿ ನಡೆದ 70 ನೇ ಇಂಟಿಗ್ರೇಟೆಡ್ ಕಂಬೈನ್ಡ್ ಸ್ಪರ್ಧಾತ್ಮಕ ಪರೀಕ್ಷೆ (CCE) 2024 ರ ರದ್ದತಿಯನ್ನು ತಳ್ಳಿಹಾಕಿದ್ದರು.
सबका नंबर आयेगा। इस पर चुप्पी का हिसाब आने वाली पीढ़ियों को भी भुगतना पड़ेगा। #BPSCStudentsProtest pic.twitter.com/JBtuQOjcdE
— Hansraj Meena (@HansrajMeena) December 25, 2024
ಮಂಗಳವಾರ, ಖಾನ್ ಸರ್ ಎಂದು ಜನಪ್ರಿಯರಾಗಿರುವ ಯೂಟ್ಯೂಬರ್ ಮತ್ತು ಶಿಕ್ಷಣತಜ್ಞ ಫೈಸಲ್ ಖಾನ್ ಅವರು ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳನ್ನು ಭೇಟಿ ಮಾಡಿದ್ದಾರೆ.
ಬಿಹಾರ ಲೋಕಸೇವಾ ಆಯೋಗದ (ಬಿಪಿಎಸ್‌ಸಿ) ಅಧ್ಯಕ್ಷ ಪರ್ಮಾರ್ ರವಿ ಮನುಭಾಯಿ ಮಂಗಳವಾರ (ಡಿಸೆಂಬರ್ 24, 2024) ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪದಲ್ಲಿ ಸಿಲುಕಿರುವ ಈ ತಿಂಗಳ ಆರಂಭದಲ್ಲಿ ನಡೆದ 70ನೇ ಇಂಟಿಗ್ರೇಟೆಡ್ ಕಂಬೈನ್ಡ್ ಸ್ಪರ್ಧಾತ್ಮಕ ಪರೀಕ್ಷೆ (ಸಿಸಿಇ) 2024 ರ ರದ್ದತಿಯನ್ನು ತಳ್ಳಿಹಾಕಿದ್ದಾರೆ.
ಡಿಸೆಂಬರ್ 13 ರಂದು ಬಾಪು ಪರೀಕ್ಷಾ ಪರಿಸರ ಪರೀಕ್ಷಾ ಕೇಂದ್ರಕ್ಕೆ ನಿಯೋಜಿಸಲಾದ ಅಭ್ಯರ್ಥಿಗಳ ಮರುಪರೀಕ್ಷೆ ನಡೆಸುತ್ತೇವೆ ಎಂದು BPSC ಸ್ಪಷ್ಟಪಡಿಸಿದ್ದು, ಮರು ಪರೀಕ್ಷೆಯನ್ನು ಜನವರಿ 4, 2025 ರಂದು ನಡೆಸಲಾಗುವುದು ಎಂದು ಹೇಳಿದೆ.
जितना रोना है – रो ले, आएगा तो मोदी ही! – #भक्तबनर्जी#BPSCStudentsProtest pic.twitter.com/b00xXHrw1P
— The DeshBhakt 🇮🇳 (@TheDeshBhakt) December 26, 2024
ಇದನ್ನೂ ಓದಿ: ಸಾಂತಾ ಕ್ಲಾಸ್ ಬಟ್ಟೆ ತೆಗೆಸಿ ಜೈಶ್ರೀರಾಮ್ ಘೋಷಣೆ ಹೇಳಿಸಿದ ಬಿಜೆಪಿ ಪರ ಸಂಘಟನೆಯ ದುಷ್ಕರ್ಮಿಗಳು
ಸಾಂತಾ ಕ್ಲಾಸ್ ಬಟ್ಟೆ ತೆಗೆಸಿ ಜೈಶ್ರೀರಾಮ್ ಘೋಷಣೆ ಹೇಳಿಸಿದ ಬಿಜೆಪಿ ಪರ ಸಂಘಟನೆಯ ದುಷ್ಕರ್ಮಿಗಳು


