Homeಅಂತರಾಷ್ಟ್ರೀಯಪಾಕಿಸ್ತಾನದ ಜನಪ್ರಿಯ ಲೇಖಕಿ ಬಾಪ್ಸಿ ಸಿಧ್ವಾ (86) ನಿಧನ

ಪಾಕಿಸ್ತಾನದ ಜನಪ್ರಿಯ ಲೇಖಕಿ ಬಾಪ್ಸಿ ಸಿಧ್ವಾ (86) ನಿಧನ

- Advertisement -
- Advertisement -

ಪಾಕಿಸ್ತಾನದ ಅತ್ಯಂತ ಜನಪ್ರಿಯ ಇಂಗ್ಲಿಷ್ ಭಾಷೆಯ ಕಾದಂಬರಿಕಾರರಲ್ಲಿ ಒಬ್ಬರಾದ ಬಾಪ್ಸಿ ಸಿಧ್ವಾ ಅವರು ಬುಧವಾರ ಅಮೆರಿಕದ ಟೆಕ್ಸಾಸ್‌ನ ಹೂಸ್ಟನ್‌ನಲ್ಲಿ ನಿಧನರಾದರು ಎಂದು ಡಾನ್ ಪತ್ರಿಕೆ ವರದಿ ಮಾಡಿದೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ಪಾಕಿಸ್ತಾನದ ಜನಪ್ರಿಯ ಲೇಖಕಿ

ಸಿಧ್ವಾ ಅವರು 1938 ರಲ್ಲಿ ಕರಾಚಿಯ ಗುಜರಾತಿ ಪಾರ್ಸಿ ಕುಟುಂಬದಲ್ಲಿ ಜನಿಸಿದರು. ನಂತರ ಲಾಹೋರ್‌ನಲ್ಲಿ ಬೆಳೆದ ಅವರು, ಅಲ್ಲಿ 1947 ರ ವಿಭಜನೆಯ ಪರಿಣಾಮವನ್ನು ಪ್ರತ್ಯಕ್ಷವಾಗಿ ನೋಡಿದವರಾಗಿದ್ದಾರೆ. ಈ ಘಟನೆ ಅವರನ್ನು ಅವರ ಬರವಣಿಗೆಯನ್ನು ರೂಪಿಸಿತು. 1957 ರಲ್ಲಿ ಲಾಹೋರ್‌ನಲ್ಲಿರುವ ಕಿನ್ನೈರ್ಡ್ ಕಾಲೇಜ್ ಫಾರ್ ವುಮೆನ್‌ನಿಂದ ಬಿಎ ಪಡೆದ ಅವರು 1983 ರಲ್ಲಿ ಅಮೆರಿಕಾಕ್ಕೆ ವಲಸೆ ಹೋದರು.

ಸಿಧ್ವಾ ಅವರು ಪಾಕಿಸ್ತಾನದ ಅತ್ಯುತ್ತಮ ಕಾದಂಬರಿಕಾರರಲ್ಲಿ ಒಬ್ಬರಾಗಿ ವ್ಯಾಪಕವಾಗಿ ಹೆಸರುವಾಸಿದ್ದಾರೆ. ಅವರ ಕೃತಿಗಳಲ್ಲಿ ದಿ ಕ್ರೋ ಈಟರ್ಸ್, ಆನ್ ಅಮೇರಿಕನ್ ಬ್ರಾಟ್, ದಿ ಪಾಕಿಸ್ತಾನಿ ಬ್ರೈಡ್ ಮತ್ತು ಸಿಟಿ ಆಫ್ ಸಿನ್ ಅಂಡ್ ಸ್ಪ್ಲೆಂಡರ್: ರೈಟಿಂಗ್ಸ್ ಆನ್ ಲಾಹೋರ್ ಸೇರಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ

ಅವರ ಅತ್ಯಂತ ಪ್ರಸಿದ್ಧ ಕಾದಂಬರಿಗಳಲ್ಲಿ ಒಂದಾದ ಐಸ್-ಕ್ಯಾಂಡಿ ಮ್ಯಾನ್ ಅನ್ನು 1988 ರಲ್ಲಿ ಬರೆಯಲಾಯಿತು ಮತ್ತು ನಾಲ್ಕು ವರ್ಷಗಳ ನಂತರ ಅಮೆರಿಕದಲ್ಲಿ ಕ್ರ್ಯಾಕಿಂಗ್ ಇಂಡಿಯಾ ಶೀರ್ಷಿಕೆಯಡಿಯಲ್ಲಿ ಪ್ರಕಟಿಸಲಾಯಿತು. ಈ ಕಾದಂಬರಿಯು ವಿಭಜನೆಯ ಆಘಾತ ಮತ್ತು ಕ್ರಾಂತಿಯ ಬಗ್ಗೆ ಚರ್ಚಿಸುತ್ತದೆ.

1998 ರಲ್ಲಿ, ಈ ಕೃತಿಯನ್ನು ನಿರ್ದೇಶಕಿ ದೀಪಾ ಮೆಹ್ತಾ ಅವರು ಅರ್ಥ್ ಚಲನಚಿತ್ರಕ್ಕೆ ಅಳವಡಿಸಿಕೊಂಡರು. ಸಿಧ್ವಾ ಅವರ ಇನ್ನೊಂದು ಕೃತಿ, ವಾಟರ್: ಎ ನಾವೆಲ್, ಈ ಕಾದಂಬರಿಯ ಆಧಾರದಲ್ಲಿ ಮೆಹ್ತಾ ಅವರು 2005 ರ ಚಲನಚಿತ್ರ ವಾಟರ್‌ ಚಿತ್ರವನ್ನು ನಿರ್ದೇಶಿಸಿದರು.

ಸಿಧ್ವಾ ಅವರು ಕೊಲಂಬಿಯಾ ವಿಶ್ವವಿದ್ಯಾಲಯ ಮತ್ತು ಹೂಸ್ಟನ್ ವಿಶ್ವವಿದ್ಯಾಲಯ ಸೇರಿದಂತೆ ಹಲವಾರು ಸಂಸ್ಥೆಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಪಾಕಿಸ್ತಾನದ ಜನಪ್ರಿಯ ಲೇಖಕಿ

ಅವರಿಗೆ, ಲೀಲಾ ವ್ಯಾಲೇಸ್ ರೀಡರ್ಸ್ ಡೈಜೆಸ್ಟ್ ರೈಟರ್ಸ್ ಪ್ರಶಸ್ತಿ, ಮೊಂಡೆಲೊ ಅವಾರ್ಡ್‌ ಫಾರ್ ಫಾರಿನ್ ಆಥರ್ ಮತ್ತು ಸಾಹಿತ್ಯದ ಶ್ರೇಷ್ಠ ಸೇವೆಗಾಗಿ ಸರ್ ಸೈಯದ್ ಡೇ ಜೀವಮಾನ ಸಾಧನೆ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಮತ್ತು ಪುರಸ್ಕಾರಗಳನ್ನು ಪಡೆದಿದ್ದಾರೆ.

ಸಿಧ್ವಾ ಅವರು 1991 ರಲ್ಲಿ ಸಿತಾರಾ-ಇ-ಇಮ್ತಿಯಾಜ್ ಗೌರವಕ್ಕೆ ಪಾತ್ರರಾಗಿದ್ದಾರೆ. ಪಾಕಿಸ್ತಾನ ಸರ್ಕಾರ ಕಲೆಗಾಗಿ ನೀಡುವ ಅತ್ಯುನ್ನತ ರಾಷ್ಟ್ರೀಯ ಗೌರವ ಇದಾಗಿದೆ. ಅವರನ್ನು ಜೊರಾಸ್ಟ್ರಿಯನ್ ಹಾಲ್ ಆಫ್ ಫೇಮ್‌ಗೆ ಸೇರಿಸಲಾಯಿತು.

ಇದನ್ನೂ ಓದಿ: ಸಾಂತಾ ಕ್ಲಾಸ್ ಬಟ್ಟೆ ತೆಗೆಸಿ ಜೈಶ್ರೀರಾಮ್ ಘೋಷಣೆ ಹೇಳಿಸಿದ ಬಿಜೆಪಿ ಪರ ಸಂಘಟನೆಯ ದುಷ್ಕರ್ಮಿಗಳು

ಸಾಂತಾ ಕ್ಲಾಸ್ ಬಟ್ಟೆ ತೆಗೆಸಿ ಜೈಶ್ರೀರಾಮ್ ಘೋಷಣೆ ಹೇಳಿಸಿದ ಬಿಜೆಪಿ ಪರ ಸಂಘಟನೆಯ ದುಷ್ಕರ್ಮಿಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗ್ಯಾನೇಶ್ ಕುಮಾರ್‌ಗೆ ಸಂಕಷ್ಟ ತಂದಿಟ್ಟ 2006ರ ಲಂಚದ ಕೇಸ್: ಏನಿದು ಪ್ರಕರಣ?

ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಮೂಲಕ ಮತದಾರರ ಪಟ್ಟಿಯಲ್ಲಿ ಬೃಹತ್ ಅಕ್ರಮ ಎಸಗಲಾಗುತ್ತಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೇಸ್ ನಾಯಕರು ದೆಹಲಿಯಲ್ಲಿ ಬೀದಿಗಿಳಿದು ಪ್ರತಿಭಟಿಸಿ,...

ಫ್ರೀಡಂ ಪಾರ್ಕ್‌ಗೆ ಬರುತ್ತಿದೆ ಸಿಜೆಪಿ ದಂಡು; ಜನತಾ ನ್ಯಾಯಾಲಯದ ಮುಂದೆ ಎಸ್‌ಐಆರ್ ಅನ್ಯಾಯಗಳ ಅನವಾರಣ

ಇದೇ ತಿಂಗಳ 8 ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಡೆಯಲಿರುವ 'ಜನತಾ ನ್ಯಾಯಾಲಯ' ವಿನೂತನ ಹೋರಾಟಕ್ಕೆ ಕಾಕ್ರೋಚ್‌ ಜನತಾ ಪಾರ್ಟಿ (ಸಿಜೆಪಿ) ಯ ದಂಡು ಬರುತ್ತಿದೆ. ರಾಜ್ಯದಲ್ಲಿ ಎಸ್‌ಐಆರ್‌ನಿಂದ ಆಗಿರುವ ಅನ್ಯಾಯಗಳ ಈ...

“ನಮ್ಮ ದೇಶಕ್ಕೆ ಮಾಡಿರುವುದು ದೇಶದ್ರೋಹ, ಯಾರನ್ನೂ ಬಿಡುವುದಿಲ್ಲ”: ಮೋದಿ, ಶಾ, ಮೋಹನ್‌ ಭಾಗವತ್ ಹಾಗೂ ಗ್ಯಾನೇಶ್ ಕುಮಾರ್ ವಿರುದ್ಧ ರಾಹುಲ್ ಗಾಂಧಿ ಗುಡುಗು!

ರಾಷ್ಟ್ರರಾಜಧಾನಿ ದೆಹಲಿಯಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ 'ವೋಟ್ ಚೋರಿ' ವಿವಾದದ ವಿರುದ್ಧ ಇಂಡಿಯಾ ಒಕ್ಕೂಟ ನಡೆಸಿದ ಐತಿಹಾಸಿಕ ಪ್ರತಿಭಟನೆಯು ತೀವ್ರ ಸ್ವರೂಪ ಪಡೆದುಕೊಂಡಿದೆ. ಸಂಸತ್ ಭವನದಿಂದ ಚುನಾವಣಾ ಆಯೋಗದ ಕಚೇರಿಯತ್ತ...

ಚುನಾವಣಾ ಆಯೋಗಕ್ಕೆ ‘ಇಂಡಿಯಾ’ ಮೈತ್ರಿಕೂಟ ಮೆರವಣಿಗೆ; ಬ್ಯಾರಿಕೇಡ್ ಹತ್ತಿದ ರಾಹುಲ್ ಗಾಂಧಿ

ಸಂಸತ್ ಭವನದಿಂದ ಚುನಾವಣಾ ಆಯೋಗದ ಕಡೆಗೆ ಪ್ರತಿಭಟನಾ ಮೆರವಣಿಗೆ ಹೊರಟಿದ್ದ 'ಇಂಡಿಯಾ' ಮೈತ್ರಿಕೂಟದ ಸಂಸತ್ತಿನ ಸದಸ್ಯರನ್ನು ಮಾರ್ಗ ಮಧ್ಯದಲ್ಲೇ ತಡೆಯಲಾಗಿದ್ದು, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ತೃಣಮೂಲ ಕಾಂಗ್ರೆಸ್...

ಕಾಸರಗೋಡು: ವಿಶ್ವವಿದ್ಯಾಲಯ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್ ನಾಯಕನ ಉಪಸ್ಥಿತಿ ವಿರೋಧಿಸಿ ವಿದ್ಯಾರ್ಥಿಗಳ ಪ್ರತಿಭಟನೆ

'ವಂದೇ ಮಾತರಂ'ಗೆ ಸಂಬಂಧಿಸಿದ ಕಾರ್ಯಕ್ರಮವೊಂದರಲ್ಲಿ ಆರ್‌ಎಸ್‌ಎಸ್ ನಂಟಿನ ಸಂಘಟನೆಯೊಂದರ ರಾಷ್ಟ್ರೀಯ ಸಂಚಾಲಕ ಜೆ. ನಂದಕುಮಾರ್ ಅವರ ಉಪಸ್ಥಿತಿಯನ್ನು ವಿರೋಧಿಸಿ ಕೇರಳದ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ (ಅ.6) ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಕಾರ್ಯಕ್ರಮದಲ್ಲಿ ನಂದಕುಮಾರ್ ಅವರ...

ಜಂತರ್ ಮಂತರ್ ಪ್ರತಿಭಟನೆ: ಪತ್ರಕರ್ತೆಗೆ ಲೈಂಗಿಕ ಕಿರುಕುಳ ನೀಡಿದ್ದ ದೆಹಲಿ ಪೊಲೀಸ್ ಅಧಿಕಾರಿಗೆ ಬಡ್ತಿ: ದೂರುದಾರರನ್ನೇ ಎರಡು ಬಾರಿ ಬಂದಿಸಿದ್ದ ಪೊಲೀಸರು

ನವದೆಹಲಿ: ಮಹಿಳಾ ಪತ್ರಕರ್ತೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಅಧಿಕಾರಿ ವಿವೇಕ್ ಭಗತ್ ಅವರನ್ನು ಹೆಚ್ಚುವರಿ ಉಪ ಪೊಲೀಸ್ ಆಯುಕ್ತ (ಅಡಿಷನಲ್ ಡಿಸಿಪಿ) ಹುದ್ದೆಗೆ ಬಡ್ತಿ ನೀಡಿರುವುದು ತೀವ್ರ...

ಪತ್ರಕರ್ತೆ ಮೇಲೆ ಲೈಂಗಿಕ ಕಿರುಕುಳ ಆರೋಪ ಹೊತ್ತಿರುವ ಎಸಿಪಿಗೆ ಹೆಚ್ಚುವರಿ ಡಿಸಿಪಿ ಹುದ್ದೆ; ವಿರೋಧದ ಬಳಿಕ ಆದೇಶಕ್ಕೆ ತಡೆ

ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ವಿರುದ್ಧದ ಪ್ರತಿಭಟನೆಯ ವೇಳೆ ಮಹಿಳಾ ಪತ್ರಕರ್ತೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ವಿವೇಕ್ ಭಗತ್ ಅವರಿಗೆ ನೀಡಲಾಗಿದ್ದ...

ಬಿಜೆಪಿ ಸದಸ್ಯರಾಗಿರುವವರು ಮಾತ್ರ ಮತ ಚಲಾಯಿಸಬಹುದು ಎಂದು ಚುನಾವಣಾ ಆಯೋಗ ನಂಬಿದೆ: ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ತೀವ್ರ ವಾಗ್ದಾಳಿ

ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಚುನಾವಣಾ ಆಯೋಗದ ವಿವಾದಾತ್ಮಕ ಕಾರ್ಯವೈಖರಿಯನ್ನು ಖಂಡಿಸಿ ಇಂಡಿಯಾ ಒಕ್ಕೂಟದ ನಾಯಕರು ದೆಹಲಿಯಲ್ಲಿ ನಡೆಸಿದ ಬೃಹತ್ ಪ್ರತಿಭಟನಾ ಮೆರವಣಿಗೆಯ ವೇಳೆ ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್...

ದೆಹಲಿಯಲ್ಲಿ ಎಸ್‌ಐಆರ್ ಅಕ್ರಮಗಳ ವಿರುದ್ಧ ‘ಇಂಡಿಯಾ’ ಸಂಸದರ ಜಾಥಾ: ಗ್ಯಾನೇಶ್ ಕುಮಾರ್ ವಜಾಕ್ಕೆ ಆಗ್ರಹ

ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಇದೀಗ ರಾಷ್ಟ್ರ ರಾಜಕಾರಣದಲ್ಲಿ ಮತ್ತೊಮ್ಮೆ ಪ್ರಮುಖ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಎಸ್‌ಐಆರ್ ಪ್ರಕ್ರಿಯೆಯಲ್ಲಿ ಬೃಹತ್ ಅಕ್ರಮಗಳು ನಡೆಯುತ್ತಿದ್ದು, ಅರ್ಹ ಮತದಾರರ...

SIR ಅಕ್ರಮಗಳ ವಿರುದ್ಧ ಅಕ್ಟೋಬರ್‌ 8ರಂದು ‘ಜನತಾ ನ್ಯಾಯಾಲಯ’: ಮತ ಹಕ್ಕು ರಕ್ಷಣೆಗೆ ವಿನೂತನ ಹೋರಾಟ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಅಕ್ರಮಗಳ ವಿರುದ್ಧ ಮತ್ತು ಎಸ್‌ಐಆರ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರಿಗೆ ನ್ಯಾಯ ಒದಗಿಸಲು ಆಗ್ರಹಿಸಿ ಅಕ್ಟೋಬರ್‌‌ 8ರಂದು 'ಜನತಾ ನ್ಯಾಯಾಲಯ' ಎಂಬ...