ನವದೆಹಲಿ: ಕೇಂದ್ರ ಮತ್ತು ಹಲವಾರು ರಾಜ್ಯಗಳಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ)ದ ಸರ್ಕಾರವು ಪ್ರತಿಪಾದಿಸುತ್ತಿರುವ ಬಹುಸಂಖ್ಯಾತ ಮನೋಧರ್ಮವು ದೇಶದ ಅಲ್ಪಸಂಖ್ಯಾತರ ಮೇಲೆ, ವಿಶೇಷವಾಗಿ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ ಮೇಲೆ ದಾಳಿಗಳನ್ನು ಹೆಚ್ಚಿಸಿದೆ ಎಂದು ಯುನೈಟೆಡ್ ಕ್ರಿಶ್ಚಿಯನ್ ಫೋರಮ್ (ಯುಸಿಎಫ್) ಕಳವಳ ವ್ಯಕ್ತಪಡಿಸಿದೆ.
ಬಿಜೆಪಿಯ ಹಿಂದೂ ರಾಷ್ಟ್ರೀಯತೆ ಮತ್ತು ಸರ್ಕಾರದ ನಿರಾಸಕ್ತಿಯ ಕಾರಣದಿಂದ ದೇಶದಲ್ಲಿ ವರದಿಯಾದ ಅಲ್ಪಸಂಖ್ಯಾತರ ಮೇಲಿನ ಹಿಂಸಾಚಾರ ಪ್ರಕರಣಗಳಲ್ಲಿ ಗಮನಾರ್ಹ ಏರಿಕೆಯಾಗಿದ್ದು, ಅವರ ಜೀವನ ಮತ್ತು ಗೌರವದ ಮೇಲೆ ಭಾರಿ ಹಾನಿಯನ್ನುಂಟುಮಾಡಿದೆ ಎಂದು ಅದು ಹೇಳಿದೆ.
ಕ್ರಿಶ್ಚಿಯನ್ ವಿಷಯಗಳ ಮೇಲೆ ಕೇಂದ್ರೀಕರಿಸಿದ ನವದೆಹಲಿ ಮೂಲದ ನಾಗರಿಕ ಸಮಾಜ ಸಂಘಟನೆಯಾದ ಯುನೈಟೆಡ್ ಕ್ರಿಶ್ಚಿಯನ್ ಫೋರಮ್ ಬಿಡುಗಡೆ ಮಾಡಿದ ಇತ್ತೀಚಿನ ಅಂಕಿಅಂಶಗಳು, 2024ರಲ್ಲಿ ಕ್ರಿಶ್ಚಿಯನ್ನರ ವಿರುದ್ಧ 834 ಹಿಂಸಾಚಾರ ಘಟನೆಗಳು ನಡೆದಿವೆ ಎಂದು ಹೇಳಿದೆ. ಇದು 2023ರಲ್ಲಿ ಸಂಭವಿಸಿದ 734 ಘಟನೆಗಳಿಗಿಂತ 100 ಹೆಚ್ಚಾಗಿದೆ ಎಂದು ಅದು ತಿಳಿಸಿದೆ.
ಇತ್ತೀಚಿನ ಹೇಳಿಕೆಯಲ್ಲಿ, ಕ್ರಿಶ್ಚಿಯನ್ನರ ವಿರುದ್ಧ ಹೆಚ್ಚುತ್ತಿರುವ ಹಿಂಸಾಚಾರದ ಘಟನೆಗಳ ಬಗ್ಗೆ ಯುಸಿಎಫ್ ಕಳವಳ ವ್ಯಕ್ತಪಡಿಸಿದೆ. ಅತ್ಯಂತ ಕಳವಳಕಾರಿ ವಿಷಯವೆಂದರೆ ದೇಶದಲ್ಲಿ ಪ್ರತಿದಿನ ಎರಡಕ್ಕಿಂತ ಹೆಚ್ಚು ಕ್ರೈಸ್ತರು ತಮ್ಮ ಧರ್ಮವನ್ನು ಆಚರಿಸುವುದಕ್ಕಾಗಿ ಗುರಿಯಾಗುತ್ತಿದ್ದಾರೆ ಎಂದು ಅದು ಹೇಳಿದೆ.
ಈ ಘಟನೆಗಳು ಹಲವು ರೂಪಗಳನ್ನು ತೆಗೆದುಕೊಳ್ಳುತ್ತಿದೆ. ಅವುಗಳಲ್ಲಿ ಚರ್ಚ್‌ಗಳು ಅಥವಾ ಪ್ರಾರ್ಥನಾ ಸಭೆಗಳ ಮೇಲಿನ ದಾಳಿಗಳು, ತಮ್ಮ ನಂಬಿಕೆಯನ್ನು ಪಾಲಿಸುವವರ ಮೇಲೆ ಕಿರುಕುಳ, ಸಮುದಾಯಕ್ಕೆ ಸಂಬಂಧಿಸಿದ ಸಂಪನ್ಮೂಲಗಳ ಮೇಲಿನ ಬಹಿಷ್ಕಾರಗಳು ಮತ್ತು ನಿರ್ಬಂಧಗಳು, ಸುಳ್ಳು ಆರೋಪಗಳು ಮತ್ತು ಕ್ರಿಮಿನಲ್ ಪ್ರಕರಣಗಳು, ವಿಶೇಷವಾಗಿ ಬಲವಂತದ ಮತಾಂತರಕ್ಕೆ ಸಂಬಂಧಿಸಿದ ಪ್ರಕರಣಗಳು ಸೇರಿವೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಹಲವಾರು ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಧಾರ್ಮಿಕ ಮತಾಂತರದ ವಿರುದ್ಧದ ವಿವಾದಾತ್ಮಕ ಮತ್ತು ಕಠಿಣ ಕಾನೂನುಗಳು ಹಿಂದುತ್ವ ಕಾರ್ಯಕರ್ತರಿಗೆ ಮತ್ತು ಅಲ್ಲಿನ ಸರಕಾರಗಳಿಗೆ ಅಲ್ಪಸಂಖ್ಯಾತರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಅಸ್ತ್ರವನ್ನು ಒದಗಿಸಿವೆ. 2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಂತಹ ಘಟನೆಗಳು ವೇಗವಾಗಿ ಹೆಚ್ಚಿವೆ ಎಂದು ಅದು ತಿಳಿಸಿದೆ.
2024ರಲ್ಲಿ ಉತ್ತರಪ್ರದೇಶದಲ್ಲಿ ಕ್ರಿಶ್ಚಿಯನ್ನರ ವಿರುದ್ಧ ಅತಿ ಹೆಚ್ಚು ಘಟನೆಗಳು (209) ದಾಖಲಾಗಿವೆ. ನಂತರ ಛತ್ತೀಸ್‌ಗಢ (165)ದಲ್ಲಿ ದಾಖಲಾಗಿವೆ. ಪೊಲೀಸರಿಗೆ ದೂರು ನೀಡಿದ ನಂತರವೂ ಈ ಹಲವು ಘಟನೆಗಳಲ್ಲಿ ಎಫ್‌ಐಆರ್‌ಗಳು ದಾಖಲಾಗಿಲ್ಲ ಎಂದು ಮಾನವ ಹಕ್ಕುಗಳ ಕಾರ್ಯಕರ್ತರು ಹೇಳುತ್ತಾರೆ.
ಇದಲ್ಲದೆ, ಪೊಲೀಸರು ವಿಷಯವನ್ನು ತಿರುಚಲು ಮತ್ತು ಬಲಿಪಶುಗಳ ವಿರುದ್ಧವೇ ಸುಳ್ಳು ಆರೋಪಗಳನ್ನು ದಾಖಲಿಸುವ ಮೂಲಕ ಅಪರಾಧಿಗಳನ್ನು ಬೆಂಬಲಿಸಲು ಪ್ರಯತ್ನಿಸುತ್ತಾರೆ ಎಂದು ಬಲಿಬಶು ಕ್ರಿಶ್ಚಿಯನ್ನರು ದೂರುತ್ತಾರೆ ಮತ್ತು ಇದರಿಂದಾಗಿ ಇವರು ಪೊಲೀಸರನ್ನು ಸಂಪರ್ಕಿಸಲು ಹೆದರುತ್ತಾರೆ ಎಂದು ಯುಸಿಎಫ್ ಹೇಳಿಕೆ ತಿಳಿಸಿದೆ.
ಹೆಚ್ಚಿನ ಎಫ್‌ಐಆರ್‌ಗಳು ಬಲಿಪಶುಗಳ ವಿರುದ್ಧ ದಾಖಲಾಗುತ್ತವೆ. ಅಪರಾಧಿಗಳ ವಿರುದ್ಧ ಪ್ರಕರಣ ದಾಖಲಿಸಿದರೆ, ದಾಳಿಕೋರರು ಹೆಚ್ಚು ಆಕ್ರಮಣಕಾರಿಗಳಾಗಬಹುದು ಮತ್ತು ತಮ್ಮ ಜೀವಕ್ಕೆ ಹೆಚ್ಚಿನ ಅಪಾಯವಿದೆ ಎಂದು ಪೊಲೀಸರು ಸಂತ್ರಸ್ತರಿಗೆ ಹೆದರಿಸುತ್ತಾರೆ ಎಂದು ಯುಸಿಎಫ್ ಹೇಳಿದೆ.
ಡಿಸೆಂಬರ್ 2024ರಲ್ಲಿ ದಾಖಲಾದ 73 ಘಟನೆಗಳಲ್ಲಿ 25 ಬಲಿಪಶುಗಳು ಪರಿಶಿಷ್ಟ ಪಂಗಡದವರು ಮತ್ತು 14 ಮಂದಿ ದಲಿತರು ಆಗಿದ್ದಾರೆ. ಈ ಘಟನೆಗಳಲ್ಲಿ ಒಂಬತ್ತು ಘಟನೆಗಳು ಮಹಿಳೆಯರನ್ನು ಒಳಗೊಂಡಿವೆ. ಡಿಸೆಂಬರ್ 31ರಂದು, 400 ಕ್ಕೂ ಹೆಚ್ಚು ಹಿರಿಯ ಕ್ರಿಶ್ಚಿಯನ್ ನಾಯಕರು ಮತ್ತು 30 ಚರ್ಚ್ ಗುಂಪುಗಳ ನಿಯೋಗವು ಸಮುದಾಯದ ವಿರುದ್ಧ ಹೆಚ್ಚುತ್ತಿರುವ ಹಿಂಸಾಚಾರದ ಸಮಸ್ಯೆಯನ್ನು ಪರಿಹರಿಸಲು ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿತು ಎಂದು ಯುಸಿಎಫ್ ತಿಳಿಸಿದೆ.
ಕ್ರಿಸ್‌ಮಸ್ ಸಮಯದಲ್ಲಿ ಇಂತಹ ಹಲವಾರು ಪ್ರಕರಣಗಳು ದಾಖಲಾಗಿರುವುದು ನಂತರ ನಮ್ಮ ಗಮನಕ್ಕೆ ಬಂದಿತು. ಡಿಸೆಂಬರ್ 23, 2024 ರಂದು ಭಾರತದ ಕ್ಯಾಥೋಲಿಕ್ ಬಿಷಪ್‌ಗಳ ಸಮ್ಮೇಳನ ಆಯೋಜಿಸಿದ್ದ ಕ್ರಿಸ್‌ಮಸ್ ಆಚರಣೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದರು. ಅಲ್ಲಿ ಮಾತನಾಡುತ್ತಾ ಅವರು ಕ್ರಿಶ್ಚಿಯನ್ನರ ವಿರುದ್ಧದ ಹಿಂಸಾಚಾರವನ್ನು ಉಲ್ಲೇಖಿಸಿದರು ಆದರೆ ಜರ್ಮನಿಯಲ್ಲಿನ ಕ್ರಿಸ್‌ಮಸ್ ಮಾರುಕಟ್ಟೆ ದಾಳಿ ಮತ್ತು ಶ್ರೀಲಂಕಾದಲ್ಲಿ 2019ರ ಈಸ್ಟರ್ ಬಾಂಬ್ ದಾಳಿಯಂತಹ ಪ್ರಪಂಚದ ಇತರ ಭಾಗಗಳಲ್ಲಿ ನಡೆದ ದಾಳಿಗಳನ್ನು ಮಾತ್ರ ಅವರು ಖಂಡಿಸಿದರು ಎಂದು ಅದು ಹೇಳಿದೆ.
ಪ್ರಮುಖ ಪತ್ರಕರ್ತ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತ ಜಾನ್ ದಯಾಳ್ ಅವರು ಭಾಷಣವು ಮೋದಿಯ ದ್ವಂದ್ವತೆಯನ್ನು ಬಹಿರಂಗಪಡಿಸಿದೆ ಎಂದು ಹೇಳಿದರು. “ಹಿಂಸಾಚಾರದ ಘಟನೆಗಳ ಬಗ್ಗೆ ಪ್ರಧಾನಿ ತಮ್ಮ ನೋವನ್ನು ವ್ಯಕ್ತಪಡಿಸಿದ ನಂತರ, 2024ರಲ್ಲಿ ದೇಶದಲ್ಲಿ ದಿನನಿತ್ಯ ನಡೆದ ಎರಡು ದ್ವೇಷ ಹಿಂಸಾಚಾರದ ಘಟನೆಗಳಲ್ಲಿ ಒಂದನ್ನು ಸಹ ಉಲ್ಲೇಖಿಸಲಿಲ್ಲ. ಬದಲಾಗಿ, ಅವರು ಜರ್ಮನ್ ದಾಳಿಯನ್ನು ಉದಾಹರಣೆಯಾಗಿ ಉಲ್ಲೇಖಿಸಿದರು. ಇದು ದ್ವಂದ್ವತೆ ಮತ್ತು ಇದು ಹಿಂದೂ ಉಗ್ರಗಾಮಿಗಳಿಗೆ ಪ್ರೋತ್ಸಾಹ ನೀಡುತ್ತದೆ” ಎಂದು ಅವರು ಹೇಳಿದರು.
ಮಹಿಳೆಯರು ಗರ್ಭ ಧರಿಸುವಂತೆ ಮಾಡಿದರೆ ರೂ. 10 ಲಕ್ಷ: ಹೊಸ ಸೈಬರ್ ವಂಚನೆ


