ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೇಶದಲ್ಲಿ ದಾಖಲೆರಹಿತ ವಿದೇಶಿಯರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತಿರುವ ಮಧ್ಯೆ, ಅಮೆರಿಕದ ಗೃಹ ಭದ್ರತಾ ಇಲಾಖೆಯ (DHS) ಅಧಿಕಾರಿಗಳು ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿಯ ಗುರುದ್ವಾರಗಳಲ್ಲಿ ಅಕ್ರಮ ವಲಸೆಗಾರರ ಬೇಟೆಯನ್ನು ಪ್ರಾರಂಭಿಸಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ. ಸರ್ಕಾರದ ಕ್ರಮವು ಹಲವಾರು ಸಿಖ್ ಸಂಘಟನೆಗಳಿಂದ ಟೀಕೆಗೆ ಗುರಿಯಾಗಿದ್ದು, ಇದು ತಮ್ಮ ಧಾರ್ಮಿಕ ಸ್ಥಳಗಳ ಪಾವಿತ್ರ್ಯಕ್ಕೆ ಬೆದರಿಕೆ ಎಂದು ಅವರು ಪರಿಗಣಿಸಿದ್ದಾರೆ. ಅಮೆರಿಕದ ಪ್ರಮುಖ
ಈ ಪ್ರದೇಶಗಳಲ್ಲಿನ ಕೆಲವು ಗುರುದ್ವಾರಗಳನ್ನು ಸಿಖ್ ಪ್ರತ್ಯೇಕತಾವಾದಿಗಳು ಮತ್ತು ದಾಖಲೆರಹಿತ ವಲಸಿಗರು ಒಟ್ಟುಗೂಡಿಸುವ ಸ್ಥಳಗಳಾಗಿ ಬಳಸುವ ಸಾಧ್ಯತೆಗಳಿವೆ ಎಂದು ವರದಿಗಳು ಸೂಚಿಸಿವೆ.
ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ಸ್ವಲ್ಪ ಸಮಯದ ನಂತರ ನೀತಿಯಲ್ಲಿ ಬದಲಾವಣೆ ಬಂದಿತ್ತು. ವಲಸೆ ಮತ್ತು ಕಸ್ಟಮ್ಸ್ ಜಾರಿ (ICE) ಮತ್ತು ಕಸ್ಟಮ್ಸ್ ಮತ್ತು ಗಡಿ ರಕ್ಷಣೆ (CBP) ಜಾರಿ ಕುರಿತು ಬಿಡೆನ್ ಆಡಳಿತದ ಮಾರ್ಗಸೂಚಿಗಳನ್ನು ರದ್ದುಗೊಳಿಸುವ ನಿರ್ದೇಶನವನ್ನು ಗೃಹ ಭದ್ರತಾ ಇಲಾಖೆ ಕಾರ್ಯದರ್ಶಿ ಬೆಂಜಮಿನ್ ಹಫ್‌ಮನ್ ಹೊರಡಿಸಿದ್ದಾರೆ. ಅಮೆರಿಕದ ಪ್ರಮುಖ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಹಿಂದಿನ ಮಾರ್ಗಸೂಚಿಗಳು ಗುರುದ್ವಾರಗಳಂತಹ ಪೂಜಾ ಸ್ಥಳಗಳು ಸೇರಿದಂತೆ “ಸೂಕ್ಷ್ಮ” ಪ್ರದೇಶಗಳಲ್ಲಿ ಅಥವಾ ಅದರ ಹತ್ತಿರ ಜಾರಿ ಕ್ರಮಗಳನ್ನು ನಿರ್ಬಂಧಿಸಿದ್ದವು.
“ಈ ಕ್ರಮವುವಲಸೆ ಮತ್ತು ಕಸ್ಟಮ್ಸ್ ಜಾರಿ (ICE) ಮತ್ತು ಕಸ್ಟಮ್ಸ್ ಮತ್ತು ಗಡಿ ರಕ್ಷಣೆ (CBP) ಯಲ್ಲಿರುವ ಧೈರ್ಯಶಾಲಿಗಳಿಗೆ ನಮ್ಮ ವಲಸೆ ಕಾನೂನುಗಳನ್ನು ಜಾರಿಗೊಳಿಸಲು ಮತ್ತು ನಮ್ಮ ದೇಶಕ್ಕೆ ಅಕ್ರಮವಾಗಿ ಬಂದಿರುವ ಕೊಲೆ ಮತ್ತು ಅತ್ಯಾಚಾರಿಗಳು ಸೇರಿದಂತೆ ಕ್ರಿಮಿನಲ್ ವಿದೇಶಿಯರನ್ನು ಹಿಡಿಯಲು ಅಧಿಕಾರ ನೀಡುತ್ತದೆ” ಎಂದು ಗೃಹ ಭದ್ರತಾ ಇಲಾಖೆ ವಕ್ತಾರರು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ.
“ಅಪರಾಧಿಗಳು ಇನ್ನು ಮುಂದೆ ಬಂಧನವನ್ನು ತಪ್ಪಿಸಲು ಅಮೆರಿಕದ ಶಾಲೆಗಳು ಮತ್ತು ಚರ್ಚ್‌ಗಳಲ್ಲಿ ಅಡಗಿಕೊಳ್ಳಲು ಸಾಧ್ಯವಾಗುವುದಿಲ್ಲ. ಟ್ರಂಪ್ ಆಡಳಿತವು ನಮ್ಮ ಧೈರ್ಯಶಾಲಿ ಕಾನೂನು ಜಾರಿ ಸಂಸ್ಥೆಗಳ ಕೈಗಳನ್ನು ಕಟ್ಟುವುದಿಲ್ಲ, ಬದಲಿಗೆ ಅವರು ಸಾಮಾನ್ಯ ಜ್ಞಾನವನ್ನು ಬಳಸುತ್ತಾರೆ ಎಂದು ನಂಬುತ್ತದೆ” ಎಂದು ವಕ್ತಾರರು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯೆಯಾಗಿ, ಸಿಖ್ ಅಮೇರಿಕನ್ ಕಾನೂನು ರಕ್ಷಣಾ ಮತ್ತು ಶಿಕ್ಷಣ ನಿಧಿ (SALDF) ನೀತಿ ಬದಲಾವಣೆಯ ಬಗ್ಗೆ ಕಳವಳ ವ್ಯಕ್ತಪಡಿಸಿ ಹೇಳಿಕೆ ನೀಡಿದೆ. “ನಿರ್ದೇಶನ ಹೊರಡಿಸಿದ ಕೆಲವೇ ದಿನಗಳಲ್ಲಿ ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿ ಪ್ರದೇಶಗಳಲ್ಲಿನ ಗುರುದ್ವಾರಗಳಿಗೆ ಗೃಹ ಭದ್ರಾತಾ ಏಜೆಂಟರು ಭೇಟಿ ನೀಡುತ್ತಿದ್ದಾರೆ” ಎಂದು ಗುಂಪು ಹೇಳಿದೆ.
“ಸೂಕ್ಷ್ಮ ಪ್ರದೇಶಗಳಿಗೆ ರಕ್ಷಣೆಯನ್ನು ತೆಗೆದುಹಾಕಿ ನಂತರ ಗುರುದ್ವಾರಗಳಂತ ಪೂಜಾ ಸ್ಥಳಗಳನ್ನು ಗುರಿಯಾಗಿಸುವ ಗೃಹ ಭದ್ರತಾ ಇಲಾಖೆಯ ನಿರ್ಧಾರದ ಬಗ್ಗೆ ನಾವು ತೀವ್ರವಾಗಿ ಗಾಬರಿಗೊಂಡಿದ್ದೇವೆ” ಎಂದು ಸಿಖ್ ಅಮೇರಿಕನ್ ಕಾನೂನು ರಕ್ಷಣಾ ಮತ್ತು ಶಿಕ್ಷಣ ನಿಧಿಯ (SALDEF) ಕಾರ್ಯನಿರ್ವಾಹಕ ನಿರ್ದೇಶಕಿ ಕಿರಣ್ ಕೌರ್ ಗಿಲ್ ಹೇಳಿದ್ದಾರೆ.
ಗುರುದ್ವಾರಗಳು ಕೇವಲ ಪೂಜಾ ಸ್ಥಳಗಳು ಮಾತ್ರವಲ್ಲ, ಅವು ಅದಕ್ಕಿಂತ ಹೆಚ್ಚಿನ ಸ್ಥಾನಮಾನ ಇವೆ ಎಂದು ಗಿಲ್ ವಿವರಿಸಿದ್ದಾರೆ. “ಅವು ಸಿಖ್ಖರು ಮತ್ತು ವಿಶಾಲ ಸಮುದಾಯಕ್ಕೆ ಬೆಂಬಲ, ಪೋಷಣೆ ಮತ್ತು ಆಧ್ಯಾತ್ಮಿಕ ಸಾಂತ್ವನವನ್ನು ಒದಗಿಸುವ ಪ್ರಮುಖ ಸಮುದಾಯಿಕ ಕೇಂದ್ರಗಳಾಗಿವೆ. ಜಾರಿ ಕ್ರಮಗಳಿಗಾಗಿ ಈ ಸ್ಥಳಗಳನ್ನು ಗುರಿಯಾಗಿಸಿಕೊಳ್ಳುವುದು ನಮ್ಮ ನಂಬಿಕೆಯ ಪಾವಿತ್ರ್ಯಕ್ಕೆ ಧಕ್ಕೆ ತರುತ್ತದೆ ಮತ್ತು ದೇಶಾದ್ಯಂತ ವಲಸೆ ಬಂದ ಸಮುದಾಯಗಳಿಗೆ ಭಯಾನಕ ಸಂದೇಶವನ್ನು ಕಳುಹಿಸುತ್ತದೆ” ಎಂದು ಅವರು ಹೇಳಿದ್ದಾರೆ.
ಇದನ್ನೂಓದಿ: ಸಂವಿಧಾನದ ಮೇಲಿನ ದಾಳಿ | ಯುಜಿಸಿ ಕರಡು ನಿಯಮ ಹಿಂಪಡೆಯಲು ತೆಲಂಗಾಣ ಸಿಎಂ ಆಗ್ರಹ
ಸಂವಿಧಾನದ ಮೇಲಿನ ದಾಳಿ | ಯುಜಿಸಿ ಕರಡು ನಿಯಮ ಹಿಂಪಡೆಯಲು ತೆಲಂಗಾಣ ಸಿಎಂ ಆಗ್ರಹ


