ಮುಸ್ಲಿಮರಿಗೆ ಪುರುಸೊತ್ತಿಲ್ಲದೆ ಮಕ್ಕಳನ್ನು ಹುಟ್ಟಿಸುವುದು ಬಿಟ್ಟರೆ ಬೇರೇನೂ ಕೆಲಸವಿಲ್ಲ, ಹೀಗೆ ಮಾಡುತ್ತಾ ಸಂಖ್ಯೆಯನ್ನು ಜಾಸ್ತಿ ಮಾಡಿ, ಬೇರೆಯವರ ಮೇಲೆ ಭಯದ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆ ಎಂದು ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಸೋಮವಾರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮುಸ್ಲಿಮರಿಗೆ ಮಕ್ಕಳು
ಉದಯಗಿರಿ ಪೊಲೀಸ್ ಠಾಣೆ ದಾಳಿ ಪ್ರಕರಣದ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ, “ಮುಸ್ಲಿಮರಿಗೆ 1947ರಲ್ಲಿ ಅವರ ಧರ್ಮದ ಆಧಾರದಲ್ಲಿ ಅವರಿಗೆ ಪ್ರತ್ಯೇಕ ರಾಷ್ಟ್ರವನ್ನು ನಾವು ಕೊಟ್ಟಾಗೋಯ್ತು. ಇಲ್ಲಿನ ಕಾನೂನು ವ್ಯವಸ್ಥೆಗೆ, ಸಂವಿಧಾನಕ್ಕೆ ಗೌರವ ಕೊಡುವುದಿಲ್ಲ ಎಂದಾರೆ, ಅವತ್ತೆ ಅವರು ತೊಲಗಿಬಿಡಬಹುದಿತ್ತು. ಆದರೆ ಅವರು ಇಲ್ಲೆ ಉಳಿದುಕೊಂಡುಬಿಟ್ಟಿದ್ದಾರೆ. ಪುರುಸೊತ್ತಿಲ್ಲದೆ ಮಕ್ಕಳನ್ನು ಹುಟ್ಟಿಸುವುದು ಬಿಟ್ಟರೆ ಇನ್ನೇನೂ ವೃತ್ತಿಯಿಲ್ಲ. ಹೀಗೆ ಮಾಡುತ್ತಾ ಸಂಖ್ಯೆಯನ್ನು ಜಾಸ್ತಿ ಮಾಡಿ, ಬೇರೆಯವರ ಮೇಲೆ ಭಯದ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆ” ಎಂದು ಹೇಳಿದ್ದಾರೆ. ಮುಸ್ಲಿಮರಿಗೆ ಮಕ್ಕಳು
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಮೈಸೂರಿನ ಉದಯಗಿರಿ ಗಲಭೆಗೆ ಕಾರಣಕರ್ತನಾದ ಆರೋಪಿಗೆ ಬೆಂಬಲ ನೀಡಿದ ಅವರು, “ಅವಹೇಳನಕಾರಿ ಪೋಸ್ಟ್ ಮಾಡಿದ ಒಬ್ಬ ಬಹುಸಂಖ್ಯಾತ ಸಮಾಜಕ್ಕೆ ಸೇರಿದ ವ್ಯಕ್ತಿಗೆ ನೀವು ಇಲ್ಲಿ ಇರಬೇಡಿ, ಕಷ್ಟವಾಗುತ್ತದೆ, ಜೀವ ಬೆದರಿಕೆ ಇದೆ ಎಂದು ಮಾಹಿತಿ ನೀಡುತ್ತಿದ್ದಾರೆ ಎಂದಾದರೆ, ಇಲ್ಲಿ ಕಾನೂನು ಸುವ್ಯವಸ್ಥೆ ಎನ್ನುವುದು ಇಲ್ಲವೆ? ಕಾನೂನಿಗೆ ಬೆಲೆ ಇಲ್ಲವೆ?” ಎಂದು ಕೇಳಿದ್ದಾರೆ.
“ಮುಸ್ಲಿಮರಿಗೆ ಹೆದರಿ ಹೀಗೆ ಒಬ್ಬೊಬ್ಬರಾಗಿ ಹೋಗುತ್ತಾ ಇದ್ದರೆ, ಉಳಿದಿರುವ ಈ ದೇಶವನ್ನು ಕೂಡಾ ನಾವು ಸಾಬ್ರಿಗೆ ಬರೆದುಕೊಟ್ಟುಬಿಡುವುದಾ? ಸಾಬ್ರಿಗೆ ಹೆದರಿ ಉದಯಗಿರಿ, ಕಲ್ಯಾಣಗಿರಿ ಭಾಗದವರು ಖಾಲಿ ಮಾಡಿ ಎನ್ನುತ್ತೀರಿ. ಮುಂದೆ ನರಸಿಂಹರಾಜ ಕ್ಷೇತ್ರವನ್ನೂ ಖಾಲಿ ಮಾಡಿ ಎನ್ನುತ್ತಾ ಬರುತ್ತಾ ಇರುತ್ತಾರೆ. ಹೀಗಾದರೆ ಹಿಂದೂಗಳು ಎಲ್ಲಿಗೆ ಹೋಗಬೇಕು? ಅವರಿಗೆ ರಕ್ಷಣೆ ನೀಡಲು ಸಾಧ್ಯ ಇಲ್ಲವೆ?” ಎಂದು ಹೇಳಿದ್ದಾರೆ.
“ರಕ್ಷಣೆ ನೀಡುವುದು ಬಿಡಿ, ಈ ರೀತಿಯ ಕೃತ್ಯವನ್ನು ಮಾಡಿದವರನ್ನು ಬಂಧಿಸಿ, ದಂಡಿಸಿದ್ದರೆ ಈ ರೀತಿಯ ಕೃತ್ಯಗಳು ನಿಂತು ಹೋಗುತ್ತವೆ. ಉತ್ತರ ಪ್ರದೇಶದಲ್ಲಿ 20%ಕ್ಕಿಂತ ಹೆಚ್ಚು ಮುಸ್ಲಿಮರಿದ್ದಾರೆ. ಒಬ್ಬ ಯೋಗಿ ಆದಿತ್ಯನಾಥ್ ಮುಸ್ಲಿಮರನ್ನು, ಪುಂಡ ಮುಸಲ್ಮಾನರನ್ನು ಬಾಯಿ ಮುಚ್ಚಿಸಿದ್ದಾರೆ” ಎಂದು ಹೇಳಿದ್ದಾರೆ.
ಇದೇ ವೇಳೆ ಅವರು 2002ರ ಗುಜರಾತ್ ಗಲಭೆಯಲ್ಲಿ ಮುಸ್ಲಿಮರ ಮಾರಣಹೋಮವನ್ನು ಸಮರ್ಥಿಸಿಕೊಂಡಿದ್ದಾರೆ. “ಗುಜರಾತ್‌ನಲ್ಲಿ 2002ರ ಹಿಂಸಾಚಾರದ ನಂತರ ಗುಜರಾತಿಗಳು ಅವರಿಗೆ ವಾಪಾಸು ಪಾಠ ಕಲಿಸಿದ ನಂತರ, ಅಲ್ಲಿ ಇವತ್ತಿನ ವರೆಗೂ ಅಲ್ಲಿ ಒಂದೇ ಒಂದು ಘಟನೆ ಸಂಭವಿಸಿಲ್ಲ. ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವಿಸ್ ಬಂದ ನಂತರ ಬಾಲ ಒಳಗಡೆ ಇಟ್ಟುಕೊಂಡಿದ್ದಾರೆ. ಈ ರೀತಿಯಾಗಿ ಕರ್ನಾಟಕದಲ್ಲಿ ಯಾವಾಗ ಮಾಡುವುದು?” ಎಂದು ಅವರು ಕೇಳಿದ್ದಾರೆ.
“ಮುಸ್ಲಿಮರಿಗೆ ಹೆದರಿ ಹಿಂದೂಗಳು ಅವರ ಮನೆಯನ್ನು ಖಾಲಿ ಮಾಡಿಕೊಂಡು ಹೋಗ್ತಾ ಇರಬೇಕಾದರೆ, ಹಿಂದೂಗಳು ಎಲ್ಲಿಗೆ ಹೋಗಬೇಕು ಕೊನೆಗೆ? ಅವರಿಗೆ ಯಾವ ರಾಷ್ಟ್ರವಿದೆ? ಮುಸ್ಲಿಮರಿಗೆ 57 ಇಸ್ಲಾಮಿಕ್ ರಾಷ್ಟ್ರಗಳಿವೆ. ನಮಗೆ ಯಾವ ರಾಷ್ಟ್ರವಿದೆ? ಮುಸ್ಲಿಮರ ಭಯಕ್ಕೆ ಒಬ್ಬ ಹಿಂದೂ ಯಾಕೆ ಮನೆ ಖಾಲಿ ಮಾಡಬೇಕು? ಯಾಕೆ ಊರನ್ನು ಬಿಡಬೇಕು? ಮುಸ್ಲಿಮರಿಗೆ ಫ್ರೀ ಪರ್ಮಿಟ್ ಕೊಟ್ಟಿರುವ ವ್ಯಕ್ತಿ, ತಾಲೀಬಾನಿ ಸರ್ಕಾರ ನಡೆಸುತ್ತಿರುವ ವ್ಯಕ್ತಿ ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ” ಎಂದು ಅವರು ಹೇಳಿದ್ದಾರೆ.
ಇದನ್ನೂಓದಿ: ನನ್ನ ಜಮೀನಿನ ಸರ್ವೆ ಹಿಂದೆ ಕಾಂಗ್ರೆಸ್ ರಾಜಕೀಯ ದ್ವೇಷವಿದೆ: ಎಚ್‌ಡಿ ಕುಮಾರಸ್ವಾಮಿ ಆರೋಪ


