ಬೆಂಗಳೂರಿನ ಬಿಟಿಎಂ ಲೇಔಟ್‌ನಲ್ಲಿ ಇತ್ತೀಚೆಗೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ಜಿ ಪರಮೇಶ್ವರ, ಈ ಅಪರಾಧವನ್ನು ತಳ್ಳಿಹಾಕಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.”ಇಂತಹ ದೊಡ್ಡ ನಗರದಲ್ಲಿ ಅಲ್ಲೊಂದು ಇಲ್ಲೊಂದು ಕಿರುಕುಳ ನಡೆಯುತ್ತವೆ” ಎಂದು ಹೇಳಿದ್ದಾರೆ.
“ಇಂತಹ ದೊಡ್ಡ ನಗರದಲ್ಲಿ ಅಲ್ಲೊಂದು-ಇಲ್ಲೊಂದು ಘಟನೆಗಳು ನಡೆಯುತ್ತವೆ. ಯಾವುದೇ ಕಾನೂನು ಕ್ರಮ ತೆಗೆದುಕೊಳ್ಳಬೇಕೋ ಅದನ್ನು ಕಾನೂನಿನ ಪ್ರಕಾರ ಮಾಡಲಾಗುತ್ತದೆ. ಬೀಟ್ ಪೆಟ್ರೋಲಿಂಗ್ ಅನ್ನು ಹೆಚ್ಚಿಸಲು ನಾನು ನಮ್ಮ ಆಯುಕ್ತರಿಗೆ ಸೂಚಿಸಿದ್ದೇನೆ” ಎಂದು ಗೃಹ ಸಚಿವರು ಹೇಳಿದರು.
ಈ ಘಟನೆ ಏಪ್ರಿಲ್ 3, 2025 ರಂದು ಬಿಟಿಎಂ ಲೇಔಟ್‌ನಲ್ಲಿ ನಡೆದಿದ್ದು, ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ದೃಶ್ಯಾವಳಿಯಲ್ಲಿ ಒಬ್ಬ ವ್ಯಕ್ತಿ ಮಹಿಳೆಯನ್ನು ಹಿಂಬಾಲಿಸುತ್ತಿರುವುದನ್ನು ತೋರಿಸಲಾಗಿದೆ, ಆಕೆಯ ಜೊತೆ ಮತ್ತೊಬ್ಬ ಮಹಿಳೆ ಇದ್ದಳು, ವಿಕೃತ ವ್ಯಕ್ತ ಮಹಿಳೆಯನ್ನು ಅಪ್ಪಿಕೊಂಡು ಪರಾರಿಯಾಗಿದ್ದಾನೆ.
ಘಟನೆಯ ಬಗ್ಗೆ ಆಕ್ರೋಶ ವ್ಯಕ್ತವಾದ ನಂತರ ಬೆಂಗಳೂರು ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ, ಸಂತ್ರಸ್ತೆ ಇನ್ನೂ ದೂರು ದಾಖಲಿಸಿಲ್ಲ.
ಸೆಕ್ಷನ್ 354ಬಿ (ಮಹಿಳೆಯ ಮೇಲೆ ವಿವಸ್ತ್ರಗೊಳಿಸುವ ಉದ್ದೇಶದಿಂದ ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕಳೆದ ವರ್ಷ, ಆಗಸ್ಟ್‌ನಲ್ಲಿ ಇದೇ ರೀತಿಯ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಬೆಂಗಳೂರಿನ ಕೋಣನಕುಂಟೆ ಪ್ರದೇಶದಲ್ಲಿ ಬೆಳಗಿನ ನಡಿಗೆಯಲ್ಲಿ ಮಹಿಳೆಯೊಬ್ಬಳ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ್ದ. ಕ್ಯಾಬ್ ಚಾಲಕನಾಗಿದ್ದ ಆರೋಪಿಯನ್ನು ಘಟನೆ ನಡೆದ ಎರಡು ದಿನಗಳ ನಂತರ ಬಂಧಿಸಲಾಯಿತು.
ಕಳೆದ ವರ್ಷ ಹಂಚಿಕೊಂಡ ಸರ್ಕಾರಿ ಮಾಹಿತಿಯ ಪ್ರಕಾರ, ಬೆಂಗಳೂರಿನಲ್ಲಿ 2023 ರಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದ್ದು, ಪೊಲೀಸರು 3,260 ಪ್ರಕರಣಗಳನ್ನು ದಾಖಲಿಸಿದ್ದಾರೆ, ಇದರಲ್ಲಿ 1,135 ಕಿರುಕುಳಕ್ಕೆ ಸಂಬಂಧಿಸಿದವು ಸೇರಿವೆ.
ಮುನಂಬಂ ವಕ್ಫ್ ಭೂ ವಿವಾದ; ಕೇರಳ ಸರ್ಕಾರದ ಸಮಿತಿ ರದ್ದತಿ ಆದೇಶಕ್ಕೆ ಹೈಕೋರ್ಟ್ ತಡೆ


