ಮದುವೆ ನಿಶ್ಚಯವಾಗಿದ್ದ ತನ್ನ ಸ್ನೇಹಿತನೊಂದಿಗೆ ಪ್ರವಾಸಿ ಸ್ಥಳಕ್ಕೆ ತೆರಳಿದ್ದ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದ ಕಾಸ್‌ಗಂಜ್ ಜಿಲ್ಲೆಯಲ್ಲಿ ನಡೆದಿದೆ. ಸುಮಾರು 10 ಜನ ದುಷ್ಕರ್ಮಿಗಳು ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದು, ಪೊಲೀಸರು ಸ್ಥಳೀಯ ಬಿಜೆಪಿ ನಾಯಕ ಸೇರಿದಂತೆ ಒಟ್ಟು 8 ದುಷ್ಕರ್ಮಿಗಳನ್ನು ಬಂಧಿಸಿದ್ದಾರೆ ಎಂದು ಭಾನುವಾರ ವರದಿಯಾಗಿದೆ. ಅಪ್ರಾಪ್ತೆ ಮೇಲೆ ಗ್ಯಾಂಗ್ ರೇಪ್
16 ವರ್ಷದ ಬಾಲಕಿ ತನ್ನ 20 ವರ್ಷದ ಸ್ನೇಹಿತನೊಂದಿಗೆ ಪ್ರವಾಸಿ ಸ್ಥಳಕ್ಕೆ ಮನೆಗೆ ಹಿಂದಿರುಗುತ್ತಿದ್ದಾಗ ಘಟನೆ ನಡೆದಿದೆ ಎಂದು ವರದಿಗಳು ಉಲ್ಲೇಖಿಸಿವೆ. ಘಟನೆ ಏಪ್ರಿಲ್ 10 ರಂದು ಮಧ್ಯಾಹ್ನ 2.30 ರ ಸುಮಾರಿಗೆ ನಡೆದಿದ್ದು, ಈ ವೇಳೆ ಬಾಲಕಿ ತನ್ನ ಮದುವೆ ನಿಶ್ಚಯವಾಗಿದ್ದ ಗೆಳೆಯ ಜೊತೆಗೆ ಪಿಕ್‌ನಿಕ್‌ಗೆ ತೆರಳಿದ್ದರು.
ಈ ವೇಳೆ ಇಬ್ಬರು ಸ್ವಲ್ಪ ಹಣವನ್ನು ಸಹ ತೆಗೆದುಕೊಂಡು ಹೋಗಿದ್ದರು ಎಂದು ವರದಿ ಹೇಳಿದೆ. 10 ಜನರ ವಿರುದ್ಧ ಸಾಮೂಹಿಕ ಅತ್ಯಾಚಾರ, ಸುಲಿಗೆ ಮತ್ತು ಸಾವು ಅಥವಾ ಗಂಭೀರ ಗಾಯವನ್ನುಂಟುಮಾಡಲು ಕ್ರಿಮಿನಲ್ ಬೆದರಿಕೆಯ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗಳಿಗೆ ಕಳುಹಿಸಲಾಗಿದ್ದು, ಉಳಿದ ಆರೋಪಿಗಳನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರು ಹೇಳಿದ್ದಾರೆ.
“ಹಲವಾರು ಪುರುಷರು ನನ್ನನ್ನು ಬಲವಂತವಾಗಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಒಬ್ಬೊಬ್ಬರಾಗಿ ದೌರ್ಜನ್ಯ ಎಸಗಿದರು” ಎಂದು ಹದಿಹರೆಯದ ಬಾಲಕಿ ತನ್ನ ದೂರಿನಲ್ಲಿ ತಿಳಿಸಿದ್ದಾರೆ. ಘಟನೆಯಿಂದ ಅಘಾತಕ್ಕೊಳಗಾಗಿದ್ದ ಬಾಲಕಿ ಮನೆಗೆ ಹಿಂದಿರುಗಿದ್ದರು. ಆರಂಭದಲ್ಲಿ ಮೌನವಾಗಿದ್ದ ಅವರು, ಆರೋಗ್ಯ ಕ್ಷೀಣಿಸಲು ಪ್ರಾರಂಭವಾದಾಗ ಘಟನೆ ಬಗ್ಗೆ ತನ್ನ ತಾಯಿಯೊಂದಿಗೆ ಹಂಚಿಕೊಂಡಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಹೇಳಿದೆ.
ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದ ಕಾಸ್‌ಗಂಜ್ ಜಿಲ್ಲೆಯಲ್ಲಿ ನಡೆದಿದೆ. ಸುಮಾರು 10 ದುಷ್ಕರ್ಮಿಗಳು ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದು, ಪೊಲೀಸರು ಸ್ಥಳೀಯ ಬಿಜೆಪಿ ಸದಸ್ಯ ಸೇರಿದಂತೆ ಒಟ್ಟು 8 ಜನರನ್ನು ಬಂಧಿಸಿದ್ದಾರೆ.
ಸುದ್ದಿ ಓದಿ➣➣ https://t.co/RlXzTFM1iI#NaanuGauri #UP #BJP pic.twitter.com/pBe9pckPSs
— Naanu Gauri (@naanugauri) April 14, 2025
“ಅವರು ಬೈಕ್‌ನಲ್ಲಿ ಬಂದು ಮೊದಲಿಗೆ, ಅಶ್ಲೀಲ ಹೇಳಿಕೆಗಳನ್ನು ನೀಡಲು ಪ್ರಾರಂಭಿಸಿದರು. ನಂತರ ಕೆಲವರು ನನ್ನ ಸ್ನೇಹಿತನನ್ನು ಹಿಡಿದು ನನ್ನನ್ನು ಗುರಿಯಾಗಿಸಿಕೊಂಡರು. ಸುಮಾರು ಎರಡು ಗಂಟೆಗಳ ನಂತರ, ನನ್ನ ಸ್ನೇಹಿತ ಮತ್ತು ನನ್ನನ್ನು ಹೋಗಲು ಅನುಮತಿಸಲಾಯಿತು. ಈ ವೇಳೆ ಅವರು ನನ್ನ ಚಿನ್ನದ ಕಿವಿಯೋಲೆಗಳನ್ನು ಸಹ ಕಸಿದುಕೊಂಡರು…” ಎಂದು ಬಾಲಕಿ ಹೇಳಿದ್ದಾರೆ.
ಬಾಲಕಿಯ ಮೇಲೆ ಅತ್ಯಾಚಾರ ಎಸಗುತ್ತಿದ್ದಾಗ ರಕ್ಷಣೆಗೆ ಪ್ರಯತ್ನಿಸತ್ತಿದ್ದ ಯುವಕನ ಮೇಲೂ ದುಷ್ಕರ್ಮಿಗಳ ಹಲ್ಲೆ ನಡೆಸಿದ್ದರು ಎಂದು ವರದಿ ಹೇಳಿದೆ. ಅಲ್ಲದೆ ದುಷ್ಕರ್ಮಿಗಳು ಅತ್ಯಾಚಾರದ ವೀಡಿಯೊವನ್ನು ಬಳಸಿಕೊಂಡು ಯುವಕನಿಂದ 5000 ರೂ. ಹಣವನ್ನು ಸುಲಿಗೆ ಮಾಡಿದ್ದಾರೆ ಎಂದು ವರದಿಯಾಗಿದೆ. ಈ ಮಧ್ಯೆ, ಆರೋಪಿ ಅಖಿಲೇಶ್ ಪ್ರತಾಪ್ ಸಿಂಗ್ ಬಿಜೆಪಿ ಸದಸ್ಯ ಎಂದು ಹೇಳಲಾಗುತ್ತಿದ್ದು, ಪಕ್ಷದ ಹಲವಾರು ನಾಯಕರೊಂದಿಗೆ ಅವರ ಚಿತ್ರಗಳು ಸಹ ಹರಿದಾಡುತ್ತಿವೆ. ಅಪ್ರಾಪ್ತೆ ಮೇಲೆ ಗ್ಯಾಂಗ್ ರೇಪ್
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಸೋದರಳಿಯ ಆಕಾಶ್‌ರನ್ನು ಮತ್ತೆ ಪಕ್ಷಕ್ಕೆ ಸ್ವಾಗತಿಸಿದ ಮಾಯಾವತಿ!

