Homeಕರ್ನಾಟಕವಾಡಿಯಲ್ಲಿ ಬೈಕ್ ಜಾಥಾ ಉದ್ಘಾಟನೆ: ಏ.26ಕ್ಕೆ 10,000ಕ್ಕೂ ಅಧಿಕ ಸೇರಲಿರುವ ಸಂವಿಧಾನ ಸಂರಕ್ಷಕರ ಸಮಾವೇಶಕ್ಕೆ ಕರೆ

ವಾಡಿಯಲ್ಲಿ ಬೈಕ್ ಜಾಥಾ ಉದ್ಘಾಟನೆ: ಏ.26ಕ್ಕೆ 10,000ಕ್ಕೂ ಅಧಿಕ ಸೇರಲಿರುವ ಸಂವಿಧಾನ ಸಂರಕ್ಷಕರ ಸಮಾವೇಶಕ್ಕೆ ಕರೆ

- Advertisement -
- Advertisement -

ವಾಡಿ: ಬಾಬಾಸಾಹೇಬರು ಭೇಟಿ ನೀಡಿ ಕೂತಿದ್ದ ಸ್ಥಳದಲ್ಲೇ ದೇಶಪ್ರೇಮಿ ಯುವಾಂದೋಲನ ಬೈಕ್ ಜಾಥಾವನ್ನು ಅಮೃತರಾವ್ ಕೋಮಟೆ ಅವರ ಮಗ ಟೋಪಣ್ಣ ಕೋಮಟೆ ಅವರು ಏ.14ರಂದು (ಸೋಮವಾರ) ಉದ್ಘಾಟಿಸಿದ್ದಾರೆ.

ಬಾಬಾಸಾಹೇಬರ ಒಡನಾಟದಲ್ಲಿದ್ದು ಬಾಬಾಸಾಹೇಬರ ಜೊತೆಯೇ ಬೌದ್ಧ ಧಮ್ಮ ಸ್ವೀಕರಿಸಿದ ವಾಡಿಯ ಅಮೃತರಾವ್ ಕೋಮಟೆ ಅವರ ಮಗ ಟೋಪಣ್ಣ ಕೋಮಟೆ ಅವರು ಯುವ ತಂಡಕ್ಕೆ ಬಾಬಾಸಾಹೇಬರ ಬಾವುಟ ನೀಡಿ ಉದ್ಘಾಟಿಸಿ, ಶುಭ ಕೋರಿದರು.

ನಂತರ ಜಾಥಾದ ತಂಡವು ಪುರಸಭೆಯ ನೌಕರರು, ಲಾರಿ ಒಕ್ಕೂಟದ ಸಂಘದವರ ಜೊತೆ ಸಭೆಗಳನ್ನು ನಡೆಸಿ, ಏ.26ರಂದು ದಾವಣಗೆರೆಯಲ್ಲಿ ನಡೆಯುತ್ತಿರುವ ಸಂವಿಧಾನ ಸಂರಕ್ಷಕರ ಸಮಾವೇಶದ ಮಹತ್ವ ಕುರಿತು ತಿಳಿಸಿ, ಸಮಾವೇಶಕ್ಕೆ ಆಹ್ವಾನ ಮಾಡಿತು. ಅಂದು ದಾವಣಗೆರೆಯಲ್ಲಿ ರಾಜ್ಯದ ವಿವಿಧ ಭಾಗದಿಂದ ಸುಮಾರು 10,000ಕ್ಕೂ ಹೆಚ್ಚು ಸಂವಿಧಾನ ಸಂರಕ್ಷಕ ಹೋರಾಟಗಾರರು ಸೇರಲಿರುವ ಕುರಿತು ಮಾಹಿತಿ ನೀಡಿದರು.

ಅಂದು ರಾಜ್ಯದ ಪ್ರತಿ ಜಿಲ್ಲೆಯಿಂದ ಸಂವಿಧಾನ ಸಂರಕ್ಷಕರ ತಂಡಗಳ ಮಹಾಪೂರವೇ ಹರಿದು ಬರಲಿದೆ. ಹಾಗೆಯೇ ರಾಜ್ಯದ ಮತ್ತು ದೇಶದ ಜನಚಳವಳಿಗಳ ಮುಂದಾಳುಗಳು ಅಂದು ಆಗಮಿಸಲಿದ್ದು, ಕಸವುಭರಿತ ಸಾಂಸ್ಕೃತಿಕ ತಂಡಗಳಿಂದ ಕಲಾಕಹಳೆ ಮೊಳಗಲಿದೆ ಎಂದು ತಂಡವು ಹೇಳಿದೆ.

ಈ ಸಮಾವೇಶದ ಉದ್ದೇಶ ಅಪಾಯದಲ್ಲಿರುವ ಸಂವಿಧಾನವನ್ನು ರಕ್ಷಿಸಿಕೊಳ್ಳುವುದೇ ಆಗಿದೆ. ಕಾಂಗ್ರೆಸ್ಸಿನ ವೈಫಲ್ಯಗಳನ್ನು ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಅಧಿಕಾರಕ್ಕೆರಿದ ಬಿಜೆಪಿ ಭಾರತವನ್ನು ನೈತಿಕವಾಗಿ, ಆರ್ಥಿಕವಾಗಿಯೂ, ರಾಜಕೀಯವಾಗಿ ಅವನತಿಯ ಅಂಚಿಗೆ ತಂದು ನಿಲ್ಲಿಸಿದೆ.  ಸಂತ-ಶರಣರ ಬೀಡಾಗಿದ್ದ ಭಾರತವನ್ನು ಜಾತಿ, ಧರ್ಮಗಳ ಹೆಸರಲ್ಲಿ ಕಚ್ಚಾಡುವ ಕುರುಕ್ಷೇತ್ರವನ್ನಾಗಿ ಪರಿವರ್ತಿಸಲಾಗಿದೆ. ಜನರ ಗಮನವನ್ನೆಲ್ಲಾ ದಿಕ್ಕುತಪ್ಪಿಸಿ ದೇಶದ ಬೃಹತ್ ಸಂಪತ್ತನ್ನು ಅದಾನಿ, ಅಂಬಾನಿಯಂತಹ ಕಾರ್ಪೊರೇಟ್ ಕುಳಗಳ ತೆಕ್ಕೆಗೆ ಅರ್ಪಿಸಲಾಗಿದೆ. ಸಂವಿಧಾನ ಮೌಲ್ಯಗಳಿಗೆ ತದ್ವಿರುದ್ದ ದಿಕ್ಕಿನಲ್ಲಿ ದೇಶವನ್ನು ಅಪಹರಿಸಿ ಕೊಂಡೊಯ್ಯಲಾಗುತ್ತಿದೆ. ಸ್ವಾತಂತ್ರ್ಯದ ಜಾಗದಲ್ಲಿ ಸರ್ವಾಧಿಕಾರ, ಸಮಾನತೆಯ ಜಾಗದಲ್ಲಿ ಬಲಾಢ್ಯರ ಅಭಿವೃದ್ಧಿ, ಸೋದರತ್ವದ ಜಾಗದಲ್ಲಿ ಸನಾತನವಾದ, ಸಾಮಾಜಿಕ ನ್ಯಾಯದ ಜಾಗದಲ್ಲಿ ಮೇಲ್ವರ್ಗದವರಿಗೆ ಮೇಲ್ಪಂಕ್ತಿ ನೀತಿಯನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಸಂವಿಧಾನ ಈ ದೇಶದ ದುಡಿಯುವ ಜನರಾದ ರೈತ, ಕೂಲಿ, ಕಾರ್ಮಿಕ, ಸಾಮಾನ್ಯ ಜನರಿಗೆ ನೀಡಿದ್ದ ಹಕ್ಕುಗಳನ್ನೆಲ್ಲಾ ವೇಗಗತಿಯಲ್ಲಿ ರದ್ದುಗೊಳಿಸಲಾಗತ್ತಿದೆ. ಈ ದೇಶದ ದಮನಿತ ಸಮುದಾಯಗಳಾದ ದಲಿತ, ಆದಿವಾಸಿ, ಅಲ್ಪಸಂಖ್ಯಾತ ಅತಿ ಹಿಂದುಳಿದ, ಮಹಿಳಾ, ಲೈಂಗಿಕ ಅಲ್ಪಸಂಖ್ಯಾತ ಮುಂತಾದ ಜನ ವರ್ಗಗಳಿಗೆ  ಸಾಮಾಜಿಕವಾಗಿ ಮುಂದೆ ಬರಲು ನೀಡಲಾಗಿದ್ದ ಅವಕಾಶಗಳ ಮಾರ್ಗಗಳನ್ನೆಲ್ಲಾ ಮುಚ್ಚಲಾಗುತ್ತಿದೆ. ಸರಕಾರಿ ಶಿಕ್ಷಣ, ಸರಕಾರಿ ಚಿಕಿತ್ಸೆ ಕಣ್ಮರೆಯಾಗುತ್ತಿವೆ. ಕೆಲಸಕ್ಕೆ ಯಾವ ಭದ್ರತೆಯೂ ಇಲ್ಲವಾಗಿದೆ. ಬೆಲೆಏರಿಕೆ, ಭ್ರಷ್ಟಾಚಾರ ದುಡಿದದ್ದನ್ನೆಲ್ಲಾ ಬಾಚಿ ತಿನ್ನುತ್ತಿವೆ. ರೈತರು, ಜನಸಾಮಾನ್ಯರು ಸಾಲದ ಸುಳಿಯಲ್ಲಿ ನಲುಗುತ್ತಿದ್ದಾರೆ.  ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರಗಳು ಮಿತಿಮೀರಿ ಬೆಳೆಯುತ್ತಿವೆ. ಜಾತಿ ಧರ್ಮದ ಹೆಸರಿನಲ್ಲಿ ನೆತ್ತರು ಹರಿದಾಡುತ್ತಿದೆ. ಒಟ್ಟಾರೆ ಸಂವಿಧಾನ ಅಪಾಯದಲ್ಲಿದೆ ಇದರ ರಕ್ಷಣೆಯೇ ನಮ್ಮ ಈ ಸಮಾವೇಶದ ಉದ್ದೇಶ ಎಂದು ಯುವಾಂದೋಲನ ತಂಡವು ನೆರೆದಿದ್ದ ಜನಸಮೂಹಕ್ಕೆ ಹೇಳಿದೆ.

ಸಾರಾಂಶದಲ್ಲಿ ಆಧಿಕಾರ ನಡೆಸುತ್ತಿರುವವರನ್ನು ಪ್ರಶ್ನಿಸುವ, ಬೆದರಿಸುವ, ನಿಯಂತ್ರಿಸುವ ಹಾಗೂ ಬದಲಾಯಿಸುವ ಶಕ್ತಿ ಬೀದಿಗೆ ಬಂದಾಗ ಮಾತ್ರವೇ ಪ್ರಜಾಪ್ರಭುತ್ವವನ್ನು ನಿಜವಾದ ಅರ್ಥದಲ್ಲಿ ಸುರಕ್ಷಿತಗೊಳಿಸಲು ಸಾಧ್ಯ. ಜನಸಾಮಾನ್ಯರ ಬಲ ಕುಗ್ಗಿದೊಡನೆ ಪ್ರಜಾಪ್ರಭುತ್ವ ಸತ್ವ ಕಳೆದುಕೊಳ್ಳುತ್ತದೆ. ಪ್ರತಿಕ್ರಾಂತಿ ಸವಾರಿ ಮಾಡುತ್ತದೆ. ಕಳೆದ 3 ದಶಕಗಳಲ್ಲಿ ಆದದ್ದು ಇದೇ. ನಾವು ಒಡೆದು ಹೋದೆವು. ಅವರು ನಮ್ಮ ಮೇಲೆರಿ ಕುಳಿತರು. ಆದ ಕಾರಣ ರಾಜ್ಯದಲ್ಲಿರುವ ಎಲ್ಲ ಜನಪರ ಸಂಘಟನೆಗಳು, ಜನಪರ ಮನಸ್ಸುಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಕೂತು ಮಾತನಾಡುತ್ತಿದ್ದೇವೆ. ಪರಸ್ಪರ ಕೈ ಕೈ ಜೋಡಿಸಿ ಕೆಲಸ ಮಾಡಲು ಶುರು ಮಾಡಿದ್ದೇವೆ. ನಮ್ಮ ನಮ್ಮದೇ ರೀತಿಯಲ್ಲಿ ಸರ್ವಾಧಿಕಾರಿ, ಷಡ್ಯಂತ್ರಕಾರಿ ಶಕ್ತಿಗಳನ್ನು ಪ್ರತಿರೋಧಿಸುತ್ತಿದ್ದೇವೆ. ಇದೊಂದು ಮಹಾಯಾನ, ನಾವು ನೀವೆಲ್ಲರೂ ಕೂಡಿ ಮುಂದ್ಸಾಗಿಸಬೇಕಾದ ನವಯಾನ. ದುಡಿಯುವ ವರ್ಗದ ಹೋರಾಟಗಳಿಗೆ ಹೆಸರಾಗಿದ್ದ ದಾವಣಗೆರೆ ಹೊಸ ತಲೆಮಾರಿನ ಮಹಾಯನಕ್ಕೆ ವೇದಿಕೆಯಾಗುತ್ತಿದೆ. ನೀವೂ ಅಂದು ಜೊತೆಗಿರಿ ಎಂದು ತಂಡವು ಜನತೆಗೆ ಮನವಿ ಮಾಡಿತು.

ವಾಡಿಯಿಂದ ಪ್ರಾರಂಭವಾಗಿರುವ ಈ ನಮ್ಮ ಬೈಕ್ ಯಾನವು ಇಂದಿನಿಂದ (ಏ.14) ಏ.26ರವರೆಗೆ  ನಡೆಯಲಿದ್ದು, ಸುಮಾರು 20 ಜಿಲ್ಲೆಗಳ ಮೂಲಕ, ಸರಿ ಸುಮಾರು 2000 ಕಿ.ಮೀ. ಕ್ರಮಿಸಿ 26ರಂದು ದಾವಣಗೆರೆಯಲ್ಲಿ ಸಂವಿಧಾನ ಸಂರಕ್ಷಕರ ಸಮಾವೇಶವನ್ನು ಸೇರಿಕೊಳ್ಳಲಿದೆ ಎಂದು ತಂಡದ ಸರೋವರ್ ಬೆಂಕಿಕೆರೆ ಹೇಳಿದ್ದಾರೆ.

ದೇಶಪ್ರೇಮಿ ಯುವ ಆಂದೋಲನವು ಜಾಥಾದ ಉದ್ದಕ್ಕೂ ವಿದ್ಯಾರ್ಥಿ ಯುವಜನರ ಸಮಸ್ಯೆಗಳು ಮತ್ತು ಸಂವಿಧಾನದ ಸಂರಕ್ಷಣೆಯಲ್ಲಿ ಯುವಜನರ ಪಾತ್ರದ ಕುರಿತು ಹಾಗೂ ಏಪ್ರಿಲ್ 26ರ ಸಮಾವೇಶದ ಪ್ರಚಾರವನ್ನು ನಡೆಸಲಿದೆ. ಏಪ್ರಿಲ್ 14ನೇ ತಾರೀಕು ಅಂಬೇಡ್ಕರ್ ಅವರು ನಮ್ಮ ರಾಜ್ಯದ ಗುಲ್ಬರ್ಗ ಜಿಲ್ಲೆಯ ಈ ವಾಡಿಗೆ ಭೇಟಿ ನೀಡಿದ ಸ್ಥಳವಾದ್ದರಿಂದ ಇಲ್ಲಿಂದಲೇ ನಮ್ಮ ಜಾಥವನ್ನು ಪ್ರಾರಂಭಿಸಲಾಗಿದೆ. ವಿದ್ಯಾರ್ಥಿ ಯುವಜನರು ಸೇರಿಕೊಂಡು ನಡೆಸುತ್ತಿರುವ ಈ ಜಾಥಾಕ್ಕೆ ತಮ್ಮೆಲ್ಲರ ಸಹಾಯ ಸಹಕಾರಬೇಕೆಂದು ಬಯಸುತಿದ್ದೇವೆ ಎಂದು ಅವರು ಮನವಿ ಮಾಡಿದರು.

ಈ ಜಾಥಾವು ಸುಮಾರು 20 ಬೈಕ್ ಗಳಲ್ಲಿ 12 ದಿನಗಳು ನಡೆಯಲಿದ್ದು ಸುಮಾರು 20 ಜಿಲ್ಲೆಗಳನ್ನು ಮತ್ತು ಹಲವು ತಾಲೂಕುಗಳನ್ನು ಹಾಗೂ ಊರುಗಳನ್ನು ಸುತ್ತಾಡಿಕೊಂಡು ಏಪ್ರಿಲ್ 25 ನೇ ತಾರೀಕು ದಾವಣಗೆರೆಯನ್ನು ತಲುಪಲಿದ್ದೇವೆ. ನಾವು ಹಾದು ಹೋಗುವ ಜಿಲ್ಲೆಗಳಲ್ಲಿ, ತಾಲೂಕು ಕೇಂದ್ರಗಳಲ್ಲಿ ಊರುಗಳಲ್ಲಿ ಯುವಜನರೊಂದಿಗೆ ವಿದ್ಯಾರ್ಥಿ ಯುವಜನರ ಸಮಸ್ಯೆಗಳನ್ನು ಮತ್ತು ಸಂವಿಧಾನದ ಪ್ರಾಮುಖ್ಯತೆಗಳನ್ನು ಹಾಗೂ ಏಪ್ರಿಲ್ 26ರ ದಾವಣಗೆರೆ ಸಮಾವೇಶದ ಕುರಿತು ಚರ್ಚಿಸುತ್ತಾ ಪ್ರಸಾರ ನಡೆಸುತ್ತಾ ಸಾಧ್ಯವಾದ ಕಡೆ ಪ್ರೆಸ್ ಮೀಟ್ ನಡೆಸುತ್ತಾ, ಸಭೆಗಳನ್ನು ನಡೆಸುತ್ತಾ ಸಾಗುತ್ತವೆ ಎಂದರು.

ಜಾಥಾದ ಇನ್ನೊಬ್ಬ ಯುವ ಮುಂದಾಳು, ವಿದ್ಯಾರ್ಥಿ ನಾಯಕ ಹೇಮಂತ್ ಸಕಲೇಶ್ ಪುರ ಮಾತನಾಡಿ, ನಮ್ಮ ಜಾಥಾವು ಇಂದು ವಾಡಿಯಿಂದ ಆರಂಭಿಸಿ,  ಸೇಡಂ, ಚಿಂಚೋಳಿಗೆ ಭೇಟಿ ನೀಡಲಿದೆ. ನಾಳೆ ಅಂದರೆ ಏ.15ರಂದು ಭಾಲ್ಕಿ, ಬಸವಕಲ್ಯಾಣ, ಹುಮ್ನಬಾದ್, ಕಲಬುರ್ಗಿಗಳಲ್ಲಿ ಸಂಚರಿಸಲಿದೆ. ಏ.16ರಂದು ಕಲಬುರ್ಗಿ, ಇಂಡಿ, ವಿಜಯಪುರ, ಏ.17ರಂದು ಸಿಂದಗಿ, ಗಹಾಪುರ, ಯಾದಗಿರಿ, ಏ.18 ದೇವದುರ್ಗ, ರಾಯಚೂರು, ಏ.19ರಂದು ಮಾನ್ವಿ, ಸಿಂಧನೂರು, ಗಂಗಾವತಿ, ಏ.20ರಂದು ಗಂಗಾವತಿ, ಕೊಪ್ಪಳ, ಗದಗ, ಅಥವಾ ಗಂಗಾವತಿ, ಕುಷ್ಟಗಿ, ಯಲಬುರ್ಗಾ, ಗದಗ, ಏ.21ರಂದು ಹುಬ್ಬಳ್ಳಿ, ಧಾರವಾಡ, ಮುಂಡಗೋಡ, ಏ.22ರಂದು ಶಿಗ್ಗಾಂವಿ, ಹಾವೇರಿ, ರಾಣಿಬೆನ್ನೂರು, ಶಿಕಾರಿಪುರ, ಏ.23ರಂದು ತೀರ್ಥಹಳ್ಳಿ, ಕೊಪ್ಪ, ಜೈಪುರ, ಶೃಂಗೇರಿ, ಏ.24 ಮತ್ತು 25 ಕೊನೆಯ ದಿನದಂದು ಭದ್ರಾವತಿ, ಶಿವಮೊಗ್ಗ, ಚನ್ನಗಿರಿ, ಚಿತ್ರದುರ್ಗ, ದಾವಣಗೆರೆ ಸಂಚರಿಸಲಿದೆ ಎಂದು ಹೇಮಂತ್ ಮಾಹಿತಿ ನೀಡಿದರು.

ಪುರಸಭೆಯ ನೌಕರರು ಜಾಥಾದಲ್ಲಿರುವ ಹೆಣ್ಣುಮಕ್ಕಳಿಗೆ ಗುಲಾಬಿ ಹೂಗಳನ್ನು ನೀಡಿ ಸ್ವಾಗತಿಸಿದ್ದು ವಿಶೇಷವಾಗಿತ್ತು.

ಹಲವು ದಲಿತ -ಪ್ರಗತಿಪರ ಹೋರಾಟಗಾರರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಜಾಥಾದಲ್ಲಿ ಹೇಮಂತ ಹಾಸನ, ಗೀತಾ ಗುಲ್ಬರ್ಗ, ಕೌಶಲ್ಯ ಮಂಡ್ಯ, ಸರೋವರ ಬೆಂಗಳೂರು, ಮರಿಸ್ವಾಮಿ ಕಟ್ಟಿಮನಿ ಬೆಂಗಳೂರು, ರವಿ ನವಲಹಳ್ಳಿ ರಾಯಚೂರು ಜಿಲ್ಲೆ, ಉಮೇಶ್ ಬಡಗಿ ಕೊಪ್ಪಳ, ಶರಣು ಈಳಿಗನೂರು (ಕೊಪ್ಪಳ), ಯಮುನಾ ಚಳ್ಳೂರು(ಕೊಪ್ಪಳ), ಯಮನೂರ ಈಳಿಗನೂರು(ಕೊಪ್ಪಳ), ದುರ್ಗೆಶ್ ಕೆ. ಬರಗೂರು(ಕೊಪ್ಪಳ), ರಾಜೇಂದ್ರ ರಾಜವಾಳ (ಗುಲ್ಬರ್ಗಾ), ಶಾಂತಾ ಗುಲ್ಬರ್ಗಾ, ಕೇಶವ್ ಕೋಲಾರ ಭಾಗವಹಿಸಿದ್ದಾರೆ.

ಉತ್ತರ ಪ್ರದೇಶ | ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ; ಬಿಜೆಪಿ ನಾಯಕ ಸೇರಿ 8 ಮಂದಿ ಬಂಧನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶೀಘ್ರವೇ ಪೌರಕಾರ್ಮಿಕರ ಉಪಹಾರ ಭತ್ಯೆ ₹70 ಕ್ಕೆ ಹೆಚ್ಚಿಸುವೆ: ಸಿಎಂ ಡಿ.ಕೆ. ಶಿವಕುಮಾರ್

ಪೌರಕಾರ್ಮಿಕರ ದೀರ್ಘಕಾಲದ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಪೌರಕಾರ್ಮಿಕರ ಉಪಹಾರ ಭತ್ಯೆಯನ್ನು ₹35 ರಿಂದ ₹70 ಕ್ಕೆ ಏರಿಕೆ ಮಾಡಿ ಶೀಘ್ರದಲ್ಲೇ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದು...

ಎಸ್ಐಆರ್ ಬಡವರ ಪಾಲಿನ ಕೊಲ್ಲುವ ಕತ್ತಿಯಾಗಿದೆ : ಪ್ರಕಾಶ್ ರಾಜ್

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್ ಐಆರ್) ಬಡವರ ಪಾಲಿನ ಕೊಲ್ಲುವ ಕತ್ತಿಯಾಗಿದೆ ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ಹೇಳಿದರು. ಎಸ್ಐಆರ್ ಪರಿಶೋಧನೆ ಮತ್ತು ಪ್ರತಿರೋಧ ಜಾಥಾದ ಭಾಗವಾಗಿ ಶುಕ್ರವಾರ (ಸೆ.25)...

ದಲಿತರ ಮೇಲಿನ ದೌರ್ಜನ್ಯ ಹೆಚ್ಚಳ: ದಲಿತ ಸಂಘಟನೆಗಳ ಒಕ್ಕೂಟ ಖಂಡನೆ

ರಾಜ್ಯದಲ್ಲಿ ಗಣನೀಯವಾಗಿ ಹೆಚ್ಚಾಗುತ್ತಿರುವ ದಲಿತರ ಮೇಲಿನ ದೌರ್ಜನ್ಯ, ಹಲ್ಲೆ, ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳನ್ನು ತಡೆಯುವಲ್ಲಿ ಸರ್ಕಾರದ ವೈಫಲ್ಯವನ್ನು ಖಂಡಿಸಿ ಇಂದ ಬೆಂಗಳೂರಿನ ಪ್ರೆಸ್‌ ಕ್ಲಬ್‌ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ದಲಿತ ಸಂಘಟನೆಗಳ...

ಮುರ್ಷಿದಾಬಾದ್‌: ಎಸ್ಐಆರ್ ಪ್ರಕ್ರಿಯೆಯಲ್ಲಿ ಹೆಸರುಗಳು ಉಳಿದರೂ ‘ಬಾಂಗ್ಲಾದೇಶಿ’ ಎಂದು ಅನುಮಾನಿಸಿ 60 ವರ್ಷದ ತಂದೆ, ಮೂವರು ಪುತ್ರರ ಗಡಿಪಾರು ಆರೋಪ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಬಂಗಾಳಿ ಮುಸ್ಲಿಂ ಕುಟುಂಬವೊಂದರ ನಾಲ್ವರು ಸದಸ್ಯರನ್ನು ಪೊಲೀಸರು ಮನೆಯಿಂದ ಕರೆದೊಯ್ದು, ಅವರು ಬಾಂಗ್ಲಾದೇಶಿ ಪ್ರಜೆಗಳು ಎಂದು ಆರೋಪಿಸಿ ಬಿಎಸ್‌ಎಫ್‌ಗೆ ಹಸ್ತಾಂತರಿಸಿ ಬಾಂಗ್ಲಾದೇಶಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು...

ಗ್ಯಾನೇಶ್ ಕುಮಾರ್‌ನನ್ನು ಬಂಧಿಸುವಂತೆ ಬಿ.ಕೆ. ಹರಿಪ್ರಸಾದ್ ಆಗ್ರಹ: ನಾಳೆ ಕಾಂಗ್ರೆಸ್‌ನಿಂದ ಪ್ರತಿಭಟನೆ

ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರು ಕಳೆದ 10 ತಿಂಗಳಲ್ಲಿ ಕನಿಷ್ಠ 14 ಬಾರಿ ಇನ್ನುಳಿದ ಇಬ್ಬರು ಆಯುಕ್ತರ ಭಿನ್ನಮತವನ್ನು ಸಂಪೂರ್ಣವಾಗಿ ತಳ್ಳಿಹಾಕಿ ಗೌಪ್ಯವಾಗಿ 'ಎಸ್‌ಐಆರ್'...

‘ಪೆನ್ಶನ್ ಹೋಗಲ್ಲ, SIR ಹೋಗುತ್ತೆ, ಹೆದರಬೇಡಿ’: ತುಮಕೂರಿನಲ್ಲಿ ಸಂತ್ರಸ್ತ ಮಹಿಳೆಗೆ ಪ್ರಕಾಶ್ ರಾಜ್ ಭರವಸೆ

ತುಮಕೂರು: ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಗೆ ಸಂಬಂಧಿಸಿದ ನೋಟಿಸ್‌ಗಳಿಂದ ಆತಂಕಕ್ಕೊಳಗಾಗಿರುವ ತುಮಕೂರಿನ ಎನ್‌ಆರ್ ಕಾಲೊನಿಯ ನಿವಾಸಿಗಳ ಮನೆಗಳಿಗೆ ನಟ ಹಾಗೂ ಹೋರಾಟಗಾರ ಪ್ರಕಾಶ್ ರಾಜ್ ಭೇಟಿ ನೀಡಿ, ಅವರ ಸಮಸ್ಯೆಗಳನ್ನು...

SIR ಅಕ್ರಮ: ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ವಿರುದ್ಧ ಕ್ರಮಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ PIL

ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ಸಾಂವಿಧಾನಿಕ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂದು ಆರೋಪಿಸಿ, ಮುಖ್ಯ ಚುನಾವಣಾ ಆಯುಕ್ತ (CEC) ಗ್ಯಾನೇಶ್ ಕುಮಾರ್ ಅವರ ವಿರುದ್ಧ ಶಿಸ್ತು ಹಾಗೂ...

ಜೆನ್ ಝಿ ಮತದಾರರ ನೋಂದಣಿ ಸ್ಥಗಿತದ ಹಿಂದೆ ಮೋದಿ-ಸಿಇಸಿ ಸಂಚು: ಕಾಂಗ್ರೆಸ್ ಆರೋಪ

18 ವರ್ಷ ತುಂಬಿದ ಯುವಜನರನ್ನು (Gen Z) ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವ 'ವಿಶೇಷ ಸಂಕ್ಷಿಪ್ತ ಪರಿಷ್ಕರಣೆ' (SSR) ಪ್ರಕ್ರಿಯೆಯು 2024 ರಿಂದ ತಡೆಹಿಡಿಯಲ್ಪಟ್ಟಿರುವುದು ಹಾಗೂ ಈ ವಿಷಯವಾಗಿ ಕೇಂದ್ರ ಚುನಾವಣಾ ಆಯೋಗದಲ್ಲಿ (ECI)...

ತುಮಕೂರಿನ ಎನ್.ಆರ್. ಕಾಲೋನಿ ಕೋತಿ ತೋಪಿನಲ್ಲಿ ಎಸ್ಐಆರ್ ಪರಿಶೋಧನೆ: ಸಂತ್ರಸ್ತರ ಅಹವಾಲು ಆಲಿಸಿದ ಪ್ರಕಾಶ್ ರಾಜ್: ಸೆ.26ಕ್ಕೆ ಬೆಂಗಳೂರಿನಲ್ಲಿ ಪ್ರತಿಭಟನೆ

ತುಮಕೂರು: ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಿಂದ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಎದುರಾಗಿರುವ ಸಮಸ್ಯೆಗಳನ್ನು ನೇರವಾಗಿ ಪರಿಶೀಲಿಸುವ ಉದ್ದೇಶದಿಂದ ನಟ ಹಾಗೂ ಹೋರಾಟಗಾರ ಪ್ರಕಾಶ್ ರಾಜ್ ಅವರು ತುಮಕೂರು ನಗರದ ಎನ್‌ಆರ್‌ ಕಾಲೊನಿ...

SIR ವಿವಾದ ಮತ್ತು ಆಂತರಿಕ ಬಿಕ್ಕಟ್ಟು: ಮೀರತ್, ವಾರಾಣಸಿ ಪ್ರವಾಸ ದಿಢೀರ್ ರದ್ದುಗೊಳಿಸಿದ ಗ್ಯಾನೇಶ್‌ ಕುಮಾರ್! Gen-Z ಆಕ್ರೋಶಕ್ಕೆ ಬೆದರಿತೇ ಆಯೋಗ?

ದೇಶಾದ್ಯಂತ ವ್ಯಾಪಕ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿರುವ 'ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ' (SIR) ವಿವಾದ, ಸ್ಥಗಿತಗೊಂಡಿರುವ ವಾರ್ಷಿಕ ಮತದಾರರ ಪಟ್ಟಿ ಪರಿಷ್ಕರಣೆ (SSR) ಹಾಗೂ ಚುನಾವಣಾ ಆಯೋಗದ ಉನ್ನತ ಹಂತದ ಶೀತಲ...