HomeಅಂಕಣಗಳುSIRSIR ಜಾರಿಯಿಂದ ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಮೇಲೆ ಸಂಶಯ ಮೂಡಿದೆ: ಅಶೋಕ್ ಲವಾಸ ಕಳವಳ

SIR ಜಾರಿಯಿಂದ ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಮೇಲೆ ಸಂಶಯ ಮೂಡಿದೆ: ಅಶೋಕ್ ಲವಾಸ ಕಳವಳ

- Advertisement -
- Advertisement -

ಚುನಾವಣಾ ಪ್ರಕ್ರಿಯೆಯ ಶುದ್ಧೀಕರಣದ ನೆಪದಲ್ಲಿ ನೈಜ ಮತದಾರರನ್ನು ಪಟ್ಟಿಯಿಂದ ಕೈಬಿಡುವ ಅಥವಾ ಬೇಟೆಯಾಡುವ ಪ್ರವೃತ್ತಿಯನ್ನು ತಕ್ಷಣವೇ ಕೈಬಿಡಬೇಕು, SIR ಪ್ರಕ್ರಿಯೆಯಿಂದ ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಮತ್ತು ವರ್ಚಸ್ಸಿಗೆ ಭಾರೀ ಧಕ್ಕೆಯಾಗುತ್ತಿದೆ ಎಂದಿರುವ ಮಾಜಿ ಚುನಾವಣಾ ಆಯುಕ್ತ ಅಶೋಕ್ ಲವಾಸ, ಇದರ ಬದಲಾಗಿ ರಾಜಕೀಯ ಪಕ್ಷಗಳಿಗೆ ಅಕ್ರಮವಾಗಿ ಹರಿದುಬರುತ್ತಿರುವ ಭಾರೀ ದೇಣಿಗೆಗಳ ಮೂಲವನ್ನು ಆಯೋಗವು ಕಟ್ಟುನಿಟ್ಟಾಗಿ ತನಿಖೆ ಮಾಡಬೇಕು ಎಂದು ಕೇಂದ್ರ ಚುನಾವಣಾ ಆಯೋಗವನ್ನು ಆಗ್ರಹಿಸಿದ್ದಾರೆ.

‘ದಿ ಹಿಂದೂ’ ಇಂಗ್ಲಿಷ್ ದಿನಪತ್ರಿಕೆಯಲ್ಲಿ ಪ್ರಕಟವಾದ ‘The Murky World of Political Party Finance’ (ರಾಜಕೀಯ ಪಕ್ಷಗಳ ಹಣಕಾಸಿನ ಅಪಾರದರ್ಶಕ ಜಗತ್ತು) ಎಂಬ ತಮ್ಮ ವಿಶೇಷ ಲೇಖನದಲ್ಲಿ ಲವಾಸ ಅವರು ಈ ಮಹತ್ವದ ಆಶಯವನ್ನು ವ್ಯಕ್ತಪಡಿಸಿದ್ದು, ಹಾಲಿ ಚುನಾವಣಾ ಆಯೋಗದ ಕಾರ್ಯವೈಖರಿ ಮತ್ತು ನಿರ್ಧಾರಗಳನ್ನು ಕಟುವಾಗಿ ವಿಮರ್ಶಿಸಿದ್ದಾರೆ.

ರಾಜಕೀಯ ಪಕ್ಷಗಳ ಹಣಕಾಸು ವ್ಯವಹಾರಗಳಲ್ಲಿ ಪಾರದರ್ಶಕತೆ ತರುವ ತುರ್ತು ಅಗತ್ಯವನ್ನು ಪ್ರತಿಪಾದಿಸಿರುವ ಅವರು, ದೇಶದ ಪ್ರತಿಯೊಂದು ರಾಜಕೀಯ ಪಕ್ಷದ ಲೆಕ್ಕಪತ್ರಗಳನ್ನು ಕಡ್ಡಾಯವಾಗಿ ‘ಮಹಾಲೇಖಪಾಲರ’ (ಸಿಎಜಿ) ಲೆಕ್ಕಪರಿಶೋಧನೆಗೆ ಒಳಪಡಿಸುವ ಕಾನೂನಾತ್ಮಕ ವ್ಯವಸ್ಥೆ ಜಾರಿಗೆ ಬರಬೇಕು ಎಂದಿದ್ದಾರೆ. ಇದರ ಜೊತೆಗೆ, ಚುನಾವಣಾ ವೆಚ್ಚಕ್ಕೆ ಕಟ್ಟುನಿಟ್ಟಿನ ಗರಿಷ್ಠ ಮಿತಿ ವಿಧಿಸುವ ಮೂಲಕ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನೇ ಆಪೋಶನ ತೆಗೆದುಕೊಳ್ಳುತ್ತಿರುವ ‘ಹಣಬಲ’ದ ಪ್ರಭಾವವನ್ನು ತಗ್ಗಿಸಲು ಆಯೋಗ ತನ್ನ ಸಾಂವಿಧಾನಿಕ ಶಕ್ತಿಯನ್ನು ಪೂರ್ಣಪ್ರಮಾಣದಲ್ಲಿ ಬಳಸಬೇಕು ಎಂದು ಒತ್ತಾಯಿಸಿದ್ದಾರೆ.

ವಿಶೇಷವಾಗಿ ಗುರುತಿಸಲ್ಪಡದ ನೋಂದಾಯಿತ ರಾಜಕೀಯ ಪಕ್ಷಗಳ (RUPP) ಹಣಕಾಸು ವಹಿವಾಟುಗಳಲ್ಲೂ ಹೆಚ್ಚಿನ ಪಾರದರ್ಶಕತೆ ತರಬೇಕಾದ ಅನಿವಾರ್ಯತೆಯನ್ನು ಅವರು ನೆನಪಿಸಿದ್ದಾರೆ. ವಿವಿಧ ತಾಂತ್ರಿಕ ಕಾರಣಗಳನ್ನು ಒಡ್ಡಿ ನೈಜ ಮತದಾರರನ್ನು (Genuine electors) ಮತದಾರರ ಪಟ್ಟಿಯಿಂದ ಹೊರಹಾಕಲು ಶ್ರಮಿಸುವ ಬದಲು, ಚುನಾವಣಾ ವಾತಾವರಣವನ್ನು ಕಲುಷಿತಗೊಳಿಸುತ್ತಿರುವ ‘ಕಪ್ಪು ಹಣದ ಹೊಳೆ’ಯನ್ನು ತಡೆಯಲು ಆಯೋಗ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ, ಚುನಾವಣಾ ಆಯೋಗವು ಇತ್ತೀಚೆಗೆ ಕೈಗೆತ್ತಿಕೊಂಡಿರುವ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯ ಉದ್ದೇಶ ಮತ್ತು ಜಾರಿಯ ವಿಧಾನವನ್ನು ಅಶೋಕ್ ಲವಾಸ ತೀವ್ರವಾಗಿ ಪ್ರಶ್ನಿಸಿದ್ದಾರೆ. ಹೊಸ ಮತದಾರರ ಸೇರ್ಪಡೆಗೆ ಬಳಸುವ ನಮೂನೆ 6 (Form 6) ಹಾಗೂ ಮತದಾರರ ನೋಂದಣಾಧಿಕಾರಿಯ (ಇಆರ್‌ಒ) ಅಧಿಕಾರ ವ್ಯಾಪ್ತಿಗೆ ಸಂಬಂಧಿಸಿದಂತೆ ಹಾಲಿ ಇಬ್ಬರು ಚುನಾವಣಾ ಆಯುಕ್ತರು ಎತ್ತಿರುವ ಆಕ್ಷೇಪಣೆಗಳು ಅತ್ಯಂತ ಗಂಭೀರವಾದ ಕಾನೂನು ಕಾಳಜಿಗಳನ್ನು ಹುಟ್ಟುಹಾಕುತ್ತವೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಆಯೋಗದೊಳಗಿನ ಆಂತರಿಕ ಭಿನ್ನಾಭಿಪ್ರಾಯಗಳ ಕುರಿತ ಮಾಧ್ಯಮ ವರದಿಗಳಿಗೆ ಪ್ರತಿಕ್ರಿಯಿಸಿರುವ ಅವರು, ಎಸ್‌ಐಆರ್ ಪ್ರಕ್ರಿಯೆ ಆರಂಭವಾದ ದಿನದಿಂದಲೇ ಈ ವಿವಾದ ಮುಂದುವರಿದಿದೆ ಎಂದಿದ್ದಾರೆ. ಯಾವುದೇ ಸ್ಪಷ್ಟ ತಾರ್ಕಿಕ ಉದ್ದೇಶವಿಲ್ಲದ ಇಂತಹ ವಿವಾದಾತ್ಮಕ ಹೆಜ್ಜೆಗಳಿಂದ ಸಾಂವಿಧಾನಿಕ ಹಾಗೂ ಸ್ವಾಯತ್ತ ಸಂಸ್ಥೆಯಾದ ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಮತ್ತು ವರ್ಚಸ್ಸಿಗೆ ಭಾರೀ ಧಕ್ಕೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಹೊಸ ಮತದಾರರ ನೋಂದಣಿಗೆ ಬಳಸುವ ನಮೂನೆ 6ಕ್ಕೆ ಯಾವುದೇ ಮೂಲಭೂತ ಬದಲಾವಣೆ ಮಾಡಿಲ್ಲ ಹಾಗೂ ಎಸ್‌ಐಆರ್ ಪ್ರಕ್ರಿಯೆಗಾಗಿ ಕೇವಲ ಪ್ರತ್ಯೇಕ ಘೋಷಣಾಪತ್ರವನ್ನು (annexure) ಮಾತ್ರ ಸೇರ್ಪಡೆ ಮಾಡಲಾಗಿದೆ ಎಂದು ಚುನಾವಣಾ ಆಯೋಗವು ಇತ್ತೀಚೆಗಷ್ಟೇ ಸ್ಪಷ್ಟನೆ ನೀಡಲು ಯತ್ನಿಸಿತ್ತು. ಆದಾಗ್ಯೂ, ಈ ಇಡೀ ಪ್ರಕ್ರಿಯೆಯ ಕಾನೂನುಬದ್ಧತೆ ಮತ್ತು ಪಾರದರ್ಶಕತೆಯ ಬಗ್ಗೆ ಆಯೋಗದ ಒಳಗೆ ಮತ್ತು ಹೊರಗೆ ಚರ್ಚೆಗಳು ತೀವ್ರಗೊಂಡಿವೆ.

ಹಾಲಿ ಇಬ್ಬರು ಆಯುಕ್ತರು ಸಿಇಸಿ ಕೃತ್ಯಗಳ ವಿರುದ್ಧ ಎತ್ತಿರುವ ಪ್ರಶ್ನೆಗಳು ಸಂಪೂರ್ಣ ನ್ಯಾಯಸಮ್ಮತವಾಗಿವೆ ಎಂದು ಅಶೋಕ್ ಲವಾಸ ಅವರಷ್ಟೇ ಅಲ್ಲದೆ, ಮತ್ತೊಬ್ಬ ಮಾಜಿ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಒ.ಪಿ. ರಾವತ್ ಕೂಡ ಬೆಂಬಲ ಸೂಚಿಸಿದ್ದಾರೆ. ಮಾಜಿ ಆಯುಕ್ತರ ಈ ಬಹಿರಂಗ ನಡೆ ಚುನಾವಣಾ ಆಯೋಗದ ಆಂತರಿಕ ಪ್ರಜಾರಾಜ್ಯ, ಸಾಂವಿಧಾನಿಕ ಸ್ವಾಯತ್ತತೆ ಹಾಗೂ ಭವಿಷ್ಯದ ಚುನಾವಣಾ ಸುಧಾರಣೆಗಳ ಕುರಿತು ರಾಷ್ಟ್ರಮಟ್ಟದಲ್ಲಿ ಗಂಭೀರ ಚರ್ಚೆಗೆ ನಾಂದಿ ಹಾಡಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಿಜಯವಾಡ ಕಸ್ಟಡಿಯಲ್ಲಿ ಸಾಯಿ ಕೃಷ್ಣ ಸಾವು: ಶವ ದಹನ, ಸಾಕ್ಷ್ಯ ನಾಶ ಖಚಿತ ಪಡಿಸಿದ ಎಸ್ಐಟಿ; ಸುಪ್ರೀಂ ಕೋರ್ಟ್ ನೇರ ಮೇಲ್ವಿಚಾರಣೆ 

ವಿಜಯವಾಡ: ಆಂಧ್ರಪ್ರದೇಶದ ವಿಜಯವಾಡದಲ್ಲಿ 25 ವರ್ಷದ ಗದೆ ಸಾಯಿ ಕೃಷ್ಣ ಅವರ ನಾಪತ್ತೆ ಹಾಗೂ ಶಂಕಿತ ಕಸ್ಟಡಿ ಸಾವಿನ ಪ್ರಕರಣ ಇದೀಗ ಸುಪ್ರೀಂ ಕೋರ್ಟ್‌ನ ನೇರ ಮೇಲ್ವಿಚಾರಣೆಗೆ ಒಳಪಟ್ಟಿದೆ. ಕೃಷ್ಣಲಂಕಾ ಪೊಲೀಸರು ವಶಕ್ಕೆ...

ಜ್ಞಾನೇಶ್ ಕುಮಾರ್‌ನನ್ನು ವಜಾಗೊಳಿಸಿ-SIR ರದ್ದುಗೊಳಿಸುವಂತೆ ಒತ್ತಾಯಿಸಿ ಸೆ.26 ಪ್ರತಿಭಟನೆಗೆ ಎಡ ಪಕ್ಷಗಳು ಹಾಗೂ SIR ವಿರೋಧಿ ಒಕ್ಕೂಟ ಕರೆ

ಕೇಂದ್ರ ಚುನಾವಣಾ ಆಯೋಗವು ಎಸಗಿರುವ ಅಕ್ರಮಗಳ ಪಾಪದ ಕೊಡ ತುಂಬಿದ್ದು, ಆಯೋಗದ ಆಂತರಿಕ ಭಿನ್ನಾಭಿಪ್ರಾಯಗಳು ಜಗಜ್ಜಾಹೀರಾಗಿವೆ ಎಂದು ‘SIR ವಿರೋಧಿ ಜನಪರ ಸಂಘಟನೆಗಳ ಹಾಗೂ ಜಾತ್ಯತೀತ ಪಕ್ಷಗಳ ಒಕ್ಕೂಟ’ ಆಕ್ರೋಶ ವ್ಯಕ್ತಪಡಿಸಿದೆ. ಮುಖ್ಯ...

“ಟರ್ನ್ ಅಪ್ರೂವರ್ ಆಗಿ”: ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯ; ಮತ ಕಳ್ಳತನ ಆರೋಪದಲ್ಲಿ ಮೋದಿ, ಶಾ ತನಿಖೆ ನಡೆಯಬೇಕಿದೆ: ರಾಹುಲ್ ಗಾಂಧಿ

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಚುನಾವಣಾ ವ್ಯವಸ್ಥೆಯಲ್ಲಿ ನಡೆದಿರುವುದಾಗಿ ಆರೋಪಿಸಲಾಗುತ್ತಿರುವ ಅಕ್ರಮಗಳ ಕುರಿತು “ಅನುಮೋದಕರಾಗಿ” (ಅಪ್ರೂವರ್) ಬದಲಾಗಬೇಕು ಎಂದು ಲೋಕಸಭೆಯ ವಿರೋಧ ಪಕ್ಷದ...

SIR : ಭಾಲ್ಕಿ, ಬೆಳಗಾವಿ ಉತ್ತರ-ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ಸಾವಿರಾರು ಅರ್ಹ ಮತಗಳ ಡಿಲೀಟ್‌ಗೆ ಯತ್ನ; ಅನ್ಯರು ಫಾರಂ-7 ಸಲ್ಲಿಸಿರುವುದು ಬಯಲು!

ಭಾರತೀಯ ಚುನಾವಣಾ ಆಯೋಗದಲ್ಲಿ (ಇಸಿಐ) ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ಸರ್ವಾಧಿಕಾರಿ ಧೋರಣೆ ಬಟಾಬಯಲಾಗಿ ದೇಶದಾದ್ಯಂತ ಭಾರೀ ಚರ್ಚೆಯಾಗುತ್ತಿರುವ ನಡುವೆಯೇ, ಕರ್ನಾಟಕದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್‌)...

‘ದಿಮಾಗಿ ನಕ್ಸಲರು ಚುನಾವಣಾ ಆಯುಕ್ತರನ್ನು ಗುರಿಯಾಗಿಸಿಕೊಂಡಿದ್ದಾರೆ..’; ಗ್ಯಾನೇಶ್‌ ಕುಮಾರ್ ಬೆಂಬಲಕ್ಕೆ ನಿಂತ ಅಸ್ಸಾಂ ಸಿಎಂ

ಮುಖ್ಯ ಚುನಾವಣಾ ಆಯುಕ್ತರು ಇತರ ಚುನಾವಣಾ ಆಯುಕ್ತರನ್ನು ಸಂಪರ್ಕಿಸದೆ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಮುಖ್ಯ ಚುನಾವಣಾ ಆಯುಕ್ತರನ್ನು (ಸಿಇಸಿ) ಗುರಿಯಾಗಿಸಿಕೊಂಡು ನಡೆಸಲಾಗುತ್ತಿರುವ ದಾಳಿಯು ಇದು ರಾಜಕೀಯ ಪ್ರಚಾರ ಹಾಗೂ ವಿರೋಧ ಪಕ್ಷಗಳ...

ಚುನಾವಣಾ ಆಯೋಗದ ಆಂತರಿಕ ಭಿನ್ನಾಭಿಪ್ರಾಯ: ಸಂಕಷ್ಟದಲ್ಲಿ ಲಕ್ಷಾಂತರ ‘Gen Z’ ಯುವಕರ ಮತದಾನದ ಹಕ್ಕು!

ಭಾರತೀಯ ಚುನಾವಣಾ ಆಯೋಗದಲ್ಲಿ ಮುಖ್ಯ ಚುನಾವಣಾ ಆಯುಕ್ತರು ಹಾಗೂ ಇತರ ಇಬ್ಬರು ಆಯುಕ್ತರ ನಡುವೆ ಉಂಟಾಗಿದೆ ಎನ್ನಲಾದ ಆಂತರಿಕ ಭಿನ್ನಾಭಿಪ್ರಾಯದಿಂದಾಗಿ, ದೇಶದ ನೂತನ ಯುವ ಮತದಾರರ ಸೇರ್ಪಡೆ ಪ್ರಕ್ರಿಯೆ ಮಂದಗತಿಯಲ್ಲಿದೆ ಎಂಬ ವರದಿ...

‘ಅನ್ಯಾಯಯುತ’ ಚುನಾವಣೆಗಳಿಗೆ ಅವಕಾಶ ನೀಡಿದ್ದಕ್ಕಾಗಿ ಸಿಇಸಿ ಗ್ಯಾನೇಶ್ ಕುಮಾರ್ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು: ಪ್ರಿಯಾಂಕಾ ಗಾಂಧಿ

ವಯನಾಡ್: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಮತ್ತು ಕೋಟ್ಯಂತರ ಮತದಾರರ ಹೆಸರುಗಳು ಪಟ್ಟಿಯಿಂದ ಹೊರಗುಳಿದಿರುವ ವಿಚಾರದ ನಡುವೆಯೇ ಚುನಾವಣಾ ಆಯೋಗದ ವಿರುದ್ಧ ಕಾಂಗ್ರೆಸ್‌ನ ವಾಗ್ದಾಳಿ ಮತ್ತಷ್ಟು ತೀವ್ರಗೊಂಡಿದೆ. ಮತದಾರರ...

48 ಗಂಟೆಯೊಳಗೆ ರಾಜೀನಾಮೆ ನೀಡದಿದ್ದರೆ ರಾಷ್ಟ್ರವ್ಯಾಪಿ ಪ್ರತಿಭಟನೆ; ಗ್ಯಾನೇಶ್ ಕುಮಾರ್‌ಗೆ ಸಿಜೆಪಿ ಎಚ್ಚರಿಕೆ

ದೇಶದ ಅತ್ಯಂತ ದೊಡ್ಡ ರಾಷ್ಟ್ರದ್ರೋಹಿ ಎಂದು ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ವಿರುದ್ಧ ವಾಗ್ದಾಳಿ ನಡೆಸಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ), "ಮತದಾರರ ಹಕ್ಕುಗಳನ್ನು ದುರ್ಬಲಗೊಳಿಸುತ್ತಿದ್ದಾರೆ" ಎಂದು ಆರೋಪಿಸಿ ಅವರ...

11 ವರ್ಷದ ಅತ್ಯಾಚಾರ ಸಂತ್ರಸ್ತೆಗೆ ಗರ್ಭಧಾರಣೆ ಮುಂದುವರಿಸಲು ಒತ್ತಾಯಿಸಲಾಗದು: 24 ವಾರ ಮೀರಿದರೂ ಗರ್ಭಪಾತಕ್ಕೆ ಜಮ್ಮು-ಕಾಶ್ಮೀರ ಹೈಕೋರ್ಟ್ ಅನುಮತಿ

ಶ್ರೀನಗರ: ಲೈಂಗಿಕ ದೌರ್ಜನ್ಯದಿಂದ ಗರ್ಭಿಣಿಯಾಗಿರುವ 11 ವರ್ಷದ ಬಾಲಕಿಯನ್ನು ಕಾನೂನಿನಲ್ಲಿರುವ ನಿಗದಿತ ಅವಧಿಯನ್ನು ಮೀರಿದೆ ಎಂಬ ಕಾರಣಕ್ಕೆ ಗರ್ಭಧಾರಣೆಯನ್ನು ಪೂರ್ಣ ಅವಧಿಯವರೆಗೆ ಮುಂದುವರಿಸುವಂತೆ ಒತ್ತಾಯಿಸಲಾಗುವುದಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್...

6 ವರ್ಷದ ಮಲಮಗಳ ಅತ್ಯಾಚಾರ, ಹತ್ಯೆ ಪ್ರಕರಣ : ಅಪರಾಧಿಯ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಬದಲಾಯಿಸಿದ ಸುಪ್ರೀಂ ಕೋರ್ಟ್

ಮಧ್ಯಪ್ರದೇಶದಲ್ಲಿ ತನ್ನ ಆರು ವರ್ಷದ ಮಲಮಗಳನ್ನು ಅತ್ಯಾಚಾರ ಮಾಡಿ ಹತ್ಯೆಗೈದ ಪ್ರಕರಣದಲ್ಲಿ ಅಪರಾಧಿಯೆಂದು ಸಾಬೀತಾದ ವ್ಯಕ್ತಿಗೆ ವಿಧಿಸಲಾಗಿದ್ದ ಮರಣದಂಡನೆಯನ್ನು ಸುಪ್ರೀಂ ಕೋರ್ಟ್ ಇಂದು (ಸೆ.24) ಬದಲಾಯಿಸಿದೆ. livelaw.in ನ್ಯಾಯಮೂರ್ತಿ ವಿಕ್ರಮ್ ನಾಥ್, ನ್ಯಾಯಮೂರ್ತಿ ಸಂದೀಪ್...