HomeಅಂಕಣಗಳುSIRಗ್ಯಾನೇಶ್ ಕುಮಾರ್‌ನನ್ನು ಬಂಧಿಸುವಂತೆ ಬಿ.ಕೆ. ಹರಿಪ್ರಸಾದ್ ಆಗ್ರಹ: ನಾಳೆ ಕಾಂಗ್ರೆಸ್‌ನಿಂದ ಪ್ರತಿಭಟನೆ

ಗ್ಯಾನೇಶ್ ಕುಮಾರ್‌ನನ್ನು ಬಂಧಿಸುವಂತೆ ಬಿ.ಕೆ. ಹರಿಪ್ರಸಾದ್ ಆಗ್ರಹ: ನಾಳೆ ಕಾಂಗ್ರೆಸ್‌ನಿಂದ ಪ್ರತಿಭಟನೆ

- Advertisement -
- Advertisement -

ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರು ಕಳೆದ 10 ತಿಂಗಳಲ್ಲಿ ಕನಿಷ್ಠ 14 ಬಾರಿ ಇನ್ನುಳಿದ ಇಬ್ಬರು ಆಯುಕ್ತರ ಭಿನ್ನಮತವನ್ನು ಸಂಪೂರ್ಣವಾಗಿ ತಳ್ಳಿಹಾಕಿ ಗೌಪ್ಯವಾಗಿ ‘ಎಸ್‌ಐಆರ್’ (SIR) ಪ್ರಕ್ರಿಯೆ ನಡೆಸಿರುವುದು ದೇಶದ ನಾಗರಿಕರಿಗೆ ಆಘಾತ ತಂದಿದೆ. ಹೀಗಾಗಿ ಅವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಮತ್ತು ಅವರನ್ನು ಬಂಧಿಸಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ನಾಯಕರು ಆಗ್ರಹಿಸಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, “ಪ್ರಜಾಪ್ರಭುತ್ವದ ಅಸ್ತಿತ್ವವನ್ನು ಉಳಿಸುವ ಮಹತ್ತರ ಜವಾಬ್ದಾರಿ ಚುನಾವಣಾ ಆಯೋಗದ ಮೇಲಿರುತ್ತದೆ. ಆದರೆ, ಇಂದು ಒಂದು ನಿರ್ದಿಷ್ಟ ರಾಜಕೀಯ ಪಕ್ಷ ಹಾಗೂ ಒಬ್ಬ ನಾಯಕನಿಗಾಗಿ ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡಲಾಗಿದೆ. ಗ್ಯಾನೇಶ್ ಕುಮಾರ್ ಕೈಗೊಂಡ ಏಕಪಕ್ಷೀಯ ನಿರ್ಧಾರಗಳಿಂದಾಗಿ ಬಿಹಾರದಲ್ಲಿ 63 ಲಕ್ಷ, ಪಶ್ಚಿಮ ಬಂಗಾಳದಲ್ಲಿ 91 ಲಕ್ಷ ಹಾಗೂ ಕರ್ನಾಟಕ ಒಂದರಲ್ಲೇ ಬರೋಬ್ಬರಿ 1.07 ಕೋಟಿ ಮತಗಳನ್ನು ಮತದಾರರ ಪಟ್ಟಿಯಿಂದ ಕಿತ್ತುಹಾಕಲಾಗಿದೆ,” ಎಂದು ಕಳವಳ ಮತ್ತು ಆಕ್ರೋಶ ವ್ಯಕ್ತಪಡಿಸಿದರು.

ರಾಹುಲ್ ಗಾಂಧಿ ಎಚ್ಚರಿಸಿದ್ದ ಸತ್ಯ ಈಗ ಜಗಜ್ಜಾಹೀರು:

“ರಾಹುಲ್ ಗಾಂಧಿ ಅವರು 2025 ರ ಫೆಬ್ರವರಿಯಲ್ಲೇ ಚುನಾವಣಾ ಆಯೋಗಕ್ಕೆ ಬರೆದ ಪತ್ರದಲ್ಲಿ ಈ ಅಪಾಯದ ಬಗ್ಗೆ ಸ್ಪಷ್ಟವಾಗಿ ತಿಳಿಸಿದ್ದರು. ಆದಾಗ್ಯೂ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಯಾವುದೇ ಗೌರವವಿಲ್ಲದೆ ಆಯೋಗವು ನಿಯಮಬಾಹಿರವಾಗಿ ನಡೆದುಕೊಂಡಿದೆ. ಕಳೆದ ಎರಡು ದಿನಗಳಿಂದ ಮಾಧ್ಯಮಗಳಲ್ಲಿ ಬಂದಿರುವ ತನಿಖಾ ವರದಿಗಳು ಚುನಾವಣಾ ಆಯೋಗದ ಸಂವಿಧಾನ ವಿರೋಧಿ ನಡೆಯನ್ನು ಸ್ಪಷ್ಟವಾಗಿ ನಿರೂಪಿಸಿವೆ,” ಎಂದರು.

ಮುಂದುವರಿದು ಮಾತನಾಡಿದ ಅವರು, “ಇದು ಅಕ್ಷರಶಃ ದೇಶದ್ರೋಹದ ಕೆಲಸ. ಈ ಅಕ್ರಮಕ್ಕೆ ಕುಮ್ಮಕ್ಕು ನೀಡಿರುವ ಪ್ರಧಾನಮಂತ್ರಿಗಳು, ಗೃಹಸಚಿವರ ನಡೆ ಹಾಗೂ ಚುನಾವಣಾ ಆಯೋಗದ ಕಾರ್ಯವನ್ನು ದೇಶದ್ರೋಹವೆಂದೇ ಪರಿಗಣಿಸಬೇಕಾಗುತ್ತದೆ. 2023 ರಲ್ಲಿ ಸಂಸತ್ತಿನಲ್ಲಿ ತಂದ ಶಾಸನಬದ್ಧ ಬದಲಾವಣೆಯಿಂದಾಗಿ ಚುನಾವಣಾ ಆಯುಕ್ತರ ಮೇಲೆ ತಕ್ಷಣಕ್ಕೆ ಕೇಸ್ ದಾಖಲಿಸಿ ಕ್ರಮ ಕೈಗೊಳ್ಳಲು ಆಡಳಿತಾತ್ಮಕ ತೊಡಕುಗಳಿವೆ. ಹೀಗಾಗಿ ಗ್ಯಾನೇಶ್ ಕುಮಾರ್ ಅವರಿಂದ ತಕ್ಷಣ ರಾಜೀನಾಮೆ ಪಡೆದು ಅವರನ್ನು ಬಂಧಿಸಬೇಕು,” ಎಂದು ಒತ್ತಾಯಿಸಿದರು.

ನಾಳೆ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ

ಸಂವಿಧಾನ ವಿರೋಧಿ ಈ ನಡೆಯನ್ನು ಖಂಡಿಸಿ ನಾಳೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಕಾಂಗ್ರೆಸ್ ಪಕ್ಷದಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಟ್ಟಿರುವ ಎಲ್ಲಾ ಜಾತ್ಯತೀತ ಹಾಗೂ ವಿಪಕ್ಷಗಳಿಗೂ ಈ ಹೋರಾಟಕ್ಕೆ ಆಹ್ವಾನ ನೀಡಲಾಗಿದೆ. “ಒಂದು ವೇಳೆ ನಾವು ಈಗ ಧ್ವನಿ ಎತ್ತದಿದ್ದರೆ, ಮುಂದಿನ ದಿನಗಳಲ್ಲಿ ಚುನಾವಣೆ ಎಂಬುದು ಕೇವಲ ಹೆಸರಿಗಷ್ಟೇ ಸೀಮಿತವಾಗಲಿದೆ,” ಎಂದು ಬಿ.ಕೆ. ಹರಿಪ್ರಸಾದ್ ಎಚ್ಚರಿಸಿದರು. ಮೊದಲ ಹಂತದಲ್ಲಿ ನಾಳೆ ಬೆಂಗಳೂರಿನಲ್ಲಿ ಹಾಗೂ ಎರಡನೇ ಹಂತದಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜಂಟಿ ಪ್ರತಿಭಟನೆ ನಡೆಯಲಿದೆ.

ಫಾರಂ 6 ಬದಲಾವಣೆ & ದಲಿತ, ಅಲ್ಪಸಂಖ್ಯಾತರ ಮತಗಳ ಗಾಯಬ್:

“ಆಯೋಗದ ಸದಸ್ಯರಾದ ಸುಖ್‌ಬೀರ್ ಸಿಂಗ್ ಸಂಧು ಹಾಗೂ ವಿವೇಕ್ ಜೋಶಿ ಅವರು 10 ತಿಂಗಳಲ್ಲಿ 14 ಬಾರಿ ಬರೆದ ಆಕ್ಷೇಪಣಾ ಟಿಪ್ಪಣಿಗಳನ್ನೂ ಲೆಕ್ಕಿಸದೆ, ಅವರ ಅನುಮತಿಯೇ ಇಲ್ಲದೆ ‘ಫಾರಂ 6’ (Form 6) ಅನ್ನು ಮಾರ್ಪಾಡು ಮಾಡಲಾಗಿದೆ. ಈ ಹಿಂದೆ ರಾಹುಲ್ ಗಾಂಧಿ ಅವರು ಮತಗಳ್ಳತನದ ವಿರುದ್ಧ ಧ್ವನಿ ಎತ್ತಿದಾಗ ಗ್ಯಾನೇಶ್ ಕುಮಾರ್ ಕ್ಷಮೆಗೆ ಆಗ್ರಹಿಸಿದ್ದರು. ಆದರೆ ಇಂದು ಇಡೀ ದೇಶದ ಮುಂದೆ ಅಸಂವಿಧಾನಿಕವಾಗಿ ನಡೆದುಕೊಂಡಿರುವ ಗ್ಯಾನೇಶ್ ಕುಮಾರ್ ಯಾವ ಕ್ಷಮೆಗೂ ಅರ್ಹರಲ್ಲ,” ಎಂದು ಚಾಟಿ ಬೀಸಿದರು.

ತಮ್ಮ ಬಳಿ ಇರುವ ದಾಖಲೆಗಳನ್ನು ಪ್ರದರ್ಶಿಸಿದ ಹರಿಪ್ರಸಾದ್, “ನನ್ನ ಬಳಿ ಯಾವುದೇ ಸಹಿ ಇಲ್ಲದೆ ಡಿಲೀಟ್ ಆಗಿರುವ 65 ಸಾವಿರ ಮತಗಳ ಅರ್ಜಿಗಳಿವೆ. ಬೆಳಗಾವಿ ಬಿಜೆಪಿ ಶಾಸಕ ಅಭಯ್ ಪಾಟೀಲ್ 2500 ಮತದಾರರ ಹೆಸರು ತೆಗೆದುಹಾಕಲು ಪತ್ರ ಬರೆದಿದ್ದನ್ನು ನಾನು ಬಹಿರಂಗಪಡಿಸಿದ್ದೆ. ಬಬಲೇಶ್ವರ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ರಾಜ್ಯದಾದ್ಯಂತ ಮುಖ್ಯವಾಗಿ ಅಲ್ಪಸಂಖ್ಯಾತರು ಹಾಗೂ ದಲಿತರ ಮತಗಳನ್ನು ಯೋಜಿತವಾಗಿ ಪಟ್ಟಿಯಿಂದ ತೆಗೆದುಹಾಕಲಾಗಿದೆ. ತಪ್ಪು ಇರುವುದು ಮತಪಟ್ಟಿಯಲ್ಲಲ್ಲ, ಬದಲಿಗೆ ಆಯೋಗದ ‘ಎಸ್‌ಐಆರ್’ (SIR) ಪ್ರಕ್ರಿಯೆಯಲ್ಲಿ. ನಾವು ಆಯೋಗವನ್ನು ಪ್ರಶ್ನಿಸಿದರೆ, ಆಯೋಗದ ಪರವಾಗಿ ಬಿಜೆಪಿಯವರು ಉತ್ತರ ನೀಡುತ್ತಿರುವುದು ಇವರಿಬ್ಬರ ಅಂತರಂಗದ ಬಾಂಧವ್ಯವನ್ನು ಎತ್ತಿಹಿಡಿಯುತ್ತದೆ,” ಎಂದು ಟೀಕಿಸಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮುರ್ಷಿದಾಬಾದ್‌: ಎಸ್ಐಆರ್ ಪ್ರಕ್ರಿಯೆಯಲ್ಲಿ ಹೆಸರುಗಳು ಉಳಿದರೂ ‘ಬಾಂಗ್ಲಾದೇಶಿ’ ಎಂದು ಅನುಮಾನಿಸಿ 60 ವರ್ಷದ ತಂದೆ, ಮೂವರು ಪುತ್ರರ ಗಡಿಪಾರು ಆರೋಪ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಬಂಗಾಳಿ ಮುಸ್ಲಿಂ ಕುಟುಂಬವೊಂದರ ನಾಲ್ವರು ಸದಸ್ಯರನ್ನು ಪೊಲೀಸರು ಮನೆಯಿಂದ ಕರೆದೊಯ್ದು, ಅವರು ಬಾಂಗ್ಲಾದೇಶಿ ಪ್ರಜೆಗಳು ಎಂದು ಆರೋಪಿಸಿ ಬಿಎಸ್‌ಎಫ್‌ಗೆ ಹಸ್ತಾಂತರಿಸಿ ಬಾಂಗ್ಲಾದೇಶಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು...

‘ಪೆನ್ಶನ್ ಹೋಗಲ್ಲ, SIR ಹೋಗುತ್ತೆ, ಹೆದರಬೇಡಿ’: ತುಮಕೂರಿನಲ್ಲಿ ಸಂತ್ರಸ್ತ ಮಹಿಳೆಗೆ ಪ್ರಕಾಶ್ ರಾಜ್ ಭರವಸೆ

ತುಮಕೂರು: ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಗೆ ಸಂಬಂಧಿಸಿದ ನೋಟಿಸ್‌ಗಳಿಂದ ಆತಂಕಕ್ಕೊಳಗಾಗಿರುವ ತುಮಕೂರಿನ ಎನ್‌ಆರ್ ಕಾಲೊನಿಯ ನಿವಾಸಿಗಳ ಮನೆಗಳಿಗೆ ನಟ ಹಾಗೂ ಹೋರಾಟಗಾರ ಪ್ರಕಾಶ್ ರಾಜ್ ಭೇಟಿ ನೀಡಿ, ಅವರ ಸಮಸ್ಯೆಗಳನ್ನು...

SIR ಅಕ್ರಮ: ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ವಿರುದ್ಧ ಕ್ರಮಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ PIL

ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ಸಾಂವಿಧಾನಿಕ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂದು ಆರೋಪಿಸಿ, ಮುಖ್ಯ ಚುನಾವಣಾ ಆಯುಕ್ತ (CEC) ಗ್ಯಾನೇಶ್ ಕುಮಾರ್ ಅವರ ವಿರುದ್ಧ ಶಿಸ್ತು ಹಾಗೂ...

ಜೆನ್ ಝಿ ಮತದಾರರ ನೋಂದಣಿ ಸ್ಥಗಿತದ ಹಿಂದೆ ಮೋದಿ-ಸಿಇಸಿ ಸಂಚು: ಕಾಂಗ್ರೆಸ್ ಆರೋಪ

18 ವರ್ಷ ತುಂಬಿದ ಯುವಜನರನ್ನು (Gen Z) ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವ 'ವಿಶೇಷ ಸಂಕ್ಷಿಪ್ತ ಪರಿಷ್ಕರಣೆ' (SSR) ಪ್ರಕ್ರಿಯೆಯು 2024 ರಿಂದ ತಡೆಹಿಡಿಯಲ್ಪಟ್ಟಿರುವುದು ಹಾಗೂ ಈ ವಿಷಯವಾಗಿ ಕೇಂದ್ರ ಚುನಾವಣಾ ಆಯೋಗದಲ್ಲಿ (ECI)...

ತುಮಕೂರಿನ ಎನ್.ಆರ್. ಕಾಲೋನಿ ಕೋತಿ ತೋಪಿನಲ್ಲಿ ಎಸ್ಐಆರ್ ಪರಿಶೋಧನೆ: ಸಂತ್ರಸ್ತರ ಅಹವಾಲು ಆಲಿಸಿದ ಪ್ರಕಾಶ್ ರಾಜ್: ಸೆ.26ಕ್ಕೆ ಬೆಂಗಳೂರಿನಲ್ಲಿ ಪ್ರತಿಭಟನೆ

ತುಮಕೂರು: ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಿಂದ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಎದುರಾಗಿರುವ ಸಮಸ್ಯೆಗಳನ್ನು ನೇರವಾಗಿ ಪರಿಶೀಲಿಸುವ ಉದ್ದೇಶದಿಂದ ನಟ ಹಾಗೂ ಹೋರಾಟಗಾರ ಪ್ರಕಾಶ್ ರಾಜ್ ಅವರು ತುಮಕೂರು ನಗರದ ಎನ್‌ಆರ್‌ ಕಾಲೊನಿ...

SIR ವಿವಾದ ಮತ್ತು ಆಂತರಿಕ ಬಿಕ್ಕಟ್ಟು: ಮೀರತ್, ವಾರಾಣಸಿ ಪ್ರವಾಸ ದಿಢೀರ್ ರದ್ದುಗೊಳಿಸಿದ ಗ್ಯಾನೇಶ್‌ ಕುಮಾರ್! Gen-Z ಆಕ್ರೋಶಕ್ಕೆ ಬೆದರಿತೇ ಆಯೋಗ?

ದೇಶಾದ್ಯಂತ ವ್ಯಾಪಕ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿರುವ 'ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ' (SIR) ವಿವಾದ, ಸ್ಥಗಿತಗೊಂಡಿರುವ ವಾರ್ಷಿಕ ಮತದಾರರ ಪಟ್ಟಿ ಪರಿಷ್ಕರಣೆ (SSR) ಹಾಗೂ ಚುನಾವಣಾ ಆಯೋಗದ ಉನ್ನತ ಹಂತದ ಶೀತಲ...

ವಿಜಯವಾಡ ಕಸ್ಟಡಿಯಲ್ಲಿ ಸಾಯಿ ಕೃಷ್ಣ ಸಾವು: ಶವ ದಹನ, ಸಾಕ್ಷ್ಯ ನಾಶ ಖಚಿತ ಪಡಿಸಿದ ಎಸ್ಐಟಿ; ಸುಪ್ರೀಂ ಕೋರ್ಟ್ ನೇರ ಮೇಲ್ವಿಚಾರಣೆ 

ವಿಜಯವಾಡ: ಆಂಧ್ರಪ್ರದೇಶದ ವಿಜಯವಾಡದಲ್ಲಿ 25 ವರ್ಷದ ಗದೆ ಸಾಯಿ ಕೃಷ್ಣ ಅವರ ನಾಪತ್ತೆ ಹಾಗೂ ಶಂಕಿತ ಕಸ್ಟಡಿ ಸಾವಿನ ಪ್ರಕರಣ ಇದೀಗ ಸುಪ್ರೀಂ ಕೋರ್ಟ್‌ನ ನೇರ ಮೇಲ್ವಿಚಾರಣೆಗೆ ಒಳಪಟ್ಟಿದೆ. ಕೃಷ್ಣಲಂಕಾ ಪೊಲೀಸರು ವಶಕ್ಕೆ...

ಜ್ಞಾನೇಶ್ ಕುಮಾರ್‌ನನ್ನು ವಜಾಗೊಳಿಸಿ-SIR ರದ್ದುಗೊಳಿಸುವಂತೆ ಒತ್ತಾಯಿಸಿ ಸೆ.26 ಪ್ರತಿಭಟನೆಗೆ ಎಡ ಪಕ್ಷಗಳು ಹಾಗೂ SIR ವಿರೋಧಿ ಒಕ್ಕೂಟ ಕರೆ

ಕೇಂದ್ರ ಚುನಾವಣಾ ಆಯೋಗವು ಎಸಗಿರುವ ಅಕ್ರಮಗಳ ಪಾಪದ ಕೊಡ ತುಂಬಿದ್ದು, ಆಯೋಗದ ಆಂತರಿಕ ಭಿನ್ನಾಭಿಪ್ರಾಯಗಳು ಜಗಜ್ಜಾಹೀರಾಗಿವೆ ಎಂದು ‘SIR ವಿರೋಧಿ ಜನಪರ ಸಂಘಟನೆಗಳ ಹಾಗೂ ಜಾತ್ಯತೀತ ಪಕ್ಷಗಳ ಒಕ್ಕೂಟ’ ಆಕ್ರೋಶ ವ್ಯಕ್ತಪಡಿಸಿದೆ. ಮುಖ್ಯ...

SIR ಜಾರಿಯಿಂದ ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಮೇಲೆ ಸಂಶಯ ಮೂಡಿದೆ: ಅಶೋಕ್ ಲವಾಸ ಕಳವಳ

ಚುನಾವಣಾ ಪ್ರಕ್ರಿಯೆಯ ಶುದ್ಧೀಕರಣದ ನೆಪದಲ್ಲಿ ನೈಜ ಮತದಾರರನ್ನು ಪಟ್ಟಿಯಿಂದ ಕೈಬಿಡುವ ಅಥವಾ ಬೇಟೆಯಾಡುವ ಪ್ರವೃತ್ತಿಯನ್ನು ತಕ್ಷಣವೇ ಕೈಬಿಡಬೇಕು, SIR ಪ್ರಕ್ರಿಯೆಯಿಂದ ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಮತ್ತು ವರ್ಚಸ್ಸಿಗೆ ಭಾರೀ ಧಕ್ಕೆಯಾಗುತ್ತಿದೆ ಎಂದಿರುವ ಮಾಜಿ...

“ಟರ್ನ್ ಅಪ್ರೂವರ್ ಆಗಿ”: ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯ; ಮತ ಕಳ್ಳತನ ಆರೋಪದಲ್ಲಿ ಮೋದಿ, ಶಾ ತನಿಖೆ ನಡೆಯಬೇಕಿದೆ: ರಾಹುಲ್ ಗಾಂಧಿ

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಚುನಾವಣಾ ವ್ಯವಸ್ಥೆಯಲ್ಲಿ ನಡೆದಿರುವುದಾಗಿ ಆರೋಪಿಸಲಾಗುತ್ತಿರುವ ಅಕ್ರಮಗಳ ಕುರಿತು “ಅನುಮೋದಕರಾಗಿ” (ಅಪ್ರೂವರ್) ಬದಲಾಗಬೇಕು ಎಂದು ಲೋಕಸಭೆಯ ವಿರೋಧ ಪಕ್ಷದ...