ಮುಂಬರುವ ಜನಗಣತಿಯ ಜೊತೆ ಜಾತಿ ಗಣತಿ ಮಾಡಲಾಗುವುದು ಎಂಬ ಕೇಂದ್ರ ಸರ್ಕಾರ ನಿರ್ಧಾರದ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ “ಕೇಂದ್ರ ಸರ್ಕಾರ ಜಾತಿ ಗಣತಿ ಮಾಡುವ ಕುರಿತು ಹೆಡ್‌ಲೈನ್ ಕೊಟ್ಟಿದೆ, ಡೆಡ್‌ಲೈನ್ ಯಾವಾಗ?”ಎಂದು ಪ್ರಶ್ನಿಸಿದೆ.
“ಪ್ರಧಾನಿ ನರೇಂದ್ರ ಮೋದಿಯವರು ಡೆಡ್‌ಲೈನ್ ಇಲ್ಲದೆ ಹೆಡ್‌ಲೈನ್ ಕೊಡುವುದರಲ್ಲಿ ಮಾಸ್ಟರ್” ಎಂದಿದೆ.
ಸರ್ಕಾರದ ಜಾತಿ ಗಣತಿ ನಿರ್ಧಾರದ ಕುರಿತು ಹಲವು ಪ್ರಶ್ನೆಗಳಿವೆ ಎಂದಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಸಂವಹನ ವಿಭಾಗದ ಉಸ್ತುವಾರಿ ಜೈರಾಮ್ ರಮೇಶ್, ಆದಷ್ಟು ಬೇಗ ಜಾತಿ ಗಣತಿ ನಡೆಸುವಂತೆ ಒತ್ತಾಯಿಸಿದ್ದಾರೆ.
ದೆಹಲಿಯ 24, ಅಕ್ಬರ್ ರಸ್ತೆಯಲ್ಲಿರುವ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜೈರಾಮ್ ರಮೇಶ್, ಪ್ರಧಾನಿ ನರೇಂದ್ರ ಮೋದಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಮೀಸಲಾತಿ ಮೇಲಿನ ಶೇ.50 ಮಿತಿಯನ್ನು ತೆಗೆದು ಹಾಕಬೇಕು ಎಂದಿರುವ ಅವರು, ಮೀಸಲಾತಿ ಮಿತಿ ಹೆಚ್ಚಿಸಲು ಮೋದಿಯವರಿಗೆ ತಡೆಯಾಗಿರುವುದಾದರೂ ಏನು? ಎಂದು ಪ್ರಶ್ನಿಸಿದ್ದಾರೆ.
राहुल गांधी जी ने कल कहा कि हेडलाइन तो दी गई, लेकिन इसमें डेडलाइन नहीं है।
हम सब जानते हैं कि ऐसे काम में नरेंद्र मोदी कितने माहिर हैं। इसी को देखते हुए राहुल गांधी जी ने कहा है कि सरकार जातिगत जनगणना को लेकर पूरा रोडमैप सामने रखे।
हम छह साल से जनगणना का इंतज़ार कर रहे हैं और… pic.twitter.com/uIs8gkvGXH
— Congress (@INCIndia) May 1, 2025
“ಸಾಂವಿಧಾನಿಕ ತಿದ್ದುಪಡಿ ತರಬೇಕು ಮತ್ತು ಮೀಸಲಾತಿ ಮೇಲಿನ ಶೇ. 50ರ ಮಿತಿಯನ್ನು ತೆಗೆದುಹಾಕಬೇಕು ಎಂದು ಕಾಂಗ್ರೆಸ್ ಒತ್ತಾಯಿಸುತ್ತದೆ. ಇದು ನಡೆದಾಗ ಮಾತ್ರ ಜಾತಿ ಜನಗಣತಿ ಅರ್ಥಪೂರ್ಣವಾಗುತ್ತದೆ” ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
2019 ರ ಡಿಸೆಂಬರ್ ತಿಂಗಳ ಕೇಂದ್ರ ಸಚಿವ ಸಂಪುಟ ಸಭೆಯ ಪತ್ರಿಕಾ ಪ್ರಕಟಣೆಯನ್ನು ಜೈರಾಮ್ ರಮೇಶ್ ಉಲ್ಲೇಖಿಸಿದ್ದು, 8,254 ಕೋಟಿ ರೂಪಾಯಿ ವೆಚ್ಚದಲ್ಲಿ 2021ರಲ್ಲಿ ಜನಗಣತಿ ನಡೆಸುವ ಪ್ರಸ್ತಾವನೆಯನ್ನು ಕೇಂದ್ರ ಸಂಪುಟ ಅನುಮೋದಿಸಿದೆ ಎಂದು ಹೇಳಿದ್ದಾರೆ. ಈ ಪತ್ರಿಕಾ ಪ್ರಕಟಣೆಯಲ್ಲಿ ಜಾತಿ ಗಣತಿಯ ಉಲ್ಲೇಖವಿಲ್ಲ ಎಂದಿದ್ದಾರೆ.
“ಈ ಜನಗಣತಿ (ಪತ್ರಿಕಾ ಪ್ರಕಟಣೆ ಹೊರಡಿಸಿರುವ) ನಡೆದಿಲ್ಲ ಮತ್ತು ಘೋಷಣೆಯಾಗಿ ಆರು ವರ್ಷಗಳು ಕಳೆದಿವೆ ಎಂದು ಎಲ್ಲರಿಗೂ ತಿಳಿದಿದೆ. ಆಶ್ಚರ್ಯವೆಂದರೆ, ಸರ್ಕಾರ ನಿನ್ನೆ ಹೊಸದಾಗಿ ಜನಗಣತಿ ಬಗ್ಗೆ ಘೋಷಣೆ ಮಾಡಿದೆ” ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
ದೇಶದಾದ್ಯಂತ ಜಾತಿ ಜನಗಣತಿಗೆ ಮಾರ್ಗಸೂಚಿಯನ್ನು ಇಟ್ಟುಕೊಳ್ಳಬೇಕೆಂದು ಜೈರಾಮ್ ರಮೇಶ್ ಸರ್ಕಾರವನ್ನು ಒತ್ತಾಯಿಸಿದ್ದು, 2025-26ನೇ ಸಾಲಿನ ಬಜೆಟ್‌ನಲ್ಲಿ ಜನಗಣತಿ ಆಯುಕ್ತರ ಕಚೇರಿಗೆ ಕೇವಲ 575 ಕೋಟಿ ರೂ.ಗಳನ್ನು ಮಾತ್ರ ಹಂಚಿಕೆ ಮಾಡಲಾಗಿದೆ ಎಂದು ಅವರು ಗಮನಸೆಳೆದಿದ್ದಾರೆ.
“ಹಾಗಾದರೆ, ಅವರು 575 ಕೋಟಿ ರೂ.ಗಳಲ್ಲಿ ಯಾವ ರೀತಿಯ ಜನಗಣತಿಯನ್ನು ಮಾಡಲು ಯೋಜಿಸುತ್ತಿದ್ದಾರೆ? ಅದರ ಉದ್ದೇಶವೇನು – ಇದು ಕೇವಲ ಹೆಡ್‌ಲೈನ್ ಕೊಡುವುದಷ್ಟೆಯಾ? ಇಲ್ಲಾ ಏನಾದರು ಉದ್ದೇಶ ಇದೆಯಾ? ಆ ಉದ್ದೇಶದ ಬಗ್ಗೆ ಹಲವು ಪ್ರಶ್ನೆಗಳು ಇವೆ” ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
“2021ರಲ್ಲಿ ಜನಗಣತಿ ಮಾಡಬೇಕಿತ್ತು. ಆದರೆ, ಅವರು ಕೋವಿಡ್ ನೆಪ ಹೇಳುತ್ತಿದ್ದಾರೆ. 50ಕ್ಕೂ ಹೆಚ್ಚು ದೇಶಗಳು ಕೋವಿಡ್ ಸಮಯದಲ್ಲಿ ತಮ್ಮ ಜನಗಣತಿಯನ್ನು ಮಾಡಿವೆ. 2023, 2024 ರಲ್ಲಿ ಕೋವಿಡ್ ಇರಲಿಲ್ಲ. ಆದರೂ, ಗಣತಿ ಮಾಡಿಲ್ಲ ಎಂದಿದ್ದಾರೆ.
ಕಳೆದ ವರ್ಷ ಪ್ರಧಾನಿಯವರು ಟಿವಿ ಚಾನೆಲ್‌ಗಳಿಗೆ ಸರಣಿ ಸಂದರ್ಶನಗಳನ್ನು ನೀಡುತ್ತಿದ್ದಾಗ, ಜಾತಿ ಜನಗಣತಿಯ ಬಗ್ಗೆ ಮಾತನಾಡುವವರನ್ನು “ನಗರ ನಕ್ಸಲರು” ಎಂದು ಕರೆದಿದ್ದರು.ಅವರು ಯಾವಾಗಿನಿಂದ ನಗರ ನಕ್ಸಲ್ ಆದರು? ಗೃಹ ಸಚಿವ ಅಮಿತ್ ಶಾ ಯಾವಾಗಿನಿಂದ ನಗರ ನಕ್ಸಲ್ ಆದರು? ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ.
ಬಿಜೆಪಿ ಯೂಟರ್ನ್ | ಮಾವೋವಾದಿ ಚಿಂತನೆಗೆ ಮನಸೋತು ನಗರ ನಕ್ಸಲ್ ಆದರೆ ಪ್ರಧಾನಿ ಮೋದಿ?


