ಕೇಂದ್ರ ಸರ್ಕಾರ ತನ್ನ ಭದ್ರತಾ ಅನುಮತಿಯನ್ನು ರದ್ದುಗೊಳಿಸಿದ ಕಾರಣಕ್ಕೆ ಭಾರತದಾದ್ಯಂತ ತನ್ನ 10,000 ಕ್ಕೂ ಹೆಚ್ಚು ಉದ್ಯೋಗಿಗಳ ಮೇಲೆ ಪರಿಣಾಮ ಬೀರಿದೆ ಎಂದು ತುರ್ಕಿ ಮೂಲದ ವಿಮಾನ ನಿಲ್ದಾಣದ ಭೂ ನಿರ್ವಹಣೆ ಸಂಸ್ಥೆ ಸೆಲೆಬಿ ಬುಧವಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ ಬಾರ್ ಮತ್ತು ಬೆಂಚ್ ವರದಿ ಮಾಡಿದೆ. ಭದ್ರತಾ ಅನುಮತಿ ರದ್ದತಿಯಿಂದ
ಕಂಪನಿಯನ್ನು ಪ್ರತಿನಿಧಿಸುವ ವಕೀಲ ಮುಕುಲ್ ರೋಹಟ್ಗಿ ಹಾಜರಾಗಿ, ಸಂಸ್ಥೆಯು ಟರ್ಕಿ ಸರ್ಕಾರದೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ ಮತ್ತು ಭಾರತದೊಂದಿಗೆ ಯಾವುದೇ ಸಂಘರ್ಷಗಳು ಅಥವಾ ಸಮಸ್ಯೆಗಳನ್ನು ಹೊಂದಿಲ್ಲ ಎಂದು ನ್ಯಾಯಮೂರ್ತಿ ಸಚಿನ್ ದತ್ತಾ ಅವರಿಗೆ ತಿಳಿಸಿದ್ದಾರೆ.
“ನಮ್ಮೊಂದಿಗೆ ಕೆಲಸ ಮಾಡುವ ಜನರು ಭಾರತೀಯರು. ಸಂಸ್ಥೆಯಲ್ಲಿ ಹಲವಾರು ವಿಮಾನ ನಿಲ್ದಾಣಗಳಲ್ಲಿ 10,000 ಕ್ಕೂ ಹೆಚ್ಚು ಉದ್ಯೋಗಿಗಳಿದ್ದಾರೆ. ಯಾವುದೆ ಕಳಂಕವಿಲ್ಲದೆ, ಸಂಸ್ಥೆ ತೃಪ್ತಿಕರವಾಗಿ ಕೆಲಸ ಮಾಡಿದೆ.” ಎಂದು ರೋಹಟ್ಗಿ ಹೇಳಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಇತ್ತೀಚಿನ ಉದ್ವಿಗ್ನತೆಯ ನಡುವೆ ಕೇಂದ್ರ ಸರ್ಕಾರವು ಸೆಲೆಬಿ ಏರ್‌ಪೋರ್ಟ್ ಸರ್ವೀಸಸ್ ಇಂಡಿಯಾ ಕಂಪನಿಯ ಭದ್ರತಾ ಅನುಮತಿಯನ್ನು ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸೆಲೆಬಿ ಕಂಪನಿಯು ಮೇ 16 ರಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.
ಟರ್ಕಿಯ ಕಂಪನಿಗಳು ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡಿರುವ ಬಗ್ಗೆ ಭಾರತದಲ್ಲಿ ಸಾರ್ವಜನಿಕ ಆಕ್ರೋಶ ಹುಟ್ಟುಹಾಕಿತ್ತು. ಈ ನಡುವೆ ಭಾರತವು ಮೇ 15 ರಂದು “ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ” ಸೆಲೆಬಿ ಅವರ ಭದ್ರತಾ ಅನುಮತಿಯನ್ನು ಸ್ಥಗಿತಗೊಳಿಸಿತ್ತು.
ಬುಧವಾರ ನಡೆದ ವಿಚಾರಣೆಯ ಸಂದರ್ಭದಲ್ಲಿ, ರೋಹಟ್ಗಿ ಅವರು ಭಾರತ ಸರ್ಕಾರದ ಕ್ರಮ ಕಾನೂನಿಗೆ ವಿರುದ್ಧವಾಗಿದೆ ಎಂದು ವಾದಿಸಿದ್ದಾರೆ. “ಇದು ನೈಸರ್ಗಿಕ ನ್ಯಾಯದ ತತ್ವಗಳ ಉಲ್ಲಂಘನೆ ಎಂದು ನಾನು ಹೇಳುತ್ತಿದ್ದೇನೆ” ಎಂದು ಅವರು ಹೇಳಿದ್ದಾರೆ.
ಸಂಸ್ಥೆಯ ಅನುಮತಿಯನ್ನು ರದ್ದು ಮಾಡಿರುವುದಕ್ಕೆ ಕಾರಣಗಳನ್ನು ಮೊಹರು ಮಾಡಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಮಾತ್ರ ಸಿಗುವಂತಹ ರೀತಿಯಲ್ಲಿ ಸಲ್ಲಿಸುವ ಕೇಂದ್ರದ ನಿರ್ಧಾರಕ್ಕೂ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕೇಂದ್ರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಕೆಲವು ವಿವರಗಳನ್ನು ನ್ಯಾಯಾಲಯದೊಂದಿಗೆ ಮಾತ್ರ ಹಂಚಿಕೊಳ್ಳಬಹುದು ಮತ್ತು ಕಂಪನಿಯೊಂದಿಗೆ ಅಲ್ಲ ಎಂದು ಹೇಳಿದ್ದಾರೆ ಎಂದು ಬಾರ್ ಮತ್ತು ಬೆಂಚ್ ವರದಿ ಮಾಡಿದೆ.
ಸೋಮವಾರ ನಡೆದ ಹಿಂದಿನ ವಿಚಾರಣೆಯಲ್ಲಿ, ಕೇಂದ್ರವು ಅರ್ಜಿಯನ್ನು ವಿರೋಧಿಸಿ, ಕಂಪನಿಯ ಸೇವೆಗಳನ್ನು ಬಳಸುವುದರಿಂದ ದೇಶಕ್ಕೆ ಅಪಾಯ ಉಂಟಾಗಬಹುದು ಎಂದು ವಾದಿಸಿತ್ತು.
ಮೇ 16 ರ ಕೇಂದ್ರ ಸರ್ಕಾರದ ಆದೇಶದ ಮೊದಲು, ಸೆಲೆಬಿ ಏವಿಯೇಷನ್ ದೆಹಲಿ, ಮುಂಬೈ, ಕೊಚ್ಚಿ, ಕಣ್ಣೂರು, ಬೆಂಗಳೂರು, ಹೈದರಾಬಾದ್, ಮೋಪಾ (ಗೋವಾ), ಅಹಮದಾಬಾದ್ ಮತ್ತು ಚೆನ್ನೈ ಸೇರಿದಂತೆ ಹಲವಾರು ಭಾರತೀಯ ವಿಮಾನ ನಿಲ್ದಾಣಗಳಲ್ಲಿ ಕಾರ್ಯನಿರ್ವಹಿಸುತ್ತಿತ್ತು ಎಂದು ಅದರ ವೆಬ್‌ಸೈಟ್ ತಿಳಿಸಿದೆ. ಭದ್ರತಾ ಅನುಮತಿ ರದ್ದತಿಯಿಂದ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ತುಮಕೂರು | ಸಂಪ್ ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ ಇಬ್ಬರು ಕಾರ್ಮಿಕರು ಸಾವು
ತುಮಕೂರು | ಸಂಪ್ ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ ಇಬ್ಬರು ಕಾರ್ಮಿಕರು ಸಾವು

