ಜನವರಿ 29 ರಂದು ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾ ಕುಂಭಮೇಳ ಯಾತ್ರಾ ಸ್ಥಳದಲ್ಲಿ ನಡೆದ ಕಾಲ್ತುಳಿತದಲ್ಲಿ ಮೃತಪಟ್ಟವರ ನಿಜವಾದ ಸಂಖ್ಯೆಯನ್ನು ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ಮರೆಮಾಚಿದೆ ಎಂದು ವಿರೋಧ ಪಕ್ಷದ ನಾಯಕರು ಮಂಗಳವಾರ ಆರೋಪಿಸಿದ್ದಾರೆ. ಕಾಲ್ತುಳಿತದಲ್ಲಿ 82 ಜನರು ಸಾವನ್ನಪ್ಪಿದ್ದು, ಆದರೆ ರಾಜ್ಯ ಸರ್ಕಾರ 37 ಜನರು ಸಾವನ್ನಪ್ಪಿದ್ದಾರೆ ಎಂದು ಸುಳ್ಳು ಹೇಳಿದೆ ಎಂದು ಬಿಬಿಸಿ ಹಿಂದಿ ಮಾಡಿದ್ದ ತನಿಖಾ ವರದಿ ಹೇಳಿದೆ. ಕುಂಭಮೇಳ ಕಾಲ್ತುಳಿತ ಸಾವಿನ ಸಂಖ್ಯೆ
ಬಿಬಿಸಿ ಹಿಂದಿ ವರದಿಯು ಕಾಲ್ತುತದಲ್ಲಿ ಸಾವನ್ನಪ್ಪಿದವರನ್ನು ಮೂರು ಗುಂಪುಗಳಾಗಿ ವರ್ಗೀಕರಿಸಿದೆ. ಮೊದಲನೆಯದು ಅಧಿಕೃತ ಸಂಖ್ಯೆಯಲ್ಲಿ ಸೇರಿದ ಮತ್ತು ಮೃತಪಟ್ಟ ಕುಟುಂಬಗಳಿಗೆ 25 ಲಕ್ಷ ರೂ. ಪರಿಹಾರ ದೊರೆತಿದೆ. ಎರಡನೇ ಗುಂಪಿನಲ್ಲಿ ಅಧಿಕೃತ ಸಂಖ್ಯೆಯಲ್ಲಿ ಎಣಿಕೆಯಾಗಿಲ್ಲ, ಆದರೆ ಅವರ ಕುಟುಂಬಗಳಿಗೆ 5 ಲಕ್ಷ ರೂ. ಪರಿಹಾರ ದೊರೆತಿದೆ ಎಂದು ವರದಿ ಹೇಳಿದೆ.
ಮೂರನೇ ಗುಂಪಿನಲ್ಲಿ, ಕಾಲ್ತುಳಿತದಲ್ಲಿ ಸಾವನ್ನಪ್ಪಿದ ವ್ಯಕ್ತಿಗಳು ಅಧಿಕೃತ ಸಂಖ್ಯೆಯಲ್ಲೂ ದಾಖಲಾಗಿಲ್ಲ, ಜೊತೆಗೆ ಅವರ ಕುಟುಂಬಕ್ಕೆ ಸರ್ಕಾರ ಯಾವುದೇ ಪರಿಹಾರವನ್ನೂ ನೀಡಿಲ್ಲ ಎಂದು ಬಿಬಿಸಿ ವರದಿ ತಿಳಿಸಿದೆ. ಕಾಲ್ತುಳಿತದ ನಿಜವಾದ ಸಂಖ್ಯೆ ತೀವ್ರವಾಗಿ ಹೆಚ್ಚಿರಬಹುದು ಎಂದು ಮಾಧ್ಯಮ ವರದಿಗಳು ಈ ಹಿಂದೆಯೂ ತಿಳಿಸಿತ್ತು.
ಬಿಬಿಸಿ ವರದಿಯನ್ನು ಉಲ್ಲೇಖಿಸಿ ಬಿಜೆಪಿ ವಿರುದ್ಧ ಮಂಗಳವಾರ ಆಕ್ರೋಶ ವ್ಯಕ್ತಪಡಿಸಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು, “ಯಾವುದೇ ಮಾಹಿತಿ ನಿರ್ವಹಣೆಯು ಸತ್ಯ ಹೊರಬರುವುದನ್ನು ತಡೆಯಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
तथ्य बनाम सत्य : 37 बनाम 82
सब देखें, सुनें, जानें-समझें और साझा करें। सत्य की केवल पड़ताल नहीं, उसका प्रसार भी उतना ही ज़रूरी होता है।
भाजपा आत्म-मंथन करे और भाजपाई भी और साथ ही उनके समर्थक भी कि जो लोग किसी की मृत्यु के लिए झूठ बोल सकते हैं, वो झूठ के किस पाताल-पर्वत पर चढ़कर… pic.twitter.com/7vMg0o8kEo
— Akhilesh Yadav (@yadavakhilesh) June 10, 2025
“ಸುಳ್ಳು ಅಂಕಿಅಂಶಗಳನ್ನು” ಒದಗಿಸುವವರನ್ನು ಸಾರ್ವಜನಿಕ ನಂಬಿಕೆಗೆ ಅರ್ಹರು ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿಯೂ ಆಗಿರುವ ಅಖಿಲೇಶ್ ಹೇಳಿದ್ದಾರೆ.
“ಸಮಸ್ಯೆ, ಅಂಕಿಅಂಶಗಳನ್ನು ಮರೆಮಾಡುವುದರ ಬಗ್ಗೆ ಮಾತ್ರವಲ್ಲ, ಸದನದಲ್ಲಿ ಸುಳ್ಳು ಹೇಳುವುದು ಕೂಡಾ ಸಮಸ್ಯೆಯಾಗಿದೆ” ಎಂದು ಅಖೀಲೇಶ್ ಅವರು ಆದಿತ್ಯನಾಥ್ ಅವರನ್ನು ಉಲ್ಲೇಖಿಸಿ ಹೇಳಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರು, ”30 ಜನರು ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದಾರೆ” ಎಂದು ಫೆಬ್ರವರಿ 19 ರಂದು ರಾಜ್ಯದ ವಿಧಾನಸಭೆಯಲ್ಲಿ ಹೇಳಿದ್ದರು.
ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ನೀಡುವ ಪ್ರಕ್ರಿಯೆಯ ಬಗ್ಗೆಯೂ ಅಖಿಲೇಶ್ ಪ್ರಶ್ನೆಗಳನ್ನು ಎತ್ತಿದ್ದಾರೆ.
“ಪರಿಹಾರವನ್ನು ನಗದು ರೂಪದಲ್ಲಿ ಏಕೆ ನೀಡಲಾಯಿತು?. ನಗದಿನ ಮೂಲ ಯಾವುದು? ವಿತರಿಸದ ನಗದು ಎಲ್ಲಿಗೆ ಹೋಯಿತು? ಯಾವ ನಿಯಮದ ಅಡಿಯಲ್ಲಿ ನಗದು ವಿತರಣೆಯನ್ನು ಅನುಮೋದಿಸಲಾಗಿದೆ? ನಗದು ಪಾವತಿಗಳಿಗೆ ಯಾರು ಅಧಿಕಾರ ನೀಡಿದರು? ವಿತರಣೆಯನ್ನು ಬೆಂಬಲಿಸುವ ಯಾವುದೇ ಲಿಖಿತ ಆದೇಶವಿದೆಯೇ?” ಎಂದು ಅವರು ಪ್ರಶ್ನಿಸಿದ್ದಾರೆ.
ತೃಣಮೂಲ ಕಾಂಗ್ರೆಸ್ ಕೂಡ ಬಿಬಿಸಿಯ ವರದಿಯನ್ನು ಹಂಚಿಕೊಂಡಿದ್ದು, ಬಿಜೆಪಿ ಸರ್ಕಾರವು “ಮೃತ ದೇಹಗಳ ಮೇಲೆ ರಾಜಕೀಯ ಮಾಡುತ್ತಿದೆ” ಎಂದು ಆರೋಪಿಸಿದೆ. “ಅವರು ತಮ್ಮ ಇಮೇಜ್ ಅನ್ನು ರಕ್ಷಿಸಿಕೊಳ್ಳಲು ಮತ್ತು ತಮ್ಮ ಕ್ರಿಮಿನಲ್ ನಿರ್ಲಕ್ಷ್ಯವನ್ನು ಮುಚ್ಚಿಕೊಳ್ಳಲು ನಿಜವಾದ ಸಾವಿನ ಸಂಖ್ಯೆಯನ್ನು ಮರೆಮಾಚಿದ್ದಾರೆ” ಎಂದು ಪಕ್ಷವು ಎಕ್ಸ್‌ನಲ್ಲಿ ತಿಳಿಸಿದೆ.
Massive exposé!
A @BBCHindi investigation has revealed that the actual death toll from the Kumbh stampede was 82, not the 37 claimed by CM @myogiadityanath.
Here’s what @BJP4India’s cover-up cost:
👉🏻 26 families received only partial compensation
👉🏻 19 families received nothing… pic.twitter.com/Z3kekbUfp1— All India Trinamool Congress (@AITCofficial) June 10, 2025
ಬಿಜೆಪಿ ಜನರ ಸಾವಿನಿಗಿಂತ ತನ್ನ ಇಮೇಜ್ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದೆ ಎಂದು ಕಾಂಗ್ರೆಸ್ ಕೇಳಿದೆ. “ಈ ಬಿಬಿಸಿ ವರದಿಯು ಸರ್ಕಾರದ ಅಸಂವೇದನಾಶೀಲತೆಯನ್ನು ತೋರಿಸುತ್ತದೆ. ಸರ್ಕಾರ ಜನರ ಜೀವಗಳನ್ನು ಪಣಕ್ಕಿಟ್ಟು, ತನ್ನ ಟೊಳ್ಳಾದ ಇಮೇಜ್ ಅನ್ನು ಉಳಿಸಿಕೊಳ್ಳುತ್ತಿದೆ” ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
कुंभ भगदड़ में यूपी की BJP सरकार ने 37 लोगों की मौत की बात कही थी.
जबकि BBC की पड़ताल में 82 लोगों की मौतों की पुष्टि हुई है.
BBC को ऐसे 26 परिवार मिले जिन्हें पांच-पांच लाख रुपए कैश के बंडल देकर कुंभ से हटा दिया गया और मृतकों की गिनती में शामिल नहीं किया गया.
सवाल है 👇
— Congress (@INCIndia) June 10, 2025
ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾತೆ ಕೂಡ ವರದಿಯಾದ ಸಾವಿನ ಸಂಖ್ಯೆಯಲ್ಲಿನ ವ್ಯತ್ಯಾಸಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. “ಕುಂಭ ಮೇಳದಲ್ಲಿ ಕನಿಷ್ಠ 82 ಜನರು ಸಾವನ್ನಪ್ಪಿದ್ದಾರೆ. ಈ ಸಂಖ್ಯೆ ಯುಪಿ ಸರ್ಕಾರ ವರದಿ ಮಾಡಿದ 37 ಸಾವುಗಳಿಗಿಂತ ಹೆಚ್ಚಾಗಿದೆ” ಎಂದು ಹೇಳಿದ್ದಾರೆ.
ಬಿಬಿಸಿಯ ತನಿಖೆಯ ವೇಳೆ 11 ರಾಜ್ಯಗಳ 50 ಜಿಲ್ಲೆಗಳಲ್ಲಿ 100 ಕ್ಕೂ ಹೆಚ್ಚು ಕುಟುಂಬಗಳೊಂದಿಗೆ ಸಂದರ್ಶನಗಳನ್ನು ನಡೆಸಿದ್ದು, ಸಾವುನೋವುಗಳ ಸಂಖ್ಯೆ ಅಧಿಕೃತವಾಗಿ ಒಪ್ಪಿಕೊಂಡಿದ್ದಕ್ಕಿಂತ ಹೆಚ್ಚಿನದಾಗಿದೆ ಎಂದು ಬಹಿರಂಗಪಡಿಸಿದೆ.ಕುಂಭಮೇಳ ಕಾಲ್ತುಳಿತ ಸಾವಿನ ಸಂಖ್ಯೆ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಕುಂಭಮೇಳ ಕಾಲ್ತುಳಿತದಲ್ಲಿ ಮೃತರ ಸಂಖ್ಯೆ 37 ಅಲ್ಲ, 82; ಸುಳ್ಳು ಹೇಳಿದ ಯುಪಿ ಆದಿತ್ಯನಾಥ್ ಸರ್ಕಾರ!
ಕುಂಭಮೇಳ ಕಾಲ್ತುಳಿತದಲ್ಲಿ ಮೃತರ ಸಂಖ್ಯೆ 37 ಅಲ್ಲ, 82; ಸುಳ್ಳು ಹೇಳಿದ ಯುಪಿ ಆದಿತ್ಯನಾಥ್ ಸರ್ಕಾರ!

