Homeಮುಖಪುಟಕುಂಭಮೇಳ ಕಾಲ್ತುಳಿತದಲ್ಲಿ ಮೃತರ ಸಂಖ್ಯೆ 37 ಅಲ್ಲ, 82; ಸುಳ್ಳು ಹೇಳಿದ ಯುಪಿ ಆದಿತ್ಯನಾಥ್ ಸರ್ಕಾರ!

ಕುಂಭಮೇಳ ಕಾಲ್ತುಳಿತದಲ್ಲಿ ಮೃತರ ಸಂಖ್ಯೆ 37 ಅಲ್ಲ, 82; ಸುಳ್ಳು ಹೇಳಿದ ಯುಪಿ ಆದಿತ್ಯನಾಥ್ ಸರ್ಕಾರ!

- Advertisement -
- Advertisement -

ಈ ವರ್ಷದ ಆರಂಭದಲ್ಲಿ ಉತ್ತರ ಪ್ರದೇಶದಲ್ಲಿ ನಡೆದ ಕುಂಭ ಮೇಳದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ರಾಜ್ಯ ಸರ್ಕಾರ ಒದಗಿಸಿದ ಅಧಿಕೃತ ಅಂಕಿ ಅಂಶಕ್ಕಿಂತ ವಾಸ್ತವದಲ್ಲಿ ತೀವ್ರವಾಗಿ ಹೆಚ್ಚಾಗಿದೆ ಎಂದು ಬಿಬಿಸಿ ನ್ಯೂಸ್ ಹಿಂದಿ ನಡೆಸಿದ ತನಿಖಾ ವರದಿಯಿಂದ ತಿಳಿದುಬಂದಿದೆ. ರಾಜ್ಯ ಸರ್ಕಾರ 37 ಸಾವುಗಳನ್ನು ವರದಿ ಮಾಡಿದ್ದರೂ, ಬಿಬಿಸಿಯ ತನಿಖೆಯ ವೇಳೆ ಕನಿಷ್ಠ 82 ಸಾವುಗಳನ್ನು ದೃಢಪಡಿಸಿದೆ. ಕುಂಭಮೇಳ ಕಾಲ್ತುಳಿತದಲ್ಲಿ

ಬಿಬಿಸಿಯ ತನಿಖೆಯ ವೇಳೆ 11 ರಾಜ್ಯಗಳ 50 ಜಿಲ್ಲೆಗಳಲ್ಲಿ 100 ಕ್ಕೂ ಹೆಚ್ಚು ಕುಟುಂಬಗಳೊಂದಿಗೆ ಸಂದರ್ಶನಗಳನ್ನು ನಡೆಸಿದ್ದು, ಸಾವುನೋವುಗಳ ಸಂಖ್ಯೆ ಅಧಿಕೃತವಾಗಿ ಒಪ್ಪಿಕೊಂಡಿದ್ದಕ್ಕಿಂತ ಹೆಚ್ಚಿನದಾಗಿದೆ ಎಂದು ಬಹಿರಂಗಪಡಿಸಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

ಕಾಲ್ತುಳಿತದಲ್ಲಿ ಸಾವನ್ನಪ್ಪಿದ ಪ್ರೀತಿಪಾತ್ರರನ್ನು ಕಳೆದುಕೊಂಡ ಕೆಲವು ಕುಟುಂಬಗಳಿಗೆ ಸುಮಾರು 5 ಲಕ್ಷಗಳ ನಗದು ಪರಿಹಾರವನ್ನು ನೀಡಲಾಯಿತಾದರೂ, ಅಧಿಕೃತ ಸಾವಿನ ಸಂಖ್ಯೆಯಿಂದ ಅವರನ್ನು ಹೊರಗಿಡಲಾಗಿದೆ ಎಂದು ತನಿಖಾ ವರದಿ ಹೇಳಿದೆ. ರಾಜ್ಯ ಸರ್ಕಾರ ಎಣಿಕೆಯಿಂದ ಕೈಬಿಟ್ಟ ಅಂತಹ 26 ಕುಟುಂಬಗಳನ್ನು ಬಿಬಿಸಿ ಗುರುತಿಸಿದೆ ಎಂದು ವರದಿ ಉಲ್ಲೇಖಿಸಿದೆ.

ಬಿಬಿಸಿ ವರದಿಗಳ ಹಿನ್ನಲೆ ಕಾಂಗ್ರೆಸ್ ಪಕ್ಷ ಸೇರಿದಂತೆ ವಿರೋಧ ಪಕ್ಷವು ತೀಕ್ಷ್ಣವಾದ ಪ್ರತಿಕ್ರಿಯೆಗಳನ್ನು ನೀಡಿದ್ದು, ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರವು ದುರಂತದ ನಿಜವಾದ ಪ್ರಮಾಣವನ್ನು ಕಡಿಮೆ ಮಾಡಿದೆ ಎಂದು ಟ್ವಿಟರ್‌ನಲ್ಲಿ ಆರೋಪಿಸಿದೆ.

“ಕುಂಭ ಮೇಳದಲ್ಲಿ 37 ಜನರು ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ಹೇಳಿತ್ತು. ಆದರೆ, ಬಿಬಿಸಿ ತನಿಖೆಯು 82 ಜನರ ಸಾವನ್ನು ದೃಢಪಡಿಸಿದೆ” ಎಂದು ಕಾಂಗ್ರೆಸ್ ಪಕ್ಷ ಹೇಳಿದೆ. ಸರ್ಕಾರವು ಸಾವುನೋವುಗಳನ್ನು ಪರಿಹರಿಸುವುದಕ್ಕಿಂತ ತನ್ನ ಇಮೇಜ್ ಬಗ್ಗೆ ಹೆಚ್ಚು ಯಾಕೆ ಕಾಳಜಿ ವಹಿಸುತ್ತಿದೆ ಎಂದು ಪಕ್ಷವು ಪ್ರಶ್ನಿಸಿದೆ.

ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾತೆ ಕೂಡ ವರದಿಯಾದ ಸಾವಿನ ಸಂಖ್ಯೆಯಲ್ಲಿನ ವ್ಯತ್ಯಾಸಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. “ಕುಂಭ ಮೇಳದಲ್ಲಿ ಕನಿಷ್ಠ 82 ಜನರು ಸಾವನ್ನಪ್ಪಿದ್ದಾರೆ. ಈ ಸಂಖ್ಯೆ ಯುಪಿ ಸರ್ಕಾರ ವರದಿ ಮಾಡಿದ 37 ಸಾವುಗಳಿಗಿಂತ ಹೆಚ್ಚಾಗಿದೆ” ಎಂದು ಹೇಳಿದ್ದಾರೆ.

ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರು ಪ್ರತಿಕ್ರಿಯಿಸಿ, ಪ್ರಧಾನಿ ನರೇಂದ್ರ ಮೋದಿಯವರ ಆಡಳಿತಾರೂಢ ಬಿಜೆಪಿಯನ್ನು ಟೀಕಿಸಿದ್ದು, ರಾಜ್ಯ ಸರ್ಕಾರದ ಸಾವಿನ ಸಂಖ್ಯೆ ವರದಿಯನ್ನು “ದಾರಿತಪ್ಪಿಸುವ” ವರದಿ ಎಂದು ಕರೆದಿದ್ದಾರೆ. ಬಿಜೆಪಿ ನಾಯಕತ್ವದ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ ಅವರ, “ಫ್ಯಾಕ್ಟ್‌ vs ಟ್ರುತ್;  37 vs 82. ಎಲ್ಲರೂ ಸತ್ಯವನ್ನು ವೀಕ್ಷಿಸಬೇಕು, ಕೇಳಬೇಕು ಮತ್ತು ಅರ್ಥಮಾಡಿಕೊಳ್ಳಬೇಕು” ಎಂದು ಹೇಳಿದ್ದಾರೆ.

“ಸಾವುಗಳನ್ನು ಮರೆಮಾಡಲು ಸುಳ್ಳು ಹೇಳುವವರನ್ನು ನಂಬಲು ಸಾಧ್ಯವಿಲ್ಲ, ಅವರ ಬೆಂಬಲಿಗರನ್ನೂ ನಂಬಬಾರದು” ಎಂದು ಅಖಿಲೇಶ್ ಯಾದವ್ ಅವರು ಬಿಜೆಪಿಯನ್ನು ಟೀಕಿಸಿದ್ದಾರೆ. ಕುಂಭಮೇಳ ಕಾಲ್ತುಳಿತದಲ್ಲಿ

ಇಲ್ಲಿ ಕ್ಲಿಕ್ ಮಾಡಿ

ಇದನ್ನೂಓದಿ:  ಒಕ್ಕಲಿಗ – ಲಿಂಗಾಯತರಿಗೆ ಮಣಿದ ಕಾಂಗ್ರೆಸ್ ಸರ್ಕಾರ | ಮತ್ತೆ ಜಾತಿ ಸಮೀಕ್ಷೆ ನಡೆಸಲು ನಿರ್ಧಾರ

ಒಕ್ಕಲಿಗ – ಲಿಂಗಾಯತರಿಗೆ ಮಣಿದ ಕಾಂಗ್ರೆಸ್ ಸರ್ಕಾರ | ಮತ್ತೆ ಜಾತಿ ಸಮೀಕ್ಷೆ ನಡೆಸಲು ನಿರ್ಧಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -