Homeಮುಖಪುಟಮಾನಮರ್ಯಾದೆ ಇದ್ದರೆ ಶಾಲಿನಿ ರಜಿನೀಶ್ ರಾಜಿನಾಮೆ ಕೊಟ್ಟು ಮನೆಗೆ ಹೋಗಲಿ: ಸೊಗಡು ಶಿವಣ್ಣ ಕಿಡಿ

ಮಾನಮರ್ಯಾದೆ ಇದ್ದರೆ ಶಾಲಿನಿ ರಜಿನೀಶ್ ರಾಜಿನಾಮೆ ಕೊಟ್ಟು ಮನೆಗೆ ಹೋಗಲಿ: ಸೊಗಡು ಶಿವಣ್ಣ ಕಿಡಿ

- Advertisement -
- Advertisement -

ತುಮಕೂರು ಸ್ಮಾರ್ಟ್ ಸಿಟಿ ನಿರ್ಮಾಣಕ್ಕಾಗಿ ದಾಸ್ತಾನು ಮಾಡಿದ್ದ ಗ್ಯಾಸ್ ಪೈಪ್ ಗಳು ಸುಟ್ಟು ಹೋಗಿದ್ದರೂ ಒಬ್ಬೇ ಒಬ್ಬ ಅಧಿಕಾರಿಯೂ ಸ್ಥಳಕ್ಕೆ ಬಂದು ಪರಿಶೀಲಿಸಿಲ್ಲ. ಸ್ಮಾರ್ಟ್ ಸಿಟಿ ಲಿಮಿಟೆಡ್ ಅಧ್ಯಕ್ಷ ಶಾಲಿನಿ ರಜನೀಶ್ ಬೇಜವಾಬ್ದಾರಿ ಹಿನ್ನೆಲೆಯಲ್ಲೇ ಬೆಂಕಿ ದುರಂತ ಸಂಭವಿಸಿದ್ದು, ಮಾನಮರ್ಯಾದೆ ಇದ್ದರೆ ಅವರು ರಾಜಿನಾಮೆ ಕೊಟ್ಟು ಮನೆಗೆ ಹೋಗಲಿ. ಇಲ್ಲವೇ ಸರ್ಕಾರ ಶಾಲಿನಿ ಅವರನ್ನು ಅಮಾನತು ಮಾಡಲಿ ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಸೊಗಡು ಶಿವಣ್ಣ ಒತ್ತಾಯಿಸಿದ್ದಾರೆ.

ತುಮಕೂರು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕುಡಿಯುವ ನೀರು ಮತ್ತು ಒಳಚರಂಡಿ ನಿರ್ಮಾಣಕ್ಕಾಗಿ ದಾಸ್ತಾನು ಮಾಡಿದ್ದ ನಾಲ್ಕು ಲಾರಿ ಲೋಡು ಪಿವಿಸಿ ಪೈಪ್ ಸಂಪೂರ್ಣ ಬೆಂಕಿಗೆ ಆಹುತಿಯಾಗಿರುವ ಘಟನೆ ಬುಧವಾರ ಮುಂಜಾನೆ  ಸಂಭವಿಸಿತ್ತು.

ಸ್ಮಾರ್ಟ್ ಸಿಟಿ ಕಾಮಗಾರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ಆರೋಪ ಕೇಳಿಬಂದಿರುವ ನಡುವೆಯೇ ಇದೀಗ ಪಿವಿಸಿ ಪೈಪ್ ಗಳು ಬೆಂಕಿಯಲ್ಲಿ ಸುಟ್ಟ ಭಸ್ಮವಾಗಿವೆ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

ಸ್ಮಾರ್ಟ್ ಸಿಟಿ ಕಾಮಗಾರಿಯ ಪೈಪ್ ಗಳು ಸುಟ್ಟು ಕರಕಲಾಗಿದ್ದರೂ ಸ್ಥಳಕ್ಕೆ ಜಿಲ್ಲಾಧಿಕಾರಿ, ನಗರ ಪಾಲಿಕೆ ಆಯುಕ್ತ, ಯಾರೂ ಬಂದು ನೋಡಿಲ್ಲ. ಇದು ಅವರ ಬೇಜವಾಬ್ದಾರಿತನವನ್ನು ತೋರಿಸುತ್ತದೆ ಎಂದು ಸೊಗಡು ಶಿವಣ್ಣ ವಾಗ್ದಾಳಿ ನಡೆಸಿದ್ದಾರೆ.

ಬೆಂಕಿ ಬಿದ್ದ ಸ್ಥಳದ 40 ಅಡಿ ದೂರದಲ್ಲೇ ಮನೆಗಳು ಇವೆ. ಹೆಚ್ಚು ಕಡಿಮೆ ಆಗಿದ್ದರೆ ಅನಾಹುತ ಸಂಭವಿಸುತ್ತಿತ್ತು. ಸದ್ಯಕ್ಕೆ ಅಂತಹ ಅನಾಹುತದಿಂದ ಕಾರ್ಮಿಕರು ಮತ್ತ ಸ್ಥಳೀಯರು ಪಾರಾಗಿದ್ದಾರೆ. ಅದು ನಮ್ಮ ಪುಣ್ಯ. ಬೆಂಕಿ ಜ್ವಾಲೆ ಮನೆಗಳಿಗೆ ತಗುಲಿದ್ದರೆ ಸ್ಮಾರ್ಟ್ ಸಿಟಿ ಹೋಗಿ ಸ್ಮಶಾನ ಸಿಟಿ ಆಗುತ್ತಿತ್ತು. ಬೆಂಕಿ ಹೊತ್ತಿ ಉರಿದರೂ ಅಲ್ಲಿ ಭದ್ರತಾ ಸಿಬ್ಬಂದಿಯನ್ನು ಇಟ್ಟಿಲ್ಲ. ಪೊಲೀಸರು ಗಸ್ತು ತಿರುಗಿಲ್ಲ. ಆದರೆ ಸ್ಮಾರ್ಟ್ ಸಿಟಿ ಅಧಿಕಾರಿಗಳು ಘಟನೆಯೇ ನಡೆದಿಲ್ಲವೆಂಬಂತೆ ಸುಟ್ಟಜಾಗವನ್ನು ಮಣ್ಣಿನಿಂದ ಮುಚ್ಚಿ ಹೋಗಿದ್ದಾರೆ. ಇದು ಘಟನೆಯನ್ನು ಮುಚ್ಚಿ ಹಾಕುವ ತಂತ್ರವಾಗಿದೆ ಎಂದು ಟೀಕಿಸಿದ್ದಾರೆ.

ನಾನು ಹಿಂದೆಯೇ ಆರೋಪಿಸಿದ್ದೇನೆ. ಈಗಲೂ ಅದನ್ನೇ ಹೇಳುತ್ತೇನೆ. ಸ್ಮಾರ್ಟ್ ಸಿಟಿಯಲ್ಲಿ ಅವ್ಯವಹಾರವಾಗಿದೆ. ಇದನ್ನು ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ. ಶಾಲಿನಿ ಜರನೀಶ್ ಅವನ್ನು ಸರ್ಕಾರ ಮನೆಗೆ ಕಳಿಸಬೇಕು. ಮತ್ತೆ ತುಮಕೂರಿಗೆ ಅವರು ಬರಬಾರದು ಎಂದು ಅವರು ತಿಳಿಸಿದರು.

ಪೈಪ್ ಗೆ ಬೆಂಕಿ ತಗುಲಿದ್ದರಿಂದ ಸಾರ್ವಜನಿಕ ಶಿಕ್ಷಣ ಇಲಾಖೆಯ ಕಚೇರಿ ಗೋಡೆಗಳು ಸುಟ್ಟು ಹೋಗಿವೆ. ಡಿಡಿಪಿಐ ಈ ಬಗ್ಗೆ ಸೂಮೋಟೋ ದೂರು ದಾಖಲಿಸಬೇಕಿತ್ತು. ಅವರು ಕೂಡ ಇತ್ತ ತಿರುಗಿಯೂ ನೋಡಿಲ್ಲ. ಇಲ್ಲಿ ಯಾರಿಗೂ ಜನರ ಬಗ್ಗೆ ಕಾಳಜಿ ಇಲ್ಲ. ಪೈಪುಗಳು ಸುಟ್ಟು ಹೋದ ಬಗ್ಗೆ ಕಿಂಚಿತ್ತೂ ಗಮನವಿಲ್ಲ ಎಂದು ಟೀಕಾಪ್ರಹಾರ ನಡೆಸಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...