ದೇವನಹಳ್ಳಿ ರೈತರ ಭೂ ಸ್ವಾಧೀನ ವಿರೋಧಿ ಹೋರಾಟಕ್ಕೆ ಸ್ಯಾಂಡಲ್‌ವುಡ್ ನಟಿ ರಮ್ಯಾ ದನಿಗೂಡಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ರೈತರ ಹೋರಾಟದ ಕುರಿತ ಪತ್ರಿಕಾ ವರದಿಯನ್ನು ಹಂಚಿಕೊಂಡಿರುವ ಅವರು, “ಕರ್ನಾಟಕ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರ ಬಗ್ಗೆ ಸ್ವಲ್ಪ ಕರುಣೆ ತೋರಿಸಿ ಅವರಿಗೆ ಒಳ್ಳೆಯದನ್ನು ಮಾಡುತ್ತಾರೆ ಎಂದು ನಾನು ಭಾವಿಸುತ್ತೇನೆ” ಎಂದಿದ್ದಾರೆ.
“ಇದು ಕೇವಲ ಕರ್ನಾಟಕದ ರೈತರ ಕಥೆಯಲ್ಲ. ದೇಶದಾದ್ಯಂತ ಎಲ್ಲಾ ಕಡೆಯು ಇದೇ ಪರಿಸ್ಥಿತಿ ಇದೆ.
ಕೈಗಾರಿಕೆಗಳು ಉದ್ಯೋಗಗಳನ್ನು ಸೃಷ್ಟಿಸುವಾಗ ರೈತರ ಜೀವನೋಪಾಯವನ್ನೂ ಕಾಪಾಡಿಕೊಳ್ಳಬೇಕಿದೆ” ಎಂದು ಬರೆದುಕೊಂಡಿದ್ದಾರೆ.
I hope @CMofKarnataka @siddaramaiah avru will show the farmers some compassion and do them good. This story is not just of the farmers here in Karnataka it’s the same all over the country- while industries creates jobs we need to ensure the livelihoods of the farmers are also… pic.twitter.com/snAyTji2Kb
— Ramya/Divya Spandana (@divyaspandana) July 2, 2025
ಭೂ ಸ್ವಾಧೀನದ ವಿರುದ್ದ ಕಳೆದ 1,185 ದಿನಗಳಿಂದ ನಿರಂತರ ಹೋರಾಟ ಮಾಡಿಕೊಂಡು ಬಂದಿರುವ ದೇವನಹಳ್ಳಿಯ 13 ಹಳ್ಳಿಗಳ ರೈತರಿಗೆ ಇಂದು ನಿರ್ಣಾಯಕ ದಿನವಾಗಿದೆ.
ನಂದಿ ಬೆಟ್ಟದಲ್ಲಿ ಇಂದು ರಾಜ್ಯ ಸಚಿವ ಸಂಪುಟ ಸಭೆ ನಡೆಯುತ್ತಿದೆ. ಈ ಸಭೆಯಲ್ಲಿ ಸರ್ಕಾರ ರೈತರ ಪರ ತೀರ್ಮಾನ ತೆಗೆದುಕೊಳ್ಳಲಿದೆ ಎಂಬ ವಿಶ್ವಾಸದಲ್ಲಿದ್ದಾರೆ.
ಬೆಂಗಳೂರಿನ ಫ್ರೀಡಂ ಪಾರ್ಕ್ ಮತ್ತು ಚನ್ನರಾಯಪಟ್ಟಣ ಹೋರಾಟ ಸ್ಥಳದಲ್ಲಿ ಉಪವಾಸ ರೈತರು ಹೋರಾಟಗಾರರು ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ.
ಆರನೇ ದಿನಕ್ಕೆ ಕಾಲಿಟ್ಟ ‘ಭೂಮಿ ಸತ್ಯಾಗ್ರಹ’: ಫ್ರೀಡಂ ಪಾರ್ಕ್, ಚನ್ನರಾಯಪಟ್ಟಣದಲ್ಲಿ ನಿರಶನ



India is having several culturs