- Advertisement -
- Advertisement -
ತೀವ್ರ ಕುತೂಹಲ ಕೆರಳಿಸಿದ್ದ, ಪ್ರತಿಷ್ಠೆಯ ಕಣವಾಗಿದ್ದ ಹುಣಸೂರಿನಲ್ಲಿ ಹಳ್ಳಿಹಕ್ಕಿ, ಬಿಜೆಪಿಯ ಅನರ್ಹ ಶಾಸಕ ಎಚ್ ವಿಶ್ವನಾಥ್ ಸೋಲಿನತ್ತ ಮುಖ ಮಾಡಿದ್ದಾರೆ.
ಮತ ಎಣಿಕೆಯ 9 ಸುತ್ತಿನಲ್ಲಿಯೂ ಅವರು ಸತತ ಹಿನ್ನಡೆ ಹೊಂದಿದ್ದಾರೆ. ಅಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಎಚ್.ಪಿ ಮಂಜುನಾಥ್ ಸುಮಾರು 16000 ಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡಿರುವುದರಿಂದ ಹಳ್ಳಿ ಹಕ್ಕಿಯನ್ನು ಮನೆಗೆ ಕಳಿಸಲು ಮತದಾರರು ನಿರ್ಧರಿಸಿದಂತಿದೆ.
ಕಾಂಗ್ರೆಸ್‌ನಿಂದ ಜೆಡಿಎಸ್‌ಗೆ, ಅಲ್ಲಿಂದ ಬಿಜೆಪಿಗೆ ಹಾರಿದ್ದ ಹಳ್ಳಿಹಕ್ಕಿಗೆ ಈ ಸೋಲು ಸಾಕಷ್ಟು ಪಾಠ ಕಲಿಸಲಿದೆ. ಈ ಇಳಿ ವಯಸ್ಸಿನಲ್ಲಿ ಇದೆಲ್ಲಾ ಬೇಕಿತ್ತಾ ಎಂದು ಕೇಳುವಂತಾಗಿದೆ.
15 ಕ್ಷೇತ್ರಗಳಲ್ಲಿಯೇ 11 ಕ್ಷೇತ್ರಗಳಲ್ಲಿ ಬಿಜೆಪಿ ಭಾರೀ ಮುನ್ನಡೆ ಸಾಧಿಸಿದರೆ ಹುಣಸೂರಿನಲ್ಲಿ ತೀವ್ರ ಹಿನ್ನೆಡೆಗೆ ಒಳಗಾಗಿದೆ. ಹಾಗಾಗಿ ಮತ ಎಣಿಕೆ ಕೇಂದ್ರದಿಂದ ಬೆಳಿಗ್ಗೆಯೇ ಎಚ್ ವಿಶ್ವನಾಥ್ ಹೊರನಡೆದಿದ್ದಾರೆ.


