Homeಮುಖಪುಟಯಲ್ಲಾಪುರದಲ್ಲಿ ಬಿಜೆಪಿಯ ಅನರ್ಹ ಶಾಸಕ ಶಿವರಾಮ್‌ ಹೆಬ್ಬಾರ್‌ ಗೆದ್ದಾಯ್ತು. ಹೇಗೆ ಗೊತ್ತ?

ಯಲ್ಲಾಪುರದಲ್ಲಿ ಬಿಜೆಪಿಯ ಅನರ್ಹ ಶಾಸಕ ಶಿವರಾಮ್‌ ಹೆಬ್ಬಾರ್‌ ಗೆದ್ದಾಯ್ತು. ಹೇಗೆ ಗೊತ್ತ?

- Advertisement -
- Advertisement -

ಯಲ್ಲಾಪುರದಲ್ಲಿ ಬಿಜೆಪಿಯ ಅನರ್ಹ ಶಾಸಕ ಶಿವರಾಮ್‌ ಹೆಬ್ಬಾರ್‌ ಕಳೆದ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದಾಗ ಹೇಗೋ ಕಷ್ಟಪಟ್ಟು ಗೆದ್ದಿದ್ದರು. ಅದೂ ಕೇವಲ ಒಂದೂವರೆ ಸಾವಿರ ಮತಗಳ ಅಂತರದಿಂದ ಗೆದ್ದಿದ್ದರು.

ಆದರೆ ಈಗ? ಅವರು ಆಗಲೇ ಗೆದ್ದಾಯ್ತು. ಹೇಗೆ ಗೊತ್ತ? ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ ಭೀಮಣ್ಣ ನಾಯ್ಕ್‌ಗಿಂತ 27000 ಸಾವಿರ ಮತಗಳ ಅಂತದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಇನ್ನೆರಡು ಕ್ಷೇತ್ರಗಳ ಮತ ಎಣಿಕೆ ಮಾತ್ರ ಬಾಕಿ ಇದ್ದು, ಹಾಗಾಗಿ ಅವರ ಗೆಲುವು ಕಟ್ಟಿಟ್ಟ ಬುತ್ತಿಯಾಗಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು “ಭಾರೀ ದೊಡ್ಡ ಅಂತರದಲ್ಲಿ ಗೆಲ್ಲುತ್ತೇನೆ ಎಂದು ಮೊದಲೇ ಹೇಳಿದ್ದೆ. ನಿಮಗೆ ನಂಬಿಕೆ ಇರಲಿಲ್ಲ. ಕೆಲವರು ನನಗೆ ತೊಂದರೆ ಕೊಟ್ಟಿದ್ದರು. ಆದರೂ ಕ್ಷೇತ್ರದ ಜನತೆ ನನ್ನಂಥ ಅಭಿವೃದ್ದಿಶೀಲ ರಾಜಕಾರಣಿಯನ್ನು ಕಳೆದುಕೊಳ್ಳಲು ತಯಾರಿಲ್ಲ. ಅಭಿವೃದ್ದಿ ಶೀಲ ರಾಜಕಾರಣಕ್ಕೆ ಗೆಲುವು ಇದು. ನಾಯಕರು ಮತ್ತು ಕಾರ್ಯಕರ್ತರು ಹಗಲಿರುಳು ಶ್ರಮಿಸಿದ್ದಾರೆ, ಅವರಿಗೆ ಧನ್ಯವಾದಗಳು. ಸ್ಪೀಕರ್ ನನ್ನನ್ನು ಅನರ್ಹ ಮಾಡಿದ್ದರು. ನನ್ನ ಕ್ಷೇತ್ರದ ಜನತೆ ಮಾಜಿ ಸ್ಪೀಕರ್‌ ರಮೇಶ್ ಕುಮಾರ್‌ರವರನ್ನೇ ಅನರ್ಹ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪನವರು ಟೆನ್ಷನ್‌ ಇಲ್ಲದೇ ಕೆಲಸ ಮಾಡಬೇಕು ಎಂಬುದು ನನ್ನ ಆಸೆಯಾಗಿತ್ತು. ಇವತ್ತು ನೆರವೇರಿದೆ ಎಂದು ಶಿವರಾಮ್ ಹೆಬ್ಬಾರ್‌ ಹೇಳಿದ್ದಾರೆ.

ಆ ಮೂಲಕ ಮೊದಲ ಜಯವಾಗಿ ಯಲ್ಲಾಪುರ ಕ್ಷೇತ್ರ ಬಿಜೆಪಿ ಪಾಲಿಗೆ ದಕ್ಕಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಪ್ರಕರಣ: ಸಂತ್ರಸ್ತರ ನೆರವಿಗೆ ನಿಲ್ಲುವಂತೆ ಸಿಎಂಗೆ ರಾಹುಲ್ ಗಾಂಧಿ ಪತ್ರ

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆಯರ ನೆರವಿಗೆ ನಿಲ್ಲುವಂತೆ ಮತ್ತು ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ...