Homeಮುಖಪುಟಸಾವಿರಾರು ಕೋಟಿ ರೂಗಳ ಒಡೆಯ ಎಂಟಿಬಿಗೆ ಸೋಲುಣಿಸುವರೆ ಶರತ್‌ ಬಚ್ಚೇಗೌಡ?

ಸಾವಿರಾರು ಕೋಟಿ ರೂಗಳ ಒಡೆಯ ಎಂಟಿಬಿಗೆ ಸೋಲುಣಿಸುವರೆ ಶರತ್‌ ಬಚ್ಚೇಗೌಡ?

- Advertisement -
- Advertisement -

ಹೊಸಕೋಟೆ ಕ್ಷೇತ್ರ ಭಾರೀ ಜಿದ್ದಾಜಿದ್ದಿಗೆ ಒಳಗಾಗಿತ್ತು. ಇಲ್ಲಿ ಸ್ಪರ್ಧಿಸಿದ್ದ ಮೂವರು ಪ್ರಬಲ ಅಭ್ಯರ್ಥಿಗಳು ಸಹ ನೂರಾರು ಕೋಟಿ ಒಡೆಯರಾಗಿದ್ದರು. ಅದರಲ್ಲಿಯೂ ಅನರ್ಹ ಶಾಸಕ ಎಂಟಿಬಿ ನಾಗರಾಜ್‌ 1200 ಕೋಟಿ ರೂಗಳ ಆಸ್ತಿ ಘೋಷಿಸಿದ್ದರೆ, ಕಾಂಗ್ರೆಸ್‌ನ ಪದ್ಮಾವತಿ ಸುರೇಶ್‌ ಕೂಡ 900 ಕೋಟಿಗಳ ಆಸ್ತಿ ಘೋಷಿಸಿದ್ದರು.

ಇನ್ನು ಬಿಜೆಪಿ ಟಿಕೆಟ್‌ ಸಿಗದೇ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶರತ್‌ ಬಚ್ಚೇಗೌಡ ತಾನೇನೂ ಕಮ್ಮಿ ಇಲ್ಲ ಎಂದು 180 ಕೋಟಿ ರೂಗಳ ಆಸ್ತಿ ಘೋಷಣೆ ಮಾಡಿದ್ದರು.

ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತದಾರರನ್ನು ಸೆಳೆಯಲು 35000 ಕುಕ್ಕರ್‌ಗಳನ್ನು ಮತದಾರರಿಗೆ ಹಂಚಿದ್ದರು ಎಂದು ಸುದ್ದಿ ಇತ್ತು. ಆದರೆ ಅದು ಪಕ್ಷೇತರ ಅಭ್ಯರ್ಥಿ ಶರತ್‌ ಬಚ್ಚೇಗೌಡರಿಗೆ ವರವಾಯ್ತು. ಏಕೆಂದರೆ ಕುಕ್ಕರ್‌ ಗುರುತು ಈ ಚುನಾವಣೆಯಲ್ಲಿ ಕುಕ್ಕರ್‌ ಗುರುತ್‌ ಶರತ್‌ ಪಾಲಾಗಿತ್ತು.

ಇನ್ನು ಚುನಾವಣೆಗೂ ಮೊದಲೇ ಶರತ್ ರನ್ನು ಬಿಜೆಪಿ ಪಕ್ಷದಿಂದ ಉಚ್ಛಾಟಿಸಿತ್ತು. ಆದರೆ ತಾವು ಗೆದ್ದರೆ ಬಿಜೆಪಿಗೆ ಮತ್ತೆ ಸೇರುವುದಾಗಿ ಶರತ್‌ ಬಚ್ಚೇಗೌಡ ಸುಳಿವು ನೀಡಿದ್ದರು.

ಈಗ ಸುಮಾರು 8000 ಮತಗಳ ಅಂತರದ ಮುನ್ನಡೆ ಗಳಿಸಿರುವ ಶರತ್‌ ಬಚ್ಚೇಗೌಡ ಆ ಇಬ್ಬರೂ ಕೋಟಿ ಕುಳಗಳನ್ನು ಮೀರಿಸಿದ್ದಾರೆ. ಗೆಲ್ಲುತ್ತಾರಾ? ಗೆದ್ದ ನಂತರ ಏನು ಮಾಡುತ್ತಾರೆ ಕಾದು ನೋಡಬೇಕಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸ್ವಾತಿ ಮಲಿವಾಲ್‌ ವಿರುದ್ಧ ದೂರು ನೀಡಿದ ಕೇಜ್ರಿವಾಲ್ ಸಹಾಯಕ ಬಿಭವ್ ಕುಮಾರ್

0
ದೆಹಲಿ ಎಎಪಿ ನಾಯಕಿ, ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್‌ ಮೇಲಿನ ಹಲ್ಲೆ ಪ್ರಕರಣ ವಿಭಿನ್ನ ತಿರುವನ್ನು ಪಡೆದುಕೊಂಡಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಬಿಭವ್ ಕುಮಾರ್ ಅವರು ಶುಕ್ರವಾರ ಎಎಪಿ...