Homeಎಕಾನಮಿಶ್ರೀಮಂತರಿಗೆ ರಸಗುಲ್ಲ - ಬಡಮಕ್ಕಳಿಗೆ ರೊಟ್ಟಿ ಉಪ್ಪು: 3000 ಕೋಟಿ ಅನುದಾನ ಕಡಿತದ ವಿರುದ್ಧ ಪ್ರಿಯಾಂಕ...

ಶ್ರೀಮಂತರಿಗೆ ರಸಗುಲ್ಲ – ಬಡಮಕ್ಕಳಿಗೆ ರೊಟ್ಟಿ ಉಪ್ಪು: 3000 ಕೋಟಿ ಅನುದಾನ ಕಡಿತದ ವಿರುದ್ಧ ಪ್ರಿಯಾಂಕ ವಾಗ್ದಾಳಿ

- Advertisement -
- Advertisement -

ಕೇಂದ್ರ ಸರ್ಕಾರವು 2019-20ರ ಬಜೆಟ್‌ನಲ್ಲಿ ಶಾಲಾ ಶಿಕ್ಷಣಕ್ಕಾಗಿನ ಅನುದಾನದಲ್ಲಿ”ಆರ್ಥಿಕ ಬಿಕ್ಕಟ್ಟಿನ” ಕಾರಣದಿಂದ 3,000 ಕೋಟಿ ರೂ.ಗಳಿಂದ ಕಡಿತಗೊಳಿಸವ ವರದಿಗಳು ಬಂದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ನಾಯಕಿ ಪ್ರಿಯಾಂಕ ಗಾಂಧಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮೋದಿ ಸರ್ಕಾರವು ತನ್ನ “ಶ್ರೀಮಂತ ಗೆಳೆಯರ” ಪರವಾಗಿದೆಯೇ ಹೊರತು ದೇಶದ ಭವಿಷ್ಯವಾದ ಮಕ್ಕಳ ಪರವಾಗಿಲ್ಲ ಎಂದು ದೂರಿದ್ದಾರೆ.

“ಬಿಜೆಪಿ ಸರ್ಕಾರ ತನ್ನ ಶ್ರೀಮಂತ ಸ್ನೇಹಿತರ 5.5 ಲಕ್ಷ ಕೋಟಿ ರೂ.ಗಳ ಸಾಲವನ್ನು ಮನ್ನಾ ಮಾಡುತ್ತದೆ. ಆರು ವಿಮಾನ ನಿಲ್ದಾಣಗಳನ್ನು ತನ್ನ ಶ್ರೀಮಂತ ಗೆಳೆಯರಿಗೆ ನೀಡುತ್ತದೆ”. ಆದರೆ ಮಕ್ಕಳಿಗಾಗಿನ ಬಜೆಟ್‌ನಲ್ಲಿ 3000 ಕೋಟಿ ಕಡಿತ ಮಾಡುತ್ತದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

“ದೊಡ್ಡಜನರು ರಸಗುಲ್ಲಾಗಳನ್ನು ತಿನ್ನುತ್ತಾರೆ, ಆದರೆ ಮಧ್ಯಾಹ್ನದ ಊಟದಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಉಪ್ಪು ಮತ್ತು ರೊಟ್ಟಿ ಮಾತ್ರ ಸಿಗುತ್ತದೆ” ಎಂದು ಪ್ರಿಯಾಂಕ ಕಿಡಿಕಾರಿದ್ದಾರೆ.

ಶಿಕ್ಷಣ ಬಜೆಟ್ ಕಡಿತಗೊಳಿಸುವ ವರದಿಯ ಬಗ್ಗೆ ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ ಕೂಡ ಸರ್ಕಾರದ ಮೇಲೆ ದಾಳಿ ನಡೆಸಿದ್ದಾರೆ. ಬಿಜೆಪಿ ನೇತೃತ್ವದ ಸರ್ಕಾರವು “ಶಿಕ್ಷಣಕ್ಕಿಂತ ಹೆಚ್ಚಾಗಿ ತನ್ನದೇ ಆದ ಪ್ರಚಾರದ ಮೇಲೆ ಹೆಚ್ಚು ಗಮನಹರಿಸುತ್ತದೆ” ಎಂಬುದು ಸ್ಪಷ್ಟವಾಗಿದೆ ಎಂದು ಅವರು ದೂರಿದ್ದಾರೆ.

ಶಾಲಾ ಶಿಕ್ಷಣಕ್ಕಾಗಿ ಮೀಸಲಿಟ್ಟಿರುವ 56,536 ಕೋಟಿ ರೂಗಳಲ್ಲಿ 3000 ಕೋಟಿ ರೂಗಳನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ ಎಂದು ಮಾನವ ಸಂಪನ್ಮೂಲ ಅಭಿವೃದ್ದಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಆಂಗ್ಲ ವೆಬ್‌ಸೈಟ್‌ ದಿಪ್ರಿಂಟ್‌ ವರದಿ ಮಾಡಿದೆ.

ಆರ್ಥಿಕ ಕುಸಿತದ ಕಾರಣಕ್ಕಾಗಿ ಈ ಕ್ರಮ ಅನಿವಾರ್ಯವಾಗಿದ್ದು, ಮುಂದಿನ ವಾರ ಈ ಘೋಷಣೆ ಹೊರಬೀಳುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಣಿಪುರ ಬೆತ್ತಲೆ ಮೆರವಣಿಗೆ: ಗಲಭೆಕೋರರ ಗುಂಪಿಗೆ ಮಹಿಳೆಯರನ್ನು ಒಪ್ಪಿಸಿದ್ದ ಪೊಲೀಸರು, ಚಾರ್ಜ್‌ಶೀಟ್‌ನಲ್ಲಿ ಮಹತ್ವದ ಅಂಶಗಳು...

0
ಮಣಿಪುರ ಹಿಂಸಾಚಾರದ ಸಮಯದಲ್ಲಿ ನಡೆದಿದ್ದ ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ, ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಚಾರ್ಜ್‌ಶೀಟ್‌ನಲ್ಲಿ ಮಹತ್ವದ ಅಂಶಗಳ ಉಲ್ಲೇಖವಾಗಿದ್ದು, ಮಹಿಳೆಯರನ್ನು ಗಲಭೆಕೋರರ ಗುಂಪಿಗೆ ಪೊಲೀಸರೇ ಒಪ್ಪಿಸಿದ್ದಾರೆ ಎಂದು ತಿಳಿಸಿದೆ. ಪೊಲೀಸರ...