ಉತ್ತರ ಪ್ರದೇಶದ ಚಂದೌಸಿಯಲ್ಲಿರುವ ಸಿವಿಲ್ ನ್ಯಾಯಾಲಯವು, ಶಾಹಿ ಜಾಮಾ ಮಸೀದಿ-ಹರಿಹರ್ ದೇವಸ್ಥಾನ ವಿವಾದವನ್ನು ಆಗಸ್ಟ್ 21 ಕ್ಕೆ ಮುಂದೂಡಿದೆ, ಸ್ಥಳೀಯ ಬಾರ್ ಅಸೋಸಿಯೇಷನ್ ಸದಸ್ಯರ ಮುಷ್ಕರದಿಂದಾಗಿ ಈ ನಿರ್ಧಾರಕ್ಕೆ ಬರಲಾಗಿದೆ.
ಈ ವಿಷಯವನ್ನು ಸಿವಿಲ್ ನ್ಯಾಯಾಧೀಶ (ಹಿರಿಯ ವಿಭಾಗ) ಆದಿತ್ಯ ಸಿಂಗ್ ಅವರ ಮುಂದೆ ವಿಚಾರಣೆಗೆ ಪಟ್ಟಿ ಮಾಡಲಾಗಿದೆ.
ಮುಸ್ಲಿಂ ಸಮುದಾಯದ ಪರವಾಗಿ ಅಲಹಾಬಾದ್ ಹೈಕೋರ್ಟ್‌ನಲ್ಲಿ ಪ್ರಕರಣದ ನಿರ್ವಹಣೆಯನ್ನು ಪ್ರಶ್ನಿಸಿದ್ದಾರೆ. ಆದರೆ, ಮೇ 19 ರಂದು, ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಸಮೀಕ್ಷೆಗೆ ಅನುಮತಿ ನೀಡುವ ಅಧೀನ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದು ವಿಚಾರಣೆಯನ್ನು ಮುಂದುವರಿಸಲು ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶಿಸಿದೆ.
ಒಂದು ಪಕ್ಷದ ಪರವಾಗಿ ಹಾಜರಾದ ವಕೀಲ ಗೋಪಾಲ್ ಶರ್ಮಾ, “ಇಂದು ಬಾರ್ ಅಸೋಸಿಯೇಷನ್ ಮುಷ್ಕರದಿಂದಾಗಿ, ನ್ಯಾಯಾಲಯವು ಆಗಸ್ಟ್ 21 ಅನ್ನು ಮುಂದಿನ ವಿಚಾರಣೆಯ ದಿನಾಂಕವೆಂದು ನಿಗದಿಪಡಿಸಿದೆ” ಎಂದು ಹೇಳಿದರು.
ಮತ್ತೊಂದು ಕಡೆಯ ವಕೀಲ ಶಕೀಲ್ ಅಹ್ಮದ್ ವಾರ್ಸಿ ಮಾತನಾಡಿ, ಬಾರ್ ಅಸೋಸಿಯೇಷನ್ ಮುಷ್ಕರ ನಡೆಸುತ್ತಿದ್ದು, ಈ ಪ್ರಕರಣವನ್ನು ಮತ್ತೊಂದು ದಿನಾಂಕಕ್ಕೆ ಮುಂದೂಡಲಾಗಿದೆ ಎಂದು ಹೇಳಿದರು.
ಮೇ 19 ರಂದು ಹೈಕೋರ್ಟ್‌ನ ಹಿಂದಿನ ತಡೆಯಾಜ್ಞೆಯನ್ನು ತೆರವುಗೊಳಿಸಲಾಯಿತು. ಆ ಆದೇಶಕ್ಕೆ ಸಂಬಂಧಿಸಿದ ದಾಖಲೆಗಳನ್ನು ವಿಚಾರಣಾ ನ್ಯಾಯಾಲಯದಲ್ಲಿ ಸಲ್ಲಿಸಲಾಯಿತು.
ಕಳೆದ ವರ್ಷ ನವೆಂಬರ್ 19 ರಂದು ವಿವಾದ ಆರಂಭವಾಗಿದ್ದು, ವಕೀಲರಾದ ಹರಿಶಂಕರ್ ಜೈನ್ ಮತ್ತು ವಿಷ್ಣುಶಂಕರ್ ಜೈನ್ ಸೇರಿದಂತೆ ಹಿಂದೂ ಅರ್ಜಿದಾರರು ಸಂಭಾಲ್ ಜಿಲ್ಲಾ ನ್ಯಾಯಾಲಯದಲ್ಲಿ ಮಸೀದಿಯನ್ನು ಮೊದಲೇ ಅಸ್ತಿತ್ವದಲ್ಲಿರುವ ದೇವಾಲಯದ ಮೇಲೆ ನಿರ್ಮಿಸಲಾಗಿದೆ ಎಂದು ಆರೋಪಿಸಿ ಮೊಕದ್ದಮೆ ಹೂಡಿದರು.
ಅದೇ ದಿನ (ನವೆಂಬರ್ 19) ನ್ಯಾಯಾಲಯದ ಆದೇಶದ ಸಮೀಕ್ಷೆಯನ್ನು ನಡೆಸಲಾಯಿತು, ನಂತರ ನವೆಂಬರ್ 24 ರಂದು ಮತ್ತೊಂದು ಸಮೀಕ್ಷೆ ನಡೆಸಲಾಯಿತು.
ನವೆಂಬರ್ 24 ರಂದು ನಡೆದ ಎರಡನೇ ಸಮೀಕ್ಷೆಯು ಸಂಭಾಲ್‌ನಲ್ಲಿ ಗಮನಾರ್ಹ ಅಶಾಂತಿಗೆ ಕಾರಣವಾಯಿತು, ಇದರ ಪರಿಣಾಮವಾಗಿ ನಾಲ್ವರು ಸಾವನ್ನಪ್ಪಿದರು ಮತ್ತು 29 ಪೊಲೀಸ್ ಸಿಬ್ಬಂದಿ ಗಾಯಗೊಂಡರು.
ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಎಸ್‌ಪಿ ಸಂಸದ ಜಿಯಾವುರ್ ರೆಹಮಾನ್ ಬಾರ್ಕ್. ಮಸೀದಿ ಸಮಿತಿ ಮುಖ್ಯಸ್ಥ ಜಾಫರ್ ಅಲಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. 2,750 ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.


