Homeಎಲೆಮರೆಊರಿಗೆ ಊರನ್ನೆ ಶಾಲಾ ಪತ್ರಿಕೆಯ ಓದುಗರನ್ನಾಗಿಸಿದ ಶಿಕ್ಷಕ ಬಿ.ಕೊಟ್ರೇಶ್

ಊರಿಗೆ ಊರನ್ನೆ ಶಾಲಾ ಪತ್ರಿಕೆಯ ಓದುಗರನ್ನಾಗಿಸಿದ ಶಿಕ್ಷಕ ಬಿ.ಕೊಟ್ರೇಶ್

- Advertisement -
- Advertisement -

ಕಾರಟಗಿಯಲ್ಲಿ ಸಮಾಜ ವಿಜ್ಞಾನ ಸಂಶೋಧನಾ ಸಂಸ್ಥೆಯ ಬಿ.ಪೀರಬಾಷ ಮತ್ತು ಗೆಳೆಯರು ಸೇರಿ ಕುವೆಂಪು ಕುರಿತಂತೆ ಕಮ್ಮಟವನ್ನು ಏರ್ಪಡಿಸಿದ್ದರು. ರಾಮಲಿಂಗಪ್ಪ ಟಿ. ಬೇಗೂರು ಮತ್ತು ನಾನು ಕಮ್ಮಟವನ್ನು ನಿರ್ವಹಿಸುವ ಹೊಣೆ ಹೊತ್ತಿದ್ದೆವು. ಆಗ ಕೊಪ್ಪಳ ಸಿಂಧನೂರು ಗಂಗಾವತಿ ಭಾಗದ ಶಿಕ್ಷಕರು ಶಿಬಿರಾರ್ಥಿಗಳಾಗಿ ಬಂದಿದ್ದರು. ಬಿಡುವಿನ ವೇಳೆಯಲ್ಲಿ ಶಿಕ್ಷಕ ಬಿ.ಕೊಟ್ರೇಶ್ ತಾನು ಶಾಲೆಯಿಂದ ತರುತ್ತಿರುವ ಪತ್ರಿಕೆಯೊಂದನ್ನು ಕೈಗೆ ಕೊಟ್ಟರು. ಸುಮ್ಮನೆ ಕಣ್ಣಾಡಿಸಿದರೆ ಆ ಪತ್ರಿಕೆಯ ವೈವಿಧ್ಯ, ಹರವು, ದೃಷ್ಟಿಕೋನ ಅಚ್ಚರಿ ಹುಟ್ಟಿಸಿತು. ಶಾಲಾ ಮಕ್ಕಳೆ ಪ್ರಕಟಿಸುತ್ತಾರೆಂದಾಗ ನಂಬಲಾಗಲಿಲ್ಲ. ಕಳೆದ ನಾಲ್ಕು ವರ್ಷದಿಂದ ಈ ಪತ್ರಿಕೆ ತರುವುದಾಗಿಯೂ, ಪತ್ರಿಕೆಯನ್ನು ಶಾಲಾಮಕ್ಕಳೇ ಸಂಪಾದಿಸುತ್ತಿದ್ದು, ಅವರೇ ಬರೆದು, ಅವರೇ ಹಂಚುತ್ತಾರೆ ಎಂದು ಮತ್ತಷ್ಟು ವಿವರಿಸಿದರು. ಇದನ್ನು ಕೇಳಿ ಪೇಸ್‍ಬುಕ್‍ನಲ್ಲಿ ಮೆಚ್ಚುಗೆಯ ಪೋಸ್ಟ್ ಹಾಕಿ ಸುಮ್ಮನಾಗಿದ್ದೆ. ಇದೀಗ ರಾಷ್ಟ್ರೀಯ ಪತ್ರಿಕೆಗಳಲ್ಲಿ ಪೆನ್ಸಿಲ್ ಪತ್ರಿಕೆಯ ಬಗ್ಗೆ ವಿಶೇಷ ಸುದ್ದಿಗಳು ಪ್ರಕಟವಾಗಿ ಗಮನ ಸೆಳೆಯುತ್ತಿದೆ.

ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಬೆಳಗುರ್ಕಿ ಒಂದು ಪುಟ್ಟ ಹಳ್ಳಿ. ಐದು ಸಾವಿರದಷ್ಟು ಜನಸಂಖ್ಯೆ ಇರುವ ಬೆಳಗುರ್ಕಿಯ ಶಾಲೆಯಲ್ಲಿ 310 ರಷ್ಟು ವಿದ್ಯಾರ್ಥಿಗಳಿದ್ದು, ಎಂಟು ಜನ ಶಿಕ್ಷಕರು, ಇಬ್ಬರು ಅತಿಥಿ ಶಿಕ್ಷಕರಿದ್ದಾರೆ. ಆ ಹಳ್ಳಿಗೆ ಈಗಲೂ ದಿನಪತ್ರಿಕೆಗಳು ಬರುವುದಿಲ್ಲ. ಆದರೆ ಈ ಊರಿನ ಹಿರಿಯರಿಗೆ ತಮ್ಮೂರಿನ ಶಾಲಾಮಕ್ಕಳ ಪೆನ್ಸಿಲ್ ಪತ್ರಿಕೆ ಅಚ್ಚುಮೆಚ್ಚು. ಹರಟೆಕಟ್ಟೆಗಳೀಗ `ಪೆನ್ಸಿಲ್ ಪತ್ರಿಕಾ’ ಕಟ್ಟೆಗಳಾಗಿ ಬದಲಾಗಿವೆ. ಈ ಪತ್ರಿಕೆಯ ಪ್ರಭಾವಕ್ಕೆ ಒಳಗಾಗಿ ಕೆಲವು ದಿನಪತ್ರಿಕೆಗಳೂ ಉಚಿತವಾಗಿ ಊರು ಸೇರುತ್ತಿವೆ. ಊರಲ್ಲೊಂದು ಓದುಗವರ್ಗ ಸೃಷ್ಠಿಯಾಗಿದೆ.

ಶಾಲೆಯಿಂದ ಹೊರಗುಳಿಯುವ ಮಕ್ಕಳನ್ನು ಮತ್ತೆ ಶಾಲೆಗೆ ಕರೆತರುವುದರ ಉದ್ದೇಶದಿಂದ ಕೊಟ್ರೇಶ್ ಶಾಲಾ ಬಿಟ್ಟ ಮಕ್ಕಳ ಕತೆಯನ್ನು ಅವರದೆ ಫೋಟೋ ಹಾಕಿ ಆರಂಭಕ್ಕೆ ಗೋಡೆ ಪತ್ರಿಕೆಯಲ್ಲಿ ಪ್ರಕಟಿಸಲು ತೊಡಗುತ್ತಾರೆ. ಇದಕ್ಕೆ ಮಕ್ಕಳ ಪ್ರತಿಕ್ರಿಯೆ ಉತ್ಸಾಹ ಹೆಚ್ಚಾಗತೊಡಗುತ್ತದೆ. ಗೋಡೆ ಪತ್ರಿಕೆಯನ್ನೆ ಯಾಕೆ ಸ್ವತಂತ್ರ ಪತ್ರಿಕೆ ಮಾಡಬಾರದು ಎನ್ನುವ ಯೋಚನೆಯಿಂದ `ಪೆನ್ಸಿಲ್’ ಪತ್ರಿಕೆ ಹುಟ್ಟುತ್ತದೆ. ಪತ್ರಿಕೆಯೊಂದರಲ್ಲಿ ಕೆಲಸ ಮಾಡುವ ಕೊಟ್ರೇಶ್ ಅವರ ಸ್ನೇಹಿತ ಉಲ್ಲಾಸ್ ಎನ್ನುವವರು ಪುಟವಿನ್ಯಾಸ ಮಾಡುತ್ತಾರೆ. ಇದರಿಂದಾಗಿ ಯಾವುದೇ ದಿನಪತ್ರಿಕೆಗೂ ಕಡಿಮೆ ಇಲ್ಲದಂತೆ `ಪೆನ್ಸಿಲ್’ ರೂಪು ಪಡೆಯುತ್ತದೆ. ದೂರದ ನಗರಗಳಲ್ಲಿ ಮುದ್ರಣವಾಗಿ ಬರುವ ಪತ್ರಿಕೆಗಳ ಬಗೆಗೆ ಜನರಿಗಿದ್ದ ಸಹಜ ಕುತೂಹಲ `ನಮ್ಮೂರಿನ ಶಾಲೆಯೂ ಒಂದು ಪತ್ರಿಕೆ ತರುತ್ತಿದೆ’ ಎನ್ನುವ ಬೆರಗು ಮೂಡಿಸುತ್ತದೆ. ಈ ಬೆರಗಿನಿಂದಲೇ ಶಾಲಾಪತ್ರಿಕೆಯನ್ನು ಊರಿನ ಜನ ಓದಲು ತೊಡಗುತ್ತಾರೆ.

2013 ರ ಸೆಪ್ಟೆಂಬರ್ ತಿಂಗಳಲ್ಲಿ ಪೆನ್ಸಿಲ್‍ನ ಮೊದಲ ಮುದ್ರಿತ ಸಂಚಿಕೆ ಬರುತ್ತದೆ. 2016 ರ ತನಕ ಪೆನ್ಸಿಲ್ ಪತ್ರಿಕೆ ತಿಂಗಳ ಪತ್ರಿಕೆಯಾಗಿ ಪ್ರಕಟವಾಗುತ್ತಾ ಗಮನ ಸೆಳೆಯಿತು. 2016 ರಲ್ಲಿ ಪತ್ರಿಕೆ ರೂಪಿಸುವ ಹೊಣೆಹೊತ್ತ ಶಿಕ್ಷಕ ಕೊಟ್ರೇಶ್ ಅವರು ಬಿಇಓ ಕಚೇರಿಯ ಸಿಆರ್‍ಪಿಯಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಹೀಗಾಗಿ ಕೆಲಕಾಲ ಪತ್ರಿಕೆ ನಿಲ್ಲುತ್ತದೆ. ನಂತರ ಇಂಡಿಯನ್ ಫೌಂಡೇಷನ್ ಫಾರ್ ದಿ ಆಟ್ರ್ಸ್‍ನಲ್ಲಿ ಕೊಟ್ರೇಶ್ ತಮ್ಮ ಪತ್ರಿಕೆಗೆ ಆರ್ಥಿಕ ನೆರವು ಕೇಳಿದಾಗ ಫೌಂಡೇಷನ್ ಒಂದು ವರ್ಷದ ಪತ್ರಿಕೆ ವೆಚ್ಚವನ್ನು ಪ್ರಾಯೋಜಿಸುತ್ತಾರೆ. ಹೀಗಾಗಿ ಮತ್ತಷ್ಟು ಉತ್ಸಾಹದೊಂದಿಗೆ ಪತ್ರಿಕೆ ದ್ವೈಮಾಸಿಕ ಸಂಚಿಕೆಯಾಗಿ ಮುದ್ರಿತವಾಗುತ್ತದೆ. ಇದೀಗ ಊರಿನವರೆ ಒಂದೊಂದು ಸಂಚಿಕೆಯ ವೆಚ್ಚವನ್ನು ಪ್ರಾಯೋಜಿಸಲು ಮುಂದೆ ಬರುವಷ್ಟು ಪತ್ರಿಕೆ ಬೇರುಬಿಟ್ಟಿದೆ. ಮುಂದೆ ಹಣದ ಕೊರತೆಯಿಂದ ಪತ್ರಿಕೆ ನಿಂತರೆ ಹೇಗೆ ಎಂದು ಕೊಟ್ರೇಶ್ ಮಕ್ಕಳನ್ನು ಕೇಳಿದರೆ, ನಾವೇ ಸೇವಿಂಗ್ಸ್ ಬ್ಯಾಂಕ್ ಮೂಲಕ ಹಣ ಉಳಿಸಿ ಪ್ರಕಟಿಸೋಣ ಸರ್ ಎಂದು ಮಕ್ಕಳೆ ಕೊಟ್ರೇಶರಿಗೆ ದೈರ್ಯ ತುಂಬುತ್ತಾರೆ.

ಕರ್ನಾಟಕದ ಬೇರೆ ಬೇರೆ ಶಾಲೆಗಳಲ್ಲಿ ಶಿಕ್ಷಕರು ಶಾಲಾಪತ್ರಿಕೆಗಳನ್ನು ರೂಪಿಸುತ್ತಿದ್ದಾರೆ. ಆದರೆ ಪೆನ್ಸಿಲ್ ಪತ್ರಿಕೆಗೂ ಅವುಗಳಿಗೂ ಫರಕಿದೆ. ಮೊದಲನೆಯದಾಗಿ ಬಹುಪಾಲು ಶಿಕ್ಷಕರು ಮಕ್ಕಳಿಗಾಗಿ ಬರೆದ ಅಥವಾ ಸಂಗ್ರಹಿಸಿದ ಬರಹಗಳಿರುತ್ತವೆ. ಆದರೆ ಪೆನ್ಸಿಲ್ ಪತ್ರಿಕೆಯಲ್ಲಿ ಶಿಕ್ಷಕರ ಸಂಪಾದಕೀಯ ಹೊರತುಪಡಿಸಿದರೆ ಇಡೀ ಪತ್ರಿಕೆ ತುಂಬಾ ಶಾಲೆಯ ಮಕ್ಕಳೇ ಬರೆಯುತ್ತಾರೆ. ಮುಖ್ಯವಾಗಿ ಬೇರೆ ಪತ್ರಿಕೆಗಳು ಆಯಾ ಶಾಲೆ, ಶಾಲೆಯ ಮಕ್ಕಳಿಗೆ ಸೀಮಿತವಾಗಿದ್ದರೆ, ಪೆನ್ಸಿಲ್ ಪತ್ರಿಕೆ ಊರಿನ ಮನೆಮನೆಗೆ ಹಂಚಲ್ಪಡುತ್ತದೆ. ಹಾಗಾಗಿ ಪತ್ರಿಕೆ ಜನಸಮುದಾಯಕ್ಕೆ ವಿಸ್ತರಿಸಿದೆ. ಶಾಲಾಮಕ್ಕಳು ತಮ್ಮದೇ ಊರಿನ ಕಲಾವಿದರು, ಹಿರಿಯರು, ಸಾಧಕರನ್ನು ಸಂದರ್ಶನ ಮಾಡುತ್ತಾರೆ. ತಮ್ಮ ಊರಿನ ಹಬ್ಬ ಜಾತ್ರೆಗಳ ಬಗ್ಗೆಯೂ, ಶಾಲಾ ಕಾರ್ಯಕ್ರಮಗಳ ಬಗ್ಗೆಯೂ ವರದಿ ಮಾಡುತ್ತಾರೆ. ಹೀಗಾಗಿಯೇ ಶಾಲಾಮಕ್ಕಳನ್ನು ಸಮೀಪದ ಪತ್ರಿಕಾ ಕಚೇರಿಗಳಿಗೂ ಭೇಟಿಮಾಡಿಸಲಾಗುತ್ತದೆ. ಪತ್ರಕರ್ತರೊಂದಿಗೆ ಮಕ್ಕಳ ಸಂವಾದಗಳನ್ನು ಏರ್ಪಡಿಸಲಾಗುತ್ತದೆ. ಶಾಲಾ ಮಕ್ಕಳು ಏಕಕಾಲದಲ್ಲಿ ಪತ್ರಕರ್ತರಂತೆಯೂ, ಪತ್ರಿಕೆ ರೂಪುಗೊಳ್ಳುವ ಸಮಯಕ್ಕೆ ಶಾಲೆಯೇ ಪತ್ರಿಕಾ ಕಚೇರಿಯಂತೆಯೂ ಬದಲಾಗುತ್ತದೆ.

ಕೊಟ್ರೇಶ್ ಮಾತನಾಡುತ್ತಾ `ನಮ್ಮ ಶಾಲೆಯ ಮುಖ್ಯ ಶಿಕ್ಷಕರಾದ ಪರಮೇಶ್ ಚಿಂತಮಾನದೊಡ್ಡಿ, ಶಿಕ್ಷಕರಾದ ಪುಟ್ಟಸ್ವಾಮಿ, ಮಲ್ಲೇಶ್ ಕರಿಗಾರ, ತಿಮ್ಮಾರೆಡ್ಡಿ, ಸುನೀಲ್, ಶಿಕ್ಷಕಿಯರಾದ ಮೀನಾಕ್ಷಿ, ಬಸಿರಾ ಬೇಗಂ ಎಲ್ಲರ ಶ್ರಮದಿಂದಾಗಿ ಪೆನ್ಸಿಲ್ ಪತ್ರಿಕೆ ರೂಪುಗೊಳ್ಳುತ್ತಿದೆ. ಅಂತೆಯೇ ಬೆಳಗುರ್ಕಿಯ ಗ್ರಾಮಸ್ಥರು, ನಮ್ಮ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಮಾಧ್ಯಮದ ಸ್ನೇಹಿತರು ತುಂಬಾ ಸಹಕಾರ ಕೊಡುತ್ತಿದ್ದಾರೆ. ಇಂಡಿಯನ್ ಫೌಂಡೇಷನ್ ಫಾರ್ ದಿ ಆಟ್ರ್ಸ್(ಕಲಿ-ಕಲಿಸು) ಕಲಾ ಅಂತರ್ಗತ ಯೋಜನೆಗೆ ನಮ್ಮ ಶಾಲೆಯನ್ನು ಆಯ್ದುಕೊಂಡಿದ್ದಾರೆ. ಈ ಸಂಸ್ಥೆಯ ಕಾರ್ಯಕ್ರಮ ನಿರ್ವಾಹಕರಾದ ಕೃಷ್ಣಮೂರ್ತಿ ಹಾಗೂ ರಾಧಿಕಾ ಭಾರದ್ವಾಜ್ ಅವರುಗಳು ಪತ್ರಿಕೆಗೆ ಮಾರ್ಗದರ್ಶನ ಮಾಡುತ್ತಾರೆ. ನಾನು ಪತ್ರಿಕೆಯ ಜವಾಬ್ದಾರಿ ನಿರ್ವಹಿಸಿದರೂ, ಅದರ ಹಿಂದೆ ಈ ಎಲ್ಲರ ಸಹಕಾರ ಮತ್ತು ಪ್ರೀತಿಯೇ ಪೆನ್ಸಿಲ್ ಪತ್ರಿಕೆಯನ್ನು ಗಮನ ಸೆಳೆಯುವಂತೆ ಮಾಡಿದೆ. ಇದರಿಂದಾಗಿ ನಮ್ಮ ಜವಾಬ್ದಾರಿಯೂ ಹೆಚ್ಚಾಗಿದೆ’ ಎನ್ನುತ್ತಾರೆ.

ಇದೀಗ ಬೆಳಗುರ್ಕಿ ಶಾಲೆಯ ಮಕ್ಕಳು ಮಕ್ಕಳ ಗ್ರಾಮಸಭೆಗೆ ಹಾಜರಾಗಿ ಜಬರ್ದಸ್ತ್ ಪ್ರಶ್ನೆ ಮಾಡಿ ಗ್ರಾಮಪಂಚಾಯ್ತಿಯಿಂದ ಶಾಲೆಗೆ ಬರಬೇಕಾದ ಸೌಲಭ್ಯಗಳನ್ನು ಪಡೆದಿದ್ದಾರೆ. ಈಗಾಗಲೆ ಮಕ್ಕಳೆಲ್ಲಾ ಸೇರಿ ನಮ್ಮೂರಲ್ಲಿ ಸಾರಾಯಿ ಅಂಗಡಿಯನ್ನು ಏಕೆ ನಿಲ್ಲಿಸಬಾರದು? ನಾವು ನಮ್ಮ ಪತ್ರಿಕೆಗೆ ಈಗಿನ ಶಿಕ್ಷಣ ಮಂತ್ರಿಯನ್ನೇಕೆ ಸಂದರ್ಶನ ಮಾಡಬಾರದು ಎಂದೆಲ್ಲಾ ಯೋಚನೆ ಮಾಡಲು ಶುರು ಮಾಡಿದ್ದಾರೆ. ಹೀಗೆ ಸದ್ದಿಲ್ಲದಂತೆ ಪೆನ್ಸಿಲ್ ಪತ್ರಿಕೆ ಶಾಲಾಮಕ್ಕಳನ್ನು ಜಾಗೃತ ಪ್ರಜೆಗಳನ್ನಾಗಿ ರೂಪಿಸುವಲ್ಲಿ ಪ್ರೇರೇಪಿಸುತ್ತಿದೆ. ಕೊಟ್ರೇಶ್‍ನಂತಹ ಶಿಕ್ಷಕರೂ, ಪೆನ್ಸಿಲ್‍ನಂತಹ ಪತ್ರಿಕೆಗಳು ಎಲ್ಲಾ ಸರಕಾರಿ ಶಾಲೆಗಳಲ್ಲೂ ಜೀವ ತಳೆಯಬೇಕಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಕರೂರ್ ಕಾಲ್ತುಳಿತ : ಸಿಬಿಐ ಮುಂದೆ ವಿಚಾರಣೆಗೆ ಹಾಜರಾದ ನಟ ವಿಜಯ್

ಕರೂರ್ ಕಾಲ್ತುಳಿತ ಘಟನೆಗೆ ಸಂಬಂಧಪಟ್ಟಂತೆ ನಟ ಹಾಗೂ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮುಖ್ಯಸ್ಥ ವಿಜಯ್ ಸೋಮವಾರ (ಜ.12) ದೆಹಲಿಯ ಕೇಂದ್ರ ತನಿಖಾ ದಳ (ಸಿಬಿಐ) ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದಾರೆ. ಚಾರ್ಟರ್ಡ್ ವಿಮಾನದಲ್ಲಿ...

ಜೂನ್‌ ಅಂತ್ಯದೊಳಗೆ ಜಿಬಿಎ ವ್ಯಾಪ್ತಿಯ ಪಾಲಿಕೆಗಳಿಗೆ ಚುನಾವಣೆ : ಗಡುವು ವಿಧಿಸಿದ ಸುಪ್ರೀಂ ಕೋರ್ಟ್

ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ಜೂನ್ ಅಂತ್ಯದೊಳಗೆ ಚುನಾವಣೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೋಮವಾರ (ಜ.12) ನಿರ್ದೇಶನ ನೀಡಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಸುಪ್ರೀಂ ಕೋರ್ಟ್ ನಲ್ಲಿ ಮಮತಾ ವಿರುದ್ಧ ಎಫ್‌ಐಆರ್ ದಾಖಲಿಸಲು ನಿರ್ದೇಶನ ಕೋರಿ ಅರ್ಜಿ ಸಲ್ಲಿಸಿದ ಇಡಿ

ನವದೆಹಲಿ: ಐ-ಪಿಎಸಿ ವಿರುದ್ಧದ ಬಹು-ರಾಜ್ಯ ಹಣ ವರ್ಗಾವಣೆ ಪ್ರಕರಣದಲ್ಲಿ ತನಿಖೆಗೆ ಅಡ್ಡಿಪಡಿಸಿದ, ಸಾಕ್ಷ್ಯಗಳನ್ನು ತಿರುಚಿದ ಮತ್ತು ನಾಶಪಡಿಸಿದ ಆರೋಪದ ಮೇಲೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಡಿಜಿಪಿ ಮತ್ತು ಕೋಲ್ಕತ್ತಾ ಪೊಲೀಸ್...

ಭಾರತಕ್ಕಿಂತ ಯಾವುದೇ ಪಾಲುದಾರ ದೇಶ ಮುಖ್ಯವಲ್ಲ, ವ್ಯಾಪಾರ ಮಾತುಕತೆ ಪುನರಾರಂಭ: ಅಮೆರಿಕ ರಾಯಭಾರಿ ಸೆರ್ಗಿಯೊ ಗೋರ್

"ವಾಷಿಂಗ್ಟನ್‌ಗೆ ಭಾರತಕ್ಕಿಂತ ಅಗತ್ಯವಾದ ದೇಶ ಇನ್ನೊಂದಿಲ್ಲ ಮತ್ತು ಎರಡೂ ಕಡೆಯವರು ವ್ಯಾಪಾರ ಒಪ್ಪಂದವನ್ನು ದೃಢೀಕರಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ" ಎಂದು ಅಮೆರಿಕದ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್ ಸೋಮವಾರ ಹೇಳಿದ್ದಾರೆ. ಅಮೆರಿಕ ರಾಯಭಾರ ಕಚೇರಿಯ ನೌಕರರು...

ಬಿಷಪ್ ಫ್ರಾಂಕೊ ಮುಲಕ್ಕಲ್ ಅತ್ಯಾಚಾರ ಪ್ರಕರಣ : ಒಂಬತ್ತು ವರ್ಷಗಳ ಬಳಿಕ ಮೌನ ಮುರಿದ ಸಂತ್ರಸ್ತೆ, ಕಾನೂನು ಹೋರಾಟ ಮುಂದುವರಿಸುವುದಾಗಿ ಹೇಳಿಕೆ

ಬಿಷಪ್ ಫ್ರಾಂಕೊ ಮುಲಕ್ಕಲ್ ವಿರುದ್ದದ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಕ್ರೈಸ್ತ ಸನ್ಯಾಸಿನಿ ಒಂಬತ್ತು ವರ್ಷಗಳ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾತನಾಡಿದ್ದು, ಫ್ರಾಂಕೊ ಮುಲಕ್ಕಲ್ ಅವರನ್ನು ನ್ಯಾಯಾಲಯ ಖುಲಾಸೆಗೊಳಿಸಿದ್ದಕ್ಕೆ ನಾನು ದಂಗಾಗಿದ್ದೇನೆ. ನ್ಯಾಯಕ್ಕಾಗಿ...

‘ವೆನೆಜುವೆಲಾದ ಹಂಗಾಮಿ ಅಧ್ಯಕ್ಷ’ ಎಂದು ಘೋಷಿಸಿಕೊಂಡ ಡೊನಾಲ್ಡ್ ಟ್ರಂಪ್ 

ಸೋಮವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ರುತ್ ಸೋಶಿಯಲ್‌ನಲ್ಲಿ ತಮ್ಮದೇ ಆದ ವಿಕಿಪೀಡಿಯಾ ಪುಟದ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ, ಅದರಲ್ಲಿ "ವೆನೆಜುವೆಲಾದ ಹಂಗಾಮಿ ಅಧ್ಯಕ್ಷ" ಎಂಬ ಹುದ್ದೆಯನ್ನು ಹೊಂದಿರುವ ಅವರ ಚಿತ್ರವಿದೆ. ಪೋಸ್ಟ್‌ನಲ್ಲಿ ಟ್ರಂಪ್...

ಪೊಲೀಸ್ ತುರ್ತು ವಾಹನದ ಚಾಲಕ ಸೇರಿ ಐವರಿಂದ ಯುವತಿ ಮೇಲೆ ಅತ್ಯಾಚಾರ!

ಪೊಲೀಸ್ ತುರ್ತು ಸೇವೆ (112) ವಾಹನದ ಚಾಲಕ ಸೇರಿದಂತೆ ಐವರು ಪುರುಷರು 19 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಛತ್ತೀಸ್‌ಗಢದ ಕೋರ್ಬಾ ಜಿಲ್ಲೆಯ ಬಂಕಿಮೊಂಗ್ರ ಪ್ರದೇಶದಲ್ಲಿ ನಡೆದಿದೆ. ಜನವರಿ...

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...

ದಾಳಿ ನಡೆಸಿದರೆ ನಮ್ಮ ನೇರ ಗುರಿಯಾಗುತ್ತೀರಿ : ಅಮೆರಿಕ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಇರಾನ್

ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ತಿರುಗೇಟು ನೀಡಿದೆ. ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ "ಅಮೆರಿಕ ಇರಾನ್ ಮೇಲೆ...