ಗೋಹತ್ಯೆ ಮಾಡಿದ್ದಾನೆ ಎಂಬ ಆರೋಪದ ಮೇಲೆ 35 ವರ್ಷದ ದಲಿತ ವ್ಯಕ್ತಿಯನ್ನು ಥಳಿಸಿ ಕೊಂದಿರುವ ಘಟನೆ ಒಡಿಶಾದ ದಿಯೋಗಢ ಜಿಲ್ಲೆಯಲ್ಲಿ ನಡೆದಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ರಿಯಾಮಲ್ ಪೊಲೀಸ್ ಠಾಣೆ ವ್ಯಾಪ್ತಿಯ ಕುಂಡೇಜುರಿ ಗ್ರಾಮದಲ್ಲಿ ಬುಧವಾರ ಈ ಘಟನೆ ನಡೆದಿದೆ. ಹತ್ಯೆಗೆ ಸಂಬಂಧಿಸಿದಂತೆ ಆರು ಜನರನ್ನು ಬಂಧಿಸಲಾಗಿದೆ.
ಕೌನ್ಸಿಧಿಪ ಗ್ರಾಮದ ಕಿಶೋರ್ ಚಮರ್ ಎಂದು ಗುರುತಿಸಲಾದ ಬಲಿಪಶು ದನಗಳ ಚರ್ಮ ಸುಲಿಯುವ ಕೆಲಸ ಮಾಡುತ್ತಿದ್ದ. ಹಲ್ಲೆಗೊಳಗಾದ ಅವರ ಸಹೋದ್ಯೋಗಿ ಗೌತಮ್ ನಾಯಕ್ ಅವರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು ಎಂದು ದಿಯೋಗಢ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ ಎಂದು ‘ಸ್ಕ್ರಾಲ್.ಇನ್’ ವರದಿ ಮಾಡಿದೆ.
ಚಮರ್ ಮತ್ತು ನಾಯಕ್ ಹಸುವನ್ನು ಕತ್ತರಿಸುತ್ತಿದ್ದಾಗ ಗುಂಪು ಹಿಡಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹಸು ಸ್ವಾಭಾವಿಕವಾಗಿ ಸತ್ತು ಅದರ ಚರ್ಮ ಸುಲಿಯುತ್ತಿದ್ದರಷ್ಟೇ ಎಂದು ಇಬ್ಬರೂ ವಿವರಿಸಿದರೂ, ಅವರ ಮೇಲೆ ಹಸು ಕೊಂದ ಆರೋಪ ಹೊರಿಸಲಾಗಿದೆ ಎನ್ನಲಾಗಿದೆ.
ಎರಡು ತಿಂಗಳ ಹಿಂದೆ ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ನಡೆದ ಇದೇ ರೀತಿಯ ಪ್ರಕರಣದಲ್ಲಿ ಬಾಬುಲಾ ನಾಯಕ್ (54) ಮತ್ತು ಬುಲು ನಾಯಕ್ (42) ಎಂಬ ಇಬ್ಬರು ದಲಿತರ ಮೇಲೆ ದನಗಳನ್ನು ಕಳ್ಳಸಾಗಣೆ ಮಾಡುತ್ತಿದ್ದಾರೆಂದು ಆರೋಪಿಸಿ ಗುಂಪೊಂದು ಹಲ್ಲೆ ನಡೆಸಿ ಅವಮಾನಿಸಿದೆ.
ದಾಳಿಕೋರರು ₹30,000 ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ವರದಿಯಾಗಿದೆ. ಅದನ್ನು ನಿರಾಕರಿಸಿದಾಗ ಮನಬಂದಂತೆ ಥಳಿಸಿ, ತೆವಳುವಂತೆ ಒತ್ತಾಯಿಸಲಾಯಿತು, ಹುಲ್ಲು ತಿನ್ನುವಂತೆ ಒತ್ತಡ ಹೇರಿದರು ಎನ್ನಲಾಗಿದೆ.
ಎಸ್‌ಸಿ-ಎಸ್‌ಟಿ ಜಾತಿ ನಿಂದನೆ ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ನೀಡಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್


