Homeಅಂತರಾಷ್ಟ್ರೀಯನೆರವು ಹೊತ್ತು ಗಾಝಾ ತೀರ ಸಮೀಪಿಸುತ್ತಿರುವ 'ಸುಮುದ್ ಫ್ಲೋಟಿಲ್ಲಾ' ತಂಡ: ಇಸ್ರೇಲ್ ದಿಗ್ಬಂಧನ ಮುರಿಯುವ ಶಪಥ

ನೆರವು ಹೊತ್ತು ಗಾಝಾ ತೀರ ಸಮೀಪಿಸುತ್ತಿರುವ ‘ಸುಮುದ್ ಫ್ಲೋಟಿಲ್ಲಾ’ ತಂಡ: ಇಸ್ರೇಲ್ ದಿಗ್ಬಂಧನ ಮುರಿಯುವ ಶಪಥ

- Advertisement -
- Advertisement -

ಯುದ್ಧ ಪೀಡಿತ ಗಾಝಾದ ಜನತೆಗೆ ಮಾನವೀಯ ನೆರವು ಹೊತ್ತು, ಇಸ್ರೇಲ್‌ನ ನೌಕಾ ದಿಗ್ಬಂಧನ ಮುರಿಯಲು ಹೊರಟಿರುವ ಜಾಗತಿಕ ‘ಸುಮುದ್ ಫ್ಲೊಟಿಲ್ಲಾ’ ನೆರವು ಹಡಗುಗಳ ಗುಂಪು ತನ್ನ ಪ್ರಯಾಣದ ಅಂತಿಮ ಹಂತಕ್ಕೆ ತಲುಪಿದೆ ಎಂದು ಸೋಮವಾರ (ಸೆ.29) ವರದಿಯಾಗಿದೆ.

ಜಾಗತಿಕ ಸುಮುದ್ ಫ್ಲೊಟಿಲ್ಲಾ ಎನ್ನುವುದು ಇಸ್ರೇಲ್‌ ಗಾಝಾ ಮೇಲೆ ವಿಧಿಸಿರುವ ನಾಕಾಬಂದಿಯನ್ನು ಭೇದಿಸುವ ಗುರಿಯನ್ನು ಹೊಂದಿರುವ ಒಂದು ಪ್ರಮುಖ ಅಂತಾರಾಷ್ಟ್ರೀಯ ಮಿಷನ್ ಆಗಿದೆ. ಈ ಫ್ಲೊಟಿಲ್ಲಾದಲ್ಲಿ 44 ಹಡಗುಗಳು ಇದ್ದು, ಇವು ಮಾನವೀಯ ನೆರವುಗಳಾದ ಆಹಾರ, ಔಷಧ ಮತ್ತು ಇತರ ಅಗತ್ಯ ವಸ್ತುಗಳನ್ನು ಒಯ್ಯುತ್ತಿವೆ. ಜೊತೆಗೆ, ವಿಶ್ವದ ವಿವಿಧ ಭಾಗಗಳ ನೂರಾರು ಪ್ರತಿನಿಧಿಗಳು ಈ ಮಿಷನ್‌ನ ಭಾಗವಾಗಿದ್ದಾರೆ.

ಸುಮುದ್ ಫ್ಲೊಟಿಲ್ಲಾದ ಹಡಗುಗಳು ಪ್ರಸ್ತುತ ಗಾಝಾದಿಂದ ಸುಮಾರು 366 ನಾಟಿಕಲ್ ಮೈಲಿಗಳಷ್ಟು ದೂರದಲ್ಲಿವೆ. ಆಯೋಜಕರು ಹೇಳುವಂತೆ, ಈ 44 ಹಡಗುಗಳ ಗುಂಪು ಮುಂದಿನ ನಾಲ್ಕು ದಿನಗಳಲ್ಲಿ ಗಾಝಾ ಸಮುದ್ರ ತೀರ ತಲುಪಲಿದೆ. ಅದಕ್ಕೂ ಮುನ್ನ ಜಲ ಪ್ರದೇಶದ ‘ಕಿತ್ತಳೆ ವಲಯ’ (ಆರೆಂಜ್ ಝೋನ್‌) ಪ್ರವೇಶಿಸಲಿದೆ. ಅಲ್ಲಿ ಇಸ್ರೇಲ್‌ನ ನೌಕಾಪಡೆ ಈ ಹಡಗುಗಳನ್ನು ತಡೆಯುವ ಸಾಧ್ಯತೆ ಇದೆ.

44 ಹಡಗುಗಳ ಗುಂಪಿನ ಭಾಗವಾದ ಜಾನಿ ಎಂ. ಎಂಬ ಹಡಗಿನ ಇಂಜಿನ್ ಕೋಣೆಯಲ್ಲಿ ಸೋಮವಾರ (ಸೆ.29) ಸೋರಿಕೆ ಕಂಡು ಬಂದಿದ್ದು, ಆ ಬಳಿಕ ಅದರ ಪ್ರಯಾಣ ಸ್ಥಗಿತಗೊಳಿಸಲಾಗಿದೆ.

ಆ ಹಡಗಿನಲ್ಲಿದ್ದ ಎಲ್ಲರನ್ನೂ ರಕ್ಷಣೆ ಮಾಡಲಾಗಿದೆ. ಈ ಪೈಕಿ ಕೆಲವರನ್ನು ಬೇರೆ ಹಡಗುಗಳಿಗೆ ಹತ್ತಿಸಲಾಗಿದೆ. ಇನ್ನೂ ಕೆಲವರಿಗೆ ಬೇರೆ ಹಡಗಿನ ವ್ಯವಸ್ಥೆ ಮಾಡಲಾಗಿದೆ. ಉಳಿದವರನ್ನು ತೀರಕ್ಕೆ ಕರೆತರಲಾಗಿದೆ.

ಮುಂದಿನ ನಾಲ್ಕು ದಿನಗಳಲ್ಲಿ ಗಾಝಾ ತಲುಪುವ ಗುರಿಗೆ ಇದರಿಂದ ಅಡ್ಡಿಯೇನು ಇಲ್ಲ ಎಂದು ಸಮುದ್ ತಂಡ ಸಾಮಾಜಿಕ ಜಾಲತಾಣಗಳ ಮೂಲಕ ಹೇಳಿದೆ.

46 ದೇಶಗಳ ಪ್ರತಿನಿಧಿಗಳು ಈ ಸುಮುದ್ ಫ್ಲೊಟಿಲ್ಲಾ ತಂಡದಲ್ಲಿ ಇದ್ದಾರೆ. ಇದು ಕಳೆದ 18 ವರ್ಷಗಳಿಂದ ಗಾಝಾದ ಮೇಲೆ ವಿಧಿಸಿರುವ ನಾಕಾಬಂದಿಯನ್ನು ಬೇಧಿಸುವ ಇದುವರೆಗಿನ ಅತಿದೊಡ್ಡ ಸಮುದ್ರ ಆಧಾರಿತ ಪ್ರಯತ್ನವಾಗಿದೆ. ಈ 44 ಹಡಗುಗಳ ಗುಂಪು 500ಕ್ಕೂ ಹೆಚ್ಚು ಜನರನ್ನು ಹೊತ್ತೊಯ್ಯತ್ತಿದೆ. ಇವರಲ್ಲಿ ವೈದ್ಯರು, ವಿವಿಧ ದೇಶಗಳ ಸಂಸದರು, ಮಾನವ ಹಕ್ಕುಗಳ ಹೋರಾಟಗಾರರು ಮತ್ತು ಸ್ವೀಡನ್‌ನ ಹವಾಮಾನ ಕಾರ್ಯಕರ್ತೆ ಗ್ರೇಟಾ ಥನ್‌ಬರ್ಗ್‌ರಂತಹ ಪ್ರಸಿದ್ಧ ಚಳವಳಿಗಾರರು ಇದ್ದಾರೆ.

ಈ ವರ್ಷದ ಆರಂಭದಲ್ಲಿ ಇಸ್ರೇಲಿ ಪಡೆಗಳು ಮದ್ಲೀನ್ ಹಡಗನ್ನು ತಡೆದ ಅದೇ ಜಲ ಪ್ರದೇಶವನ್ನು ಫ್ಲೋಟಿಲ್ಲಾ ಸಮೀಪಿಸುತ್ತಿದೆ ಎಂದು ಜರ್ಮನ್ ಹೋರಾಟಗಾರ್ತಿ ಯಾಸ್ಮಿನ್ ಅಕಾರ್ ದೃಢಪಡಿಸಿದ್ದಾರೆ.

“ನಾವು ಕೇವಲ ಮಾನವೀಯ ನೆರವು ನೀಡುತ್ತಿಲ್ಲ, ಗಾಝಾ ಜನತೆಯಲ್ಲಿ ಭರವಸೆ ಮೂಡಿಸುತ್ತಿದ್ದೇವೆ. ಅವರೊಂದಿಗೆ ಒಗ್ಗಟ್ಟು ಪ್ರದರ್ಶಿಸುತ್ತಿದ್ದೇವೆ. ಜಗತ್ತು ಪ್ಯಾಲೆಸ್ತೀನ್‌ನೊಂದಿಗೆ ಇದೆ ಎಂಬ ಬಲವಾದ ಸಂದೇಶವನ್ನು ಕಳುಹಿಸುತ್ತಿದ್ದೇವೆ” ಎಂದು ಗ್ರೀಸ್‌ನ ದ್ವೀಪ ಕ್ರೀಟ್ ಬಳಿ ಗ್ರೇಟಾ ಥನ್‌ಬರ್ಗ್ ಹೇಳಿದ್ದಾರೆ.

ಸುಮುದ್ ಫ್ಲೊಟಿಲ್ಲಾದ ಹಡಗುಗಳು ಗಾಝಾಕ್ಕೆ ಹತ್ತಿರವಾಗುತ್ತಿವೆ. ಪ್ರತಿ ನಿಮಿಷವೂ ಅವು ಗಾಝಾದ ಜನರಿಗೆ ನ್ಯಾಯ ತಲುಪಿಸಲು ಮುಂದುವರಿಯುತ್ತಿವೆ ಎಂದು ಆಯೋಜಕರು ಹೇಳಿದ್ದಾರೆ. ಅವರ ವೆಬ್‌ಸೈಟ್‌ನಲ್ಲಿ ಒಂದು ಟ್ರ್ಯಾಕರ್ ಇದೆ, ಅದು ಈ ಹಡಗುಗಳು ಮೆಡಿಟರೇನಿಯನ್ ಸಮುದ್ರದಲ್ಲಿ ಮುಂದುವರಿಯುವುದನ್ನು ತೋರಿಸುತ್ತಿದೆ. ಇಡೀ ಜಗತ್ತಿನ ಗಮನ ಈಗ ಸುಮುದ್ ತಂಡ ಮೇಲಿದೆ.

ಸೆಪ್ಟೆಂಬರ್ 26 ಶುಕ್ರವಾರ ಸುಮುದ್ ತಂಡದಿಂದ ಮಾತನಾಡಿದ್ದ ಗ್ರೇಟಾ ಥನ್‌ಬರ್ಗ್, “ನಾನು ಇಸ್ರೇಲ್‌ಗೆ ಹೆದರುವುದಿಲ್ಲ, ಮಾನವೀಯತೆಯ ಎಲ್ಲಾ ಪ್ರಜ್ಞೆಯನ್ನು ಕಳೆದುಕೊಂಡಿರುವ ಜಗತ್ತಿಗೆ ಹೆದರುತ್ತೇನೆ” ಎಂದು ಹೇಳಿದ್ದರು.

ಫ್ಲೋಟಿಲ್ಲಾದ ಸಂಚಾರವು ಅಂತಾರಾಷ್ಟ್ರೀಯ ಗಮನ ಸೆಳೆದಿದೆ ಮತ್ತು ಪ್ರಾದೇಶಿಕ ಉದ್ವಿಗ್ನತೆಯನ್ನು ಹೆಚ್ಚಿಸಿದೆ. ಓಪನ್ ಸೋರ್ಸ್ ಟ್ರ್ಯಾಕಿಂಗ್ ಪ್ರಕಾರ, ಟರ್ಕಿಯು ಹಡಗುಗಳ ಮೇಲ್ವಿಚಾರಣೆ ಮಾಡಲು ಮತ್ತು ರಕ್ಷಿಸಲು ಡ್ರೋನ್‌ಗಳು ಮತ್ತು ಫ್ರಿಗೇಟ್ ಅನ್ನು ನಿಯೋಜಿಸಿದೆ.

ಇಟಲಿ ಮತ್ತು ಸ್ಪೇನ್ ಸಂಭಾವ್ಯ ರಕ್ಷಣೆ ಮತ್ತು ಮಾನವೀಯ ನೆರವಿಗಾಗಿ ನೌಕಾ ಹಡಗುಗಳನ್ನು ಸನ್ನದ್ಧವಾಗಿ ಇರಿಸಿವೆ.

ಈ ತಿಂಗಳ ಆರಂಭದಲ್ಲಿ, ಫ್ಲೋಟಿಲ್ಲಾದ ಎರಡು ಹಡಗುಗಳನ್ನು ಡ್ರೋನ್‌ಗಳು ಗುರಿಯಾಗಿಸಿಕೊಂಡಿದ್ದವು ಎಂದು ವರದಿಯಾಗಿದೆ. ಈ ದಾಳಿಗಳಿಂದ ಉಂಟಾದ ವಿಳಂಬ ಮತ್ತು ಹವಾಮಾನ ವೈಪರೀತ್ಯಗಳ ಹೊರತಾಗಿಯೂ, ನಾವು ಗಾಝಾ ತಲುಪಿಯೇ ತೀರುತ್ತೇವೆ ಎಂದು ಸುಮುದ್ ತಂಡ ಶಪಥ ಮಾಡಿದೆ.

ಇಸ್ರೇಲಿ ಮಾಧ್ಯಮಗಳ ಪ್ರಕಾರ, ಇಸ್ರೇಲ್‌ನ ನೌಕಾಪಡೆಯ ಗುಂಪಾದ ಶಯೆತೆತ್ 13 ತಂಡವು ಈ ಹಡಗುಗಳನ್ನು ವಶಪಡಿಸಿಕೊಳ್ಳಲು ತಯಾರಿ ನಡೆಸುತ್ತಿದೆ ಮತ್ತು ಈಗಾಗಲೇ ತರಬೇತಿ ಅಭ್ಯಾಸಗಳನ್ನು ಮಾಡುತ್ತಿದೆ. ಅಧಿಕಾರಿಗಳು ಹೇಳುವಂತೆ, ಈ ಹಡಗುಗಳು ಗಾಝಾ ತೀರಕ್ಕೆ ತಲುಪದಂತೆ ತಡೆಯುವುದು ಇಸ್ರೇಲ್ ಗುರಿಯಾಗಿದೆ. ಆದರೆ, ಈ ಸಂದರ್ಭದಲ್ಲಿ ಫ್ಲೊಟಿಲ್ಲಾದ ಭಾಗವಾದವರಿಗೆ ಯಾವುದೇ ಹಾನಿಯಾಗದಂತೆ ಎಚ್ಚರಿಕೆ ವಹಿಸಲು ಇಸ್ರೇಲ್ ಯೋಜಿಸಿದೆ.

‘ಭಾರತೀಯ ಇಲಿಗಳು..’ ಎಂದು ಕೆನಡಾದಲ್ಲಿ ದ್ವೇಷಪೂರಿತ ಗೋಡೆ ಬರಹ: ಖಂಡನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಛತ್ತೀಸ್‌ಗಢ| ಕ್ರಿಶ್ಚಿಯನ್ ಯುವಕನ ಮೇಲೆ ಹಿಂದುತ್ವವಾದಿ ಗುಂಪಿನಿಂದ ಹಲ್ಲೆ; ‘ಜೈ ಶ್ರೀ ರಾಮ್’ ಕೂಗುವಂತೆ ಒತ್ತಾಯ

ಛತ್ತೀಸ್‌ಗಢದ ಜಂಜ್‌ಗೀರ್-ಚಂಪಾ ಜಿಲ್ಲೆಯಲ್ಲಿ ಕ್ರಿಶ್ಚಿಯನ್ ಯುವಕನ ಮೇಲೆ ಹಿಂದುತ್ವವಾದಿಗಳ ಗುಂಪೊಂದು ಹಲ್ಲೆ ನಡೆಸಿ, ಜೈಶ್ರೀರಾಮ್ ಎಂದು ಘೋಷಣೆಗಳನ್ನು ಕೂಗುವಂತೆ ಒತ್ತಾಯಿಸಿದೆ ಎಂಬ ಆರೋಪ ಕೇಳಿಬಂದಿದೆ. ಇಂದು (ಮಾ.18) ನಡೆದಿದೆ ಎನ್ನಲಾದ ಈ ಘಟನೆಯ...

ಯುಪಿಎಸ್‌ಸಿ 440 ನೇ ರ‍್ಯಾಂಕ್ ಎಂದು ಸುಳ್ಳು ಹೇಳಿ ಸಂಭ್ರಮಾಚರಣೆ ಮಾಡಿದ್ದ ಬಿಹಾರದ ಯುವಕನ ಬಂಧನ

ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಾಗರಿಕ ಸೇವಾ ಪರೀಕ್ಷೆ (ಸಿಎಸ್‌ಇ) 2025 ರಲ್ಲಿ ಅಖಿಲ ಭಾರತ ರ‍್ಯಾಂಕ್ (ಎಐಆರ್) 440 ಗಳಿಸಿದ್ದೇನೆ ಎಂದು ಸುಳ್ಳು ಹೇಳಿಕೊಂಡ ಕೆಲವು ದಿನಗಳ ನಂತರ, ಬಿಹಾರದ ಶೇಖ್‌ಪುರ...

‘ಜೈ ಬಾಂಗ್ಲಾ’ ಘೋಷಣೆ ಕೂಗಿದ ಆರೋಪ: ಮಹಿಳೆಗೆ ಜಾಮೀನು ನೀಡಿದ ಹೈಕೋರ್ಟ್

ಬೆಂಗಳೂರಿನ ಹೆಬ್ಬಗೂಡಿಯಲ್ಲಿ ಅಕ್ರಮ ಎನ್ನಲಾದ ಶೆಡ್‌ಗಳ ತೆರವು ಕಾರ್ಯಾಚರಣೆ ವೇಳೆ 'ಜೈ ಬಾಂಗ್ಲಾ' ಘೋಷಣೆ ಕೂಗಿದ ಆರೋಪದ ಮೇಲೆ ಬಂಧಿತರಾದ ಪಶ್ಚಿಮ ಬಂಗಾಳದ ಮಹಿಳೆಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ನ್ಯಾಯಮೂರ್ತಿ ಎಸ್.ರಾಚಯ್ಯ...

ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಡಿಜೆ, ಐಟಂ ಹಾಡು ನಿಷೇಧಿಸಲು ಕರ್ನಾಟಕ ಯೋಜನೆ; ವಿಧಾನಸಭೆಯಲ್ಲಿ ಸಂತೋಷ್ ಲಾಡ್ ಪ್ರಸ್ತಾಪ

ಬೆಂಗಳೂರು: ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಧಾರ್ಮಿಕ ಮೆರವಣಿಗೆಗಳಲ್ಲಿ ಅಬ್ಬರದ ಸಂಗೀತ ಮತ್ತು "ಐಟಂ ಹಾಡುಗಳನ್ನು" ನುಡಿಸುವ ಡಿಸ್ಕ್ ಜಾಕಿಗಳನ್ನು (ಡಿಜೆ) ನಿಷೇಧಿಸುವ ಪರವಾಗಿ ಕರ್ನಾಟಕ ಸರ್ಕಾರವಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ...

ದೆಹಲಿಯ ಪಾಲಂನಲ್ಲಿರುವ ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಅವಘಡ: ಮೂವರು ಮಕ್ಕಳು ಸೇರಿ ಏಳು ಮಂದಿ ಸಾವು

ರಾಷ್ಟ್ರ ರಾಜಧಾನಿಯ ಪಾಲಂ ಪ್ರದೇಶದ ವಸತಿ ಕಟ್ಟಡದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡು ಮೂವರು ಮಕ್ಕಳು ಸೇರಿದಂತೆ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ ಎಂದು ದೆಹಲಿ ಪೊಲೀಸರು ಬುಧವಾರ ತಿಳಿಸಿದ್ದಾರೆ. ಘಟನೆಯ ಮಾಹಿತಿ ತಿಳಿದ ತಕ್ಷಣ...

ವಾರಣಾಸಿ: ಗಂಗಾ ನದಿಯ ದೋಣಿಯಲ್ಲಿ ‘ಇಫ್ತಾರ್’ ಕೂಟ ಆಯೋಜಿಸಿದ್ದಕ್ಕಾಗಿ 14 ಜನರ ಬಂಧನ 

ವಾರಣಾಸಿಯಲ್ಲಿ ಗಂಗಾ ನದಿಯ ಮಧ್ಯದಲ್ಲಿ ದೋಣಿಯಲ್ಲಿ 'ಇಫ್ತಾರ್' (ರಂಜಾನ್ ಸಮಯದಲ್ಲಿ ಸೂರ್ಯಾಸ್ತದ ನಂತರ ತಿನ್ನುವ ಊಟ) ಕೂಟವನ್ನು ಆಯೋಜಿಸಿದ್ದಕ್ಕಾಗಿ ಹದಿನಾಲ್ಕು ಮುಸ್ಲಿಂ ಯುವಕರನ್ನು ಬಂಧಿಸಲಾಗಿದೆ.  ದೈನಂದಿನ ಮುಸ್ಲಿಂ ಜೀವನವನ್ನು ಅಪರಾಧೀಕರಿಸುವ ಮತ್ತೊಂದು ಪ್ರಕರಣ ಇದಾಗಿದ್ದು,...

ಚುನಾವಣೆ ಹೊಸ್ತಿಲಲ್ಲಿ ಅಸ್ಸಾಂ ಕಾಂಗ್ರೆಸ್‌ನ ಇಬ್ಬರು ಪ್ರಮುಖ ನಾಯಕರು ರಾಜೀನಾಮೆ

ಚುನಾವಣೆ ಹೊಸ್ತಿಲಲ್ಲಿ ಅಸ್ಸಾಂ ಕಾಂಗ್ರೆಸ್‌ನ ಇಬ್ಬರು ಪ್ರಮುಖ ನಾಯಕರು ತಮ್ಮ ಸ್ಥಾನಗಳಿಗೆ ಮಂಗಳವಾರ (ಮಾ.17) ರಾಜೀನಾಮೆ ಸಲ್ಲಿಸಿದ್ದಾರೆ. ಪಕ್ಷದ ಹಿರಿಯ ನಾಯಕ ಹಾಗೂ ನೌಗಾಂಗ್ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಪ್ರದ್ಯುತ್ ಬೋರ್ಡೊಲೊಯ್...

ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ : ಮೂವರು ಶಾಸಕರನ್ನು ಅಮಾನತುಗೊಳಿಸಿದ ಒಡಿಶಾ ಕಾಂಗ್ರೆಸ್

ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದಕ್ಕಾಗಿ ಒಡಿಶಾ ಕಾಂಗ್ರೆಸ್ ಮೂವರು ಶಾಸಕರಾದ ಸೋಫಿಯಾ ಫಿರ್ದೌಸ್, ರಮೇಶ್ ಜೆನಾ ಮತ್ತು ದಾಸರಥಿ ಗೊಮಾಂಗೊ ಅವರನ್ನು ಅಮಾನತುಗೊಳಿಸಿದೆ. ಒಡಿಶಾ ವಿಧಾನಸಭೆಯಲ್ಲಿ ಕಾಂಗ್ರೆಸ್ 14 ಶಾಸಕರನ್ನು ಹೊಂದಿದ್ದು, ನಾಲ್ಕನೇ...

ಅಮೆರಿಕ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ದಳದ ನಿರ್ದೇಶಕ ಜೋ ಕೆಂಟ್‌ ರಾಜೀನಾಮೆ

ಅಮೆರಿಕದ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರದ (ಎನ್‌ಸಿಟಿಸಿ) ನಿರ್ದೇಶಕ ಜೋ ಕೆಂಟ್ ಅವರು ಇರಾನ್ ಜೊತೆಗಿನ ಯುದ್ಧಕ್ಕೆ ವಿರೋಧ ವ್ಯಕ್ತಪಡಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. "ಇರಾನ್‌ನಿಂದ ಅಮೆರಿಕಕ್ಕೆ ಯಾವುದೇ ತಕ್ಷಣದ ಅಪಾಯವಿರಲಿಲ್ಲ. ಇಸ್ರೇಲ್‌ನ ಒತ್ತಡದಿಂದಾಗಿ...

ಪಶ್ಚಿಮ ಏಷ್ಯಾ ಸಂಘರ್ಷ: ಇರಾನ್ ಭದ್ರತಾ ಮುಖ್ಯಸ್ಥ ಅಲಿ ಲಾರಿಜಾನಿ ಹತ್ಯೆ ಮಾಡಿರುವುದಾಗಿ ಹೇಳಿಕೊಂಡ ಇಸ್ರೇಲ್ 

ಇರಾನ್‌ನ ಭದ್ರತಾ ಮುಖ್ಯಸ್ಥ ಅಲಿ ಲಾರಿಜಾನಿ ವೈಮಾನಿಕ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ರಕ್ಷಣಾ ಸಚಿವ ಕಾಟ್ಜ್ ಮಂಗಳವಾರ ಹೇಳಿದ್ದಾರೆ. ಆದರೆ ಟೆಹ್ರಾನ್‌ನಿಂದ ಯಾವುದೇ ಅಧಿಕೃತ ದೃಢೀಕರಣವಿಲ್ಲ. ಕಾಟ್ಜ್ ಪ್ರಕಾರ, ಜನರಲ್ ಘೋಲಮ್...