ಹಂಗೇರಿಯ ಪ್ರಸಿದ್ಧ ಕಾದಂಬರಿಕಾರ ಲಾಸ್ಲೊ ಕ್ರಾಸ್ನಾಹೊರ್ಕಾಯ್ ತಮ್ಮ ತಾತ್ವಿಕ, ದು:ಖಮಯ ಹಾಸ್ಯ ಮತ್ತು ವಿಶಿಷ್ಟ ಶೈಲಿಯ ಕೃತಿಗಳಿಗಾಗಿ 2025ರ ಸಾಹಿತ್ಯದ ನೊಬೆಲ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.
ಸ್ಟಾಕ್‌ಹೋಮ್‌ನಲ್ಲಿ ಗುರುವಾರ (ಅ.9) ಪ್ರಶಸ್ತಿ ಘೋಷಣೆಯಾಗಿದ್ದು, ಕ್ರಾಸ್ನಾಹೊರ್ಕಾಯ್ ಅವರ ‘ಪ್ರೇರಕ ಮತ್ತು ದೂರದೃಷ್ಟಿಯ ಕೃತಿಗಳಿಗಾಗಿ (compelling and visionary oeuvre)ಈ ಗೌರವವನ್ನು ನೀಡಲಾಗಿದೆ ಎಂದು ಸ್ವೀಡಿಷ್ ಅಕಾಡೆಮಿ ತಿಳಿಸಿದೆ.
ಕ್ರಾಸ್ನಾಹೊರ್ಕಾಯ್ ಅವರ “Herscht 07769” ಕಾದಂಬರಿಗೆ ಸಾಹಿತ್ಯ ನೊಬೆಲ್ ಪ್ರಶಸ್ತಿ ನೀಡಲಾಗಿದೆ ಎಂದು ವರದಿಯಾಗಿದೆ.
BREAKING NEWS
The 2025 #NobelPrize in Literature is awarded to the Hungarian author László Krasznahorkai “for his compelling and visionary oeuvre that, in the midst of apocalyptic terror, reaffirms the power of art.” pic.twitter.com/vVaW1zkWPS— The Nobel Prize (@NobelPrize) October 9, 2025
1954 ಜನವರಿ 5 ರಂದು ಹಂಗೇರಿಯ ಜಿಯುಲಾದಲ್ಲಿ ಜನಿಸಿದ ಕ್ರಾಸ್ನಾಹೊರ್ಕಾಯ್ ಅವರ ಕಾದಂಬರಿಗಳು ಒಂದೇ ಉದ್ದನೆಯ, ಸಂಕೀರ್ಣವಾದ ವಾಕ್ಯಗಳಲ್ಲಿ ರಚಿತವಾಗಿರುತ್ತವೆ. ಇದು ಅವರನ್ನು ವಿಶಿಷ್ಟ ಬರಹಗಾರನನ್ನಾಗಿ ಮಾಡಿದೆ. ಅವರ ಕೃತಿಗಳು ತಾತ್ವಿಕ ಚಿಂತನೆ, ದು:ಖದ ಹಾಸ್ಯ, ಮತ್ತು ಮಾನವ ಸ್ಥಿತಿಯ ಆಳವಾದ ಚಿತ್ರಣವನ್ನು ಒಳಗೊಂಡಿರುತ್ತವೆ.
ಕ್ರಾಸ್ನಾಹೊರ್ಕಾಯ್ ಅವರ ಕೃತಿಗಳು ಜಾಗತಿಕ ಸಾಹಿತ್ಯದಲ್ಲಿ ಮಹತ್ವದ ಸ್ಥಾನವನ್ನು ಹೊಂದಿವೆ. ಅವರ ಕಾದಂಬರಿಗಳು ಹಂಗೇರಿಯ ಸಾಮಾಜಿಕ-ಸಾಂಸ್ಕೃತಿಕ ಸನ್ನಿವೇಶಗಳನ್ನು ಚಿತ್ರಿಸುವುದರ ಜೊತೆಗೆ, ಸಾರ್ವತ್ರಿಕ ಮಾನವೀಯ ವಿಷಯಗಳನ್ನು ಸ್ಪರ್ಶಿಸುತ್ತವೆ.
ಸ್ವೀಡಿಷ್ ಅಕಾಡೆಮಿಯು ಕ್ರಾಸ್ನಾಹೊರ್ಕಾಯ್ ಅವರ ಕೃತಿಗಳ “ದೀರ್ಘವಾದ, ಆಕರ್ಷಕವಾದ ವಾಕ್ಯಗಳ ಮೂಲಕ ಓದುಗರನ್ನು ತಮ್ಮ ಕಾಲ್ಪನಿಕ ಜಗತ್ತಿಗೆ ಕರೆದೊಯ್ಯುವ” ಶಕ್ತಿಯನ್ನು ಶ್ಲಾಘಿಸಿದೆ.
ಈ ಬಾರಿ ಪ್ರಶಸ್ತಿ ಸ್ಪರ್ಧೆಯಲ್ಲಿ ಭಾರತದ ಅಮಿತಾವ್ ಘೋಷ್ ಹಾಗೂ ಸಲ್ಮಾನ್ ರುಶ್ದಿ ಕೂಡ ಇದ್ದರು. ಇಬ್ಬರೂ ದೀರ್ಘಕಾಲದಿಂದಲೇ ವಿಶ್ವ ಸಾಹಿತ್ಯ ವೇದಿಕೆಯಲ್ಲಿ ಪ್ರಭಾವ ಬೀರಿದ ಲೇಖಕರು.
ಘೋಷ್ ಅವರ “The Shadow Lines, The Hungry Tide”ಮುಂತಾದ ಕೃತಿಗಳು ಭಾರತೀಯ ಇತಿಹಾಸ, ವಲಸೆ, ಮತ್ತು ಪರಿಸರ ಚಿಂತನೆಗಳ ಕುರಿತ ಆಳವಾದ ಅನ್ವೇಷಣೆಗೆ ಹೆಸರುವಾಸಿಯಾಗಿವೆ. ರಶ್ದಿ ಅವರ “Midnight’s Children” ಮತ್ತು “The Satanic Verses” ಕೃತಿಗಳು ಭಾರತೀಯ ಇಂಗ್ಲಿಷ್ ಸಾಹಿತ್ಯದ ದಿಕ್ಕು ತೋರಿಸಿದ ಕೃತಿಗಳೆಂದು ಪರಿಗಣಿಸಲಾಗುತ್ತದೆ.


