ನೀರಜ್ ಘಯ್ವಾನ್ ಅವರ ಇತ್ತೀಚಿನ ಬಾಲಿವುಡ್ ಚಿತ್ರ ‘ಹೋಮ್‌ಬೌಂಡ್’ ಆಧುನಿಕ ಭಾರತೀಯ ಸಮಾಜದಲ್ಲಿ ಇರುವ ಜಾತಿ ಅಸಮಾನತೆಗಳ ಮೇಲೆ ಬೆಳಕು ಚೆಲ್ಲುತ್ತದೆ. ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮುಂದಿನ ವರ್ಷ ಆಸ್ಕರ್‌ಗೆ ಭಾರತದ ಅಧಿಕೃತ ಪ್ರವೇಶ ಪಡೆದಿದೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಬಾಲಿವುಡ್ ಚಿತ್ರಗಳು ಹೆಚ್ಚಾಗಿ ಮಾಡದ ಮತ್ತು ಹಿಂದುಳಿದವರ ಜೀವನ ಅನುಭವಗಳ ಬಗ್ಗೆ ಮಾತನಾಡುವುದರಿಂದ ಇಂಥ ಚಿತ್ರಗಳ ಸಂಖ್ಯೆ ಕಡಿಮೆ ಎಂದು ನೀರಜ್ ಹೇಳುತ್ತಾರೆ.
ಐಎಂಡಿಬಿಯ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ನಡೆದ ಸಂಭಾಷಣೆಯಲ್ಲಿ ಮಾತನಾಡಿದ ನೀರಜ್, ಭಾರತೀಯ ಸಿನಿಮಾದಲ್ಲಿ ಹೆಚ್ಚಿನ ಒಳಗೊಳ್ಳುವಿಕೆಯ ಅಗತ್ಯವನ್ನು ಒತ್ತಿ ಹೇಳಿದರು. “ಸಾಂಪ್ರದಾಯಿಕವಾಗಿ, ಹಿಂದಿ ಸಿನಿಮಾದಲ್ಲಿ, ನಾವು ಕೇವಲ ಶೇ. 10-15 ರಷ್ಟಿರುವ ಜನಸಂಖ್ಯೆಯ ಸುತ್ತ ಸುತ್ತುವ ಕಥೆಗಳನ್ನು ಹೇಳುತ್ತಿದ್ದೇವೆ, ಹೆಚ್ಚಾಗಿ ಮೇಲ್ಜಾತಿಯ ಜನಸಂಖ್ಯೆಗೆ ಸಂಬಂಧಿಸಿದೆ. 100 ವರ್ಷಗಳ ಸಿನಿಮಾದಲ್ಲಿ, ನಾವು ದೇಶದ ಬಹುಸಂಖ್ಯಾತರನ್ನು ಹೆಚ್ಚಾಗಿ ನಿರ್ಲಕ್ಷಿಸಿದ್ದೇವೆ” ಎಂದು ಅವರು ಹೇಳಿದರು.
ಮುಖ್ಯವಾಹಿನಿಯ ಭಾರತೀಯ ಸಿನಿಮಾಗಳಲ್ಲಿ ಕ್ಯಾಮೆರಾ ಮುಂದೆ, ಮತ್ತು ಹಿಂದೆ ದಲಿತ ಧ್ವನಿಗಳು ಹಾಗೂ ಕಥೆಗಾರರ ಕೊರತೆಯ ಬಗ್ಗೆ ಅವರು ವಿಷಾದ ವ್ಯಕ್ತಪಡಿಸಿದರು. “ಕ್ಯಾಮೆರಾ ಮುಂದೆ ಅಥವಾ ಹಿಂದೆ ದಲಿತ ಅಥವಾ ಬುಡಕಟ್ಟು ಸಮುದಾಯಗಳಿಂದ ಬಂದವರು ಯಾರೂ ಇಲ್ಲ. ಸಮುದಾಯದ ಕೆಲವೇ ಕೆಲವು ಮಾನ್ಯತೆ ಪಡೆದ ಸದಸ್ಯರಲ್ಲಿ ನಾನು ಒಬ್ಬ; ಅದು ಒಂದು ಸ್ಪಷ್ಟ ಸಮಸ್ಯೆ. ಇದಕ್ಕೆ ನಾವು ಪರಿಹಾರ ಹುಡುಕಬೇಕು” ಎಂದು ಅವರು ಹೇಳಿದರು.
ಹೋಮ್‌ಬೌಂಡ್ ಚಿತ್ರದ ಕುರಿತು
ಹೋಮ್‌ಬೌಂಡ್ ಚಿತ್ರದಲ್ಲಿ ಜಾನ್ವಿ ಕಪೂರ್ ಜೊತೆಗೆ ಇಶಾನ್ ಖಟ್ಟರ್ ಮತ್ತು ವಿಶಾಲ್ ಜೆತ್ವಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನ್ಯೂಯಾರ್ಕ್ ಟೈಮ್ಸ್ ಪ್ರಬಂಧವನ್ನು ಆಧರಿಸಿದ ಈ ಚಿತ್ರವು, ತಾವು ಎದುರಿಸುತ್ತಿರುವ ತಾರತಮ್ಯದಿಂದ ತಪ್ಪಿಸಿಕೊಳ್ಳಲು ಪೊಲೀಸರಾಗಲು ಬಯಸುವ ಇಬ್ಬರು ಸ್ನೇಹಿತರ ಕಥೆಯನ್ನು ಹೇಳುತ್ತದೆ. ಒಬ್ಬ ದಲಿತ, ಮತ್ತೋರ್ವ ಮುಸ್ಲಿಂ ಪಾತ್ರಗಳ ಕಥೆ. ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ವಲಸೆ ಕಾರ್ಮಿಕರಾಗಿ ಅವರ ಪ್ರಯಾಣವನ್ನು ಕಥೆ ಹೇಳುತ್ತದೆ.
ಕರಣ್ ಜೋಹರ್ ನಿರ್ಮಿಸಿದ ಈ ಚಿತ್ರವನ್ನು ಹಾಲಿವುಡ್ ದಂತಕಥೆ ಮಾರ್ಟಿನ್ ಸ್ಕಾರ್ಸೆಸೆ ಬೆಂಬಲಿಸಿದರು. ಅವರು ಕಾರ್ಯನಿರ್ವಾಹಕ ನಿರ್ಮಾಪಕರಾಗಿ ಸೇರಿಕೊಂಡರು. ಹೋಮ್‌ಬೌಂಡ್ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಅನ್ ಸೆರ್ಟೈನ್ ರಿಗಾರ್ಡ್ ವಿಭಾಗದಲ್ಲಿ ಪ್ರಥಮ ಪ್ರದರ್ಶನಗೊಂಡಿತು. ಆಗಸ್ಟ್ 2025 ರಲ್ಲಿ ಭಾರತದಲ್ಲಿ ಬಿಡುಗಡೆಗೆ ಮೊದಲು ಜಾಗತಿಕವಾಗಿ ಇತರ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಮೆಚ್ಚುಗೆ ಗಳಿಸಿತು.
ಬಿಹಾರದಲ್ಲೂ ಮತಗಳ್ಳತನ ಮಾಡಲು ಎನ್‌ಡಿಎ ಪ್ರಯತ್ನಿಸುತ್ತಿದೆ: ಪ್ರಿಯಾಂಕಾ ಗಾಂಧಿ


