ಉತ್ತರ ಪ್ರದೇಶದ ಪ್ಯಾಟೀ ಪ್ರದೇಶದಲ್ಲಿ, ದಲಿತ ಸಮುದಾಯದ ಬಾಲಕಿ ಮತ್ತು ಆಕೆಯ ಸಹೋದರಿಯನ್ನು ಅವರ ಸ್ವಂತ ಗ್ರಾಮದ ವ್ಯಕ್ತಿಯೊಬ್ಬ ಥಳಿಸಿ, ಬಟ್ಟೆ ಹರಿದು ಹಾಕಿದ್ದಾನೆ ಎಂದು ಆರೋಪಿಸಿದ್ದಾರೆ. ಪ್ರಬಲ ಜಾತಿಗೆ ಸೇರಿದ ಯುವಕರು ತಮ್ಮ ಮನೆಗೆ ನುಗ್ಗಿ ಜಾತಿ ನಿಂದನೆ ಮಾಡಿ, ಹಲ್ಲೆ ನಡೆಸಿದ್ದಾರೆ ಎಂದು ಬಾಲಕಿಯರು ಆರೋಪಿಸಿದ್ದಾರೆ. ಭಾನುವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ ‘ದಿ ಅಬ್ಸರ್ವರ್ ಪೋಸ್ಟ್’ ವರದಿ ಮಾಡಿದೆ.
ಬಾಲಕಿಯ ಕುಟುಂಬದವರು ಪೊಲೀಸರಿಗೆ ಸಲ್ಲಿಸಿದ ದೂರಿನ ಪ್ರಕಾರ, “ಯುವಕರು ತಮ್ಮ ಮನೆಗೆ ಅನುಮತಿಯಿಲ್ಲದೆ ಪ್ರವೇಶಿಸಿದರು. ನಾನು ಅವನನ್ನು ಹೊರಹೋಗುವಂತೆ ಕೇಳಿದಾಗ, ಆತನ ನಮ್ಮ ಮೇಲೆ ಜಾತಿ ನಿಂದನೆ ಮಾಡಿದ” ಎಂದು ತಿಳಿಸಿದ್ದಾರೆ.
“ವಾಗವಾದದ ನಂತರ ಆ ವ್ಯಕ್ತಿ ಇಬ್ಬರೂ ಸಹೋದರಿಯರ ಮೇಲೆ ಹಲ್ಲೆ ನಡೆಸಿ ಅವರ ಬಟ್ಟೆಗಳನ್ನು ಹರಿದು ಹಾಕಿದ್ದಾನೆ. ದಾಳಿಯ ಸಮಯದಲ್ಲಿ ಮನೆಯೊಳಗೆ ಇರಿಸಲಾಗಿದ್ದ ಹಾಸಿಗೆಯನ್ನು ಎಸೆದು ವಸ್ತುಗಳನ್ನು ಮುರಿದಿದ್ದಾನೆ” ಎಂದು ಅವರು ಆರೋಪಿಸಿದ್ದಾರೆ.
ಘಟನೆಯ ನಂತರ ಹುಡುಗಿ ಮತ್ತು ಆಕೆಯ ಸಹೋದರಿ ನೇರವಾಗಿ ಕಂಧೈ ಪೊಲೀಸ್ ಠಾಣೆಗೆ ಹೋಗಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಅವರು ಪೊಲೀಸರಿಗೆ ಲಿಖಿತ ದೂರು ನೀಡಿದ್ದಾರೆ.
ಕಂಧೈ ಠಾಣೆ ಅಧಿಕಾರಿ ಅನಿಲ್ ಕುಮಾರ್ ಪೊಲೀಸರು ದೂರನ್ನು ಸ್ವೀಕರಿಸಿದ್ದಾರೆ ಎಂದು ದೃಢಪಡಿಸಿದರು. “ನಮಗೆ ಲಿಖಿತ ದೂರು ಸಿಕ್ಕಿದೆ, ಕಾನೂನಿನ ಪ್ರಕಾರ ಅಗತ್ಯ ಕ್ರಮ ಕೈಗೊಳ್ಳುತ್ತೇವೆ” ಎಂದು ಅವರು ಹೇಳಿದರು.
ಕೊಪ್ಪಳ| ಮಹಿಳೆಗೆ ಮದ್ಯ ಕುಡಿಸಿ ನಾಲ್ವರಿಂದ ಸಾಮೂಹಿಕ ಅತ್ಯಾಚಾರ; ಆರೋಪಿಗಳ ಬಂಧನ


