Homeಮುಖಪುಟಸಂಭಾಲ್ ಹಿಂಸಾಚಾರ ಸಂಬಂಧ ಪೊಲೀಸರ ಮೇಲೆ ಎಫ್‌ಐಆರ್‌ಗೆ ಆದೇಶಿಸಿದ್ದ ನ್ಯಾಯಾಧೀಶ ವರ್ಗಾವಣೆ

ಸಂಭಾಲ್ ಹಿಂಸಾಚಾರ ಸಂಬಂಧ ಪೊಲೀಸರ ಮೇಲೆ ಎಫ್‌ಐಆರ್‌ಗೆ ಆದೇಶಿಸಿದ್ದ ನ್ಯಾಯಾಧೀಶ ವರ್ಗಾವಣೆ

- Advertisement -
- Advertisement -

ಸಂಭಾಲ್ ಹಿಂಸಾಚಾರ ಸಂಬಂಧ ಪೊಲೀಸರ ಮೇಲೆ ಎಫ್‌ಐಆರ್‌ ದಾಖಲಿಸಲು ಆದೇಶಿಸಿದ್ದ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (ಸಿಜೆಎಂ) ವಿಭಾಂಶು ಸುಧೀರ್ ಸೇರಿದಂತೆ 14 ನ್ಯಾಯಾಧೀಶರನ್ನು ವರ್ಗಾವಣೆ ಮಾಡಿ ಅಲಹಾಬಾದ್ ಹೈಕೋರ್ಟ್ ಆಡಳಿತಾತ್ಮಕ ಆದೇಶ ಹೊರಡಿಸಿದೆ. ಸುಧೀರ್ ಅವರನ್ನು ಸುಲ್ತಾನ್‌ಪುರದ ಸಿವಿಲ್ ನ್ಯಾಯಾಧೀಶರಾಗಿ (ಹಿರಿಯ ವಿಭಾಗ) ವರ್ಗಾಯಿಸಲಾಗಿದೆ.

ನವೆಂಬರ್ 2024ರ ಸಂಭಾಲ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸರ್ಕಲ್ ಆಫೀಸರ್ (ಸಿಒ) ಅನುಜ್ ಚೌಧರಿ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ನಿರ್ದೇಶನ ನೀಡಿ ಆದೇಶ ಹೊರಡಿಸಿದ ಕೆಲವೇ ದಿನಗಳಲ್ಲಿ ಸಿಜೆಎಂ ಸುಧೀರ್ ಅವರ ವರ್ಗಾವಣೆಯಾಗಿದೆ.

ನವೆಂಬರ್ 2024ರ ಸಂಭಾಲ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸಂಭಾಲ್ ಸರ್ಕಲ್ ಆಫೀಸರ್ ಆಗಿದ್ದ ಅನುಜ್ ಚೌಧರಿ, ಸಂಭಾಲ್ ಕೊತ್ವಾಲಿ ಚಂದೌಸಿಯ ಆಗಿನ ಸ್ಟೇಷನ್ ಹೌಸ್ ಆಫೀಸರ್ ಅನುಜ್ ತೋಮರ್ ಮತ್ತು 15 ರಿಂದ 20 ಅಪರಿಚಿತ ಪೊಲೀಸ್ ಸಿಬ್ಬಂದಿ ವಿರುದ್ದ ಎಫ್‌ಐಆರ್ ದಾಖಲಿಸಲು ಸಿಜೆಎಂ ಸುಧೀರ್ ಅವರು ಪೊಲೀಸರಿಗೆ ನಿರ್ದೇಶನ ನೀಡಿದ್ದರು.

ಪೊಲೀಸರು ಕೊಲ್ಲುವ ಉದ್ದೇಶದಿಂದ ಗುಂಡಿಕ್ಕಿದ್ದು, ಇದರಿಂದ ಆಲಂ ಎಂಬ ಸ್ಥಳೀಯ ಯುವಕ ತೀವ್ರವಾಗಿ ಗಾಯಗೊಂಡಿದ್ದ. ಈ ಸಂಬಂಧ ಪೊಲೀಸರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿ ಆತನ ತಂದೆ ಯಮೀನ್ ಅವರು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (ಬಿಎನ್‌ಎಸ್‌ಎಸ್) ಸೆಕ್ಷನ್ 173 (4) ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ಸಿಜೆಎಂ ವಿಭಾಂಶು ಸುಧೀರ್ ಅವರು ಪೊಲೀಸರ ಮೇಲೆ ಎಫ್‌ಐಆರ್‌ಗೆ ಆದೇಶಿಸಿದ್ದರು.

2024ರ ನವೆಂಬರ್ 24 ರಂದು ಶಾಹಿ ಜಾಮಾ ಮಸೀದಿ ಪ್ರದೇಶದಲ್ಲಿ ನಡೆದ ಗಲಭೆಯ ಸಂದರ್ಭದಲ್ಲಿ ನನ್ನ ಮಗ ಆಲಂ ಮೇಲೆ ಪೊಲೀಸರು ಗುಂಡು ಹಾರಿಸಿದ್ದರು ಎಂದು ಯಾಮೀನ್ ಆರೋಪಿಸಿದ್ದರು. ಅರ್ಜಿಯ ಪ್ರಕಾರ, ಆಲಂ ರಸ್ಕ್ ಮತ್ತು ಬಿಸ್ಕತ್ತುಗಳನ್ನು ಮಾರಾಟ ಮಾಡಲು ತೆರಳಿದ್ದಾಗ ಗಲಭೆಯ ನಡುವೆ ಸಿಲುಕಿದ್ದರು. ಪೊಲೀಸರು ಅವರ ಮೇಲೆ ಗುಂಡು ಹಾರಿಸಿದ್ದರು.

ಪ್ರತ್ಯಕ್ಷದರ್ಶಿಗಳು ಮತ್ತು ಕುಟುಂಬಸ್ಥರ ಪ್ರಕಾರ, ಹಿಂಸಾಚಾರದಲ್ಲಿ ಕನಿಷ್ಠ ಐವರು ಮುಸ್ಲಿಮರು ಸಾವನ್ನಪ್ಪಿದ್ದು, ಅವರಲ್ಲಿ ಹೆಚ್ಚಿನವರು ಪೊಲೀಸರ ಗುಂಡಿಗೆ ಬಲಿಯಾಗಿದ್ದಾರೆ.

ಭಯದಿಂದ ನನ್ನ ಮಗ ತಲೆಮರೆಸಿಕೊಂಡು ವೈದ್ಯಕೀಯ ಚಿಕಿತ್ಸೆ ಪಡೆದಿದ್ದಾನೆ. ನಂತರ ಗುಂಡಿನ ದಾಳಿಯಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿದ್ದಾನೆ ಎಂದು ಯಾಮೀನ್ ನ್ಯಾಯಾಲಯಕ್ಕೆ ತಿಳಿಸಿದ್ದರು.

ಜನವರಿ 9ರಂದು ನಡೆದ ವಿಚಾರಣೆಯ ನಂತರ, ನ್ಯಾಯಾಲಯವು ಎಲ್ಲಾ ಹೆಸರಿಸಲಾದ ಮತ್ತು ಹೆಸರಿಸದ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಸಿಜೆಎಂ ವಿಭಾಂಶು ಸುಧೀರ್ ನಿರ್ದೇಶಿಸಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎಲ್‌ಐಸಿ ಕಚೇರಿ ಬೆಂಕಿ ಪ್ರಕರಣಕ್ಕೆ ತಿರುವು : ಅಕ್ರಮ ಮುಚ್ಚಿ ಹಾಕಲು ಸಹೋದ್ಯೋಗಿಯಿಂದ ವ್ಯವಸ್ಥಾಪಕಿಯ ಕೊಲೆ ಎಂದ ತನಿಖೆ

ಡಿಸೆಂಬರ್‌ನಲ್ಲಿ ಮಧುರೈನ ಜೀವ ವಿಮಾ ನಿಗಮ (ಎಲ್‌ಐಸಿ) ಕಚೇರಿಯಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಹಿರಿಯ ಮಹಿಳಾ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದು, ಆರಂಭದಲ್ಲಿ ನಂಬಿದಂತೆ ಅದು ಆಕಸ್ಮಿಕ ಸಾವಲ್ಲ, ಕೊಲೆ ಎಂದು ತಮಿಳುನಾಡು ಪೊಲೀಸರು ತೀರ್ಮಾನಿಸಿದ್ದಾರೆ....

‘ಅಕ್ರಮ ಗಣಿಗಾರಿಕೆ ಸರಿಪಡಿಸಲಾಗದ ಹಾನಿಗೆ ಕಾರಣವಾಗಬಹುದು’: ಅರಾವಳಿ ಸಮಗ್ರ ಪರೀಕ್ಷೆಗೆ ತಜ್ಞರ ಸಮಿತಿ ರಚಿಸಲು ಸುಪ್ರೀಂ ಸೂಚನೆ

ನವದೆಹಲಿ: ಅಕ್ರಮ ಗಣಿಗಾರಿಕೆಯಿಂದ ಸರಿಪಡಿಸಲಾಗದ ಹಾನಿ ಉಂಟಾಗಬಹುದು ಎಂದು ಗಮನಿಸಿದ ಸುಪ್ರೀಂ ಕೋರ್ಟ್, ಅರಾವಳಿಯಲ್ಲಿ ಗಣಿಗಾರಿಕೆ ಮತ್ತು ಸಂಬಂಧಿತ ಸಮಸ್ಯೆಗಳ ಸಮಗ್ರ ಪರೀಕ್ಷೆಯನ್ನು ಕೈಗೊಳ್ಳಲು ಡೊಮೇನ್ ತಜ್ಞರನ್ನು ಒಳಗೊಂಡ ತಜ್ಞರ ಸಮಿತಿಯನ್ನು ರಚಿಸುವುದಾಗಿ...

ಮೋದಿ ಕಾರ್ಯಕ್ರಮದಲ್ಲಿ ಸಮೋಸ ವಿತರಣೆಗೆ 2 ಕೋಟಿ ರೂ. ಖರ್ಚು : ಬಿಜೆಪಿ ವಿರುದ್ಧ ಕೇಜ್ರಿವಾಲ್ ಆರೋಪ

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ಗುಜರಾತ್‌ನ ಬುಡಕಟ್ಟು ಪ್ರದೇಶಕ್ಕೆ ಭೇಟಿ ನೀಡಿದ ಕಾರ್ಯಕ್ರಮಕ್ಕೆ 50 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್...

‘ಅಮೆರಿಕಾ ಅಧ್ಯಕ್ಷನ ಹತ್ಯೆಯ ಸಂಚು ರೂಪಿಸಿದರೆ ಇರಾನ್ ‘ಭೂಮಿಯಿಂದ ನಾಶವಾಗುತ್ತದೆ’: ಡೊನಾಲ್ಡ್ ಟ್ರಂಪ್ 

ವಾಷಿಂಗ್ಟನ್: ಟೆಹ್ರಾನ್ ಅಮೆರಿಕದ ನಾಯಕನನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾದರೆ, ಇರಾನ್ ಅನ್ನು "ಈ ಭೂಮಿಯಿಂದಲೇ ಅಳಿಸಿಹಾಕಲಾಗುವುದು’ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಇರಾನ್ ಗೆ ಎಚ್ಚರಿಕೆ ನೀಡಿದ್ದಾರೆ. ಬೆದರಿಕೆಗಳ ಬಿಸಿ ವಿನಿಮಯದಲ್ಲಿ,...

ಆಲ್ಗಾರಿದಂ ಪಕ್ಷಪಾತ, ಎಐನಲ್ಲೂ ಜಾತಿವಾದ-ತಾರತಮ್ಯ : ಹೊಸ ಚರ್ಚೆ ಹುಟ್ಟು ಹಾಕಿದ ಡಾ. ವಿಜೇಂದರ್ ಹೇಳಿಕೆ

ಆಲ್ಗಾರಿದಂ ಪಕ್ಷಪಾತ (Algorithm bias) ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಹೊಸ ಚರ್ಚೆ ನಡೆಯುತ್ತಿದೆ. ಪ್ರಮುಖ ಸಾಮಾಜಿಕ ನ್ಯಾಯ ಹೋರಾಟಗಾರ ಮತ್ತು ವಿದ್ವಾಂಸ ಡಾ. ವಿಜೇಂದರ್ ಸಿಂಗ್ ಚೌಹಾಣ್ ಅವರು, ಚಾಟ್‌ಜಿಪಿಟಿ (ChatGPT)ಯಂತಹ ಎಐ...

‘ಸನಾತನ ಧರ್ಮ ವಿವಾದ’: ಉದಯನಿಧಿ ಹೇಳಿಕೆ ‘ದ್ವೇಷ ಭಾಷಣ’ಕ್ಕೆ ಸಮ ಎಂದು ಬಿಜೆಪಿ ನಾಯಕನ ವಿರುದ್ಧದ ಎಫ್‌ಐಆರ್ ರದ್ದುಗೊಳಿಸಿದ ಮದ್ರಾಸ್ ಹೈಕೋರ್ಟ್

ಮಧುರೈ: ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರ ‘ಸನಾತನ ಧರ್ಮ ನಿರ್ಮೂಲನೆ’ ಕುರಿತ ಹೇಳಿಕೆಗಳನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಾಗಿ ಬಿಜೆಪಿ ಐಟಿ ವಿಭಾಗದ ನಾಯಕ ಅಮಿತ್ ಮಾಳವೀಯ ಅವರ ವಿರುದ್ಧ ದಾಖಲಾಗಿದ್ದ...

ಶಿಕ್ಷೆ ಮುಗಿದ 3 ವರ್ಷಗಳ ನಂತರ ಪಾಕಿಸ್ತಾನ ಜೈಲಿನಲ್ಲಿ ಗುಜರಾತ್ ಮೀನುಗಾರ ಸಾವು

2022 ರಲ್ಲಿ ಅಜಾಗರೂಕತೆಯಿಂದ ಅಂತರರಾಷ್ಟ್ರೀಯ ಗಡಿ ರೇಖೆಯನ್ನು ದಾಟಿದ ನಂತರ ಪಾಕಿಸ್ತಾನ ಏಜೆನ್ಸಿಗಳಿಂದ ಬಂಧಿಸಲ್ಪಟ್ಟ ಗುಜರಾತ್‌ನ ಮೀನುಗಾರನೊಬ್ಬ ಜನವರಿ 16 ರಂದು ಕರಾಚಿ ಜೈಲಿನಲ್ಲಿ ಸಾವನ್ನಪ್ಪಿದ್ದಾನೆ. ಮೂರು ವರ್ಷಗಳ ಹಿಂದೆ ಆತನ ಶಿಕ್ಷೆಯನ್ನು...

ಸ್ಥಳದಲ್ಲೇ ದಂಡ ಪಾವತಿಸುವಂತೆ ಸಂಚಾರ ಪೊಲೀಸರು ಒತ್ತಾಯಿಸುವಂತಿಲ್ಲ: ತೆಲಂಗಾಣ ಹೈಕೋರ್ಟ್

ಸಂಚಾರ ನಿಯಮ ಉಲ್ಲಂಘಿಸುವವರ ಬ್ಯಾಂಕ್ ಖಾತೆಗಳಿಂದ ಸ್ವಯಂಚಾಲಿತವಾಗಿ ದಂಡ ಕಡಿತಗೊಳಿಸಬೇಕೆಂದು ಮುಖ್ಯಮಂತ್ರಿ ರೇವಂತ್ ರೆಡ್ಡಿ ಸೂಚಿಸಿದ ಕೆಲವು ದಿನಗಳ ನಂತರ ಮಹತ್ವದ ತೀರ್ಪು ನೀಡಿರುವ ತೆಲಂಗಾಣ ಹೈಕೋರ್ಟ್, ಪೊಲೀಸರು ನಾಗರಿಕರನ್ನು ರಸ್ತೆಯಲ್ಲಿ ನಿಲ್ಲಿಸಿ...

ಎಸ್‌ಸಿ/ಎಸ್‌ಟಿ ಶಾಲೆಗಳ ನವೀಕರಣಕ್ಕೆ ಹಣ ಮಂಜೂರು ಮಾಡದಂತೆ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಮದ್ರಾಸ್ ಹೈಕೋರ್ಟ್ 

ಮಧುರೈ: ತಮಿಳುನಾಡಿನ ಸುಮಾರು 170 ಎಸ್‌ಸಿ/ಎಸ್‌ಟಿ ಶಾಲೆ ಮತ್ತು ಹಾಸ್ಟೆಲ್ ಕಟ್ಟಡಗಳ ದುರಸ್ತಿ ಮತ್ತು ನಿರ್ಮಾಣ ಕಾರ್ಯಗಳಿಗೆ ತಮಿಳುನಾಡು ಆದಿ ದ್ರಾವಿಡರ್ ವಸತಿ ಅಭಿವೃದ್ಧಿ ನಿಗಮ (ಟಿಎಎಚ್‌ಡಿಸಿಒ) 50 ಕೋಟಿ ರೂ.ಗಳನ್ನು ಖರ್ಚು...

ಕೇಂದ್ರ ಸರ್ಕಾರಿ ಅಧಿಕಾರಿಗಳ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳನ್ನು ರಾಜ್ಯ ಸಂಸ್ಥೆ ತನಿಖೆ ಮಾಡಬಹುದು : ಸುಪ್ರೀಂ ಕೋರ್ಟ್

ಕೇಂದ್ರ ಸರ್ಕಾರಿ ನೌಕರರು ಮಾಡುವ ಭ್ರಷ್ಟಾಚಾರ ತಡೆ ಕಾಯ್ದೆಯಡಿಯ ಶಿಕ್ಷಾರ್ಹ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ರಾಜ್ಯ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸಲು ಮತ್ತು ಆರೋಪಪಟ್ಟಿ ಸಲ್ಲಿಸಲು ಸಮರ್ಥರು ಎಂದು ಸುಪ್ರೀಂ ಕೋರ್ಟ್ ಸೋಮವಾರ...