Homeಗೌರಿ ಕಣ್ಣೋಟರಾಜಕಾರಣಿಗಳು ಮಾಡಲಾಗದ ಸಹಾಯವನ್ನು ಜನ ಮಾಡಿದ ಗಳಿಗೆ...

ರಾಜಕಾರಣಿಗಳು ಮಾಡಲಾಗದ ಸಹಾಯವನ್ನು ಜನ ಮಾಡಿದ ಗಳಿಗೆ…

ವಿಭಜನೆಯ ಸಮಯದಲ್ಲಿ ಭಾರತಕ್ಕೆ ವಲಸೆ ಬಂದ ಕೈಗಾರಿಕೋದ್ಯಮಿಯೊಬ್ಬರು ಅನಾಮಧೇಯವಾಗಿ ಈ ನಿಧಿಗೆ 12 ಲಕ್ಷ ರೂಪಾಯಿಗಳನ್ನು ನೀಡಿದ್ದಾರೆ.

- Advertisement -
- Advertisement -

ಭಾರತ-ಪಾಕಿಸ್ತಾನ ಗಡಿಯಲ್ಲಿರುವ ವಾಘಾದಲ್ಲಿ ಪ್ರತಿ ಸಂಜೆ ವಿಚಿತ್ರವಾದ ಒಂದು ಸಾಂಪ್ರದಾಯಿಕ ಆಚರಣೆ ನಡೆಯುತ್ತದೆ. ಸುಮಾರು ಐದಡಿ ಅಂತರದಲ್ಲಿ ಎರಡೂ ದೇಶಗಳ ಪ್ರವೇಶದ್ವಾರ (ಗೇಟ್)ಗಳಿವೆ. ಅದರ ಬಳಿಯೇ ಎರಡೂ ದೇಶಗಳ ಧ್ವಜಗಳು ಹಾರಾಡುತ್ತಿರುತ್ತವೆ. ಎರಡೂ ಕಡೆಯ ಸೈನಿಕರು “ಗುಡ್ ಡೇ, ಹೇಗಿದ್ದೀರಿ?” ಎಂದು ಕೆಲವೊಮ್ಮೆ ಒಬ್ಬರನ್ನೊಬ್ಬರು ವಿಚಾರಿಸಿಕೊಳ್ಳುತ್ತಾರೆ. ನಾನಲ್ಲಿಗೆ ಹೋಗಿದ್ದಾಗ ಭಾರತದ ಹಿರಿಯ ಸೈನ್ಯಾಧಿಕಾರಿಯೊಬ್ಬರು ನನ್ನನ್ನು ಪಾಕಿಸ್ತಾನದ ಸೈನ್ಯಾಧಿಕಾರಿಗೆ ಪರಿಚಯ ಮಾಡಿಕೊಟ್ಟಿದ್ದರು ಎರಡೂ ದೇಶಗಳ ನಡುವಿನ ನೋ ಮ್ಯಾನ್ಸ್ ಲ್ಯಾಂಡ್‍ನಲ್ಲಿ ನಾನೊಂದು ಹೆಜ್ಜೆಯಿಟ್ಟೆ. ಪಾಕಿಸ್ತಾನ ಸೈನ್ಯಾಧಿಕಾರಿಯೂ ಮುಂದೆ ಬಂದರು. ಇಬ್ಬರೂ ಕೈಕುಲುಕಿದೆವು. ಅದೂ ಕಾರ್ಗಿಲ್‍ನಲ್ಲಿ ಎರಡೂ ದೇಶಗಳ ನಡುವೆ ಸಂಘರ್ಷ ನಡೆಯುತ್ತಿದ್ದಾಗ.

ಹೀಗೆ ಸೌಹಾರ್ದತೆಯಿಂದಲೇ ವಾಘಾದಲ್ಲಿ ತಮ್ಮ ದಿನಗಳನ್ನು ಕಳೆಯುವ ಎರಡೂ ಕಡೆಯ ಸೈನಿಕರು ಸಂಜೆಯಾಗುತ್ತಿದ್ದಂತೆ ಒಂದು ರೀತಿಯ ಪೈಪೋಟಿಗೆ ಇಳಿಯುತ್ತಾರೆ. ಎರಡೂ ಗೇಟ್‍ಗಳ ಹತ್ತಿರ ಸಾರ್ವಜನಿಕರು ಸೇರುತ್ತಿದ್ದಂತೆ, ಧ್ವಜ ಕೆಳಗಿಳಿಸುವ ಕಾರ್ಯಕ್ರಮ ಪ್ರಾರಂಭವಾಗುತ್ತದೆ. ಯಾವ ಕಡೆಯ ಸೈನಿಕರು ಹೆಚ್ಚು ಆಕ್ರಮಣಿಶೀಲತೆಯನ್ನು ಪ್ರದರ್ಶಿಸುತ್ತಾರೆ, ಯಾರು ಹೆಚ್ಚು ರಭಸದಿಂದ ಕಿವಿಗಪ್ಪಳಿಸುವಂತೆ ತಮ್ಮ ಬೂಟುಗಳನ್ನು ನೆಲಕ್ಕೆ ಅಪ್ಪಳಿಸುತ್ತಾರೆ ಎಂದೆಲ್ಲಾ ಗಮನಿಸುವ ಸಾರ್ವಜನಿಕರು ತಮ್ಮ ಕಡೆಯವರನ್ನು ಚಪ್ಪಾಳೆ ತಟ್ಟುತ್ತಾ, ಘೋಷಣೆಗಳನ್ನು ಕೂಗುತ್ತಾ ಹುರಿದುಂಬಿಸುತ್ತಾರೆ. ಎರಡೂ ಕಡೆಯ ಸೈನಿಕರ ನಡುವೆ ಒಂದು ಸಣ್ಣ ಯುದ್ಧ ನಡೆಯುತ್ತಿದೆಯೇನೋ ಎಂಬ ವಾತಾವರಣ ನಿರ್ಮಾಣವಾಗುತ್ತದೆ.

ಆದರೆ ವಿಚಿತ್ರ ಸಂಗತಿಯೇನೆಂದರೆ, ಈ ಧ್ವಜ ಕೆಳಗಿಳಿಸುವ ಆಚರಣೆ ಮುಗಿದ ಮರುಕ್ಷಣವೇ ಎರಡೂ ಕಡೆಯ ಸಾರ್ವಜನಿಕರು ಗೇಟ್‍ಗಳ ಹತ್ತಿರ ಧಾವಿಸುತ್ತಾರೆ. ಒಬ್ಬರನ್ನೊಬ್ಬರು ಕುತೂಹಲದಿಂದ ನೋಡುತ್ತಿರುತ್ತಾರೆ. ಅಲ್ಲಿ ಯಾವುದೇ ರೀತಿಯ ಪೈಪೋಟಿ ಇರುವುದಿಲ್ಲ. ಬದಲಾಗಿ ‘ನಮ್ಮಂತೆಯೇ ಇದ್ದೀರಲ್ಲಾ ನೀವು’ ಎಂಬ ಭಾವನೆ ಮೂಡಿರುತ್ತದೆ. ದೇಶ ವಿಭಜನೆಯ ಸಮಯದಲ್ಲಿ ಬೇರೆಯಾದ ತಮ್ಮ ಬಂಧುಗಳನ್ನು ಮತ್ತೆ ಕಾಣಬಹುದೇನೋ ಎಂಬ ತವಕದಿಂದ ಕೆಲವರು ವಾಘಾ ಗಡಿಗೆ ಪದೇಪದೇ ಬರುತ್ತಿರುತ್ತಾರೆ. ಈ ಕಡೆಯಿಂದ ಇವರು, ಆ ಕಡೆಯಿಂದ ಅವರು ಹೀಗೆ ಮೌನವಾಗಿ ನೋಡುತ್ತಲೇ ನಿಲ್ಲುವ ಜನ ಮತ್ತೆ ತಮ್ಮ ಮನೆಯತ್ತ ಮರುಳುವುದು ಎರಡೂ ಕಡೆಯ ಸೈನಿಕರು ಅವರನ್ನು ಅಲ್ಲಿಂದ ಓಡಿಸಿದಾಗಲೇ!

ಇದೆಲ್ಲವನ್ನು ನೆನಪು ಮಾಡಿಕೊಟ್ಟಿದ್ದು ನೂರ್ ಫಾತಿಮಾ ಎಂಬ ಮುದ್ದು ಮಗು. ಈ ಕೂಸಿನ ಶಸ್ತ್ರಚಿಕಿತ್ಸೆ ಬಗ್ಗೆ ಈಗಾಗಲೇ ಸಾಕಷ್ಟು ಸುದ್ದಿಗಳು ಎಲ್ಲ ಕಡೆಯೂ ಪ್ರಕಟವಾಗಿದೆ. ಆದರೆ ನನಗೆ ಇಷ್ಟವಾದದ್ದು ಆಕೆಗೆ ಭಾರತೀಯರು ನೀಡಿದ ಭಾವನಾತ್ಮಕ ಹಾಗೂ ಆರ್ಥಿಕ ಬೆಂಬಲ. ರಾಜಕಾರಣಿಗಳಿಗೆ ಸಾಧ್ಯವಾಗದಂತಹ ಸಹಾಯವನ್ನು ಜನ ನೀಡಿದ್ದಾರೆ. ನೂರ್‍ಳ ತಂದೆತಾಯಿ ಅದನ್ನು ಅಷ್ಟೇ ಸೌಜನ್ಯದಿಂದ ಸ್ವೀಕರಿಸಿದ್ದಾರೆ.

ನೂರ್‍ಳ ತಂದೆ ಬಡ ಮಕ್ಕಳಿಗೆಂದೇ ಶುರು ಮಾಡಿರುವ ‘ದೋಸ್ತಿ ಫಂಡ್’ (ಸ್ನೇಹನಿಧಿ)ಗೆ ಎಷ್ಟೋ ಭಾರತೀಯರು ಹಣ ನೀಡಿದ್ದಾರೆ. ಹಿಂದೆ ಲಾಹೋರ್‌ನಲ್ಲಿ ವಾಸಿಸುತ್ತಿದ್ದ, ಆದರೆ ವಿಭಜನೆಯ ಸಮಯದಲ್ಲಿ ಭಾರತಕ್ಕೆ ವಲಸೆ ಬಂದ ಕೈಗಾರಿಕೋದ್ಯಮಿಯೊಬ್ಬರು ಅನಾಮಧೇಯವಾಗಿ ಈ ನಿಧಿಗೆ 12 ಲಕ್ಷ ರೂಪಾಯಿಗಳನ್ನು ನೀಡಿದ್ದಾರೆ. ಪಾಕಿಸ್ತಾನದ ಮುಸ್ಲಿಂ ಒಬ್ಬರು ಶುರುಮಾಡಿರುವ ಈ ನಿಧಿಗೆ ಭಾರತದ ಹಿಂದೂ ಒಬ್ಬರು ಇಂತಹ ದೊಡ್ಡ ಮೊತ್ತದ ದಾನ ನೀಡಿರುವುದು ಎರಡೂ ದೇಶಗಳ ಜನರಿಗೆ ಬೇಕಿರುವುದು ಸ್ನೇಹ ಮತ್ತು ಸೌಹಾರ್ದತೆಯ ಬಾಳು ಎಂಬುದನ್ನು ತೋರಿಸುತ್ತದೆ.

ದೇಶದಲ್ಲಿ ಜಾತಿ, ಧರ್ಮದ ಆಧಾರದ ಮೇಲೆ ಜನರನ್ನು ಒಡೆಯುವ ಪ್ರಯತ್ನಗಳು ನಡೆಯುತ್ತಿರುವಾಗಲೇ, ಜನಸಾಮಾನ್ಯರು ತಮಗೆ ಧಾರ್ಮಿಕ ಭಿನ್ನತೆ ಮುಖ್ಯ ಅಲ್ಲವೇ ಅಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.

ಪಾಕಿಸ್ತಾನದ ವಿರುದ್ಧ ಭಾರತದ ವೈರತ್ವವಿರುವುದು ನಮ್ಮ ದೇಶದ ಸುಭದ್ರತೆಯ ರಕ್ಷಣೆಗಾಗಿಯೇ ಹೊರತು, ಆ ದೇಶದ ಜನರ ವಿರುದ್ಧವಲ್ಲ, ಅವರ ಧರ್ಮದ ವಿರುದ್ಧವೂ ಅಲ್ಲ ಎಂದು ನೂರ್ ಪ್ರಕರಣ ತೋರಿಸುತ್ತದೆ.

ನೂರ್ ಎಂಬ ಬಾಲಕಿ ಬೇರೆ ದೇಶದವಳು, ಬೇರೆ ಧರ್ಮದವಳು ಎಂಬ ಭೇದಭಾವವನ್ನು ಅಲಕ್ಷಿಸಿದ್ದಾರೆ ಭಾರತೀಯರು. ಗುಜರಾತಿನಲ್ಲಿ ನಡೆದ ಕೋಮುದಳ್ಳುರಿಗೆ ತುತ್ತಾದ ಮುಸ್ಲಿಮರ ನೆರವಿಗೆ ಬಹಿರಂಗವಾಗಿ ಬರಲು ಹಿಂಜರಿದಿದ್ದ ಭಾರತೀಯರು ಪಾಕಿಸ್ತಾನದ ಮುಸ್ಲಿಂ ಬಾಲಕಿಗೆ ನೆರವಾಗಿದ್ದಾರೆ.

ತಮ್ಮ ಎದೆಯಲ್ಲಿ ಬರೀ ದ್ವೇಷವನ್ನೇ ತುಂಬಿಕೊಂಡಿರುವವರಿಲ್ಲದಿದ್ದಾಗ, ಮಾನವನ ಮುಖ್ಯಲಕ್ಷಣವೇ ಮಾನವೀಯತೆ… ಇದು ನೂರ್‌ ನಿಂದಾಗಿ ನಮ್ಮ ಜನರೇ ಅರಿತುಕೊಂಡ ಸತ್ಯ.

– ಗೌರಿ ಲಂಕೇಶ್
ಕಂಡಹಾಗೆ (ಸಂಗ್ರಹ) 1

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...