Homeಸಾಮಾಜಿಕಈ ವಯಸ್ಸಿನಲ್ಲಿ ಇಂಥ ಆಪಾದನೆ ಬರಬಾರದಿತ್ತು!

ಈ ವಯಸ್ಸಿನಲ್ಲಿ ಇಂಥ ಆಪಾದನೆ ಬರಬಾರದಿತ್ತು!

- Advertisement -
- Advertisement -

ಕರ್ನಾಟಕದ ಜನಸ್ತೋಮಕ್ಕೆ ಅನ್ನ ನೀರು ವಸತಿ ಮತ್ತು ಉದ್ಯೋಗ ನೀಡುವ ಜವಾಬ್ದಾರಿ ಹೊತ್ತವರಂತೆ ಬೊಬ್ಬಿರಿಯುತ್ತಿದ್ದ ಅಷ್ಟಮಠಗಳ ಯತಿಗಳ ಕರ್ಮಕಾಂಡ ಅಷ್ಟ ದಿಕ್ಕಿಗೂ ಹರಡುತ್ತಿದೆಯಲ್ಲಾ.
ಕರ್ಮಕಾಂಡದ ರುವಾರಿಯಾಗಿದ್ದ ಶಿರೂರು ಸ್ವಾಮಿ ನಿಜಕ್ಕೂ ಈ ಸಮಯದಲ್ಲಿ ಹುತಾತ್ಮರಂತೆ ಕಾಣುತ್ತಿದ್ದಾರೆ. ಸದರಿ ಸ್ವಾಮಿಯನ್ನು ಏಳನೇ ವರ್ಷಕ್ಕೆ ಸನ್ಯಾಸಿ ಮಾಡಲಾಗಿತ್ತು ಪ್ರಾಪ್ತವಯಸ್ಸಿಗೆ ಬಂದ ಶಿರೂರು ಯಾವ ಎಗ್ಗೂಇಲ್ಲದೆ ಪಂಚೇಂದ್ರಿಯಗಳನ್ನ ಧಾರಾಳವಾಗಿಯೇ ಬಳಸತೊಡಗಿದ್ದಲ್ಲದೆ ತನ್ನ ಬಗ್ಗೆ ಮಾತನಾಡಲು ಮುಂದಾದ ಇತರ ಸ್ವಾಮಿಗಳ ಜಾತಕವನ್ನೇ ಬಿಚ್ಚಿಡುವುದಾಗಿ ಬೆದರಿಕೆ ಹಾಕಿದ್ದರಂತಲ್ಲಾ. ಹಾಗೆ ನೋಡಿದರೆ ಇದು ಬೆದರಿಕೆಯಲ್ಲ ನಿಮ್ಮ ಕೆಲಸವನ್ನ ನೀವು ಮಾಡಿ ನನ್ನ ಕೆಲಸವನ್ನ ನಾನು ಮಾಡುತ್ತೇನೆ ಎಂದ ಶಿರೂರು ಎಲ್ಲವನ್ನ ಕಂಠಪೂರ್ತಿ ಅನುಭವಿಸಿದರಂತಲ್ಲಾ. ಅಂತೂ ಬುದ್ದಿ ಮತ್ತು ಭಾಷೆಯ ಬಗ್ಗೆ ನಿಯಂತ್ರಣ ಕಳೆದುಕೊಂಡ ಶಿರೂರು ಅಷ್ಟಮಠಕ್ಕೆ ಅನಿಷ್ಟವಾದ ಕೂಡಲೇ ಅವರ ಕೊಲೆಯಾಯ್ತಂತಲ್ಲಾ ಥೂತ್ತೇರಿ.

*****

ಶಿರೂರು ಸ್ವಾಮಿಯ ಅಕ್ರಮ ಸಂತಾನದಂತಿರುವ ಕೆಲವೇ ಕೆಲವು ಮಾಧ್ಯಮದ ಮುಸಂಡಿಗಳು ಶಿರೂರನ ಬಾಲಲೀಲೆ, ಪ್ರಾಪ್ತ ವಯಸ್ಸಿನ ಬಾನಗಡಿ ಹಾಗೂ ಸ್ವಾಮಿಯಾದ ನಂತರ ನಡೆಸಿದ ಕಾಮಕ್ರೀಡೆಯನ್ನ ಮರೆಮಾಚಿ ರಮ್ಯಾಶೆಟ್ಟಿ ಎಂಬುವಳು ಮಾಯಾಂಗನೆ, ವಿಷಕನ್ಯೆ, ನಯವಂಚಕಿ ಶಿರೂರು ಶಿರಭಾಗದಲ್ಲಿದ್ದ ಸರವನ್ನು ಲಫಟಾಯಿಸಿದ್ದಾಳೆ. ಕೈ ಕಡಗವನ್ನು ಕಿತ್ತುಕೊಂಡಿದ್ದಾಳೆ. ಇವೆಲ್ಲವನ್ನ ದೋಚಿಕೊಂಡು ಹೋಗುವ ಮುನ್ನ ಪಾಪ ದೇವರಂತಹ ಶಿರೂರು ಸ್ವಾಮಿಗೆ ವಿಷಪ್ರಾಶನ ಮಾಡಿಸಿರಲುಬಹುದು. ಆಕೆ ಮುಸ್ಲಿಂ ಹೆಣ್ಣುಮಕ್ಕಳು ಧರಿಸುವಂತಹ ಬುರ್ಖಾ ಧರಿಸಿದ್ದಳು ಎಂದರೆ, ಪಾತಕಕೃತ್ಯ ನಡೆಸಿರುವುದಕ್ಕೆ ಇನ್ನಾವ ಸಾಕ್ಷಿ ಬೇಕು ಎಂಬಂತೆ ಬಿತ್ತರಿಸುತ್ತ ಕೂತಿವೆಯಂತಲ್ಲಾ ಥೂತ್ತೇರಿ.

*****

ಅಷ್ಟಮಠದ ಯತಿಗಳಲ್ಲೇ ಸರ್ವಶ್ರೇಷ್ಠರೂ, ಮನುಕುಲತಿಲಕರೂ ಮತ್ತು ಕೃಷ್ಣನ ಭಾಗಕ್ಕೆ ವಾಸುದೇವನಂತಿರುವ ಪೇಜಾವರ ಶ್ರೀಗಳನ್ನ ಮಾತನಾಡಿಸಿದರೆ ಹೇಗೆ ಅನ್ನಿಸಿ ಫೋನ್ ಮಾಡಲಾಗಿ ರಿಂಗಾಯ್ತು, ರಿಂಗ್ ಟೋನ್…… ಕೃಷ್ಣ ನೀ ಬೇಗನೇ ಬಾರೋ, ಬೇಗನೆ ಬಂದು ಮುಕ್ತಿಯ ತೋರೋ. ಕೃಷ್ಣಾ………….. ಹಲೋ
“ನಮಸ್ಕಾರ ಸ್ವಾಮೀಜಿ ನಾನು ಯಾಹೂ.”
“ಯಾರ ಬಳಿಯಲ್ಲೂ ಮಾತನಾಡಲು ಸಮಯವಿಲ್ಲ.”
ಒಂದೇ ನಿಮಿಷ ಸ್ವಾಮಿ.”
“ಸಾಧ್ಯವಿಲ್ಲ.”
“ಹಾಗಾದ್ರೆ ನಮ್ಮ ಮನಸ್ಸಿಗೆ ಬಂದದ್ದನ್ನ ಬರಕೊಳ್ತೀವಿ ಸ್ವಾಮಿ.”
“ಎರಡೇ ಮಾತಲ್ಲಿ ಕೇಳಿ.”
“ಧರ್ಮರಾಯ ಇದ್ದ ಜಾಗದಲ್ಲಿ ಮಳೆ ಬೆಳೆ ಜೊತೆಗೆ ಅಪರಾಧಗಳು ನಡೀತಿರಲಿಲ್ಲ. ಹಾಗೇ ನಮ್ಮ ಪೇಜಾವರರು ನೆಲೆಸಿದ ಜಾಗ ಅಂದುಕೊಂಡಿದ್ದೋ.”
“ಆ ನಂಬಿಕೆಗೆ ಈಗ ಯಾವ ತೊಂದರೆಯೂ ಆಗಿಲ್ಲ.”
“ಇದೇನು ಸ್ವಾಮಿ ಹೀಗಂತಿರಿ, ಪ್ರಳಯದಂತಹ ಮಳೆ ಆಗಿದೆ, ಶಿರೂರು ಸ್ವಾಮಿ ಕೊಲೆಯಾಗಿದೆ.”
“ಅದನ್ನ ಕೊಲೆ ಅಂತ ಈಗಲೇ ಹೇಳಲು ಬರುವುದಿಲ್ಲ.”
“ನಂತರ ಹೇಳಬಹುದಾ.”
“ನೋಡಿ ಇವರೆ ಈಗ ನಾವು ಯಾವ ವಿಷಯ ಕುರಿತು ಏನೂ ಹೇಳುವುದಿಲ್ಲ.”
“ಅಂತಹ ಸ್ಥಿತಿ ಶಿರೂರು ತಂದಿಟ್ಟರಲ್ಲಾ ಸ್ವಾಮೀಜಿ.”
“ಅಂತಹ ಸ್ಥಿತಿ ಬಂದಿಲ್ಲ.”
“ನಿಮ್ಮ ಬುಡಕ್ಕೆ ಬಂದಿದೆಯಲ್ಲಾ ಸ್ವಾಮಿ.”
“ನಮ್ಮ ಬುಡಕ್ಕೆ ಯಂತ ಬಂದಿಲ್ಲ.”
“ಪೇಜಾವರಶ್ರೀ ತಾರುಣ್ಯದಲ್ಲಿ ತರುಣಿಯ ಸಂಗ ಮಾಡಿದ್ದರು ಅದರ ಫಲವಾಗಿ ಮಗಳಿದ್ದಾಳೆ ಅಂತ ದೂರಿದೆಯಲ್ಲ ಸ್ವಾಮೀಜಿ.”
“ಅದನ್ನ ಸಾಭೀತುಮಾಡಿದರೆ ಪೀಠತ್ಯಾಗ ಮಾಡುತ್ತೇನೆ.”
“ನೀವು ಮಾಡದೆಯಿದ್ರೂ ಆಯಸ್ಸು ಅವಧಿ ಎಲ್ಲ ಮುಗಿದಿದೆ, ಈಗಿನ ನಿಮ್ಮ ತ್ಯಾಗ ಒಂಥರ ಮಾಧ್ವ ಕುಲವೇ ತಲೆತಗ್ಗಿಸುವಂತದ್ದು.”
“ಮಾಧ್ವಕುಲ ತಲೆತಗ್ಗಿಸುವಂತಹ ಕೆಲಸ ನಾವು ಮಾಡಿಲ್ಲ.”
“ನೀವು ಮಾಡದೇಯಿದ್ರೂ ಮಾಡೋರಿಗೆ ಪುಸಲಾಯಿಸಿದ್ದೀರಿ.”
“ಅದನ್ನ ಸಬೀತು ಮಾಡಿದರೆ ಪೀಠತ್ಯಾಗ ಮಾಡ್ತೇನೆ.”
“ಮಾಡಬೇಡಿ ಅಲ್ಲೇ ಇರಿ, ಆದರೆ ಈ ಹಿಂದೆ ಹೆಣ್ಣಿನ ಸಂಗದ ಬಗ್ಗೆ ಪ್ರಚೋದನೆಗೊಂಡ ಸ್ವಾಮಿಯೊಬ್ಬರು ಪೀಠತ್ಯಾಗ ಮಾಡಿ ಸಂಸಾರಿಯಾಗುತ್ತೇನೆ ಅಂದಾಗ ತಾವು ಹಾಗೆ ಮಾಡಬೇಡಿ, ಪೀಠದಲ್ಲಿ ಇದ್ದುಕೊಂಡೇ ಗುಟ್ಟಾಗಿ ನಿಭಾಯಿಸಿ ಅನ್ನೋ ಮಾತನ್ನ ತಾವು ಹೇಳಿದ್ದೀರಿ.”
“ಇಲ್ಲ ನಾನು ಹಾಗೆ ಹೇಳಿಲ.್ಲ”
“ತಮ್ಮ ಮಾತನ್ನ ಮೀರಿ ಪೀಠತ್ಯಾಗ ಮಾಡಿ ಈಗ ಅಮೇರಿಕದಲ್ಲಿ ಸಂಸಾರಿಯಾಗಿರೊ ವ್ಯಕ್ತಿ, ನಮ್ಮ ಜೊತೆ ನಿಮ್ಮ ಸಂಧಾನದ ಮಾತನ್ನ ಹಂಚಿಕೊಂಡ್ರು ಇದಕ್ಕಿಂತ ಸಾಕ್ಷಿಬೇಕೆ”
“ನೋಡಿ ಇವರೆ ನಾನು ಹೇಳಿದ್ದು ಸನ್ಯಾಸಿ ಜೀವನ ಕಷ್ಟಕರವಾದದ್ದು ಅದನ್ನ ನಿಭಾಯಿಸಿ ಅಂತ ಹೇಳಿದ್ದು.”
“ಹೊಂದಾಣಿಕೆಯಿಂದ.”
“ಹಾಗಲ್ಲ ಕೃಷ್ಣಪೂಜೆ ಓದು ಧ್ಯಾನವ್ರತಗಳನ್ನ ಮಾಡಿಕೊಂಡು ನಮ್ಮ ಮನಸ್ಸನ್ನ ನಿಯಂತ್ರಣದಲ್ಲಿ ಇಟ್ಟುಕೊಂಡು ಸನ್ಯಾಸಿ ಜೀವನವನ್ನ ಸಾಗಿಸಬೇಕು.”
“ಅದು ಸರಿ ಸ್ವಾಮಿ ನೀವು ಪೂಜೆ ಮಾಡೋ ದೇವರೆ ಸ್ತ್ರೀಲೋಲ. ಮತ್ತೆ ಪೀಡಕನಾಗಿದ್ದ. ಅವನು ಕಟ್ಟಿಕೊಂಡ ಸ್ತ್ರೀಯರ ಸಂಖ್ಯೆ ಅಗಣಿತ, ಅಂತಹ ವ್ಯಕ್ತಿಯನ್ನ ಪೂಜೆ ಮಾಡೋರು ಸನ್ಯಾಸಿ ಜೀವನ ಮಾಡದು ಸುಳ್ಳಲ್ಲವ.”
“ನಾವಿದ್ದೇವಲ್ಲ.”
“ನಿಮ್ಮ ಮಠದಲ್ಲಿದ್ದವರಿಂದಲೇ ನಿಮ್ಮ ಜೀವನವೂ ಅನಾವರಣವಾಯ್ತಲ್ಲ ಸ್ವಾಮಿ.”
“ಯಂತ ಅನಾವರಣವಾಯ್ತು.”
“ಬೇರೆಯವರಿಗೆ ಗೌಪ್ಯ ಸುಖಸಂಸಾರ ಹೇಳಿಕೊಟ್ಟವರು, ಹಾಗೇ ತಾವೂ ಮಾಡುತ್ತಿರಬಹುದಲ್ಲ, ಇಂತ ಅನುಮಾನಗಳು ಈಗ ಹುಟ್ಟಿಕೊಂಡಿವೆ, ತಡವಾದರೂ ಸತ್ಯದರ್ಶನವಾಗುತ್ತಿವೆ. ಕರ್ನಾಟಕದ ಮಠಗಳ ಮಾನ ಹರಾಜಾಗ್ತಾಯಿದೆ. ಇಷ್ಟರ ನಡುವೆ ಇನ್ನೂ ಕೆಲವು ಮಠಗಳು ತಮ್ಮ ನೈತಿಕ ಜವಬ್ದಾರಿ ಬಿಟ್ಟುಕೊಟ್ಟಿಲ್ಲ. ಆದರೆ ನಿಮ್ಮ ಮಠಗಳು ಹಣ ಅಧಿಕಾರ ಸ್ತ್ರೀಶಕ್ತಿ ಮತ್ತು ಮತಾಂಧತೆಯಿಂದ ಪತನವಾಗ್ತಾಯಿವೆ. ಅದೂ ನೈತಿಕವಾಗಿ ನಿಮಗೂ ಹಿಂಗನ್ಸಲ್ಲ ಸ್ವಾಮೀಜಿ……. ಹಲೋ ಹಲೋ ಹಲೋ ಮಾತಾಡಿ ಸ್ವಾಮೀಜಿ..
ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....