Homeರಂಜನೆಕ್ರೀಡೆಅಂಡರ್ 19 ವಿಶ್ವಕಪ್ : ಪಾಕ್‌ ಸೋಲಿಸಿ ಫೈನಲ್‌ಗೆ ಲಗ್ಗೆಯಿಟ್ಟ ಭಾರತ

ಅಂಡರ್ 19 ವಿಶ್ವಕಪ್ : ಪಾಕ್‌ ಸೋಲಿಸಿ ಫೈನಲ್‌ಗೆ ಲಗ್ಗೆಯಿಟ್ಟ ಭಾರತ

- Advertisement -
- Advertisement -

ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಈ ವರೆಗೂ ಒಂದೂ ಪಂದ್ಯ ಸೋಲದ ಭಾರತ ಮತ್ತು ಪಾಕಿಸ್ತಾನ್ ಎರಡೂ ತಂಡಗಳು ಇಂದು ಸೆಮಿ ಪೈನಲ್ ಹಂತದಲ್ಲಿ ಸೆಣಸಾಡಿದರು. ಪಂದ್ಯದಲ್ಲಿ ಭಾರತ ಒಂದೂ ವಿಕೆಟ್ ನೀಡದೆ ಭರ್ಜರಿ ಹತ್ತು ವಿಕೆಟ್‌ಗಳ ಜಯ ಗಳಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಪಾಕಿಸ್ತಾನವು ಭಾರತದ ಶಿಸ್ತುಬದ್ಧ ದಾಳಿಯಿಂದಾಗಿ 43.1 ಓವರ್ ಗೆ 172 ರನ್ ಗಳಿಸಿ ತನ್ನ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು. ಶುಶಾಂತ್ ಮಿಶ್ರ 28ರನ್ ನೀಡಿ 3 ವೆಕೆಟ್ ಪಡೆದರೆ, ಕಾರ್ತಿಕ್ ತ್ಯಾಗಿ 32ಕ್ಕೆ 2 ಹಾಗೂ ರವಿ ಭಿಶ್ನೋಯ್ 46 ರನ್ ನೀಡಿ 2 ವಿಕೆಟ್ ಪಡೆದು ಬೌಲಿಂಗ್ ಅಲ್ಲಿ ಮಿಂಚಿದರು.

ಪಾಕ್ ಪರ ರೋಹೈಲ್ ನಝೀರ್ 62 ರನ್ ಹಾಗೂ ಹೈದರ್ ಅಲಿ 56 ರನ್ ಗಳಿಸಿ, ತಮ್ಮ ತಂಡ ಸಾಧಾರಣ ಮೊತ್ತ ಪೇರಿಸಲು ನೆರವಾದರು.

ಎರಡನೇ ಹಂತದಲ್ಲಿ ಬ್ಯಾಟ್ ಮಾಡಿದ ಭಾರತ ಸಕ್ಸೆನಾ ಹಾಗೂ ಜೈಸ್ವಾಲ್ ರ ಜೊತೆಯಾಟದಿಂದ ಯಾವುದೇ ವಿಕೇಟ್ ನಷ್ಟವಿಲ್ಲದೆ 35.2 ಓವರ್ ಗಳಲ್ಲಿ 176 ರನ್ ಗಳಿಸಿ ಜಯ ಸಾಧಿಸಿದರು. ಆ ಮೂಲಕ ಭಾರತ ಫೈನಲ್ ಹಂತ ತಲುಪಿತು.

ಪಂದ್ಯ ಗೆಲ್ಲುವ ಕೊನೆಯ ಹಂತದಲ್ಲಿದ್ದಾಗ ಜೈಸ್ವಾಲ್ 99 ರ ಗಡಿಯಲ್ಲಿದ್ದರು. ತಾವು ಆಡಿದ ಕೊನೆಯ ಬಾಲ್ ಅನ್ನು ಸಿಕ್ಸರ್ ಬಾರಿಸಿ ಅಚ್ಚರಿ ಮೂಡಿಸಿದರು. ಜೈಸ್ವಾಲ್ 105 (113) ಹಾಗೂ ಸಕ್ಸೇನಾ 59(99) ಜೊತೆಯಾಟದಿಂದ ಭಾರತ ಐತಿಹಾಸಿಕವಾದ ಜಯ ದಾಖಲಿಸಿತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ಕೋರ್ಟ್

0
ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದ ಮಹಿಳೆಯೊಬ್ಬರ ಅಪಹರಣ ಪ್ರತ್ಯೇಕ ಪ್ರಕರಣದಲ್ಲಿ ಶಾಸಕ ಹೆಚ್‌.ಡಿ ರೇವಣ್ಣ ಅವರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಲು ಬೆಂಗಳೂರಿನ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಿರಾಕರಿಸಿದೆ. ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ...