“ಭಾರತದ ಪ್ರಧಾನಿಯಾಗಬೇಕೆಂಬ ಯಾರದೋ ಒಬ್ಬರ ಆಸೆಗಾಗಿ, ನಕ್ಷೆಯಲ್ಲಿ ರೇಖೆಯೊಂದನ್ನು ರಚಿಸಿ ಭಾರತವನ್ನು ವಿಭಜಿಸಲಾಯಿತು. ವಿಭಜನೆಯ ನಂತರ, ಹಿಂದೂಗಳು, ಸಿಖ್ಖರು ಮತ್ತು ಇತರ ಅಲ್ಪಸಂಖ್ಯಾತರನ್ನು ಹೇಗೆ ಹಿಂಸಿಸಲಾಯಿತು ಎಂಬುದನ್ನು ಊಹಿಸಲೂ ಅಸಾಧ್ಯ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ರಾಷ್ರಪತಿಗಗಳ ಭಾಷಣದ ಚರ್ಚೆಗೆ ಉತ್ತರಿಸುತ್ತಾ, ಸಿಎಎ ಕಾಯ್ದೆಯಲ್ಲಿ ಅಲ್ಪಸಂಖ್ಯಾತರ ವಿರುದ್ಧ ತಾರತಮ್ಯ ಮಾಡಿದ್ದಾರೆ ಎಂಬ ಆರೋಪವನ್ನು ಖಂಡಿಸಿದ ಪ್ರಧಾನಿ, ಕಾಂಗ್ರೆಸ್ ಮೇಲೆ ತೀವ್ರ ದಾಳಿ ನಡೆಸಿದರು. ಜವಾಹರಲಾಲ್ ನೆಹರೂ, ದೇಶ ವಿಭಜನೆ, 1975 ರ ತುರ್ತು ಪರಿಸ್ಥಿತಿ ಮತ್ತು 1984 ರ ಸಿಖ್ ವಿರೋಧಿ ಗಲಭೆಗಳ ಬಗ್ಗೆ ಉಲ್ಲೇಖಿಸಿದರು.
“1950 ರಲ್ಲಿ, ನೆಹರೂ-ಲಿಯಾಕತ್ ಅಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು, ಈ ಒಪ್ಪಂದ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ವಿರುದ್ಧ ತಾರತಮ್ಯ ಮಾಡಲಾಗುವುದಿಲ್ಲ ಎಂದು ಹೇಳಿದೆ ಆದರೂ ನೆಹರೂ ಅವರಂತಹ ದೊಡ್ಡ ಜಾತ್ಯತೀತ ಹಾಗೂ ದೂರದೃಷ್ಟಿಯಿರುವ ವ್ಯಕ್ತಿ ಇದ್ದರೂ ಯಾಕೆ ಹೀಗಾಯಿತು” ಎಂದರು.
ವಿಭಜನೆಯ ನಂತರ ವಿಭಜಿತ ದೇಶಗಳ ನಡುವೆ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಜನರು ದೊಡ್ಡ ಪ್ರಮಾಣದಲ್ಲಿ ವಲಸೆ ಹೋಗುವ ಹಿನ್ನೆಲೆಯಲ್ಲಿ ನೆಹರೂ ಮತ್ತು ಪಾಕಿಸ್ತಾನದ ಪ್ರಧಾನಿ ಲಿಯಾಕತ್ ಅಲಿ ನಡುವೆ ಈ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು.


