ಆಡಿದ ಮಾತೆಲ್ಲವೂ ತಪ್ಪಾಗುವಂತೆ ಕಂಡಾಗ ಮೌನವಾಗಿರುವುದು ಲೇಸು. ಇಂತಹ ಸೂಕ್ಷ್ಮಗಳನ್ನು ಅರಿಯದ ಕುಮಾರಣ್ಣ ಮಾತನಾಡುತ್ತಲೆ ಆಡಿದ ಮಾತಿನ ಕೋಟೆಯೊಳಗೆ ಬಂದಿಯಾಗುತ್ತಿದ್ದಾರಂತಲ್ಲಾ, ಜವಾಬ್ದಾರಿ ಹೊತ್ತವರಿಂದ ಒಳ್ಳೆ ಮಾತುಗಳು ಬರಬೇಕಾದರೆ ಓದಿನ ಹಿನ್ನೆಲೆ ಇರಬೇಕಾಗುತ್ತದೆ. ಇಲ್ಲ ಅನುಭವದ ದ್ರವ್ಯ ಇರಬೇಕಾಗುತ್ತದೆ, ಇವೆರಡೂ ಇರದವರು ಕುಮಾರಣ್ಣನಂತಿರುತ್ತಾರೆ ಉದಾಹರಣೆಗೆ ಪ್ರತ್ಯೇಕತೆಯ ಕೂಗಿನಿಂದ ವಿಚಲಿತಗೊಂಡ ಕುಮಾರಣ್ಣ “ಪ್ರತ್ಯೇಕ ರಾಜ್ಯವಾದರೆ ಅಭಿವೃದ್ಧಿಗೆ ಹಣ ಎಲ್ಲಿಂದ ತರುತ್ತೀರಿ” ಎಂದುಬಿಟ್ಟಿದ್ದಾರೆ, ಇದರಿಂದ ಅನಾವರಣಗೊಂಡಿದ್ದೇನೆಂದರೆ ಅಂತೂ ಪ್ರತ್ಯೇಕತೆ ನಿಮ್ಮ ಮನಸ್ಸಿನಲ್ಲಿದೆ. ಹಣಕಾಸಿನ ಖಜಾನೆ ಬೆಂಗಳೂರಾಗಿರುವುದರಿಂದ ಅದು ನಿಮ್ಮಲಿಲ್ಲ ಇತ್ಯಾದಿ ಎಂಬಂತೆ ಅವರ ಮಾತು ಹಲವು ಚರ್ಚೆ ಹುಟ್ಟುಹಾಕುತ್ತಿವೆ. ಅಂತೂ ಸರಿಯಾಗಿ ಕನ್ನಡ ಮಾತನಾಡಲು ಬಾರದ ರಾಮುಲು ಎಂಬ ವ್ಯಕ್ತಿಗೆ ಉತ್ತರಕೊಡಲು ಹೋಗಿ ಸಿಕ್ಕಿಕೊಂಡಿರುವ ಕುಮಾರಣ್ಣನನ್ನು ಉಳಿಸಲು ಹೋದ ಧÀೃತರಾಷ್ಟ್ರರು ಎಂದಿನಂತೆ ಜಾತಿ ಲೆಕ್ಕಾಚಾರ ತೆಗೆದು ಲಿಂಗಾಯಿತ ಮುಖ್ಯಮಂತ್ರಿಗಳ ಅವಧಿಯ ಕೆಲಸಗಳನ್ನು ಎಣಿಸಿ ಎಂದಿದ್ದಾರಂತೆ. ಆ ಕೆಲಸವೇನಾದರೂ ನಡೆದರೆ ದೇವೇಗೌಡರೆ ಸಿಕ್ಕಿಬೀಳುತ್ತಾರಂತಲ್ಲಾ ಏಕೆಂದರೆ ಇಡೀ ಕರ್ನಾಟಕವನ್ನು ಸಮಭಾವದಲ್ಲಿ ಕಂಡ ವಿರೇಂದ್ರಪಾಟೀಲರು ತಮ್ಮ ಸ್ವಂತ ಕ್ಷೇತ್ರಕ್ಕೆ ಏನೂ ಮಾಡಿಲ್ಲ ಏಕೆಂದರೆ ಅವರ ತಲೆಯಲ್ಲಿರುವುದು ಅಖಂಡ ಕರ್ನಾಟಕ. ಅದೇ ದೇವೇಗೌಡರ ತಲೆಯಲ್ಲಿರುವುದು ಹೊಳೆನರಸೀಪುರವಂತಲ್ಲಾ ಥೂತ್ತೇರಿ.
*******
ಕುಮಾರಣ್ಣನವರು ಅನಿಸಿದ್ದನ್ನ ಅಂದುಬಿಡುವುದರಲ್ಲಿ ನಿಸ್ಸೀಮರು. ಅದರಂತೆ ಮಾಧ್ಯಮದವರ ಮೇಲೆ ಮುಗಿಬಿದ್ದಿದ್ದಾರೆ. ಇದನ್ನು ವಿಶ್ಲೇಷಿಸುವುದಾದರೆ ಕೆಲವು ಮಾಧ್ಯಮದವರಿಗೆ ಅವರಿಗೆ ಬೇಕಿದ್ದ ಸರಕಾರ ಬರಲಿಲ್ಲ ಬಂದಿದ್ದರೆ ಇನ್ನೊಂದೆರಡು ಸೈಟು ಮತ್ತು ಕಾರು ಕೊಳ್ಳಬಹುದಿತ್ತು. ರೆಸಾರ್ಟುಗಳಲ್ಲಿ ಪಾರ್ಟಿ ಮಾಡುತ್ತ ತಾವೇ ಸರಕಾರ ನಡೆಸುವವರಂತೆ ಬಹುಬೆಲೆಯ ಮದÀ್ಯ ಸೇವಿಸುತ್ತ ಉಳಿದದ್ದನ್ನ ಮನೆಗೆ ತೆಗೆದುಕೊಂಡು ಹೋಗಬಹುದಿತ್ತು. ಈಗ ಅದಾವುದಕ್ಕು ಅವಕಾಶವಿಲ್ಲದೆ ಕೇವಲ ಕುಮಾರಣ್ಣನ ಆಪ್ತ ಪತ್ರಕರ್ತರು ಮಾತ್ರ ತಿಂದುಂಡು ತೇಗುತ್ತಿರುವುದನ್ನು ನೋಡಿ ಸುಮ್ಮನಿರಲಾದೀತೆ. ಅದಕ್ಕಾಗಿಯೇ ಕರ್ನಾಟಕದ ಭೂಪಟವನ್ನೇ ಅರ್ಧ ಮಾಡಿಕೊಂಡು ಕೆರೆಯುತ್ತ ಮಾತನಾಡುತ್ತ ಕುಮಾರಣ್ಣನನ್ನು ರೇಗಿಸಿದ್ದಾರಂತಲ್ಲಾ. ಕುಮಾರಣ್ಣನ ಬಗ್ಗೆ ಪತ್ರಿಕೆಗಳೇನು ಜನಸಾಮಾನ್ಯರಿಗೂ ಅನುಮಾನಗಳಿವೆ. ಪಾಪ ಆತ ಜನಾಭಿಪ್ರಾಯದ ಮುಖ್ಯಮಂತ್ರಿಯಲ್ಲ ಗತಿಗೆಟ್ಟ ಕಾಂಗ್ರೆಸ್ಸಿಗರು ತಲೆಕೆಟ್ಟ ಬಿಜೆಪಿಗಳಿಗೆ ಹೆದರಿ ಮತಿಗೆಟ್ಟ ದಳದವರೊಂದಿಗೆ ಕೂಡಿಕೆ ಮಾಡಿಕೊಂಡರು. ಇದರಿಂದ ಇನ್ನ ತಲೆಕೆಟ್ಟಂತಾದ ಬಿಜೆಪಿಗಳು ರಾಜ್ಯವನ್ನೇ ಹೊಡೆದು ಹಾಕುವ ಹೀನಕೃತ್ಯಕ್ಕೆ ಕೈಹಾಕಿದೆ. ಈ ಹಿಂದೆ ಮಸೀದಿಯನ್ನೆ ಹೊಡೆದು ಹಾಕಿದ ಇತಿಹಾಸ ಹೊಂದಿರುವ ಬಿಜೆಪಿಗಳಿಗೆ ಯಾವುದೂ ಅಸಾಧ್ಯವಲ್ಲ. ಆದರೇನು ತನ್ನ ಮನೆತನ ಯಾವಾಗಲೂ ಅಧಿಕಾರದಲ್ಲಿರಬೇಕೆಂಬ ಕನಸು ಕಾಣುತ್ತ ಅದಕ್ಕಾಗಿ ಮಾರಿ ಬೆಲೆ ಹೆಣೆಯುತ್ತ ಕುಳಿತ ದೇವೇಗೌಡರ ಮನದಲ್ಲಿ ಕರ್ನಾಟಕ ಇಬ್ಭಾಗವಾಗುವುದು ಬೇಕಿಲ್ಲ ಎಂದು ಹೇಗೆ ಹೇಳುವುದು ಥೂತ್ತೇರಿ.
*******
ಮಾತಿನ ಬಲೆಯಲ್ಲಿ ಸಿಕ್ಕಿಕೊಂಡ ಕುಮಾರಣ್ಣನ ವರಸೆ ಹೊಸದೇನಲ್ಲ. ಹಿಂದೆ 20 ತಿಂಗಳು ಮುಖ್ಯಮಂತ್ರಿಯಾಗಿ ಇಳಿದಾಗ ಜನಾಂಗದ ಸಭೆಯಲ್ಲಿ ಮಾತನಾಡುತ್ತ ನಾನು ಅಧಿಕಾರದಲ್ಲಿದ್ದಾಗ ನನ್ನ ಜನಕ್ಕೆ ಏನೂ ಮಾಡಲಾಗಲಿಲ್ಲ ಕ್ಷಮಿಸಿ ಎಂದಿದ್ದರು. ಕಳೆದ ಚುನಾವಣೆಯಲ್ಲಿ ಜಾತಿ ಪ್ರಸ್ತಾಪ ಮಾಡಿ ಜನಾಂಗವನ್ನು ಎತ್ತಿ ಕಟ್ಟಿದ್ದರು. ಉತ್ತರ ಕರ್ನಾಟಕದ ಜನರನ್ನ ಮರಳು ಮಾಡಲು ಹುಬ್ಬಳ್ಳಿಯಲ್ಲಿ ಮನೆ ಮಾಡಿದ್ದರು. ಆದರದು ವರ್ಕೌಟಾಗಲಿಲ್ಲ. ಈಗ ಬಜೆಟ್ಟಿನಲ್ಲೂ ಪ್ರಾದೇಶಿಕ ಅಸಮತೋಲನ ಎದ್ದುಕಂಡಿದೆ. ಜನ ತಮ್ಮ ನಾಯಕನಾದವನನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ ಎಂಬ ತಿಳಿವಳಿಕೆಯಿಲ್ಲದ ಕುಮಾರಣ್ಣ ಈಗಾಗಲೇ ಆಡಿರುವ ಮಾತುಗಳಿಂದ ಖಚಿತ ಅಭಿಪ್ರಾಯವಿಲ್ಲದ ಪರಿಸ್ಥಿತಿಯ ಕೂಸೆಂಬುದನ್ನು ಸಾಬೀತು ಪಡಿಸಿದ್ದಾರೆ. ರಾಹುಲ್‍ಗಾಂಧಿ ಕೃಪೆಯಿಂದ ನಾನು ಮುಖ್ಯಮಂತ್ರಿಯಾದೆ ಎಂದಿದ್ದ ಕುಮಾರಣ್ಣ ಈಗಾಗಲೇ ಅಯ್ಯಪ್ಪನ ಕೃಪೆಯಿಂದ ಮುಖ್ಯಮಂತ್ರಿಯಾದೆ ಎಂದಿದ್ದಾರೆ. ಮದುವೆಯಾಗದೆ ಅಂಗೇ ಉಳಿದಿರುವ ರಾಹುಲ್‍ಗಾಂಧಿಯೇ ಅಯ್ಯಪ್ಪನಿಗೆ ಸಮಾನ ಎಂದುಕೊಂಡರೆ ತೊಂದರೆಯಿಲ್ಲ. ಆದರೆ ಸಮಯಕ್ಕೊಂದು ಮಾತು ಬದಲಿಸುವ ಕುಮಾರಣ್ಣನ ಎದುರು ಇನ್ನೊಂದೆರಡು ಸಮಸ್ಯೆಗಳಿವೆ, ಅವುಗಳ ಪೈಕಿ ಯಾರೊ ಲಂಬಾಣಿ ಸ್ವಾಮಿ ಮುಂದಿನ ಮುಖ್ಯಮಂತ್ರಿ ನೀವೇ ಅಂದಿದ್ದರಂತೆ. ಅಣ್ಣ ಇನ್ನು ಅಲ್ಲಿಗೆ ಹೋದಾಗ ಏನೇಳುತ್ತಾರೊ ಏನೋ ಥೂತ್ತೇರಿ.
*******
ಕರ್ನಾಟಕ ಹಿಂದೆಂದೂ ಕಂಡರಿಯದ ಸಮಸ್ಯೆಗಳಿಂದ ತತ್ತರಿಸುತ್ತಿರುವಾಗ ಅಷ್ಟಮಠಗಳು ಕಾಮದಾಹದಿಂದ ತತ್ತರಿಸುತ್ತಿವೆಯಂತಲ್ಲಾ. ಸದರಿ ಸಮಸ್ಯೆಗೆ ಬಹಳ ಹಿಂದೆಯೇ ನಿಡುಮಾಮಿಡಿ ಸ್ವಾಮಿಗಳಾದ ವೀರಭದ್ರ ಚೆನ್ನಮಲ್ಲ ಸ್ವಾಮೀಜಿಗಳವರು ವೀರ್ಯ ಕುರಿತ ಚಿಂತನೆ ನಡೆಸಿ ಮಠದ ಯತಿಗಳನ್ನಾಗಿ ಬಾಲಕರನ್ನು ನೇಮಿಸಬಾರದು, ಆತ ಪ್ರಾಪ್ತ ವಯಸ್ಸಿಗೆ ಬಂದನಂತರ ಲೈಂಗಿಕ ನಿಗ್ರಹದ ಶಕ್ತಿಗಳಿಸಿಕೊಂಡು ಪ್ರಾಯವನ್ನು ನಿಭಾಯಿಸಬಲ್ಲೆ ಎಂಬ ಆತ್ಮವಿಶ್ವಾಸ ಮೂಡಿಸಿಕೊಂಡಿದ್ದರೆ ಅಂತಹವನನ್ನು ಸ್ವಾಮಿಯನ್ನಾಗಿ ಮಾಡಿ ಇಲ್ಲವಾದರೆ ಹಿಡ ಮಾಡಿ ಯತಿಯನ್ನಾಗಿಸಿ ಎಂಬ ಸತ್ಯಸಂಗತಿ ಒಳಗೊಂಡ ಸಲಹೆ ಕೊಟ್ಟಿದ್ದರಲ್ಲ! ನಿಡುಮಾಮಿಡಿಯವರು ಇಂತಹ ಹೇಳಿಕೆಯನ್ನ ಆಡಿಕೊಂಡಿದ್ದ ಅಷ್ಟಮಠದ ಯತಿಗಳು, ಹಿಡ ಮಾಡುವುದಾಗಲಿ, ಬೀಜ ಹಿಸುಕುವುದಾಗಲಿ ಇದೆಲ್ಲ ಅನೈಸರ್ಗಿಕ ಕ್ರಿಯೆ. ನೈಸರ್ಗಿಕ ಕ್ರಿಯೆ ಯಾವುದಪ್ಪ ಅಂದ್ರೇ, ಮಠದಷ್ಟಕ್ಕೇ ಮಠವಾಯ್ತು. ನಮ್ಮಷ್ಟಕ್ಕೆ ನಾವು ಆರೈಕೆಗಾಗಿ ಕರೆಸಿಕೊಂಡ ಹೆಣ್ಣುಮಗಳನ್ನೇ ಅಂಗಾತÀ ಮಲಗಿಸಿಕೊಂಡು, ಕೃಷ್ಣಪೂಜೆ ಮಾಡಿದರೆ ಅಂತಹ ಯಾವ ಅಪÀರಾಧವೂ ಅಲ್ಲ; ಅನಾದಿಕಾಲದಿಂದಲೂ ಅಷ್ಟಮಠಗಳ ಯತಿಗಳು ಮಾಡಿಕೊಂಡು ಬಂದಿರುವುದು ಇದನ್ನೇ ಎಂದು ಭಾವಿಸಿ, ಯಾವ ಎಗ್ಗೂ ಇಲ್ಲದೆ ರಾಘವೇಶ್ವರನನ್ನೆ ಮೀರಿಸಿದರಂತಲ್ಲಾ. ಇದನ್ನೆಲ್ಲಾ ಕೇಳಿದ ಸಿದ್ದನಗೌಡ ಪಾಟೀಲ ಎಂಬ ಕಮ್ಯುನಿಸ್ಟ್ ಲೈಂಗಿಕ ಪ್ರತಿಪಾದಕರು “ಅಷ್ಟಮಠದ ಯತಿಗಳನ್ನ ಹಿಡಿದು ಸಾಮೂಹಿಕ ಮದುವೆ ಮಾಡಿಬಿಡುವುದೇ ಲೇಸು” ಎಂದರಂತಲ್ಲ. ಈ ಸುದ್ದಿ ಕೇಳಿದ ಅಷ್ಟಮಠದ ಲೈಂಗಿಕ ತಜ್ಞರು ಈಗ ಆಗಿರುವ ಅನಾಹುತವೇನು? ಮದುವೆ ಅಷ್ಟೊಂದು ಅನಿವಾರ್ಯವೆ, ಎಂದವಂತಲ್ಲಾ ಥೂತ್ತೇರಿ.
ನಮ್ಮ ಸಿಎಮ್ಮು ಸಮಯದ ಬೊಂಬೆಯಂತಲ್ಲಾ….!
- Advertisement -
- Advertisement -
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ


