Homeಚಳವಳಿಗೌರಿ ಲಂಕೇಶ್ ಹತ್ಯೆಯ ಕೊಡಗು ನಂಟು ಬಿಚ್ಚಿಟ್ಟ  ಕಾಂಗ್ರೆಸ್‍ನ  ಅಧೋಗತಿ!

ಗೌರಿ ಲಂಕೇಶ್ ಹತ್ಯೆಯ ಕೊಡಗು ನಂಟು ಬಿಚ್ಚಿಟ್ಟ  ಕಾಂಗ್ರೆಸ್‍ನ  ಅಧೋಗತಿ!

- Advertisement -
ಎಸ್‍ಐಟಿ ತಂಡ ತನಿಖೆ ಬಿಗಿಗೊಳಿಸಿದಂತೆಲ್ಲ `ಕ್ಯಾಪ್ಟನ್’ ಗೌರಿ ಹತ್ಯೆಯ ಒಂದೊಂದೇ ಸಿಕ್ಕುಗಳು ಬಿಡಿಸಿಕೊಳ್ಳುತ್ತಿವೆ. ಜೊತೆಗೆ ಕೊಲೆಗಡುಕ ಹಿಂದೂತ್ವವಾದಿಗಳ ಬಯಲಾಟವೂ ಬೆತ್ತಲಾಗುತ್ತಿದೆ. ಅರೆಸ್ಟಾದ ಹನ್ನೊಂದೂ ಜನರ ಬೇರುಗಳು ಒಂದಿಲ್ಲೊಂದು ರೂಪದಲ್ಲಿ ಸಂಘ ಪರಿವಾರದೊಡನೆ ನಂಟು ಹೊಂದಿರುವುದು ಖಾತ್ರಿಯಾಗುತ್ತಿದ್ದಂತೆಯೇ ಎಲ್ಲರ ಊಹೆಗಳು ದಿಟವಾಗುತ್ತಿವೆ. ನೋ ಡೌಟ್, ಸನಾತನಿ ಮನಸ್ಥಿತಿಗಳೇ ಗೌರಿಯನ್ನು ಕೊಂದಿವೆ! ಕೆಲ ಆಪಾದಿತರ ಪರ ವಾದಿಸಲು ಹಿಂದೂ ಸಂಘಟನೆಗಳೇ ವಕೀಲರನ್ನು ನೇಮಕ ಮಾಡೋದಾಗಿ ಕುಟುಂಬಸ್ಥರಿಗೆ ಭರವಸೆ ನೀಡಿರೋದು ಇದನ್ನು ಅನುಮಾನಕ್ಕೆ ಎಡೆಯಿಲ್ಲದಂತೆ ಸಾಬೀತು ಮಾಡುತ್ತದೆ.
ಆದರೆ, ಅಷ್ಟೂ ಅರೆಸ್ಟುಗಳಲ್ಲಿ ಕೊಡಗಿನ ರಾಜೇಶ್ ಬಂಗೇರಾನ ಬಂಧನವಿದೆಯಲ್ಲ ಅದು, ಕಾಂಗ್ರೆಸ್ ಎಂಬ ಪೊಲಿಟಿಕಲ್ ಪಾರ್ಟಿ ಕೊಡಗಿನ ಮಟ್ಟಿಗೆ ಅದೆಷ್ಟು ಹೊಣೆಗೇಡಿ ಕೂಟದಂತಾಗಿದೆ ಅನ್ನೋದನ್ನೂ ಸಾಬೀತುಮಾಡಿದೆ. ಈ ರಾಜೇಶ್ ಬಂಗೇರಾ ಸಂಘ ಪರಿವಾರದ ಹಿನ್ನೆಲೆಯವ ಅನ್ನೋದು ಎಷ್ಟು ಸತ್ಯವೋ, ಕಾಂಗ್ರೆಸ್‍ನ ಎಂಎಲ್‍ಸಿ ವೀಣಾ ಅಚ್ಚಯ್ಯ ಎಂಬ ಹೆಂಗಸಿನ ಆಪ್ತ ಕಾರ್ಯದರ್ಶಿಯಾಗಿದ್ದವ ಅನ್ನೋದೂ ಅಷ್ಟೇ ಆಘಾತಕಾರಿ ಸಂಗತಿ! ಕೊಡಗಿನ ಕಾಂಗ್ರೆಸ್ಸನ್ನು ಇಡಿಯಾಗಿ ನಿಯಂತ್ರಿಸುತ್ತಿರೋದು ಇದೇ ಹೆಂಗಸು. ಖರ್ಗೆ ಸಾಹೇಬರ ಖಡಕ್ ಕೃಪೆಯೇ ವೀಣಮ್ಮಳನ್ನು ಈ ಪರಿ ಪ್ರಭಾವಿಯಾಗಿ ಬೆಳೆಸಿದೆ. ಇಲ್ಲೇ ಇರೋದು ನೋಡಿ ಕಾಂಗ್ರೆಸ್‍ನ ದುರಂತ. ತನ್ನ ಪಕ್ಷದ ರಾಜಕೀಯ ಸಿದ್ಧಾಂತಕ್ಕೆ ತದ್ವಿರುದ್ಧ ನಿಲುವಿನ ವ್ಯಕ್ತಿಯೊಬ್ಬನನ್ನು ತಮ್ಮ ಆಪ್ತ ಸಹಾಯಕರನ್ನಾಗಿ ನೇಮಿಸಿಕೊಳ್ಳುವಷ್ಟು ರಾಜಕೀಯ ಮುಠ್ಠಾಳರು ಅಥವಾ ಅವಕಾಶವಾದಿಗಳ ಕೈಯಲ್ಲಿ ಕಾಂಗ್ರೆಸ್‍ನ ತಳಮಟ್ಟದ ಚುಕ್ಕಾಣಿ ಸಿಕ್ಕಿರೋದೆ ಆ ಪಕ್ಷ ರಾಷ್ಟ್ರ ರಾಜಕಾರಣದಲ್ಲಿ ಹೀಗೆ ಮುಗ್ಗರಿಸಲು ಕಾರಣ.
ರಾಜೇಶ್ ಬಂಗೇರಾನ ಬಂಧನವಾಗುತ್ತಿದ್ದಂತೆಯೇ ತನ್ನ ತಪ್ಪಿನ ಅರಿವಾಗಿರುವ ವೀಣಮ್ಮ ಕಂಡಕಂಡಲ್ಲೆಲ್ಲ ನನಗೂ ಆತನಿಗೂ ಎಂಥ ಸಂಬಂಧವೂ ಇಲ್ಲ, ಕೆಲಕಾಲ ನನ್ನ ಆಪ್ತಸಹಾಯಕ ಆಗಿದ್ದ ಅಷ್ಟೇ ಅಂತ ಸ್ಪಷ್ಟೀಕರಣದ ಪ್ಲೇಕಾರ್ಡ್ ಹಿಡಿದುಕೊಂಡು ಓಡಾಡುವಂತಾಗಿದೆ. ಮೇಲ್ನೋಟಕ್ಕೆ ಅದು ನಿಜದಂತೆಯೇ ಕಂಡುಬರುತ್ತದಾದರು ವೀಣಾ ಅಚ್ಚಯ್ಯ ತಾನೇ ತಾನಾಗಿ ಸೃಷ್ಟಿಸಿಕೊಂಡಿರುವ ಈ ಅವಾಂತರದ ಫಸಲುಗಳನ್ನು ಅನುಭವಿಸಲೇಬೇಕಿದೆ. ಯಾಕೆಂದರೆ ರಾಜೇಶ್ ಬಂಗೇರಾನ ಸೈದ್ಧಾಂತಿಕ ನಿಲುವು ಅದೇನೆ ಆಗಿರಲಿ, ಕನಿಷ್ಠ ಪಕ್ಷ ಅವನ ಪೊಲಿಟಿಕಲ್ ಹಿನ್ನೆಲೆಯನ್ನು ಗಮನಿಸಿದ ಎಂಥದ್ದೇ ರಾಜಕೀಯ ಗಮಾರ ಕೂಡಾ, ಕಾಂಗ್ರೆಸ್ ಎಂಎಲ್‍ಸಿಯೊಬ್ಬರಿಗೆ ಆಪ್ತ ಸಹಾಯಕನಾಗಲು ಈತ ನಾಲಾಯಕ್ಕು ಅಂತ ಹೇಳಿಬಿಡುತ್ತಾನೆ. ಯಾಕೆಂದರೆ ಶಿಕ್ಷಣ ಇಲಾಖೆಯ ಸರ್ಕಾರಿ ನೌಕರನಾಗಿದ್ದರೂ ಈತ ಈ ಹಿಂದೆ ಬಿಜೆಪಿಯ ಜಿಲ್ಲಾ ಪಂಚಾಯ್ತಿ ಅಧ್ಯಕ್ಷನಾಗಿದ್ದ ರವಿಕುಶಾಲಪ್ಪನಿಗೆ ಪಿಎ ಆಗಿ ಕೆಲಸ ಮಾಡಿದ್ದವ! ತನ್ನ ವಿರೋಧಿ ಪಕ್ಷದ ನಾಯಕನ ಪಿಎ ಆಗಿದ್ದವನನ್ನೇ ತನ್ನ ಆಪ್ತ ಸಹಾಯಕನನ್ನಾಗಿ ನೇಮಕ ಮಾಡಿಕೊಳ್ಳುತ್ತಾರೆಂದರೆ ಈ ವೀಣಮ್ಮನ ಕಾಮನ್‍ಸೆನ್ಸು, ಪೊಲಿಟಿಕಲ್ ನಾಲೆಡ್ಜು ಅದಿನ್ನೆಂತದ್ದಿರಬೇಡ.
ಕಾಂಗ್ರೆಸ್‍ನೊಳಗೆ ಕಮಲದ ಕಲರವ
ಕೊಡಗು ಕಾಂಗ್ರೆಸ್ ದುಸ್ಥಿತಿಯ ವಿಚಾರಕ್ಕೆ ಮರಳುವುದಾದರೆ ಕೈ ಪಾರ್ಟಿಯ ಕೀ ಪೊಸೀಷನ್‍ಗಳಲ್ಲಿ ಸಂಘ ಪರಿವಾರದ ಮನಸ್ಸುಗಳೇ ಅಧಿಕೃತವಾಗಿ ಠಳಾಯಿಸಿವೆ! ಕಾಂಗ್ರೆಸಿನಲ್ಲಿ ಸೈದ್ಧಾಂತಿಕ ಕಾಂಗ್ರೆಸ್ ಕಾರ್ಯಕರ್ತರಿಗಿಂತಲೂ ಹೆಚ್ಚು ಸಂಖ್ಯೆಯಲ್ಲಿ ಸಂಘ ಪರಿವಾರದವರೇ ಬೇರೂರಿದ್ದಾರೆ. ಮೇಲ್ನೋಟಕ್ಕೆ ಇವರು ಕಾಂಗ್ರೆಸಿಗರು ಅನಿಸಿದರು ಕೂಡ, ಸಂಘ ಪರಿವಾರದ ಅಜೆಂಡಾಗಳು ಸುಲಭವಾಗಿ ಕೊಡಗು ಜಿಲ್ಲೆಯ ಕಾಂಗ್ರೆಸಿನಲ್ಲಿ ಕಾರ್ಯಾಚರಣೆಗೆ ಬರುತ್ತದೆ. ಇದಕ್ಕೊಂದು ಸೂಕ್ತ ನಿದರ್ಶನ ಟಿಪ್ಪು ಜಯಂತಿ. ಸ್ವತಃ ತಮ್ಮದೇ ಕಾಂಗ್ರೆಸ್ ಸರ್ಕಾರ ಪಣತೊಟ್ಟು, ಕೋಮುವಾದಿಗಳಿಗೆ ಸೆಡ್ಡು ಹೊಡೆದು ಟಿಪ್ಪು ಜಯಂತಿಗೆ ಅಡಿಗಲ್ಲು ಹಾಕಿದ್ದರೂ, ಬಿಜೆಪಿ ಹಾಗೂ ಸಂಘ ಪರಿವಾರ ವಿರೋಧಿಸುತ್ತದೆನ್ನುವ ಕಾರಣಕ್ಕೆ ಟಿಪ್ಪು ಜಯಂತಿಯನ್ನು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯೂ ವಿರೋಧಿಸುತ್ತದೆ! ಅದೇರೀತಿ, ಬಿಜೆಪಿ ಬೆಂಬಲಿಸುವ ಕೊಡಗು ಪ್ರತ್ಯೇಕತಾ ಹೋರಾಟವನ್ನು ಕೂಡ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಮುಖರು ಬೆಂಬಲಿಸುತ್ತಾರೆ!!
ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮಾನಾಥ್‍ರ ಒಂದು ವ್ಯಂಗ್ಯೋಕ್ತಿ ಇಡೀ ಕೊಡಗು ಕೈ ಪಾರ್ಟಿಯ ಅಧೋಗತಿಯನ್ನು ಸಮಗ್ರವಾಗಿ ಕಟ್ಟಿಕೊಡುತ್ತೆ. ಜಿಲ್ಲಾ ಕಾಂಗ್ರೆಸ್ಸಿಗೆ ಅಧ್ಯಕ್ಷರು ಯಾರಾಗಬೇಕೆನ್ನುವ ಭರ್ಜರಿ ಚರ್ಚೆ ನಡೆದಿದ್ದ ಸಂದರ್ಭದಲ್ಲಿ ರಮಾನಾಥ್ ಹೀಗೆ ಹೇಳಿದ್ದರು, `ಕೊಡಗು ಜಿಲ್ಲೆಯಲ್ಲಿ ಕಾಂಗ್ರೆಸಿಗೆ ಪ್ರತ್ಯೇಕ ಅಧ್ಯಕ್ಷರು ಬೇಡ, ಬಿಜೆಪಿಗೂ, ಕಾಂಗ್ರೆಸಿಗೇ ಒಬ್ಬರೇ ಅಧ್ಯಕ್ಷರು ಸಾಕು!’. ಕಳೆದ ಒಂದು ದಶಕದಿಂದ ಹಿರಿಯ ರಾಜಕಾರಣಿ ಎ.ಕೆ. ಸುಬ್ಬಯ್ಯನವರು ಕೂಡಾ ಇದನ್ನೇ ಹೇಳುತ್ತಾ ಬಂದಿದ್ದಾರೆ. ಆದರೆ ಕಾಂಗ್ರೆಸ್‍ನ ರಾಜ್ಯ ನಾಯಕರ್ಯಾರೂ ತಲೆಕೆಡಿಸಿಕೊಂಡಿಲ್ಲ.
ಪ್ರತ್ಯೇಕತಾ ಹೋರಾಟವನ್ನು ನಡೆಸುತ್ತಿರುವ ಸಿ.ಎನ್.ಸಿ. ಸಂಘಟನೆಯ ಎನ್.ಯು. ನಾಚಪ್ಪ ಬಿಜೆಪಿಯ ಸುಬ್ರಹ್ಮಣ್ಯಸ್ವಾಮಿಯವರನ್ನು ಕರೆಸಿ, ಅವರ ಬಾಯಿಂದ ಸೋನಿಯಾಗಾಂಧಿ ಹಾಗೂ ರಾಹುಲ್ ಗಾಂಧಿಯವರನ್ನು ವಾಚಾಮಗೋಚರ ಟೀಕಿಸುವಂತೆ ಮಾಡಿದ ಕಾರ್ಯಕ್ರಮಗಳಲ್ಲಿ ಕಾಂಗ್ರೆಸಿನ ರಾಷ್ಟ್ರೀಯ ವಕ್ತಾರ ಎನಿಸಿಕೊಳ್ಳುವ ಬ್ರಿಜೇಶ್ ಕಾಳಪ್ಪ ಹಾಗೂ ವೀಣಾ ಅಚ್ಚಯ್ಯ ಸನ್ಮಾನ ಸ್ವೀಕರಿಸಿ ಮರಳುತ್ತಾರೆ. ಹೀಗೆ ಬಿಜೆಪಿಮಯವಾಗಿರುವ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯಲ್ಲಿ ಬೆರಳೆಣಿಕೆಯಷ್ಟಿರುವ ಜಾತ್ಯತೀತ ನಿಲುವಿನ ಮುಖಂಡರಿಗೆ ಕವಡೆ ಕಿಮ್ಮತ್ತಿಲ್ಲ. ಅಂತವರನ್ನು ಅಧಿಕಾರದಿಂದ ದೂರ ಇಡಲಾಗಿದೆ. ಕಾಂಗ್ರೆಸಿನ ಸಮಸ್ತ ಅಧಿಕಾರ ಕಮಲ-ಕಾಂಗ್ರೆಸಿಗರ ಕೈಯಲ್ಲಿದೆ. ಈ ಕಮಲ-ಕಾಂಗ್ರೆಸಿನ ಚುಕ್ಕಾಣಿ ಹಿಡಿದು ಕೂತಿರೋದು ಇದೇ ವೀಣಾ ಅಚ್ಚಯ್ಯ!
ಇಲ್ಲದೇ ಹೋಗಿದ್ದರೆ, ಸತತವಾಗಿ ಬಿಜೆಪಿ ನಾಯಕರಿಗೇ ಪಿಎ ಆಗುತ್ತಿದ್ದ ವ್ಯಕ್ತಿಯನ್ನು ಕರೆತಂದು ತನ್ನ ಪಿಎ ಆಗಿ ನೇಮಿಸಿಕೊಳ್ಳುತ್ತಿರಲಿಲ್ಲ. ಇವತ್ತು ಗೌರಿ ಲಂಕೇಶ್‍ರ ಹತ್ಯೆಯ ಕೇಸಿನಲ್ಲಿ ಅರೆಸ್ಟಾಗಿರುವ ರಾಜೇಶ್ ಬಂಗೇರಾ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷನಾಗಿದ್ದ ರವಿ ಕುಶಾಲಪ್ಪ ಎಂಬ ಖಟ್ಟರ್ ಆರೆಸ್ಸೆಸ್ಸಿಗ-ಕಂ-ಬಿಜೆಪಿ ಆಸಾಮಿಗೆ ಪಿಎ ಆಗಿದ್ದ. ಆ ನೇಮಕಾತಿಯ ಹಿಂದೆ ಸಂಘ ಪರಿವಾರ ಕೆಲಸ ಮಾಡಿತ್ತು. ರವಿ ಕುಶಾಲಪ್ಪನ ನಂತರ ಬಿಜೆಪಿಯ ಶರೀನ್ ಸುಬ್ಬಯ್ಯ ಎಂಬಾತ ಜಿಪಂ ಅಧ್ಯಕ್ಷನಾಗಿದ್ದಾಗಲು ಈ ಬಂಗೇರಾನೆ ಪಿಎ ಆಗಿ ಮುಂದುವರೆದ. ಆದರೆ ಆಮೇಲೆ, ಜಿಪಂ ಚುಕ್ಕಾಣಿ ಕೆ.ಜಿ.ಬೋಪಯ್ಯನ ಆಪ್ತ ಹರೀಶ್ ತೆಕ್ಕೆಗೆ ಜಾರಿದಾಗ ಪಿಎ ಹುದ್ದೆ ಬಂಗೇರಾನ ಪಾಲಿಗೆ ಉಳಿಯಲಿಲ್ಲ. ಯಾಕೆಂದರೆ ಒಂದೇ ಪಕ್ಷದ ಬೋಪಯ್ಯ ಮತ್ತು ರವಿ ಕುಶಾಲಪ್ಪನದು ಹಾವು ಮುಂಗುಸಿ ಸಂಬಂಧ. ಕಳೆದ ಎಲೆಕ್ಷನ್‍ನಲ್ಲೇ ಬೋಪಯ್ಯಗೆ ಟಿಕೆಟ್ ತಪ್ಪಿಸಿ ತಾನೇ ವಿರಾಜಪೇಟೆ ಬಿಜೆಪಿ ಅಭ್ಯರ್ಥಿಯಾಗಲು ರವಿ ಕುಶಾಲಪ್ಪ ತಂತ್ರ ನಡೆಸಿದ್ದ. ಅದೂಅಲ್ಲದೆ, ಯಡ್ಯೂರಪ್ಪನ ಪಕ್ಕಾ ಫಾಲೋವರ್ ಥರಾ ವರ್ತಿಸುವ ಬೋಪಯ್ಯನೆಂದರೆ ಸಂಘ ಪರಿವಾರಕ್ಕೂ ಅಷ್ಟಕ್ಕಷ್ಟೇ. ಬೋಪಯ್ಯನಿಗೂ ಪರಿವಾರದ ಮೇಲೆ ಸೇಮ್-ಟು-ಸೇಮ್ ಮಮಕಾರ! ಆ ಕಾರಣಕ್ಕೆ ರವಿಯ ಆಪ್ತ ಬಳಗದ, ಸಂಘ ಪರಿವಾರ ಲಿಂಕಿನ ರಾಜೇಶ್ ಬಂಗೇರಾಗೆ ಗೇಟ್‍ಪಾಸ್ ಕೊಟ್ಟು ಗದುಮಿದ ಬೋಪಯ್ಯ ತನ್ನ ಭಂಟನ ದೇಖಾರೇಖಿಗೆಂದು ಬೇರೊಬ್ಬ ಸಹಾಯಕನನ್ನು ಗೊತ್ತು ಮಾಡಿದ್ದ.
ತನ್ನ ಚೇಲಾ ಬಂಗೇರಾಗೆ ಹೇಗಾದರು ಸರ್ಕಾರಿ ಸೋಗಿನ ರಾಜಕೀಯ ಪುನರ್ವಸತಿ ಕಲ್ಪಿಸುವ ಅನಿವಾರ್ಯತೆಗೆ ಬಿದ್ದ ರವಿ ಕುಶಾಲಪ್ಪ ಎಡತಾಕಿದ್ದು ತನ್ನದೇ ಶಾಂತೆಯಂಡ ಕುಟುಂಬಸ್ಥೆಯಾದ ಕಾಂಗ್ರೆಸ್‍ನ ವೀಣಾ ಅಚ್ಚಯ್ಯರನ್ನು. ಪಕ್ಷದ ಸಿದ್ಧಾಂತ, ರಾಜಕೀಯ ನಿಲುವು ಯಾವುದೂ ಲೆಕ್ಕಕ್ಕಿರದ ವೀಣಾ ಮೇಡಮ್ಮು ಕಳ್ಳುಬಳ್ಳಿ ಸಂಬಂಧಕ್ಕೆ ಬೆಲೆಕೊಟ್ಟು ರವಿಕುಶಾಲಪ್ಪನ ಭಂಟ ಬಂಗೇರಾನನ್ನು ತನ್ನ ಆಪ್ತ ಕಾರ್ಯದರ್ಶಿಯಾಗಿ ನೇಮಿಸಿಕೊಂಡಿದ್ದರು! ಸಂಘ ಪರಿವಾರದ ಈ ಆಸಾಮಿ ಕಾಂಗ್ರೆಸಿನ ಪದಾಧಿಕಾರಿಗಳ ನೇಮಕಾತಿ ವಿಚಾರದಲ್ಲೂ ಕೈ ಆಡಿಸುತ್ತಿದ್ದುದಲ್ಲದೆ ಅಲ್ಪಸಂಖ್ಯಾತ ವರ್ಗದವರು ಯಾವುದಾದರೂ ಕೆಲಸ ಕಾರ್ಯಗಳಿಗೆ ವೀಣಾ ಅಚ್ಚಯ್ಯಗೆ ಮನವಿ ನೀಡಿದರೆ, ಆ ಮನವಿಯೇ ಕಡತದಿಂದ ನಾಪತ್ತೆಯಾಗುವಂತೆ ಮಾಡಿಬಿಡುತ್ತಿದ್ದನಂತೆ!! ಇನ್ನು ಕಾಂಗ್ರೆಸ್ ಹೇಗೆ ತಾನೆ ಉದ್ದಾರವಾದೀತು….
– ಬಿ.ಎನ್. ಮನುಶೆಣೈ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...