Homeಮುಖಪುಟಸಿಎಎ ವಿರುದ್ಧ ಬೃಹತ್ ಪ್ರತಿಭಟನೆಗೆ ಸಜ್ಜಾಗುತ್ತಿರುವ ಬೋಳಿಯಾರು...!!

ಸಿಎಎ ವಿರುದ್ಧ ಬೃಹತ್ ಪ್ರತಿಭಟನೆಗೆ ಸಜ್ಜಾಗುತ್ತಿರುವ ಬೋಳಿಯಾರು…!!

ಫೆಬ್ರವರಿ 14ರ ಶುಕ್ರವಾರ 2:30ಕ್ಕೆ ಪ್ರಾರಂಭವಾಗಲಿದೆ ‌ಐತಿಹಾಸಿಕ ಪ್ರತಿಭಟನೆ.

- Advertisement -
ಸಂವಿಧಾನ ಸಂರಕ್ಷಣಾ ಸಮಿತಿ, (ಬೋಳಿಯಾರು) ಮಂಗಳೂರು ಇದರ ವತಿಯಿಂದ ಮಂಗಳೂರಿನ ಬೋಳಿಯಾರಿನಲ್ಲಿ ಫೆಬ್ರವರಿ 14 ರ ಶುಕ್ರವಾರದಂದು ಕೇಂದ್ರ ಸರ್ಕಾರದ ಕಾಯ್ದೆಯಾದ CAA , NRC ಹಾಗೂ NPR ವಿರುದ್ಧ ಡಾ.ಬಿ.ಆರ್.ಅಂಬೇಡ್ಕರ್ ವೇದಿಕೆಯಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಯಲಿದೆ. ಇದಕ್ಕಾಗಿ ಸಭೆ ನಡೆಯಲಿರುವ ಮೈದಾನದ ತಯಾರಿ ಕೆಲಸವೂ ಭರದಿಂದ ಸಾಗುತ್ತಿದೆ.
ಕಾರ್ಯಕ್ರಮ ಮಧ್ಯಾಹ್ನ 2:30 ಕ್ಕೆ ಪ್ರಾರಂಭವಾಗಲಿದ್ದು  ಸಮಿತಿಯ ಸಂಚಾಲಕರಾದ ಹಾಜಿ ಟಿ ಹೆಚ್ ಲತೀಫ್ ಸಭೆಯ ಅಧ್ಯಕ್ಷತೆಯನ್ನು ವಹಿಸಲಿದ್ದು, ಅಮ್ಮೆಂಬಳ ಜಾರದಗುಡ್ಡೆ ಜುಮಾ ಮಸೀದಿಯ ಅಮೀರ್ ಅಸ್ಸಖಾಫ್ ತಂಙಳ್ ಪ್ರಾರ್ಥನೆ ನೆರವೇರಿಸಲಿರುವರು. ಬೋಳಿಯಾರು ಜುಮಾ ಮಸೀದಿಯ ಖತೀಬರಾದ ಅಬ್ದುಲ್ ಖಾದರ್ ಅಶ್ಶಾಫಿ ಉದ್ಘಾಟಿಸಲಿದ್ದಾರೆ.
ಪ್ರತಿಭಟನಾ ಸಭೆಯಲ್ಲಿ ಸಾಮಾಜಿಕ ಕಾರ್ಯಕರ್ತರಾದ ಬಿ.ಆರ್.ಭಾಸ್ಕರ್ ಪ್ರಸಾದ್ , ಕಾಂಗ್ರೆಸ್ ಪಕ್ಷದ ವಕ್ತಾರರಾದ ವಿ.ಎಸ್. ಉಗ್ರಪ್ಪ , ಜನತಾದಳದ ನಾಯಕ ಎಮ್ ಬಿ ಸದಾಶಿವ , ಸಿಪಿಐಎಂ ನಾಯಕ ಸುನಿಲ್ ಕುಮಾರ್ ಬಜಾಲ್ ,ಎಸ್‌ಡಿಪಿಐ ನಾಯಕ ಅಶ್ರಫ್ ಮಾಚಾರ್ , ಎಸ್ಸೆಸ್ಸೆಫ್ ನಾಯಕ ಸುಫ್ಯಾನ್ ಸಖಾಫಿ  ಹಾಗೂ ಎಸ್ಕೇಎಸ್ಸೆಸ್ಸೆಫ್ ನಾಯಕರಾದ ಎಸ್.ಬಿ.ದಾರಿಮಿ ಇವರುಗಳು ಮುಖ್ಯ ಪ್ರಭಾಷಣವನ್ನು ಮಾಡಲಿದ್ದಾರೆ.
ಸ್ಥಳೀಯ ಶಾಸಕ ಯುಟಿ ಖಾದರ್  ಹಾಗೂ ಇಬ್ರಾಹಿಂ ಖಲೀಲ್ ತಲಪಾಡಿ, ಪ್ರಶಾಂತ್ ಕಾಜವ ಮಿತ್ತಕೋಡಿ  , ಶಾಫಿ ಹಾಜಿ ಹಾಗೂ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿರುವರು.
- Advertisement -

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಪತಂಜಲಿಯ ಪತನ ಶುರು: ‘ಸೋನ್ ಪಾಪ್ಡಿ’ಯಿಂದ ಮೂವರಿಗೆ ಜೈಲು ಶಿಕ್ಷೆ

0
ಪತಂಜಲಿ ನವರತ್ನ ಎಲೈಚಿ ಸೋನ್ ಪಾಪ್ಡಿ(ಸಾಂಪ್ರದಾಯಿಕ ಸಿಹಿತಿಂಡಿ) ಗುಣಮಟ್ಟದ ಪರೀಕ್ಷೆಯಲ್ಲಿ ವಿಫಲವಾದ ಹಿನ್ನೆಲೆ ಉತ್ತರಾಖಂಡದ ನ್ಯಾಯಾಲಯವು ಪತಂಜಲಿ ಆಯರ್ವೇದ ಲಿಮಿಟೆಡ್‍ನ ಸಹಾಯಕ ವ್ಯವಸ್ಥಾಪಕ ಸೇರಿದಂತೆ ಮೂರು ಮಂದಿಗೆ ಆರು ತಿಂಗಳ ಜೈಲು ಶಿಕ್ಷೆ...