Homeಮುಖಪುಟಸರಕಾರದ ಅಸಹಕಾರ; ಇತಿಹಾಸದ ಪುಟದತ್ತ ಮಲೆನಾಡಿನ ಸಹಕಾರ ಸಾರಿಗೆ!

ಸರಕಾರದ ಅಸಹಕಾರ; ಇತಿಹಾಸದ ಪುಟದತ್ತ ಮಲೆನಾಡಿನ ಸಹಕಾರ ಸಾರಿಗೆ!

- Advertisement -
- Advertisement -

ಬೆಟ್ಟಗುಡ್ಡಗಳ ಇಣುಕಿನಲ್ಲಿ, ಸರಿಯಾದ ರಸ್ತೆ ವ್ಯವಸ್ಥೆಯೂ ಇಲ್ಲದ ಕಲ್ಲುಕಣ್ಣಿನ ಮಲೆನಾಡಿನ ರಸ್ತೆಗಳಲ್ಲಿ ಕೆಎಸ್‍ಆರ್‌ಟಿಸಿ ಸೇವೆಯನ್ನು ಆರಂಭಿಸಲು ಸರ್ಕಾರವೇ ಮೀನಾಮೇಷ ಎಣಿಸುತ್ತಿದ್ದ ಸಂದರ್ಭದಲ್ಲಿ ಕಾರ್ಮಿಕರರೇ ಮಾಲೀಕರಾಗಿ ಒಂದು ಸಂಸ್ಥೆಯನ್ನು ಕಟ್ಟಿ ಬೆಳೆಸಿ ಮಲೆನಾಡಿನ ಪ್ರತಿ ಮೂಲೆಮೂಲೆಗೂ, ಪ್ರತಿ ಹಳ್ಳಿಗೂ ಸಾರಿಗೆ ಸೇವೆಯನ್ನು ತಲುಪಿದ ಕೀರ್ತಿ ಮತ್ತು ಶ್ರೇಯ ಸಹಕಾರ ಸಾರಿಗೆಗೆ ಸಲ್ಲುತ್ತದೆ.

ರಾಜ್ಯದ ಅವಳಿ ಮಲೆನಾಡು ಜಿಲ್ಲೆ ಎಂದರೆ ಶಿವಮೊಗ್ಗ ಮತ್ತು ಚಿಕ್ಕಮಗಳೂರು. ಈ ಎರಡೂ ಜಿಲ್ಲೆಯ ಸುಮಾರು 16 ತಾಲೂಕುಗಳೂ ಸೇರಿದಂತೆ ಇಲ್ಲಿಂದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಕರಾವಳಿ ಭಾಗವಾದ ಮಂಗಳೂರಿಗೂ ಸಂಪರ್ಕ ಕಲ್ಪಿಸುವ ರಾಜ್ಯದ ಅತಿದೊಡ್ಡ ರಸ್ತೆ ಸಾರಿಗೆ ಸಂಪರ್ಕ ಜಾಲದಲ್ಲೊಂದಾದ ಸಹಕಾರ ಸಾರಿಗೆ ಇಂದು ಅಕ್ಷರಶಃ ಸಂಕಷ್ಟಕ್ಕೆ ಸಿಲುಕಿದೆ. ಇಲ್ಲದೆ, ಸರ್ಕಾರದ ಅಸಹಕಾರಕ್ಕೆ ಬೇಸತ್ತು ಫೆಬ್ರವರಿ 17 ರಿಂದ ತನ್ನ ಕಾರ್ಯವನ್ನು ಸ್ಥಗಿತಗೊಳಿಸಿದೆ.

ಬೆಟ್ಟಗುಡ್ಡಗಳ ಇಣುಕಿನಲ್ಲಿ, ಸರಿಯಾದ ರಸ್ತೆ ವ್ಯವಸ್ಥೆಯೂ ಇಲ್ಲದ ಕಲ್ಲುಕಣ್ಣಿನ ಮಲೆನಾಡಿನ ರಸ್ತೆಗಳಲ್ಲಿ ಕೆಎಸ್‍ಆರ್‍ಟಿಸಿ ಸೇವೆಯನ್ನು ಆರಂಭಿಸಲು ಸರ್ಕಾರವೇ ಮೀನಾಮೇಷ ಎಣಿಸುತ್ತಿದ್ದ ಸಂದರ್ಭದಲ್ಲಿ ಕಾರ್ಮಿಕರರೇ ಮಾಲೀಕರಾಗಿ ಒಂದು ಸಂಸ್ಥೆಯನ್ನು ಕಟ್ಟಿ ಬೆಳೆಸಿ ಮಲೆನಾಡಿನ ಪ್ರತಿ ಮೂಲೆಮೂಲೆಗೂ, ಪ್ರತಿ ಹಳ್ಳಿಗೂ ಸಾರಿಗೆ ಸೇವೆಯನ್ನು ತಲುಪಿದ ಕೀರ್ತಿ ಮತ್ತು ಶ್ರೇಯ ಸಹಕಾರ ಸಾರಿಗೆಗೆ ಸಲ್ಲುತ್ತದೆ.

ಸಾರಿಗೆ ವ್ಯವಸ್ಥೆಯನ್ನು ಸರ್ಕಾರ ಸೇವೆ ಎಂದೇ ಪರಿಗಣಿಸುತ್ತದೆ. ಆದರೆ ಸರ್ಕಾರ ಇದನ್ನು ನಿಜಕ್ಕೂ ಪಾಲಿಸುತ್ತದೆಯೋ ಇಲ್ಲವೋ? ಆದರೆ, ಇದನ್ನು ರಾಜ್ಯದ ಮಟ್ಟಿಗೆ ನಿಜವಾಗಿಯೂ ಪಾಲಿಸಿದ್ದು ಸಹಕಾರ ಸಾರಿಗೆ. ಇಂದು ದೇಶ-ವಿದೇಶದಲ್ಲಿ ಉನ್ನತ ಮಟ್ಟದ ನಾನಾ ಕೆಲಸದಲ್ಲಿರುವ ವಿದ್ಯಾರ್ಥಿಗಳು ಇದೇ ಸಹಕಾರ ಸಾರಿಗೆ ರಿಯಾಯಿತಿ ಬಸ್ ಪಾಸ್‍ನಲ್ಲಿ ಓಡಾಡಿದವರು. ಇನ್ನೂ ಹಿರಿಯ ನಾಗರಿಕರು, ಸ್ವಾತಂತ್ರ್ಯ ಹೋರಾಟಗಾರರು ವಿಕಲಚೇತನರಿಗೆ ಶೇ.50 ರಷ್ಟು ರಿಯಾಯಿತಿ ನೀಡಿದ ಮೊದಲ ಖಾಸಗಿ ಸಾರಿಗೆ ಸಂಸ್ಥೆ ಎಂಬ ಖ್ಯಾತಿಯೂ ಸಹಕಾರಿ ಸಾರಿಗೆಗೆ ಇದೆ.

ಹೀಗೆ ಮಲೆನಾಡು ಭಾಗದ ಇಂಚಿಂಚೂ ಓಡಾಡಿ ಅಕ್ಷರಶಃ ಜನರ ಜೀವನಾಡಿಯೇ ಆಗಿಹೋದ ಸಹಕಾರ ಸಾರಿಗೆ ಇಂದು ತನ್ನ ಸೇವೆಯನ್ನೇ ಸ್ಥಗಿತಗೊಳಿಸಿದೆ. ಸಹಕಾರ ವಿಭಾಗದಲ್ಲಿ ಇತಿಹಾಸವನ್ನೇ ನಿರ್ಮಿಸಿದ್ದ ಸಾರಿಗೆ ವ್ಯವಸ್ಥೆ ಇಂದು ಅಕ್ಷರಶಃ ಇತಿಹಾಸ ಪುಟಕ್ಕೆ ಸೇರುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿದೆ.

ಈ ಹಿನ್ನೆಲೆ ಸಹಕಾರ ಸಾರಿಗೆ ವ್ಯವಸ್ಥೆಯ ಇತಿಹಾಸ ಹಿನ್ನೆಲೆ ಏನು? ಮಲೆನಾಡು ಭಾಗದಲ್ಲಿ ಈ ಸಂಸ್ಥೆ ಸೃಷ್ಟಿಸಿರುವ ಇತಿಹಾಸ ಎಂಥಾದ್ದು? ಈಗನ ನಷ್ಟಕ್ಕೆ ಕಾರಣವೇನು? ಈ ಸಂಸ್ಥೆಯ ಸಂಕಷ್ಟಕ್ಕೆ ಸರ್ಕಾರ ಮೀನಾಮೇಷ ಎಣಿಸುತ್ತಿರುವುದು ಏಕೆ? ಇಲ್ಲಿದೆ ಸಂಪೂರ್ಣ ಮಾಹಿತಿ.

ಸಹಕಾರ ಸಾರಿಗೆ ಹಿನ್ನೆಲೆ ಮತ್ತು ಇತಿಹಾಸ
ಮಲೆನಾಡಿನಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿದ್ದ ಶಂಕರ್ ಟ್ರಾನ್ಸ್ಪೋರ್ಟ್ ಕಂಪೆನಿ 1991ರಲ್ಲಿ ನಷ್ಟದ ಕಾರಣ ಮುಚ್ಚಲಾಯಿತು. ಈ ವೇಳೆ ಕಂಪೆನಿಯಲ್ಲಿ ಕೆಲಸ ನಿರ್ವಹಿಸಿದ್ದ ಸುಮಾರು 300 ಕಾರ್ಮಿಕರ ಬದುಕು ಬೀದಿಗೆ ಬಿದ್ದಿತ್ತು. ಈ ಸಂದರ್ಭದಲ್ಲಿ ದಿವಂಗತ ಬಿ.ಕೆ. ಸುಂದರೇಶ್ ಮತ್ತು ಹೋರಾಟಗಾರ ಸಿರಿಮನೆ ನಾಗರಾಜ್ ಇದೇ ಕಾರ್ಮಿಕರನ್ನು ಒಟ್ಟುಗೂಡಿಸಿ ಎಲ್ಲರೂ ತಮ್ಮ ಕೈಲಾದ ಹಣವನ್ನು ಕ್ರೋಢೀಕರಿಸಿ ಕೇವಲ 12 ಲಕ್ಷ ರೂ. ಬಂಡವಾಳದಲ್ಲಿ ಹುಟ್ಟು ಹಾಕಿದ ಸಂಸ್ಥೆಯೇ ಸಹಕಾರ ಸಾರಿಗೆ ಸಂಸ್ಥೆ. ಭಾಗಶಃ ಇಡೀ ದೇಶದಲ್ಲೇ ಕಾರ್ಮಿಕರೇ ಮಾಲೀಕರಾಗಿ ಆರಂಭಿಸಿದ ಮೊದಲ ಸಂಸ್ಥೆ ಇದು.

ಸಂಸ್ಥೆಯಲ್ಲಿ ಪ್ರತಿಯೊಬ್ಬ ಕಾರ್ಮಿಕನೂ ತಾನೇ ಮಾಲೀಕ ಎಂಬಂತೆ ಹಗಲಿರುಳು ಶ್ರಮಿಸಿದ ಫಲವಾಗಿ 6 ಬಸ್‍ಗಳಿಂದ ಆರಂಭವಾದ ಸಂಸ್ಥೆಯಲ್ಲಿ ಇಂದು 76 ಬಸ್‍ಗಳಿವೆ. ಕೊಪ್ಪದಲ್ಲಿ ಕೇಂದ್ರ ಕಚೇರಿ ಇದ್ದರೆ, ಕೊಪ್ಪ ಮತ್ತು ಶೃಂಗೇರಿ ಎರಡು ಕಡೆಗಳಲ್ಲಿ ಸ್ವಂತ ಗ್ಯಾರೇಜ್ ಅನ್ನು ಈ ಸಂಸ್ಥೆ ಹೊಂದಿದೆ.

ಮಲೆನಾಡಿನ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ನೌಕರ ವರ್ಗ ಹಾಗೂ ಪ್ರವಾಸಿಗರು ಸೇರಿದಂತೆ ಅನೇಕರು ಕಳೆದ 3 ದಶಕಗಳಿಂದ ಈ ಸಾರಿಗೆಯನ್ನು ಅವಲಂಬಿಸಿದ್ದಾರೆ. ಪ್ರತಿನಿತ್ಯ ಸಂಚಾರ, ಸಮಯ ಪಾಲನೆ ಹಾಗೂ ಶಿಸ್ತಿಗೆ ಈ ಸಂಸ್ಥೆ ಹೆಸರುವಾಸಿ. ಆದರೆ, 2017ರಲ್ಲಿ ಬೆಳ್ಳಿಹಬ್ಬ ಆಚರಿಸಿದ ಈ ಸಂಸ್ಥೆ ಕೇವಲ ಮೂರು ವರ್ಷದಲ್ಲಿ ಇದೀಗ ನಷ್ಟದ ಸುಳಿಯಲ್ಲಿ ಸಿಲುಕಿ ಏದುಸಿರು ಬಿಡುತ್ತಿದೆ.

ಸಂಸ್ಥೆಯ ನಷ್ಟಕ್ಕೆ ಕಾರಣವೇನು?
ಕಳೆದ ಮೂರು ನಾಲ್ಕು ವರ್ಷಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ದಿನನಿತ್ಯ ಏರಿಸಲಾಗುತ್ತಿದೆ. ಆದರೆ, 2013ರಿಂದ ಸಹಕಾರಿ ಸಾರಿಗೆ ಬಸ್ ಪ್ರಯಾಣ ದರವನ್ನು ಏರಿಸಲಾಗಿಲ್ಲ. ಇದರಿಂದ ಸಂಸ್ಥೆಯ ಆದಾಯ ಕುಂಠಿತವಾಗಿದೆ. ಅಲ್ಲದೆ, ಡೀಸೆಲ್ ಬೆಲೆ ಏರಿಕೆಯಿಂದಲೇ ಪ್ರತಿ ತಿಂಗಳು ಕನಿಷ್ಟ 24 ಲಕ್ಷ ಹಣ ಸಂಸ್ಥೆಗೆ ನಷ್ಟವಾಗುತ್ತಿದೆ ಎನ್ನಲಾಗುತ್ತಿದೆ.

ಇದರ ಜೊತೆಗೆ ವರ್ಷಕ್ಕೆ 1.5 ಕೋಟಿ ಹಣವನ್ನು ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಪಾವತಿ ಮಾಡಲಾಗುತ್ತಿದೆ. ಇನ್ನೂ ಬಸ್ ಪ್ರಯಾಣ ದರದಲ್ಲಿ ವಿದ್ಯಾರ್ಥಿಗಳು , ವಿಕಲಚೇತನರು, ಸ್ವಾತಂತ್ರ್ಯ ಹಾಗೂ ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಭಾಗವಹಿಸಿದವರಿಗೆ ಶೇ.50 ರಷ್ಟು ರಿಯಾಯಿತಿ ನೀಡಲಾಗಿದೆ. ಪರಿಣಾಮ ಸಂಸ್ಥೆಗೆ ಆರ್ಥಿಕ ಹೊರೆ ಅಧಿಕವಾಗಿದ್ದು, ಪ್ರತಿ ತಿಂಗಳ ಖರ್ಚನ್ನು ನಿಭಾಯಿಸುವುದೇ ದುಸ್ತರವಾಗಿದೆ ಎನ್ನುತ್ತಾರೆ ಸಂಸ್ಥೆಯ ಪದಾಧಿಕಾರಿಗಳು.

ಸರ್ಕಾರದ ಎದುರು ಸಂಸ್ಥೆ ಇಟ್ಟಿರುವ ಬೇಡಿಕೆ ಏನು?
ಸಹಕಾರ ಸಾರಿಗೆ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಪಾಸ್ ನೀಡುತ್ತಿದೆ. ಈ ಪೈಕಿ ಸರ್ಕಾರ ಪ್ರತಿವರ್ಷ ರಿಯಾಯಿತಿ ಪಾಸ್ ಬಾಬ್ತು 6.6 ಕೋಟಿ ಹಣವನ್ನು ಸಂಸ್ಥೆಗೆ ಪಾವತಿ ಮಾಡಬೇಕು. ಆದರೆ, ಈವರೆಗೆ ಈ ಹಣ ಬಿಡುಗಡೆಯಾಗಿಲ್ಲ.

ಇದಲ್ಲದೆ, ಸಂಸ್ಥೆಯ ಬಸ್‍ಗಳ ಡೀಸೆಲ್ ಖರೀದಿಯಲ್ಲಿ ತೆರಿಗೆ ವಿನಾಯಿತಿ ನೀಡಬೇಕು, ಬಿಎಂಟಿಸಿ, ಕೆಎಸ್‍ಆರ್‍ಟಿಸಿ ಬಸ್‍ಗಳಿಗೆ ನೀಡಲಾಗಿರುವ ಸೌಲಭ್ಯಗಳನ್ನು ಸಹಕಾರ ತತ್ವದ ಅಡಿಯಲ್ಲಿ ನಡೆಯುತ್ತಿರುವ ಸಹಕಾರ ಸಾರಿಗೆಗೂ ನೀಡಬೇಕು ಎಂಬುದು ಸಂಸ್ಥೆಯ ಬೇಡಿಕೆ. ಆದರೆ, ಈವರೆಗೆ ಈ ಬೇಡಿಕೆಯನ್ನು ಈಡೇರಿಸಲು ಸರ್ಕಾರ ಮುಂದಾಗಿಲ್ಲ ಎಂಬುದೇ ದುರದೃಷ್ಟಕರ ಸಂಗತಿ.

ಮಲೆನಾಡಿನ ಈ ಸಹಕಾರ ಸಾರಿಗೆಯ ಸೇವಾ ಮನೋಭಾವವನ್ನು ಜಪಾನ್ ಸರ್ಕಾರ ಮೆಚ್ಚಿಕೊಂಡಿತ್ತು. ಮಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಡಾಕ್ಟರೇಟ್ ಪದವಿ ಪಡೆದರು, ಮಣಿಪಾಲ್ ಸ್ನಾತಕೋತ್ತರ ಪದವಿಗೆ ಸಹಕಾರ ಸಾರಿಗೆ ಪಠ್ಯವಾಗಿಯೇ ಬದಲಾಗಿತ್ತು. ಇನ್ನೂ ಕೊಲ್ಲಾಪುರ ಶಿವಾಜಿ ವಿಶ್ವವಿದ್ಯಾಯ ಇದರ ಮೇಲಿನ ಸಂಶೋಧನೆಗೆ ಪಿಹೆಚ್ಡಿ ಪದವಿಯನ್ನು ಪ್ರದಾನ ಮಾಡಿತ್ತು.

ಆದರೆ, ಇಷ್ಟೆಲ್ಲಾ ಶ್ರೇಯಕ್ಕೆ ಪಾತ್ರವಾದ ಸಹಕಾರ ಸಾರಿಗೆ ಇಂದು ಅಳಿವಿನ ಅಂಚಿನಲ್ಲಿದೆ, ಇತಿಹಾಸದ ಕಾಲಗರ್ಭ ಸೇರಲು ಅವಸರಿಸುತ್ತಿದೆ ಎಂಬ ವಿಚಾರವನ್ನು ಜೀರ್ಣಿಸಿಕೊಳ್ಳುವುದು ನಿಜಕ್ಕೂ ಕಷ್ಟದಾಯಕವಾದ ವಿಚಾರ. ಅಲ್ಲದೆ, ಮಲೆನಾಡಿಗರ ಅತೀ ಅವಶ್ಯಕವಾದ ವಿಚಾರಗಳಲ್ಲಿ ಸಹಕಾರ ಸಾರಿಗೆ ಪ್ರಮುಖವಾದದ್ದು. ಹೀಗಾಗಿ ಸರ್ಕಾರ ಈ ಸಂಸ್ಥೆಯ ಪುನಶ್ಚೇತನಕ್ಕೆ ಸಹಕಾರ ನೀಡಲೇಬೇಕಿದೆ.

ನಷ್ಟಕ್ಕೆ ಸರ್ಕಾರವೇ ಕಾರಣ ಹೊರತು ಸಹಕಾರಿ ಸಾರಿಗೆಯಲ್ಲ- ಸಿರಿಮನೆ ನಾಗರಾಜ್

ಸಹಕಾರಿ ಸಂಸ್ಥೆಯ ಸದಸ್ಯರು ಸದ್ಯಕ್ಕೆ ಧರಣಿ ಕೂತಿದ್ದಾರೆ. ಕೆ.ಎಸ್.ಆರ್.ಟಿ.ಸಿಗೆ ನೀಡುವ ಸವಲತ್ತುಗಳನ್ನು ನಮಗೂ ನೀಡಿ ಎಂಬುದು ಅವರ ಬೇಡಿಕೆ. ಏಕೆಂದರೆ ಸಹಕಾರಿ ಸಾರಿಗೆಯವರು ಲಾಭ ನಷ್ಟದ ಯೋಚನೆಯಿಲ್ಲದೇ ಸಾಮಾಜಿಕ ಜವಾಬ್ದಾರಿ ಎಂದು ತಿಳಿದು ಮಲೆನಾಡಿನ ದೂರ ದೂರದ ಹಳ್ಳಿಗಳಿಗೂ ಬಸ್ ಸೌಲಭ್ಯ ನೀಡಿದ್ದಾರೆ. ಅಲ್ಲದೇ ಶಾಲಾಮಕ್ಕಳು, ಮಹಿಳೆಯರು ಮತ್ತು ವೃದ್ಧರಿಗೆ ಬಹಳಷ್ಟು ಅನುಕೂಲ ಮಾಡಿಕೊಟ್ಟಿದ್ದಾರೆ.

ಸದ್ಯ ಸರ್ಕಾರದ ನಿಷ್ಕ್ರಿಯತೆ ಮತ್ತು ನಿಷ್ಕಾಳಜಿಯಿಂದು ಒಂದು ವೇಳೆ ಈ ಸಹಕಾರಿ ಸಾರಿಗೆ ಮುಚ್ಚಿಹೋದರೆ ಅರ್ಧ ಮಲೆನಾಡು ಸಮರ್ಪಕ ಸಂಪರ್ಕವಿಲ್ಲದೇ ಸ್ತಬ್ದವಾಗುವುದರಲ್ಲಿ ಅನುಮಾನವಿಲ್ಲ. ಸಹಕಾರಿ ಸಂಸ್ಥೆಯ ನಷ್ಟಕ್ಕೆ ಮಿಸ್ ಮ್ಯಾನೇಜ್‍ಮೆಂಟ್, ಹಣದ ದುರ್ಬಳಕೆ ಕಾರಣವಲ್ಲ. ಡೀಸೆಲ್ ಸಬ್ಸಿಡಿ, ರಸ್ತೆ ತೆರಿಗೆ ವಿನಾಯಿತಿಯಂತಹ ಹಲವು ಸರ್ಕಾರದ ಸವಲತ್ತುಗಳು ಸಿಗದಿರುವುದು, ಡಿಸೇಲ್ ಬೆಲೆ ದಿನೇ ದಿನೇ ಏರುತ್ತಿರುವುದು ಕಾರಣವಾಗಿದೆ. ಅವರ ಬೇಡಿಕೆಗಳು ನ್ಯಾಯಯುತವಾಗಿದೆ. ಹಾಗಾಗಿ ಕೂಡಲೇ ಸರ್ಕಾರ ಅವರ ಬೇಡಿಕೆಗಳನ್ನು ಈಡೇರಿಸಬೇಕು ಮತ್ತು ಐತಿಹಾಸಿಕ ಸಹಕಾರಿ ಸಾರಿಗೆಯನ್ನು ಉಳಿಸಬೇಕು. ಅವರ ಹೋರಾಟಕ್ಕೆ ನಾನು ಸಂಪೂರ್ಣವಾಗಿ ಬೆಂಬಲ ಕೊಡುತ್ತೇನೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...