Homeಮುಖಪುಟಪಾಕ್‌ ಪರ ಘೋಷಣೆಯ ಆರೋಪಿಗಳಿಗೆ ವಕಾಲತ್ತು ನಿರ್ಬಂಧ : ಹುಬ್ಬಳ್ಳಿ ಬಾರ್‌ ಅಸೋಷಿಯೇಶನ್‌ಗೆ ಹೈಕೋರ್ಟ್‌ ಛೀಮಾರಿ

ಪಾಕ್‌ ಪರ ಘೋಷಣೆಯ ಆರೋಪಿಗಳಿಗೆ ವಕಾಲತ್ತು ನಿರ್ಬಂಧ : ಹುಬ್ಬಳ್ಳಿ ಬಾರ್‌ ಅಸೋಷಿಯೇಶನ್‌ಗೆ ಹೈಕೋರ್ಟ್‌ ಛೀಮಾರಿ

ಬಾರ್ ಅಸೋಸಿಯೇಷನ್ ತನ್ನ ​​ನಿರ್ಣಯವನ್ನು ಮರುಪರಿಶೀಲಿಸದಿದ್ದರೆ, ಅದರ ಕಾನೂನು ಮಾನ್ಯತೆಯನ್ನು ರದ್ದುಪಡಿಸಲಾಗುತ್ತದೆ ಎಂದು ಸಹ ಕೋರ್ಟ್‌ ಎಚ್ಚರಿಕೆ ನೀಡಿದೆ.

- Advertisement -
- Advertisement -

ದೇಶದ್ರೋಹದ ಆರೋಪ ಹೊತ್ತಿರುವ ಕಾಶ್ಮೀರಿ ವಿದ್ಯಾರ್ಥಿಗಳ ಪರವಾಗಿ ವಕಾಲತ್ತು ವಹಿಸಬಾರದೆಂದು ಹುಬ್ಬಳಿಯ ಬಾರ್‌ ಕೌನ್ಸಿಲ್‌ ತೆಗೆದುಕೊಂಡಿರುವ ನಿರ್ಣಯವನ್ನು ವಾಪಸ್‌ ತೆಗೆದುಕೊಳ್ಳಬೇಕು ಎಂದು ಕರ್ನಾಟಕ ಹೈಕೋರ್ಟ್ ಛೀಮಾರಿ ಹಾಕಿದೆ.

ಅಲ್ಲದೇ ಆ ವಿದ್ಯಾರ್ಥಿನಿಗಳನ್ನು ಪ್ರತಿನಿಧಿಸುವ ವಕೀಲರಿಗೆ ಪೊಲೀಸ್ ರಕ್ಷಣೆ ನೀಡಬೇಕೆಂದು ಹುಬ್ಬಳ್ಳಿಯ ಪೊಲೀಸ್‌ ಕಮಿಷನರ್‌ಗೆ ಆದೇಶಿಸಿದೆ.

ಕಾಶ್ಮೀರಿ ವಿದ್ಯಾರ್ಥಿಗಳ ಪರವಾಗಿ ವಕಾಲತ್ತು ವಹಿಸಬಾರದೆಂದು ಹುಬ್ಬಳಿಯ ಬಾರ್‌ ಕೌನ್ಸಿಲ್‌ ತೆಗೆದುಕೊಂಡಿರುವ ನಿರ್ಣಯಯವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು ಅಂಗೀಕರಿಸಿದೆ. ಬಾರ್ ಅಸೋಸಿಯೇಷನ್ ತನ್ನ ​​ನಿರ್ಣಯವನ್ನು ಮರುಪರಿಶೀಲಿಸದಿದ್ದರೆ, ಅದರ ಕಾನೂನು ಮಾನ್ಯತೆಯನ್ನು ರದ್ದುಪಡಿಸಲಾಗುತ್ತದೆ ಎಂದು ಸಹ ಕೋರ್ಟ್‌ ಎಚ್ಚರಿಕೆ ನೀಡಿದೆ.

ವಿಚಾರಣೆಯ ಸಮಯದಲ್ಲಿ ಮುಖ್ಯ ನ್ಯಾಯಮೂರ್ತಿ ಅಭಯ್ ಓಕಾ “ಬಹಿಷ್ಕಾರ ಹಾಕುವ ಮೂಲಕ ಅವರು ನ್ಯಾಯಾಲಯದ ಕೆಲಸವನ್ನು ನಿಲ್ಲಿಸುತ್ತಿದ್ದಾರೆ. ವಕೀಲರೇ ತಮ್ಮಷ್ಟಕ್ಕೆ ತಾವೇ ವಿಚಾರಣೆ ನಡೆಸುವುದನ್ನು ಒಪ್ಪಲಾಗುವುದಿಲ್ಲ” ಎಂದಿದ್ದಾರೆ.

ನ್ಯಾಯಪೀಠವು “ಅಂಗೀಕರಿಸಿದ ನಿರ್ಣಯವನ್ನು ಮರುಪರಿಶೀಲಿಸುವಂತೆ ನಾವು ಪ್ರತಿವಾದಿ ಸಂಖ್ಯೆ 4 (ಬಾರ್ ಅಸೋಸಿಯೇಷನ್)ಗೆ ವಿನಂತಿಸುತ್ತೇವೆ. ಇದು ಕಾನೂನಿನ ಆದೇಶಕ್ಕೆ ವಿರುದ್ಧವಾಗಿದೆ. ಬಾರ್‌ ಕೌನ್ಸಿಲ್‌ ಆಫ್‌ ಇಂಡಿಯಾ ಸಾಂವಿಧಾನಿಕ ಆದೇಶದಿಂದ ಬದ್ಧವಾಗಿದೆ ಮತ್ತು ಅದು ರೂಪಿಸಿದ ನಿಯಮಗಳಲ್ಲಿ ನೈತಿಕತೆಯನ್ನು ಪ್ರತಿಯೊಬ್ಬ ಸದಸ್ಯರು ಅನುಸರಿಸಲು ಬದ್ಧರಾಗಿರುತ್ತಾರೆ” ಎಂದು ಕೋರ್ಟ್‌ ಹೇಳಿದೆ.

ಬಾರ್ ಕೌನ್ಸಿಲ್ ಆಫ್ ಇಂಡಿಯಾದ 4 ನೇ ಪ್ರತಿವಾದಿಯು ತಮ್ಮ ನಿರ್ಣಯವನ್ನು ಮರುಪರಿಶೀಲಿಸಲು ನಿರಾಕರಿಸಿದರೆ, ನಾವು ಅದರ ಕಾನೂನುಬದ್ಧತೆಯನ್ನು ಮುಂದಿನ ವಿಚಾರಣೆಯಲ್ಲಿ ಪರಿಗಣಿಸಬೇಕಾಗುತ್ತದೆ ಎಂದು ಕೋರ್ಟ್ ಹೇಳಿದೆ.

ಹುಬ್ಬಳಿಯಲ್ಲಿ ಎಂಜಿನಿಯರಿಂಗ್ ಕಲಿಯುತ್ತಿರುವ ಮೂವರು ಕಾಶ್ಮೀರಿ ಮೂಲದ ವಿದ್ಯಾರ್ಥಿಗಳ ಮೇಲೆ ಪಾಕಿಸ್ತಾನವನ್ನು ಬೆಂಬಲಿಸಿ ಘೋಷಣೆ ಕೂಗಿದ ಆರೋಪದ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ.

ಸೋಮವಾರ 1600 ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವ ಹುಬ್ಬಳಿ ಬಾರ್ ಅಸೋಸಿಯೇಷನ್, ಆ ವಿದ್ಯಾರ್ಥಿಗಳ ಪರ ವಕಾಲತ್ತು ವಹಿಸದಂತೆ ನಿರ್ಣಯವನ್ನು ಅಂಗೀಕರಿಸಿದೆ. ಆರೋಪಿಗಳು “ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ” ಪಾಲ್ಗೊಂಡಿದ್ದರಿಂದ ಕಾನೂನು ಪ್ರಾತಿನಿಧ್ಯಕ್ಕೆ ಅರ್ಹರಲ್ಲ ಎಂದು ವಾದಿಸಿದೆ.

ಈ ನಿರ್ಣಯವನ್ನು ಪ್ರಶ್ನಿಸಿ, 24 ವಕೀಲರ ಗುಂಪು ಹೈಕೋರ್ಟ್ ಮೆಟ್ಟಿಲೇರಿದೆ. ಕಾನೂನು ನೆರವು ಪಡೆಯುವ ಆರೋಪಿಯ ತನ್ನ ಮೂಲಭೂತ ಹಕ್ಕನ್ನು ಬಾರ್‌ ಕೌನ್ಸಿಲ್‌ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ. ಈ ನಿರ್ಣಯವು ಭಯದ ವಾತಾವರಣವನ್ನು ಸೃಷ್ಟಿಸಲು ಕಾರಣವಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಬೆದರಿಕೆ ಕಾರಣ ಯಾವುದೇ ವಕೀಲರು ನ್ಯಾಯಾಲಯಕ್ಕೆ ಹಾಜರಾಗಲು ಸಾಧ್ಯವಿಲ್ಲ ಎಂದು ದೂರಿದ್ದಾರೆ.

ಈ ಹಿಂದೆ ಮೈಸೂರು ಬಾರ್ ಅಸೋಸಿಯೇಷನ್ ​​ಸಹ ಫ್ರಿ ಕಾಶ್ಮೀರ್‌ ಭಿತ್ತಿಪತ್ರದ ವಿಚಾರದಲ್ಲಿ ಇದೇ ರೀತಿಯ ನಿರ್ಣಯವನ್ನು ಅಂಗೀಕರಿಸಿತ್ತು. ಆ ನಂತರ ಕರ್ನಾಟಕದ ವಿವಿಧ ಭಾಗಗಳಿಂದ ಹಲವಾರು ವಕೀಲರು ಬಂದು ವಾದ ನಡೆಸಿದ ನಂತರ ಆ ವಿದ್ಯಾರ್ಥಿನಿಯನ್ನು ಜಾಮೀನು ದೊರಕಿತ್ತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...