ಪಾಕ್ ಪರ ಘೋಷಣೆ ಕೂಗಿದ ಅಮೂಲ್ಯ ಲಿಯೋನಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದರೆ ನಾವೇ ಎನ್‌ಕೌಂಟರ್ ಮಾಡುತ್ತೇವೆ, ಮಾಡಿದರಿಗೆ 10 ಲಕ್ಷ ಬಹುಮಾನ ಕೊಡುತ್ತೇವೆ ಎಂದು ಹೋಸಪೇಟೆಯ ಶ್ರೀರಾಮ ಸೇನೆಯ ಅಧ್ಯಕ್ಷ ಸಂಜು ಮರಡಿ ಬಹಿರಂಗ ಘೋಷಣೆ ಮಾಡಿದ್ದಾರೆ.
ವಿಡಿಯೋ ನೋಡಿ:
ಪಾಕ್ ಪರ ಘೋಷಣೆ ಕೂಗಿದ ಅಮೂಲ್ಯಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದರೆ ನಾವೇ ಎನ್‌ಕೌಂಟರ್ ಮಾಡುತ್ತೇವೆ, ಮಾಡಿದರಿಗೆ 10 ಲಕ್ಷ ಬಹುಮಾನ ಕೊಡುತ್ತೇವೆ: ಶ್ರೀರಾಮ ಸೇನೆಯ ಸಂಜು ಮರಡಿ ಘೋಷಣೆ
Posted by Naanu Gauri on Saturday, February 22, 2020
ಪಾಕ್ ಪರ ಘೋಷಣೆಯ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು “ರಾಜ್ಯ ಸರ್ಕಾರ ಮತ್ತು ರಾಷ್ಟ್ರ ಸರ್ಕಾರ ಯಾವುದೇ ಕಾರಣಕ್ಕೂ ಬಿಡುಗಡೆ ಮಾಡಬಾರದು” ಎಂದು ಒತ್ತಾಯಿಸಿದ್ದಾರೆ. ಹಾಗೊಂದು ವೇಳೆ ಬಿಡುಗಡೆ ಮಾಡಿದರೆ ನಾವೇ ಎನ್‌ಕೌಂಟರ್ ಮಾಡುತ್ತೇವೆ ಎಂದು ಧಮಕಿ ಹಾಕಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಿನ್ನೆ ಕೂಡ ಅಂದೋಲ ಶ್ರೀ ಎಂಬುವವರು ಸಹ ಆಕೆಯ ನಾಲಿಗೆ ಕತ್ತರಿಸಬೇಕು ಎಂದು ಪ್ರಚೋದನಾಕಾರಿ ಹೇಳಿಕೆ ನೀಡಿದ್ದರು.
ಇನ್ನೊಂದೆಡೆ ಬಿಜೆಪಿಯ ಮಾಳವಿಕರವರು ಆಕೆಯನ್ನು ಪಾಕ್‌ಗೆ ಬಿಟ್ಟುಬರಬೇಕು ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಆ ಘೋಷಣೆಯ ವಿರುದ್ಧ ಪ್ರಚೋದನಾಕಾರಿ ಹೇಳಿಕೆಗಳು ದಿನೇದಿನೇ ಹೆಚ್ಚಾಗುತ್ತಲೇ ಇವೆ.


