ವಾರೆಂಟ್ ಇಲ್ಲದೆ ಶೋಧಿಸುವ, ಬಂಧಿಸುವ ವಿಶೇ‍ಷ ಭದ್ರತಾ ಪಡೆ (UPSSF) ಸ್ಥಾಪನೆ!
PC:

ತಮ್ಮ ಸರ್ಕಾರದ ಮೊದಲ ವರ್ಷವು ರಾಜ್ಯದ ಮೂರು ಕೋಟಿ ರೈತರ ಸಮಸ್ಯೆಗಳನ್ನು ಪರಿಹರಿಸಲು ಮೀಸಲಾಗಿರುತ್ತದೆ ಮತ್ತು 2022 ರ ವೇಳೆಗೆ ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡಲು ಅಗತ್ಯವಾದ ಮೂಲಸೌಕರ್ಯಗಳನ್ನು ರಚಿಸಲು ಎರಡನೇ ವರ್ಷವನ್ನು ಮೀಸಲಿಡಲಾಗಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

“ಭಾರತವು 5 ಟ್ರಿಲಿಯನ್ ಡಾಲರ್ ಆರ್ಥಿಕ ಗುರಿಯನ್ನು ಸಾಧಿಸಲು ನಾವು ಉತ್ತರ ಪ್ರದೇಶವನ್ನು ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡಬೇಕಾಗಿದೆ” ಎಂದು ಅವರು ಹೇಳಿದರು.

ಲಖನೌದಲ್ಲಿ ನಡೆದ ‘ಹಿಂದೂಸ್ತಾನ್ ಶಿಖರ್ ಸಮಗಂ’ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ರಾಜ್ಯದ ಪ್ರತಿ ಜಿಲ್ಲೆಗೆ ಜಿಡಿಪಿ ಗುರಿಗಳನ್ನು ಸಹ ನಿಗದಿಪಡಿಸಿದ್ದೇವೆ. ‘ಒಂದು ಜಿಲ್ಲೆ, ಒಂದು ಉತ್ಪನ್ನ’ ಆ ಪ್ರಯತ್ನದ ಭಾಗವಾಗಿದೆ ಎಂದಿದ್ದಾರೆ.

ಉತ್ತರ ಪ್ರದೇಶ ಮಿಲಿಯನ್ ಡಾಲರ್ ಆರ್ಥಿಕತೆಯಾಗಿ ಬದಲಾಗುವವರೆಗೆ ದೇಶದ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಅಭಿವೃದ್ಧಿಪಡಿಸುವ ಧ್ಯೇಯ ಅಪೂರ್ಣವಾಗಿ ಉಳಿಯುತ್ತದೆ ಎಂದು ತಿಳಿಸಿದ್ದಾರೆ.

ವಿಚಾರ ಸಂಕೀರಣದಲ್ಲಿ ಅವರು “ಪ್ರಬಲ ವ್ಯಕ್ತಿಗಳು, ಬಲವಾದ ದೃಷ್ಟಿಕೋನಗಳು” ಎಂಬ ವಿಷಯದ ಮೇಲೆ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಉತ್ತರ ಪ್ರದೇಶದ ಮಾಜಿ ಸಿಎಂ ಅಖಿಲೇಶ್ ಯಾದವ್, ನಟರಾದ ಜೀಶನ್ ಅಯೂಬ್ ಮತ್ತು ಸ್ವರಾ ಭಾಸ್ಕರ್ ಹಲವಾರು ಗಣ್ಯರು ಈ ಚರ್ಚೆಗಳಲ್ಲಿ ಭಾಗವಹಿಸಿದ್ದಾರೆ. ಅಲ್ಲದೆ ಭಾರತದ ಆರ್ಥಿಕತೆ, ನಿರುದ್ಯೋಗ, ಉತ್ತರ ಪ್ರದೇಶದ ಮೂಲಸೌಕರ್ಯ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದಂತೆ ಚರ್ಚೆಗಳು ನಡೆಯುತ್ತಿವೆ.

LEAVE A REPLY

Please enter your comment!
Please enter your name here