Homeಮುಖಪುಟಷ. ಶೆಟ್ಟರ್ ಒಂದು ನೆನಪು

ಷ. ಶೆಟ್ಟರ್ ಒಂದು ನೆನಪು

- Advertisement -
- Advertisement -

ಪ್ರೊಫೆಸರ್ ಷಡಕ್ಷರ ಶೆಟ್ಟರ್(1935-2020) ಅವರಿಗೆ ನನ್ನನ್ನು ಪರಿಚಯಿಸಿದ್ದು ಅಭಿನವದ ರವಿಕುಮಾರ್. 2015ರ ಬೇಸಗೆಯಲ್ಲಿ NIAS ನಲ್ಲಿ ಅವರನ್ನು ಕಂಡು ‘ಹಳಗನ್ನಡ: ಲಿಪಿ, ಲಿಪಿಕಾರ, ಲಿಪಿ ವ್ಯವಸಾಯ’(2012) ಕೃತಿಗೆ ಹಸ್ತಾಕ್ಷರ ಪಡೆದಿದ್ದೆ. ಮುಂದೊಂದು ದಿನ ಅವರೊಂದಿಗೆ ಕೆಲಸ ಮಾಡುವ ಅವಕಾಶ ಒದಗಿಬರುವುದೆಂಬ ಕಲ್ಪನೆ ಕೂಡ ಇರಲಿಲ್ಲ. ನಾನು 2017ರಲ್ಲಿ ಆಕ್ಸ್‍ಫರ್ಡ್ ಯೂನಿವರ್ಸಿಟಿ ಪ್ರೆಸ್‍ನ ಸಂಪಾದಕ ಹುದ್ದೆ ತೊರೆದು ಮೈಸೂರಿಗೆ ಬಂದುಬಿಟ್ಟೆ. ಆಗ 2017ರ ನವೆಂಬರ್‍ನಲ್ಲಿ ಮತ್ತೆ ರವಿಕುಮಾರರಿಂದಾಗಿ ಶೆಟ್ಟರ್ ಅವರ ಸಂಪರ್ಕಕ್ಕೆ ಬಂದ ನಾನು, 2018ರ ಜನವರಿಯಿಂದ ಅವರ ವಚನಾನುವಾದ ಯೋಜನೆಯಲ್ಲಿ ಕೆಲಸ ಮಾಡಲು ಅರಂಭಿಸಿದೆ. ಬೆಂಗಳೂರಿನಲ್ಲಿ ಅವರ ಕಚೇರಿಯಲ್ಲೇ ಉಳಿದುಕೊಂಡಿದ್ದರಿಂದಾಗಿ ಅವರೊಂದಿಗೆ ಹತ್ತಿರದಿಂದ ಒಡನಾಡುವ ಅವಕಾಶ ಒದಗಿಬಂತು. ಆಗಲೇ ಅವರ ‘ಪ್ರಾಕೃತ ಜಗದ್ವಲಯ:ಪ್ರಾಕೃತ-ಕನ್ನಡ-ಸಂಸ್ಕೃತ ಭಾಷೆಗಳ ಅನುಸಂಧಾನ’ (2018) ಕೃತಿಗೆ ಹಿನ್ನುಡಿ ಬರೆದದ್ದು. ಕೆ.ವಿ. ತಿರುಮಲೇಶ್ ಮುನ್ನುಡಿ ಬರೆದಿದ್ದರು.

ಅವರ ಆಫೀಸನ್ನು ನೋಡಿಕೊಳ್ಳುತ್ತಿದ್ದೆನಾದ್ದರಿಂದ ಅವರು ಬರೆದಿದ್ದೆಲ್ಲವನ್ನೂ ಓದುವ, ಅವರೊಂದಿಗೆ ಚರ್ಚಿಸುವ ಸುಯೋಗ ನನ್ನದಾಗಿತ್ತು. ಎಂಬತ್ತು ದಾಟಿದ್ದರೂ ಅವರಷ್ಟು ತದೇಕಚಿತ್ತರಾಗಿ ದಿನಕ್ಕೆ ಕಡಿಮೆಯೆಂದರೂ ಹತ್ತು ಹನ್ನೆರಡು ಗಂಟೆ ಕೆಲಸ ಮಾಡುವ ವ್ಯಕ್ತಿಯನ್ನು ನಾನು ಇದುವರೆಗೂ ಕಂಡಿಲ್ಲ. ಕೇಂಬ್ರಿಜ್‍ನಂತಹ ವಿಶ್ವದ ಪ್ರತಿಷ್ಠಿತ ಯೂನಿವರ್ಸಿಟಿಯಲ್ಲಿ ಶಿಕ್ಷಣ ಪಡೆದಿದ್ದರಿಂದಾಗಿಯೋ ಏನೋ ಸಂಶೋಧನಾ ಶಿಸ್ತು, ಶ್ರದ್ಧೆಗಳೇ ಮೈವೆತ್ತಂತಿದ್ದ ಅವರು ಬರವಣಿಗೆಯಷ್ಟೇ ಮಾತಿನಲ್ಲೂ ಶಿಸ್ತು ತೋರಿಸುತ್ತಿದ್ದರು. ಒಂದು ಸಲ ಬರೆದಿದ್ದನ್ನು ಹತ್ತು, ಹದಿನೈದು ಸಲ ಮತ್ತೆ ಮತ್ತೆ ಓದಿ ತಿದ್ದುವಷ್ಟು ಸಂಯಮ ಅವರಲ್ಲಿತ್ತು. ಕನ್ನಡದಲ್ಲಿ ಎಲ್ಲರನ್ನು ತಲುಪುವಂತಹ ಚರಿತ್ರೆ ಬರವಣಿಗೆಯ ಮಾದರಿಯೊಂದನ್ನು ರೂಪಿಸುವ ನಿಟ್ಟಿನಲ್ಲಿ ಅವರ ಪರಿಶ್ರಮ ಬಹಳ ಕಾಲ ಉಳಿಯಲಿದೆ. ಅಂತಹ ಪರಿಶ್ರಮದ ಫಲವಾಗಿಯೇ ಅವರ ಸಂಶೋಧನಾ ಕೃತಿಗಳು ಕೂಡ ಹಲವು ಮರುಮುದ್ರಣಗಳನ್ನು ಕಾಣಲು ಸಾಧ್ಯವಾಗಿದೆ. ಕೇವಲ ಬರೆಹದಲ್ಲಿ ಮಾತ್ರವಲ್ಲ, ಅಗಾಧ ಜ್ಞಾನದಿಂದಾಗಿ ಗಂಟಾನುಗಟ್ಟಲೇ ನಿರರ್ಗಳವಾಗಿ ಮಾತನಾಡುವ ಭಾಷಣ ಕಲೆಯನ್ನು ಕೂಡ ಅವರು ರೂಢಿಸಿಕೊಂಡಿದ್ದರು.

ಐದು ದಶಕಗಳಿಗೂ ಮೀರಿದ ವೃತ್ತಿಜೀವನದಲ್ಲಿ ಅವರು ದಶಕಕ್ಕೊಮ್ಮೆಯೆಂಬಂತೆ ಕಲಾಚರಿತ್ರೆ, ಪ್ರಾಕ್ತನ ಶಾಸ್ತ್ರ, ಧರ್ಮಗಳ ಚರಿತ್ರೆ, ಕ್ಲಾಸಿಕಲ್ ಭಾಷೆಗಳ ಚರಿತ್ರೆಗಳಲ್ಲಿ ತಮ್ಮ ಸಂಶೋಧನಾ ಕ್ಷೇತ್ರ ಹಾಗೂ ವಿಧಾನಗಳನ್ನು ಬದಲಾಯಿಸಿಕೊಳ್ಳುತ್ತ ಬಂದಿದ್ದು ಗಮನಾರ್ಹ. ಇಷ್ಟು ದೊಡ್ಡ ಹರಹನ್ನು ಹೊಂದಿದ ಚರಿತ್ರೆಕಾರ ಕನ್ನಡದಲ್ಲಿ ಇದುವರೆಗೂ ಬಂದಿಲ್ಲವೆನ್ನುವುದು ಅತಿಶಯೋಕ್ತಿಯೇನಲ್ಲ. ಇಂಗ್ಲಿಷ್‍ನಲ್ಲಿ ಸಂಶೋಧನೆ ಹಾಗೂ ಬರೆಹ ಮಾಡಿ ದೇಶವಿದೇಶಗಳಲ್ಲಿ ಸಾಕಷ್ಟು ಮನ್ನಣೆ ಗಳಿಸಿದ್ದರೂ, ತಮ್ಮ ಕೊನೆಯ ಒಂದು ದಶಕವನ್ನು ಕನ್ನಡದಲ್ಲಿ ಬರೆಯುವುದಕ್ಕೆಂದೇ ಮೀಸಲಾಗಿರಿಸಿದ್ದು ಚಾರಿತ್ರಿಕ ಸಂಗತಿ. ಅವರು ಕನ್ನಡದಲ್ಲಿ ಬರೆಯುವವರೆಗೂ ಕನ್ನಡಿಗರನೇಕರಿಗೆ ಅವರ ಪರಿಚಯವೇ ಇಲ್ಲದಿದ್ದದ್ದು ಸೋಜಿಗದ ಸಂಗತಿ.

ನನ್ನ ಸೀಮಿತ ಓದಿನ ಮಟ್ಟಿಗೆ ಅವರು ಕನ್ನಡದಲ್ಲಿ ರಚಿಸಿದ ಕೃತಿಗಳಲ್ಲಿ ‘ಹಳಗನ್ನಡ’ ಕೃತಿ ಕನ್ನಡದಲ್ಲಿ ಯಾವುದೇ ಕ್ಷೇತ್ರ ಅಥವಾ ಪ್ರಕಾರದಲ್ಲಿ ಬಂದಿರುವ ಕೃತಿಗಳಲ್ಲೇ ಸಾರ್ವಕಾಲಿಕ ಶ್ರೇಷ್ಠ ಕೃತಿಗಳಲ್ಲಿ ಒಂದಾಗಿ ನಿಲ್ಲುತ್ತದೆ. ಹಾಗೆಯೇ, ಕನ್ನಡ ಸಾಹಿತ್ಯ ಚರಿತ್ರೆ ಕಟ್ಟುವುದಕ್ಕೆ ಬಹುದೊಡ್ಡ ಮಾದರಿಯಾಗಿ ಕೂಡ. ಶೆಟ್ಟರ್ ಇಂದು ಕನ್ನಡಕ್ಕೆ ಮುಖ್ಯರಾಗುವುದು ವಿದ್ವತ್ತಿಗೆ ಮಾತ್ರವಲ್ಲ, ತಮ್ಮ ಕೃತಿಗಳಲ್ಲಿ ಎತ್ತಿ ಹಿಡಿದ ಸೆಕ್ಯುಲರ್ ಮನೋಧರ್ಮಕ್ಕೂ ಕೂಡ. ಶಾಸನಗಳ ಅಧ್ಯಯನದ ಮೂಲಕ ಶಾಸನದಷ್ಟೇ ಅಚ್ಚಳಿಯದೆ ಉಳಿಯಲಿರುವ ಇಂತಹ ಅಪ್ರತಿಮ ಚರಿತ್ರೆಕಾರನಿಗೆ ಕೊನೆಗೂ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಕಕ್ಷತೆಯ ಗೌರವ ನೀಡದಿರುವುದು ಅವಮಾನದ ಸಂಗತಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...