Homeಮುಖಪುಟಜನಗಣತಿ ಮತ್ತು NPR ಪ್ರತ್ಯೇಕವಾಗಿರಲಿ: ಕೇಂದ್ರಕ್ಕೆ ಆರ್ಥಿಕ ತಜ್ಞರು ಮತ್ತು ಸಮಾಜ ವಿಜ್ಞಾನಿಗಳಿಂದ ಪತ್ರ..

ಜನಗಣತಿ ಮತ್ತು NPR ಪ್ರತ್ಯೇಕವಾಗಿರಲಿ: ಕೇಂದ್ರಕ್ಕೆ ಆರ್ಥಿಕ ತಜ್ಞರು ಮತ್ತು ಸಮಾಜ ವಿಜ್ಞಾನಿಗಳಿಂದ ಪತ್ರ..

ದೇಶದ ಮತ್ತು ವಿಶ್ವದ ಸುಮಾರು 190 ಜನ ಆರ್ಥಿಕ ತಜ್ಞರು ಮತ್ತು ಸಮಾಜ ವಿಜ್ಞಾನಿಗಳು ಕೇಂದ್ರಕ್ಕೆ ಪತ್ರ ಬರೆದಿದ್ದು, 2021ರ ಜನಗಣತಿ ಪ್ರಕ್ರಿಯೆ ಮತ್ತು ಎನ್‌ಪಿಆರ್‌ಗಳನ್ನು ಪ್ರತ್ಯೇಕಿಸುವಂತೆ ಆಗ್ರಹಿಸಿದ್ದಾರೆ.

- Advertisement -
- Advertisement -

ಈ ಬಾರಿ ನಡೆಯುವ ಜನಗಣತಿ ಮತ್ತು ಎನ್‌ಪಿಆರ್ ಪಕ್ರಿಯೆಗಳನ್ನು ಪ್ರತ್ಯೇಕವಾಗಿ ನಡೆಸುವಂತೆ ಒತ್ತಾಯಿಸಿ ದೇಶದ ಮತ್ತು ವಿಶ್ವದ ಸುಮಾರು 190 ಜನ ಆರ್ಥಿಕ ತಜ್ಞರು ಮತ್ತು ಸಮಾಜ ವಿಜ್ಞಾನಿಗಳು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ.

ಕೇಂದ್ರ ಸರ್ಕಾರ 2021ರ ಜನಗಣತಿ ಮತ್ತು ರಾಷ್ಟ್ರೀಯ ಜನಗಣತಿ ನೊಂದಣಿ (ಎನ್‌ಪಿಆರ್) ಪಕ್ರಿಯೆಗಳನ್ನು ಒಟ್ಟಿಗೆ ನಡೆಸಲು ನಿಶ್ಚಯಿಸಿರುವುದು ಹಲವು ವಲಯಗಳಿಂದ ಟೀಕೆಗೆ ಗುರಿಯಾಗಿದೆ. ಎನ್ ಪಿ ಆರ್ ಮುಂದೆ ನಡೆಯಲಿರುವ ಎನ್ ಸಿ ಆರ್ (ರಾಷ್ಟ್ರೀಯ ಪೌರತ್ವ ನೊಂದಣಿ) ಪ್ರಕ್ರಿಯೆಗೆ ಪೂರ್ವಭಾವಿ ಅಭ್ಯಾಸ ಎಂದು ಹಲವು ನಾಗರಿಕರಲ್ಲಿ ಆತಂಕ ಮನೆಮಾಡಿದೆ. ಎನ್ ಪಿ ಆರ್ ಪ್ರಕ್ರಿಯೆಯಲ್ಲಿ, ಕೆಲವು ನಾಗರಿಕರ ಪೌರತ್ವದ ಬಗ್ಗೆ ಸಂದೇಹವನ್ನು ದಾಖಲಿಸುವ ಸಾಧ್ಯತೆ ಇದೆ ಎಂದು ಕೂಡ ಹಲವು ನಾಗರಿಕರು ಅನುಮಾನ ವ್ಯಕ್ತಪಡಿಸಿದ್ದಾರೆ.

ಈಗ ದೇಶದ ಮತ್ತು ವಿಶ್ವದ ಸುಮಾರು 190 ಜನ ಆರ್ಥಿಕ ತಜ್ಞರು ಮತ್ತು ಸಮಾಜ ವಿಜ್ಞಾನಿಗಳು ಕೇಂದ್ರಕ್ಕೆ ಪತ್ರ ಬರೆದಿದ್ದು, 2021ರ ಜನಗಣತಿ ಪ್ರಕ್ರಿಯೆ ಮತ್ತು ಎನ್‌ಪಿಆರ್‌ಗಳನ್ನು ಪ್ರತ್ಯೇಕಿಸುವಂತೆ ಆಗ್ರಹಿಸಿದ್ದಾರೆ. ಈ ಎರಡೂ ಪ್ರಕ್ರಿಯೆಗಳನ್ನು ಒಟ್ಟಿಗೆ ನಡೆಸಿದರೆ, ಭಾರತೀಯ ದತ್ತಾಂಶ ವ್ಯವಸ್ಥೆಯ ಮೇಲೆ ಆಗುವ ಪರಿಣಾಮಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಭಾರತದ ಪ್ರತಿ ಮನೆಗಳಲ್ಲಿ ಪ್ರಾಥಮಿಕ ಮಾಹಿತಿಯನ್ನು ಸಂಗ್ರಹಿಸುವ ಜನಗಣತಿ ಮಾಹಿತಿ ಬಹಳ ಗೌಪ್ಯವಾದದ್ದು ಮತ್ತು ಇದನ್ನು ಕಾಯ್ದುಕೊಳ್ಳುವುದು ಅತಿ ಮುಖ್ಯ. ಈ ಮಾಹಿತಿಯನ್ನು ಸುರಕ್ಷಿತವಾಗಿ ಕಾಪಡಿಕೊಳ್ಳುವುದು ಮತ್ತು ಅದು ಇತರ ಪ್ರಕ್ರಿಯೆಗಳಿಂದ ಕಲುಷಿತಗೊಳ್ಳದಂತೆ ಎಚ್ಚರವಹಿಸಬೇಕಿದೆ ಎಂದು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

NPR ಮಾಹಿತಿ ಸಂಗ್ರಹದ ಸಮಯದಲ್ಲಿ ನಾಗರಿಕರ ಪೌರತ್ವದ ಬಗ್ಗೆ “ಸಂಶಯ” ವ್ಯಕ್ತಪಡಿಸಲು ತನಿಖೆ ನಡೆಸುವ ಸಾಧ್ಯತೆ ಇದೆ ಎಂದು ಸಮಾಜದ ಹಲವು ವಲಯಗಳಲ್ಲಿ ಆತಂಕ ಬೆಳೆಯುತ್ತಿದೆ. ಇದು ದೇಶದ ಹಲವೆಡೆ ಸಾರ್ವಜನಿಕ ಸಂಶಯಕ್ಕೆ ಎಡೆಮಾಡಿಕೊಟ್ಟಿರುವುದಲ್ಲದೆ, NPR ನಿಂದ ಇರುವ ಹೆಚ್ಚಿನ ಉಪಯೋಗಗಳ ಬಗ್ಗೆ ಯಾವುದೇ ಸ್ಪಷ್ಟತೆ ಕೂಡ ಇಲ್ಲ ಎಂದು ತಿಳಿಸಿದ್ದಾರೆ.

ಎನ್ ಪಿ ಆರ್ ಪ್ರಕ್ರಿಯೆಯನ್ನು 2021ರ ಜನಗಣತಿ ಜೊತೆಗೆ ನಡೆಸುವುದು ಸೆನ್ಸಸ್ ಕಾಯ್ದೆ 1948ರ 15ನೇ ವಿಧಿಯನ್ನು ಉಲ್ಲಂಘಿಸುತ್ತದೆ. ಆ ವಿಧಿ ಜನಗಣತಿ ಅಧಿಕಾರಿ ಕಾರ್ಯ ನಿರ್ವಹಿಸುವಾಗ ಸಿದ್ಧಪಡಿಸುವ ಪುಸ್ತಕ, ನೊಂದಣಿ ಅಥವಾ ದಾಖಲೆಯನ್ನು ಮತ್ಯಾರೂ ಉಪಯೋಗಿಸದಂತೆ ತಡೆಯುತ್ತದೆ ಎಂದು ಕೂಡ ತಿಳಿಸಿದ್ದಾರೆ.

ಹರ್ಷಮಂದರ್, ಜೆ ಎನ್ ಯು ನ ಹಿಮಾಂಶು, ಲಂಡನ್ ವಿಶ್ವವಿದ್ಯಾಲಯದ ಜಾನ್ ಹ್ಯಾರಿಸ್, ದೆಹಲಿ ವಿಶ್ವವಿದ್ಯಾಲಯದ ನಂದಿನಿ ಸುಂದರ್, ಪ್ರಭಾತ್ ಪಟ್ನಾಯಕ್, ಉಮಾ ಚಕ್ರವರ್ತಿ ಹೀಗೆ 190 ಸಮಾಜ ವಿಜ್ಞಾನಿ ಮತ್ತು ಆರ್ಥಿಕ ತಜ್ಞರು ಪತ್ರಕ್ಕೆ ಸಹಿ ಮಾಡಿದ್ದು, 2021ರ ಜನಗಣತಿಯ ಸಮಗ್ರತೆಯನ್ನು ಉಳಿಸಿಕೊಳ್ಳಲು NPR ಪ್ರಕ್ರಿಯ ಜೊತೆಗೆ ಅದನ್ನು ಬೇರ್ಪಡಿಸಬೇಕು ಎಂದು ಆಗ್ರಹಿಸಿರುವುದಲ್ಲದೆ, ಸದ್ಯಕ್ಕೆ ಎನ್‌ಪಿಆರ್ ಅಡಿ ಮಾಹಿತಿ ಸಂಗ್ರಹವನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...