Homeಮುಖಪುಟದೊರೆಸ್ವಾಮಿಯವರ ಬಗ್ಗೆ ಹರಿಬಿಟ್ಟ ಸುಳ್ಳುಗಳು ಮತ್ತು ನೈಜ ವಾಸ್ತವಗಳು..

ದೊರೆಸ್ವಾಮಿಯವರ ಬಗ್ಗೆ ಹರಿಬಿಟ್ಟ ಸುಳ್ಳುಗಳು ಮತ್ತು ನೈಜ ವಾಸ್ತವಗಳು..

- Advertisement -
- Advertisement -

ಸುಳ್ಳು: ದೊರೆಸ್ವಾಮಿಯವರಿಗೆ ಕೋಟ್ಯಾಂತರ ರೂಗಳ ಆಸ್ತಿಯಿದೆಯೇ?

ಸತ್ಯ: ಇದು ಸಂಪೂರ್ಣ ಸುಳ್ಳು ಸುದ್ದಿಯಾಗಿದೆ. ನಿಜವೆಂದರೆ 102 ವರ್ಷದ ದೊರೆಸ್ವಾಮಿಯವರಿಗೆ ಈಗಲೂ ಒಂದು ಸ್ವಂತ ಮನೆ ಇಲ್ಲ. ಸ್ವಂತ ವಾಹನ ಇಲ್ಲ. ಬಹಳಷ್ಟು ಜನ ಮತ್ತು ಹಲವು ಸರ್ಕಾರಗಳು ಅವರಿಗೆ ಮನೆ ಕಟ್ಟಿಕೊಡಲು ಮುಂದಾಗಿದ್ದರೂ ಸಹ ದೊರೆಸ್ವಾಮಿಯವರು ಅದಕ್ಕೆ ಒಪ್ಪಲಿಲ್ಲ. ನಾನು ಸ್ವಯಂಕೃತ ಬಡತನವನ್ನು ಸ್ವೀಕರಿಸಿದ್ದೇನೆ. ನನಗೆ ಸ್ವಂತ ಮನೆ ಬೇಡ ಎಂದು ಸ್ಪಷ್ಟವಾಗಿ ನಿರಾಕರಿಸಿದ್ದರು. ಇಷ್ಟು ದಿನ ಜಯನಗರದಲ್ಲಿ ಬಾಡಿಗೆ ಮನೆಯಲ್ಲಿದ್ದ ಅವರು, ಈಗ ಜೆಪಿ ನಗರದ ಬಾಡಿಗೆ ಮನೆಯಲ್ಲಿದ್ದಾರೆ. ಅವರ ಹೆಂಡತಿಗೆ ಅನಾರೋಗ್ಯವಾಗಿದ್ದಾಗ ಅವರ ಚಿಕಿತ್ಸೆಗೂ ಕೂಡ ಹಣವಿಲ್ಲದೇ ಒದ್ದಾಡಿದರು ಎಂಬುದು ಕಟುಸತ್ಯ.

ಸುಳ್ಳು: ದೊರೆಸ್ವಾಮಿಯವರು ಕಾಂಗ್ರೆಸ್ ಬೆಂಬಲಿಗರು

ಸತ್ಯ: ದೊರೆಸ್ವಾಮಿಯವರು ಯಾವುದೇ ಪಕ್ಷದ ಬೆಂಬಲಿಗರಲ್ಲ. ಅವರು ಬಡಜನರ ಪರ ಮತ್ತು ಆಳುವವರ ವಿರುದ್ಧವಿದ್ದವರು.

ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ಧೀರೋಧಾತ್ತ ಹೋರಾಟ ನಡೆಸಿದ್ದಕ್ಕಾಗಿ ದೊರೆಸ್ವಾಮಿಯವರನ್ನು ನಾಲ್ಕು ತಿಂಗಳುಗಳ ಕಾಲ ಜೈಲಿನಲ್ಲಿಡಲಾಗಿತ್ತು.

ತೀರಾ ಇತ್ತೀಚೆಗೆ ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವಿದ್ದಾಗ ದಿಡ್ಡಳ್ಳಿ ಆದಿವಾಸಿಗಳನ್ನು ಎತ್ತಂಗಡಿ ಮಾಡಿದ್ದಕ್ಕೆ ದೊರೆಸ್ವಾಮಿಯವರು 2016ರ ಡಿಸೆಂಬರ್ ತಿಂಗಳಿನಲ್ಲಿ ಒಂದು ವಾರಗಳ ಕಾಲ ಹೋರಾಟ ನಡೆಸಿದ್ದರು.

ಬಡಜನರಿಗೆ ಭೂಮಿ ನೀಡುವಂತೆ 2017ರ ಜೂನ್‌ 15ರಂದು ಕಾಂಗ್ರೆಸ್‌ ಸರ್ಕಾರದ ವಿರುದ್ಧ ಪ್ರತಿಭಟನೆಯಲ್ಲಿ..

2017ರ ಜೂನ್ 15ರಿಂದ ದೊರೆಸ್ವಾಮಿಯವರು 10 ದಿನಗಳ ಕಾಲ ನಿರಂತರವಾಗಿ ಬಡಜನರಿಗೆ ಭೂಮಿ ಒದಗಿಸಲು ಅಂದಿನ ಕಂದಾಯ ಸಚಿವ ಕಾಗೋಡು ತಿಮ್ಮಪ್ಪನವರು ವಿಫಲರಾಗಿದ್ದಾರೆ ಎಂದು ಆಗ್ರಹಿಸಿ ಹೋರಾಟ ನಡೆಸಿದ್ದರು.

ಮಂಡೂರು ಕಸ ವಿಲೇವಾರಿ ವಿರುದ್ಧ ನಿರಂತರವಾಗಿ ಹೋರಾಟ ನಡೆಸಿದ್ದವರು ದೊರೆಸ್ವಾಮಿಯವರು.

2019ರಲ್ಲಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಮದ್ಯ ನಿಷೇಧಕ್ಕೆ ಒತ್ತಾಯಿಸಿ ಮಹಿಳೆಯರ ಹೋರಾಟದಲ್ಲಿ ದೊರೆಸ್ವಾಮಿಯವರು ಮುಂಚೂಣಿಯಲ್ಲಿದ್ದರು.

ಸುಳ್ಳು: ಭಾರತವನ್ನು ತುಕ್ಡೆ ತುಕ್ಡೆ ಮಾಡಬೇಕೆನ್ನುವವರಿಗೆ ದೊರೆಸ್ವಾಮಿಯವರು ಬೆಂಬಲಿಸಿದ್ದಾರೆ.

ಸತ್ಯ: ಮೊದಲಿಗೆ ಈ ತುಕ್ಡೆ ತುಕ್ಡೆ ಗ್ಯಾಂಗ್ ಭಾರತದಲ್ಲಿ ಅಸ್ತಿತ್ವದಲ್ಲಿಲ್ಲ ಎಂದು ಕೇಂದ್ರ ಸರ್ಕಾರವೇ ಇಂಡಿಯಾ ಟುಡೆ ಚಾನೆಲ್ ಸಲ್ಲಿಸಿದ ಆರ್‌ಟಿಐಗೆ ಉತ್ತರಿಸಿದೆ.

ಎರಡನೆಯದಾಗಿ ಕನ್ನಯ್ಯ ಕುಮಾರ್, ಜಿಗ್ನೇಶ್ ಮೇವಾನಿ, ಉಮರ್ ಖಾಲಿದ್, ಶೆಹ್ಲಾ ರಶೀದ್ ಮತ್ತು ಚಂದ್ರಶೇಖರ್ ಆಜಾದ್ ಸೇರಿದಂತೆ ಯಾರೊಬ್ಬರೂ ಭಾರತವನ್ನು ವಿಭಜಿಸುವ ಹೇಳಿಕೆ ಕೊಟ್ಟಿಲ್ಲ. ಅವರು ದೇಶದಲ್ಲಿ ಸಮಾನತೆ, ಸ್ವಾತಂತ್ರ್ಯ ಪ್ರತಿಯೊಬ್ಬರಿಗೂ ದಕ್ಕಬೇಕೆಂದು ಹೋರಾಡಿದ್ದಾರೆ. ಈ ಸಮಾನತೆ ಸ್ವಾತಂತ್ರ್ಯಕ್ಕೆ ವಿರುದ್ಧವಿರುವ ಸಂಘಪರಿವಾರ ಮತ್ತು ಬಿಜೆಪಿ ವಿರುದ್ಧ ಹೋರಾಡಿದ್ದಾರೆ. ಹಾಗಾಗಿ ಅವರನ್ನು ಟಾರ್ಗೆಟ್ ಮಾಡಿರುವ ಸಂಘಪರಿವಾರ ಮತ್ತು ಮೀಡಿಯಾ ತುಕ್ಡೆ ಗ್ಯಾಂಗ್ ಎಂದು ಕರೆದು ಅವಮಾನಿಸಿದೆ.

ಸುಳ್ಳು: ದೊರೆಸ್ವಾಮಿಯವರು ದೇಶಪ್ರೇಮಿ, ವೀರ್ ಸಾವರ್ಕರ್‌ಗೆ ಹೇಡಿ ಎನ್ನುವ ಮೂಲಕ ಅವಮಾನ ಮಾಡಿದ್ದಾರೆ.

ಸತ್ಯ: ಸಾವರ್ಕರ್ ಆರಂಭದಲ್ಲಿ ಅಭಿನವ್ ಭಾರತ್, ಮಿತ್ರ ಸೇನೆ ರೀತಿಯ ಹಲವು ಸಂಘಟನೆಗಳಲ್ಲಿ ಸೇರಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದು ನಿಜ. 1906ರಲ್ಲಿ ಅವರು ಬಾಲಗಂಗಾಧರ್ ತಿಲಕರ ಶಿಫಾರಸ್ಸಿನ ಮೇರೆಗೆ ಲಂಡನ್‍ಗೆ ತೆರಳಿ ಇಂಡಿಯಾ ಹೌಸ್‍ನಲ್ಲಿ ಉಳಿಯುತ್ತಾರೆ. ಅದೇ ಸಮಯದಲ್ಲಿ ಭಾರತದ ಕ್ರಾಂತಿಕಾರಿಗಳಿಗೆ ಸಾವರ್ಕರ್ ಪಿಸ್ತೂಲುಗಳನ್ನು ಒದಗಿಸುವ ದೇಶಪ್ರೇಮಿ ಕೆಲಸ ಮಾಡಿದ್ದಾರೆ. ಈ ಆರೋಪಕ್ಕಾಗಿ ಅವರ ಅಣ್ಣನೊಂದಿಗೆ ಅಂಡಮಾನ್‍ನಲ್ಲಿ ಕಾಲಾಪಾನಿ ಶಿಕ್ಷೆಗೆ ಒಳಗಾಗುತ್ತಾರೆ. ಅಂದರೆ 1898ರಿಂದ 1911ರವರೆಗೆ ವಸಾಹತುಶಾಹಿ ವಿರೋಧಿ ಹೋರಾಟದಲ್ಲಿ ಪ್ರಮುಖ ನೇತಾರರಾಗಿದ್ದರು. ಅವರು ಬರೆದ ‘ಇಂಡಿಯನ್ ವಾರ್ ಆಫ್ ಇಂಡಿಪೆಂಡೆನ್ಸ್’ ಹಿಂದೂ ಮುಸ್ಲಿಂ ಐಕ್ಯತೆಯಿಂದಲೇ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆಸಲು ಸಾಧ್ಯವಾಯಿತು, ಮುಸ್ಲಿಮರು ಧರ್ಮದಿಂದ ಮುಸ್ಲಿಮರೆ ಹೊರತು ಅವರು ಭಾರತ ಮಾತೆಯ ಸುಪುತ್ರರು ಎಂದು ಇದೇ ಸಾವರ್ಕರ್ ಬರೆದಿದ್ದಾರೆ.

ಆದರೆ 1911ರ ಆಗಸ್ಟ್‍ಗೆ ಮೊದಲನೇ ಶರಣಾಗತಿ ಪತ್ರ ಬರೆಯುತ್ತಾರೆ. 1920ರ ವೇಳೆಗೆ ಆರು ಶರಣಾಗತಿ ಪತ್ರ ಬರೆಯುತ್ತಾರೆ. ಅದರಲ್ಲಿ ‘ನನಗೆ ಬ್ರಿಟಿಷ್ ವಸಾಹತುಶಾಹಿ ವ್ಯವಸ್ಥೆ ಬಗ್ಗೆ ವಿಶೇಷ ಅಭಿಮಾನ ಬಂದಿದೆ. ನಾನೊಬ್ಬ ದಾರಿ ತಪ್ಪಿದ ಮಗನಾಗಿದ್ದೆ, ನಾನು ಈಗ ಮತ್ತೆ ನನ್ನ ತಂದೆತಾಯಿಗಳ (ಬ್ರಿಟಿಷ್) ಆಶ್ರಯಕ್ಕೆ ಸೇರದೇ ಇನ್ನೆಲ್ಲಿಗೆ ಹೋಗಲಿ? ನನ್ನಿಂದ ಯಾವ ರೀತಿಯ ಸೇವೆಯನ್ನು ಬ್ರಿಟಿಷ್ ಸರ್ಕಾರ ಮತ್ತು ರಾಣಿ ಬಯಸುತ್ತಾರೆ ಅದನ್ನು ಸಲ್ಲಿಸಲು ಸಿದ್ಧನಿದ್ದೇನೆ’ ಎಂದು ಬರೆದಿದ್ದರು. ಇದರಿಂದಲೇ ಅವರನ್ನು 1924ರಲ್ಲಿ ಗೃಹಬಂಧನದಲ್ಲಿರಿಸಿದಾಗ ಸಾವರ್ಕರ್ ಒಪ್ಪಿಕೊಂಡು ಸಂಪೂರ್ಣ ಶರಣಾಗುತ್ತಾರೆ. 1947ರ ಆಗಸ್ಟ್ 15ರವರೆಗೆ ಒಮ್ಮೆಯೂ ಅವರು ಬ್ರಿಟಿಷ್ ವಿರೋಧಿ ಹೋರಾಟವಿರಲಿ, ಒಂದು ಮಾತನ್ನು ಆಡುವುದಿಲ್ಲ. ಹಾಗಾಗಿ ಸಾವರ್ಕರ್ ವೀರನಲ್ಲ ಹೇಡಿ ಎಂಬುದು ಸತ್ಯ ಎಂದು ಕ್ಷಮಾಪಣಾ ಪತ್ರಗಳು ಹೇಳುತ್ತವೆ. ದೊರೆಸ್ವಾಮಿಯವರು ಹೇಳಿರುವುದು ಸರಿಯಾಗಿದೆ.

ಸುಳ್ಳು: ಕಂಟೋನ್ಮೆಂಟ್ ರೈಲ್ವೇ ನಿಲ್ದಾಣದಲ್ಲಿ ಕಳ್ಳತನ ಮಾಡಿ ಸಿಕ್ಕಿ ಜೈಲಿಗೋದರೆ ವಿನಃ ಸ್ವಾತಂತ್ರ್ಯಕ್ಕಾಗಿ ಅಲ್ಲ. ಅದೇ ರೀತಿ ಮೀರಾ ರಾಘವೇಂದ್ರ ಎನ್ನುವ ಬಿಜೆಪಿಯ ಹೆಣ್ಣು ಮಗಳು ನನ್ನ ಗಂಡ ಆರ್‍ಟಿಐ ಹಾಕಿದ್ದಾರೆ ಅವರು ಸ್ವಾತಂತ್ರ್ಯ ಹೋರಾಟಗಾರ ಅಲ್ಲ ಎಂದಿದ್ದಾರೆ.

ಸತ್ಯ: ದೊರೆಸ್ವಾಮಿಯವರು ಸ್ವತಃ ಬಡತನವನ್ನು ಅಳವಡಿಸಿಕೊಂಡವರು. ಅವರು ಕಳ್ಳತನ ಮಾಡುತ್ತಾರೆಂಬುದನ್ನು ನೀಚರು ಮಾತ್ರವೇ ಯೋಚಿಸಲು ಸಾಧ್ಯ. ನಿಜವೆಂದರೆ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ದೊರೆಸ್ವಾಮಿಯವರನ್ನು 18-12-1942ರಿಂದ 08-12-1943 (ಆರ್ಡರ್ ನಂಬರ್ – ಪಿ.ಸಿ77/43) ಜೈಲಿನಲ್ಲಿಟ್ಟಿದ್ದರು ಎಂಬುದಕ್ಕೆ ಜೈಲಿನ ಸಾಕ್ಷಿಗಳಿವೆ.

ಸುಳ್ಳು: ದೊರೆಸ್ವಾಮಿಯವರು ಮೋದಿಯನ್ನು ಸಾಯಿಸಬೇಕು ಎಂದು ಹೇಳಿದ್ದಾರೆ

ಸತ್ಯ: ಮೋದಿಯನ್ನು ಸಾಯಿಸಬೇಕೆಂದು ದೊರೆಸ್ವಾಮಿಯವರು ಹೇಳಿಲ್ಲ.. ಅದು ಸುಳ್ಳು ಸುದ್ದಿ.

ಮೋದಿಯನ್ನು ಮುಗಿಸಿಬಿಡಿ ಎಂದು ಕರ್ನಾಟಕದ ಜನತೆಗೆ ದೊರೆಸ್ವಾಮಿಯವರು ಕರೆ ಕೊಟ್ಟಿದ್ದಾರೆ ಎಂದು 2018ರ ಮೇ 09 ರಂದು ಪಬ್ಲಿಕ್ ಟಿವಿ ಪ್ರಕಟಿಸಿದ್ದ ವರದಿ ಎಲ್ಲಾ ಕಡೆ ಹರಿದಾಡುತ್ತಿದೆ.

ಈ ಕುರಿತು ಫ್ಯಾಕ್ಟ್ ಚೆಕ್ ಮಾಡಿದಾಗ ಅದು ಸುಳ್ಳು ಎಂಬುದು ಸ್ಪಷ್ಟವಾಗುತ್ತದೆ. ಆ ವರದಿಯಲ್ಲಿರುವ ದೊರೆಸ್ವಾಮಿಯವರು ಮಾತನಾಡಿರುವ ಸುಮಾರು 07 ನಿಮಿಷಗಳ ವಿಡಿಯೋವನ್ನು ಕೂಲಂಕಷವಾಗಿ ನೋಡಿದರೆ ಈ ಅಂಶ ಸ್ಪಷ್ಟವಾಗುತ್ತದೆ.

ಕರ್ನಾಟಕದ ವಿಧಾನಸಭಾ ಚುನಾವಣೆಗೆ ಮುನ್ನಾ ದಿನ ಪಬ್ಲಿಕ್ ಟಿವಿಯವರು ದೊರೆಸ್ವಾಮಿಯವರನ್ನು ಅವರ ನಿವಾಸದಲ್ಲಿ ಮಾತನಾಡಿಸಿದ್ದಾರೆ. ಅದರಲ್ಲಿ ದೊರೆಸ್ವಾಮಿಯವರು “ಮೋದಿ ವರ್ಸಸ್ ಕರ್ನಾಟಕ ಎಂಬ ಪರಿಸ್ಥಿತಿ ನಿರ್ಮಣವಾಗಿದೆ. ಮೋದಿಯವರು ಎಲ್ಲಾ ರಾಜ್ಯಗಳನ್ನು ತನ್ನ ಕೈಗೆ ತೆಗೆದುಕೊಳ್ಳುತ್ತಾ, ಚಕ್ರಾಧಿಪತ್ಯ ಕಟ್ಟಿ ತನ್ನ ಹಿಡೆನ್ ಅಜೆಂಡಾ ಜಾರಿಗೊಳಿಸಲು ಮುಂದಾಗಿದ್ದಾರೆ. ಆತ ಬರೀ ಮಾತನಾಡುತ್ತಾನೆ, ಆದರೆ ನಿರ್ದಿಷ್ಟವಾಗಿ ಯಾವುದೇ ಕೆಲಸ ಮಾಡಿಲ್ಲ, ಟಚ್ ಅಂಡ್ ಗೋ ರೀತಿಯ ಕೆಲಸಗಳನ್ನು ಮಾತ್ರ ಮಾಡಿದ್ದಾರೆ. ಅವರು ವಿಫಲರಾಗಿದ್ದಾರೆ, ಮಾತು ಕೊಟ್ಟಿದ್ದನ್ನು ಉಳಿಸಿಕೊಂಡಿಲ್ಲ ಮತ್ತು ಬಹಳ ನೀಚತನದಿಂದ ಮಾತನಾಡುತ್ತಾರೆ. ಈ ಹಿಂದೆ ಎಂದೂ ಹೀಗೆ ಆಗಿಲ್ಲ. ಆಗೆಲ್ಲ ಜನರ ಆಶೋತ್ತರಗಳನ್ನು ಇಟ್ಟುಕೊಂಡು ಮಾತನಾಡುತ್ತಿದ್ದರು. ಆದರೆ ಇವರು ಬರೀ ವೈಯಕ್ತಿಕ ವಿಚಾರಗಳನ್ನು ಇಟ್ಟುಕೊಂಡು ಇನ್ನೊಬ್ಬರ ತೇಜೋವಧೆ ಮಾಡುವ ಕೆಲಸ ಮಾಡುತ್ತಿದ್ದಾರೆ ಇದು ಸರಿಯಲ್ಲ.

ಕರ್ನಾಟಕವನ್ನು ತೆಗೆದುಕೊಂಡುಬಿಟ್ರೆ ಇಡೀ ದೇಶವನ್ನೇ ತಗೋಬಹುದು ಎಂದು ಆತನ ಆಲೋಚನೆ ಇದೆ. ಆದ್ದರಿಂದ ಈಗ ನಾವು ಆತನನ್ನು ಮುಗಿಸಬೇಕು. ಆತನನ್ನು ಸೋಲಿಸಬೇಕು. ಬಿಜೆಪಿಯಲ್ಲಿ ಇನ್ಯಾರೂ ನೇತಾರರಿಲ್ಲ ಬಿಡಿ. ಇದ್ದವರು ಯಡಿಯೂರಪ್ಪ ಮಾತ್ರ. ಆದರೆ ಅವರು ಭ್ರಷ್ಟರ ಸುಳಿಗೆ ಸಿಕ್ಕಿ, ಅವರು ಮಾಡಬಾರದ್ದನ್ನೆಲ್ಲ ಮಾಡಿ ಈ ರೀತಿ ಕೆಟ್ಟ ಹೆಸರು ತೆಗೆದುಕೊಂಡು, ಸೆರೆಮನೆಗೆ ಹೋಗಿ 22-23 ಆಪಾದನೆಗಳನ್ನು ಹೊತ್ತಿದ್ದಾರೆ.

ಮೋದಿಯವರು ಕಾಂಗ್ರೆಸ್ ಅನ್ನು ಮುಗಿಸಿಬಿಡುತ್ತೇನೆ ಅಂದಿದ್ದಾರೆ. ಸೋಲಿಸುತ್ತೇನೆ, ನಾನು ಅಧಿಕಾರಕ್ಕೆ ಬರುತ್ತೇನೆ ಎಂಬುದಕ್ಕಿಂತ ನಾಶ ಮಾಡುತ್ತೇನೆ ಎನ್ನುವುದು ಪ್ರಜಾಪ್ರಭುತ್ವದ ಲಕ್ಷಣವಲ್ಲ. ಪ್ರಜಾಪ್ರಭುತ್ವದ ರಾಜ್ಯವಾಳುತ್ತಾ, ಸರ್ವಾಧಿಕಾರಿ ಥರ ಮಾತನಾಡುತ್ತೀರಿ. ಎಲ್ಲರನ್ನು ನಾಶಮಾಡಿ ನೀವು ಅಧಿಕಾರ ನಡೆಸಬೇಕು ಅನ್ನುತ್ತಿದ್ದೀರಿ. ಇದು ಸರಿಯಿಲ್ಲ. ಇದನ್ನು ಒಪ್ಪಲು ಸಾಧ್ಯವಿಲ್ಲ.

ಹಾಗಾಗಿ ನಮ್ಮ ಹೋರಾಟ ನೇರ ಮೋದಿಯ ಮೇಲಿದೆ ಎಂದು ದೊರೆಸ್ವಾಮಿಯವರು ಹೇಳಿದ್ದಾರೆ. ಮುಂದುವರೆದ ಅದಕ್ಕೆ ಬೇರೆ ಯಾರಾದರೂ ಗೆಲ್ಲಬೇಕು. ಸದ್ಯಕ್ಕೆ ಅವಕಾಶ ಸಿದ್ದರಾಮಯ್ಯನವರಿಗೆ ಇದೆ. ದೇವೇಗೌಡರು ಇದನ್ನು ಅರ್ಥಮಾಡಿಕೊಳ್ಳಬೇಕು, ತನ್ನ ಮಗನೇ ಮುಖ್ಯಮಂತ್ರಿಯಾಗಬೇಕೆಂಬ ಹಠ ಹಿಡಿಯಬಾರದು ಎಂದು ಸಹ ಅವರು ಮಾತನಾಡಿದ್ದಾರೆ.

ಅವರು ಮಾತನಾಡಿರುವುದು ಚುನಾವಣೆಯ ಹಿಂದಿನ ದಿನ. ಹಾಗಾಗಿ ಮೋದಿ ಸೋಲಿಸಬೇಕು ಎಂಬುದು ಅವರ ಮಾತಿನ ಅರ್ಥವೇ ಹೊರತು ಸಾಯಿಸಬೇಕೆಂಬುದ್ದಲ್ಲ. ಇದು ಗೊತ್ತಿದ್ದರೂ ಸಹ ಇಡೀ ವಿಡಿಯೋದಲ್ಲಿ ಬರುವ 2.12 ನಿಮಿಷವನ್ನು (ಮೋದಿಯನ್ನು ಮುಗಿಸಬೇಕು) ಮಾತ್ರ ತೋರಿಸಿ ಸುಳ್ಳು ಹರಡಲಾಗುತ್ತಿದೆ.

ಅದರ ಮುಂದಿನ ವಾಕ್ಯವೇ ಅವರು ಮೋದಿಯನ್ನು ಸೋಲಿಸಬೇಕು ಎಂದಿರುವುದನ್ನು ಮರೆಮಾಚಲಾಗಿದೆ. ಅಲ್ಲದೇ ಆತ ಎಂಬುದನ್ನು ಬಿಟ್ಟರೆ ಉಳಿದೆಲ್ಲಾ ಕಡೆ ದೊರೆಸ್ವಾಮಿಯವರು ಬಹುವಚನವನ್ನೇ ಬಳಸಿದ್ದಾರೆ ಎಂಬುದನ್ನು ಗಮನಿಸಬೇಕಿದೆ.

ಈಗ ಈ ಸುದ್ದಿ ಹರಿದಾಡಲು ಕಾರಣವೇಂದರೆ ಅದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ದೊರೆಸ್ವಾಮಿಯವರನ್ನು ಪಾಕ್ ಏಜೆಂಟ್, ನಕಲಿ ಸ್ವಾತಂತ್ರ್ಯ ಹೋರಾಟಗಾರ ಎಂದು ಕರೆದು ವಿವಾದಕ್ಕೆ ಸಿಲುಕಿದ್ದಾರೆ. ಹಾಗಾಗಿ ಅವರ ವಿರುದ್ಧ ಪ್ರತಿಭಟನೆಗಳು ಜೋರಾಗಿವೆ. ಇಂತಹ ಸಮಯದಲ್ಲಿ ಅದನ್ನು ಸಮರ್ಥಿಸಿಕೊಳ್ಳಲು ದೊರೆಸ್ವಾಮಿಯವರ ವಿರುದ್ಧ ಸುಳ್ಳು ಹರಡಲಾಗುತ್ತಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...