Homeಮುಖಪುಟಹೆಣ್ಣು ಭ್ರೂಣ ಹತ್ಯೆ ಎಂಬುದು ಸಾವಿರ ಕೋಟಿ ದಂಧೆಯಾಗಿದೆ: ಭಾನು ಮುಷ್ತಾಕ್

ಹೆಣ್ಣು ಭ್ರೂಣ ಹತ್ಯೆ ಎಂಬುದು ಸಾವಿರ ಕೋಟಿ ದಂಧೆಯಾಗಿದೆ: ಭಾನು ಮುಷ್ತಾಕ್

ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆಯ ವತಿಯಿಂದ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಕೌಟುಂಬಿಕೆ ನೆಲೆಯಿಂದ ಮಹಿಳಾ ಬದುಕು ಪಲ್ಲಟಗಳು ವಿಷಯದ ಕುರಿತು ಅವರು ಮಾತನಾಡಿದರು.

- Advertisement -
- Advertisement -

ಮೂಢನಂಬಿಕೆಗೆ ಬಲಿಯಾಗಬೇಡಿ. ಪಿತೃಪ್ರಾಧ್ಯನತೆಯ ಎಲ್ಲಾ ಮೌಲ್ಯಗಳನ್ನು ನಮ್ಮ ತಲೆಯಲ್ಲಿ ತುಂಬುತ್ತಿರುವುದೇ ಮೂಢನಂಬಿಕೆಗಳ ಮೂಲಕ. ಇದರಿಂದ ತಾವು ಮಾಡಬೇಕೆನ್ನುವ ಕೆಟ್ಟ ಕೆಲಸಗಳನ್ನು ಮಹಿಳೆಯರ ಮೂಲಕ ಮಾಡಿಸಲಾಗುತ್ತದೆ. ಇದರಿಂದ ನಮ್ಮನ್ನು ನೂರು-ಐನೂರು ವರ್ಷಕ್ಕೆ ಹಿಂದಕ್ಕೆ ತಳ್ಳಲ್ಲಿಕ್ಕೆ ಇದನ್ನು ಬಳಸುತ್ತಿದ್ದಾರೆ. ಹಾಗಾಗಿ ಮೂಡನಂಬಿಕೆಗಳಿAದ ದೂರ ಇರಬೇಕೆಂದು ಹಿರಿಯ ವಕೀಲೆ ಮತ್ತು ಲೇಖಕಿಯಾದ ಬಾನು ಮುಷ್ತಕ್ ಕರೆ ನೀಡಿದರು.

ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆಯ ವತಿಯಿಂದ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಕೌಟುಂಬಿಕೆ ನೆಲೆಯಿಂದ ಮಹಿಳಾ ಬದುಕು ಪಲ್ಲಟಗಳು ವಿಷಯದ ಕುರಿತು ಅವರು ಮಾತನಾಡಿದರು.

ಕುಟುಂಬದ ಒಳಗೆ ಯಾರು ದೌರ್ಜನ್ಯ ನಡೆಸುತ್ತಾರೆ? ಎಂಬ ಪ್ರಶ್ನೆಗಳು ಬಹಳ ಬರುತ್ತವೆ. ಅಪ್ಪನೇ ತನ್ನ ಮಗಳನ್ನು ಅತ್ಯಾಚಾರ ಮಾಡಿರುವ ಹಲವು ಪ್ರಕರಣಗಳು ನನ್ನ ಮುಂದಿವೆ. ಇಂದು ಹಲವು ಸಾವಿರ ಪಟ್ಟು ಕೌಟುಂಬಿಕ ಹಿಂಸೆ ಜಾಸ್ತಿಯಾಗಿದೆ. ಮಗು ಹುಟ್ಟುವುದಕ್ಕೆ ಮುಂಚಿತವಾಗಿಯೇ ಹತ್ಯೆ ಮಾಡುವುದು ಇಂದು ಒಂದು ಸಾವಿರ ಕೋಟಿ ಮೌಲ್ಯದ ದಂಧೆಯಾಗಿದೆ. ಒಬ್ಬ ಹೆಣ್ಣು ಮಗಳನ್ನು ಹುಟ್ಟುವುದಕ್ಕೆ ಅವಕಾಶ ಕೊಡದ ಸಂದರ್ಭದಲ್ಲಿ ಇನ್ನು ಹುಟ್ಟಿದ ಮೇಲೆ ಯಾವ ಯಾವ ರೀತಿ ಹಿಂಸೆ ಕೊಡುತ್ತಾರೆ ನೀವೆ ಯೋಚಿಸಿ? ಎಂದು ಅಭಿಪ್ರಾಯಪಟ್ಟರು.

ಈ ವಿಭಿನ್ನವಾದ ಹಿಂಸೆಗಳಲ್ಲಿ ಮಹಿಳೆಯರನ್ನು ದ್ವಿತಿಯ ದರ್ಜೆಯ ಪ್ರಜೆಯನ್ನಾಗಿ ಮಾಡಿ ಹತ್ತಿಕ್ಕುವ ವ್ಯವಸ್ಥೆ ಇಂದಿಗೂ ಕೂಡ ಜಾರಿಯಲಿದೆ. ನಮ್ಮ ಸಮಾಜ ಆಧುನಿಕವಾದಷ್ಟು ಕೂಡ ಮತೀಯವಾಗಿ ನರಳುತ್ತಿದೆ ಎಂದರು.

ಸ್ತ್ರೀ ಶಿಕ್ಷಣ ನಿರಾಕರಣೆ, ಹೆಣ್ಣು ಭ್ರೂಣ ಹತ್ಯೆ, ಬಾಲ್ಯವಿವಾಹ, ವಿವಾಹ ಸಂಬಂಧಿತ ನೋಂದಣಿಗೆ ವಿರೋಧ, ಪರಸ್ಪರ ಒಪ್ಪಿಗೆಯ ಮೇಲೆ ವಿಚ್ಛೇದನಕ್ಕೆ ವಿರೋಧ, ಆಸ್ತಿ ಹಕ್ಕು, ಅತ್ಯಾಚಾರ.. ಮರ್ಯಾದೆಹೀನ ಹತ್ಯೆ.. ಇವೆಲ್ಲವೂ ಕೌಟುಂಬಿಕ ಹಿಂಸೆ ಕೆಳಗೆ ಬರುತ್ತವೆ ಆದರೆ ಆಧುನಿಕ ಸಮಾಜ ಇದೆಲ್ಲವನ್ನು ಗಮನಿಸುತ್ತಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದರು.

ಇದೇ ಮಂಡ್ಯ ಜಿಲ್ಲೆಯ ಸ್ಮೃತಿ ಎಂಬ ಹೆಣ್ಣು ಮಗಳು ನನ್ನ ಬರಹಗಳ ಕುರಿತು ಸಂಶೋಧನೆ ನಡೆಸಿದ್ದಳು. ಬಹಳ ಪ್ರತಿಭಾವಂತಳಾದ ಆಕೆ ದಲಿತ ಯುವಕನ ಜೊತೆ ಮದುವೆಯಾಗಿದ್ದಕ್ಕೆ ಕೊಲೆ ಮಾಡಲಾಗಿದೆ. ಅಂದರೆ ಮರ್ಯಾದೇಹೀನ ಹತ್ಯೆ ಇಂದಿಗೂ ಚಾಲ್ತಿಯಲ್ಲಿರುವುದು ದುರಂತ ಎಂದರು.

2005 ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಜಾರಿಗೆ ಬಂತು. ವಿಶ್ವಸಂಸ್ಥೆ ಮತ್ತು ಅಂತರಾಷ್ಟ್ರೀಯ ಒಡಂಬಡಿಕೆಗಳ ಅಂಗವಾಗಿ ಕಾನೂನಾಗಿದೆ. ಇಂದಿರಾ ಜೈಸಿಂಗ್ ಎಂಬ ಹಿರಿಯ ವಕೀಲೆ, ಸಾಮಾಜಿಕ ಹೋರಾಟಗಾರ್ತಿ ಈ ಕಾಯ್ದೆಯನ್ನು ಬೆಂಬಲಿಸಿದ್ದಕ್ಕೆ ಆಕೆಯನ್ನು ಟ್ರೋಲ್ ಮಾಡಲಾಯಿತು.. ಇದು ನಮ್ಮ ಸಮಾಜ ಮಹಿಳೆಯರ ಕುರಿತು ವರ್ತಿಸುವ ಪರಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಲಿಂಗಾನುಪಾತದಲ್ಲಿ ಈಗ ಬಹಳ ತಾರತಮ್ಯವುಂಟಾಗುತ್ತಿದ್ದು, ದಿನೇ ದಿನೇ ಹೆಣ್ಣು ಮಕ್ಕಳ ಲಿಂಗಾನುಪಾತ ಕುಸಿಯುತ್ತಿದೆ. 498ಎ ಕಾಯ್ದೆಯ ಆಧಾರದಲ್ಲಿ ಸುಳ್ಳು ಕೇಸುಗಳು ದಾಖಲಾಗುತ್ತಿವೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಅದರಂಗತೆ ಡಿವೈಎಸ್ಪಿ ಒಪ್ಪಿಗೆ ನೀಡಿದ ನಂತರವೇ ಕೇಸು ದಾಖಲಿಸಬೇಕೆಂಬ ನಿಯಮ ಬಂದಿತು. ಬಹಳಷ್ಟು ಹೋರಾಟಗಳ ನಂತರ ಅದನ್ನು ಹಿಂತೆಗೆದುಕೊಳ್ಳಲಾಗಿದೆ. ಅಂದರೆ ಈ ಕಾನೂನುಗಳು ದುರುಪಯೋಗವಾಗುತ್ತಿವೆ ಎಂಬ ಆರೋಪಗಳಿವೆ. ಈ ಕಾನೂನುಗಳ ಅಡಿಯಲ್ಲಿ ಸುಳ್ಳು ಕೇಸು ಹಾಕಿದರೆ ಕಾನೂನು ಉಲ್ಟಾ ಹೊಡೆದು ನೈಜ ಹಿಂಸೆ ಅನುಭವಿಸದವರಿಗೂ ನ್ಯಾಯ ಸಿಗುವುದು ದುಸ್ತರವಾಗುತ್ತದೆ. ಇದರ ಬಗ್ಗೆ ಎಚ್ಚರಿಕೆಯಿಂದಿರಬೇಕೆಂದು ಮನವಿ ಮಾಡಿದರು.

ಔದ್ಯೋಗಿಕ ನೆಲೆಯಲ್ಲಿ ಮಹಿಳಾ ಬದುಕಿನ ಪಲ್ಲಟಗಳು ವಿಷಯದ ಕುರಿತು ಸಾಮಾಜಿಕ ಕಾರ್ಯಕರ್ತೆ ಎಸ್.ಸತ್ಯಾರವರು ಮಾತನಾಡಿ “ಸ್ವಾತಂತ್ರ್ಯವೇ ಅಭಿವೃದ್ದಿ ಎಂದು ಅರ್ಥಶಾಸ್ತ್ರಜ್ಞ ಅಮರ್ತ್ಯಸೆನ್ ಹೇಳಿದ್ದಾರೆ. ವಿಶ್ವಸಂಸ್ಥೆಯು ನಾನು ಸಮಾನತೆಯ ತಲೆಮಾರಿನವಳು ಎಂಬ ಘೋಷಣೆ ನೀಡಿದೆ. ಎಲ್ಲರೂ ಸಮಾನರು ವಿಶ್ವ ಆರ್ಥಿಕ ವೇದಿಕೆ ನೀಡಿದೆ. ಆದರೆ ಇದೇ ಪರಿಸ್ಥಿತಿ ಮುಂದುವರೆದರೆ ಔದ್ಯೋಗಿಕ ಕ್ಷೇತ್ರದಲ್ಲಿ ಸಮಾನತೆ ಬರಬೇಕಾದರೆ 108 ವರ್ಷಗಳು ಬೇಕು ಸಂಶೋಧನಾ ವರದಿಗಳು ಹೇಳುತ್ತವೆ ಎಂದು ಬೇಸರ ವ್ಯಕ್ತಪಡಿಸಿದರು.
187 ರಾಷ್ಟ್ರಗಳು ಲಿಂಗತಾರತಮ್ಯವನ್ನು ನಿಯಂತ್ರಿಸಲು ಕಾಯ್ದೆ ಕಾನೂನುಗಳನ್ನು ರೂಪಿಸಿವೆ. ಲಿಂಗ ತಾರತಮ್ಯದ ವಿಚಾರದಲ್ಲಿ ಭಾರತ ಕೇವಲ 25% ಮಾತ್ರ ಶ್ರಮಿಸಿದೆ. ಸಮಾನ ವೇತನ ಎಂಬದು ಇನ್ನು ಮಹಿಳೆಯರ ಪಾಲಿಗೆ ಕನಸಿನ ಮಾತಾಗಿದೆ. ಕೆಲಸದ ಸ್ಥಳದಲ್ಲಿ ಹಿಂಸೆ ಮುಂದುವರೆದಿದೆ.

ವೇತನಸಹಿತ ಕೆಲಸ ಮತ್ತು ವೇತನ ರಹಿತ ಕೆಲಸ ಎಂಬ ಎರಡು ವಿಭಾಗಗಳಿವೆ.. ಪಾಲನೆ ಮತ್ತು ಪೋಷಣೆ ಮಾಡುವ ಕೆಲಸ ಅನುತ್ಪಾದಕ ಕ್ಷೇತ್ರ ಎನ್ನಲಾಗುತ್ತಿದೆ. ಅಂಗನವಾಡಿಯಿಂದ ಹಿಡಿದು ಐಟಿ ಕಂಪನಿಗಳನ್ನು ಮಕ್ಕಳನ್ನು ನೋಡಿಕೊಳ್ಳುವ, ರೋಗಿಗಳನ್ನು, ವಿಕಲಚೇತನರನ್ನು ನೋಡಿಕೊಳ್ಳುವ ಕೆಲಸವನ್ನು ಮಹಿಳೆಯರು ಮಾಡುತ್ತಿದ್ದಾರೆ. ಇದನ್ನು ಮಾನವೀಯ ಕೆಲಸವಾಗಿದ್ದರೆ ಉತ್ಪಾದನಾ ಕ್ಷೇತ್ರವಲ್ಲವೇ? ಇದಕ್ಕೆ ಏಕೆ ಮೌಲ್ಯವನ್ನು ನಿಗಧಿಪಡಿಸುತ್ತಿಲ್ಲ ಎಂದು ಅವರು ಪ್ರಶ್ನಿಸಿದರು.

ಇಂದು ಉದ್ಯೋಗಗಳು ಮಹಿಳೆಯರಿಗೆ ಆಯ್ಕೆಯಾಗಿಲ್ಲ ಬದಲಿಗೆ ಹೇರಿಕೆಯಾಗಿವೆ. ತಂತ್ರಜ್ಞಾನ ಸ್ಪಲ್ಪ ಮಟ್ಟಿಕೆ ಮಹಿಳೆಯರನ್ನು ಸುಧಾರಿಸಿದರೂ ಸಹ ಅವರನ್ನು ಮತ್ತೆ ಅವರನ್ನು ಕೆಲವೇ ಕ್ಷೇತ್ರಗಳಿಗೆ ಸೀಮಿತಗೊಳಿಸಿತು. ಖಾಸಗೀಕರಣ ಮತ್ತು ಜಾಗತೀಕರಣದ ಜೊತೆಗೆ ಕೋಮುವಾದ ಮತ್ತು ದೌರ್ಜನ್ಯಗಳು ಮಹಿಳೆಯನ್ನು ಮುಂದೆ ಹೋಗದಂತೆ ತಡೆಹಿಡಿಯಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಾಮಾಜಿಕ ಮತ್ತು ಸಾಮಾಜಿಕ ನೆಲೆಯಿಂದ ಮಹಿಳಾ ಬದುಕು ಪಲ್ಲಟಗಳು ವಿಷಯದ ಕುರಿತು ಸಬಿತಾ ಬನ್ನಾಡಿಯವರು ಮಾತನಾಡಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...