ನಾನು ಬಿಜೆಪಿಯಿಂದ ಮಾತ್ರ ದೂರವಾಗಿದ್ದೇನೆ, ಹಿಂದುತ್ವದಿಂದಲ್ಲ ಎಂದು ಶಿವಸೇನೆ ಮುಖ್ಯಸ್ಥ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಅಯೋಧ್ಯೆಯಲ್ಲಿ ಮಾತನಾಡುತ್ತಾ “ರಾಮ್ ಲಲ್ಲಾ ಆಶೀರ್ವಾದ ಪಡೆಯಲು ನಾನು ಇಲ್ಲಿಗೆ ಬಂದಿದ್ದೇನೆ. ‘ಭಗವಾ’ ಕುಟುಂಬದ ಹಲವಾರು ಸದಸ್ಯರು ನನ್ನೊಂದಿಗಿದ್ದಾರೆ. ಕಳೆದ ಒಂದುವರೆ ವರ್ಷಗಳಲ್ಲಿ ಇದು ನನ್ನ ಮೂರನೇ ಭೇಟಿಯಾಗಿದೆ. ಇಂದು ಕೂಡಾ ಪ್ರಾರ್ಥನೆ ಸಲ್ಲಿಸುತ್ತೇನೆ” ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.
“ರಾಮ ಮಂದಿರಕ್ಕೆ ನಾನು ಒಂದು ಕೋಟಿ ನೀಡುತ್ತೇನೆ, ಇದು ರಾಜ್ಯ ಸರ್ಕಾರದಿಂದ ಅಲ್ಲ” ಎಂದು ಹೇಳಿದರಲ್ಲದೆ, “ನಾನು ಬಿಜೆಪಿಯಿಂದ ದೂರ ಸರಿದಿದ್ದೇನೆಯೆ ಹೊರತು ಹಿಂದುತ್ವದಿಂದ ಅಲ್ಲ, ಬಿಜೆಪಿ ಅಂದರೆ ಹಿಂದುತ್ವ ಅಲ್ಲ. ಹಿಂದುತ್ವ ಬೇರೆಯೆ ಬಿಜೆಪಿ ಬೇರೆಯೆ” ಎಂದು ಠಾಕ್ರೆ ಹೇಳಿದರು.
ಕಳೆದ ಡಿಸೆಂಬರ್‌ನಲ್ಲಿ ಮುಖ್ಯಮಂತ್ರಿಯಾದ ನಂತರ ಮೊದಲ ಬಾರಿಗೆ ಠಾಕ್ರೆ ಅಯೋಧ್ಯೆಗೆ ಬಂದಿದ್ದಾರೆ. ಅಲ್ಲಿ ಆರತಿ ಮಾಡುವ ಬಗ್ಗೆ ನಿರ್ಧರಿಸಲಾಗಿತ್ತು, ಆದರೆ ಕರೋನ ವೈರಸ್ ಕಳವಳದಿಂದಾಗಿ ಅದನ್ನು ರದ್ದುಪಡಿಸಲಾಗಿದೆ.
ಸೈದ್ಧಾಂತಿಕವಾಗಿ ವಿಭಿನ್ನವಾದ ಕಾಂಗ್ರೆಸ್ ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿರುವ ಶಿವಸೇನೆ ಮಹಾರಾಷ್ಟ್ರದಲ್ಲಿ ಆಡಳಿತ ನಡೆಸುತ್ತಿದೆ.