Homeಮುಖಪುಟಕರ್ನಾಟಕದಲ್ಲಿ ದಲಿತ ಮುಸ್ಲಿಂ ಸಮುದಾಯಗಳಿಗೆ ಸಿಕ್ಕ ರಾಜಕೀಯ ಅಧಿಕಾರವೆಷ್ಟು? ಸಿಗಬೇಕಾದುದೆಷ್ಟು?

ಕರ್ನಾಟಕದಲ್ಲಿ ದಲಿತ ಮುಸ್ಲಿಂ ಸಮುದಾಯಗಳಿಗೆ ಸಿಕ್ಕ ರಾಜಕೀಯ ಅಧಿಕಾರವೆಷ್ಟು? ಸಿಗಬೇಕಾದುದೆಷ್ಟು?

ಕರ್ನಾಟಕದ ಸಾಮಾಜಿಕ, ರಾಜಕೀಯ ಪರಿಸ್ಥಿತಿ, ಸಮುದಾಯಗಳಿಗೆ ಸಿಗುತ್ತಿರುವ ಮೀಸಲಾತಿಯ ಪ್ರಮಾಣ, ರಾಜಕೀಯ ಪ್ರಾತಿನಿಧ್ಯದ ತಾರತಮ್ಯ ಕುರಿತು ಚಿಂತನಾರ್ಹ ಲೇಖನ..

- Advertisement -
- Advertisement -

ಕರ್ನಾಟಕ ದೇಶದ ಆರನೇ ದೊಡ್ಡ ರಾಜ್ಯ. ದಕ್ಷಿಣದ ಐದು ರಾಜ್ಯಗಳ ಪ್ಯಕಿ ಕರ್ನಾಟಕ ಅತೀ ದೊಡ್ಡ ರಾಜ್ಯ. ಜನಸಂಖ್ಯೆ ಆರೂವರೆ ಕೋಟಿ. ಇಲ್ಲಿನ ಸಾಕ್ಷರತೆ 75%. 30 ಜಿಲ್ಲೆ, 236 ತಾಲ್ಲೂಕು, 6073 ಗ್ರಾಮ ಪಂಚಾಯತಿ, 1,05,000 ಗ್ರಾಮ ಪಂಚಾಯಿತಿ ಸದಸ್ಯರು, 90 ಪಟ್ಟಣ ಪಂಚಾಯಿತಿ, 113 ಪುರಸಭೆ, 58 ನಗರ ಸಭೆ, 10 ಮಹಾನಗರ ಪಾಲಿಕೆಗಳನ್ನು ಕರ್ನಾಟಕ ಒಳಗೊಂಡಿದೆ.

224 ಶಾಸಕರು ಮತ್ತು 28 ಸಂಸದರು ರಾಜ್ಯವನ್ನು ಪ್ರತಿನಿಧಿಸುತ್ತಾರೆ. 75 ವಿಧಾನ ಪರಿಷತ್‌ ಸದಸ್ಯರಿದ್ದು ಅದರಲ್ಲಿ 25 ಸದಸ್ಯರನ್ನು ಶಾಸಕರು ಆರಿಸಿದರೆ 25 ಸದಸ್ಯರನ್ನು ಸ್ಥಳೀಯ ಸಂಸ್ಥೆಗಳ ಚುನಾಯಿತ ಜನ ಪ್ರತಿನಿಧಿಗಳು ಆಯ್ಕೆ ಮಾಡುತ್ತಾರೆ. 7 ಸದಸ್ಯರು ಶಿಕ್ಷಕರ ಕ್ಷೇತ್ರದಿಂದ 7 ಜನರು ರಾಜ್ಯದ ಪದವೀಧರರ ಕ್ಷೇತ್ರದಿಂದ ಆಯ್ಕೆಯಾದರೆ, ಉಳಿದ 11 ಸದಸ್ಯರನ್ನು ಪಕ್ಷಗಳ ಸಲಹೆಯಂತೆ ರಾಜ್ಯಪಾಲರು ನೇಮಕ ಮಾಡುತ್ತಾರೆ. ಇವರ ಅಧಿಕಾರವಧಿ 6 ವರ್ಷಗಳಿದ್ದು ಪ್ರತೀ 2 ವರ್ಷಗಳಿಗೊಮ್ಮೆ 25 ಸದಸ್ಯರ ಅವಧಿ ಮುಗಿದು ಹೊಸಬರನ್ನು ಆಯ್ಕೆ ಮಾಡುತ್ತಾರೆ. ರಾಜ್ಯದಿಂದ 12 ಜನ ರಾಜ್ಯಸಭಾ ಸದಸ್ಯರನ್ನು ಶಾಸಕರು ಆಯ್ಕೆ ಮಾಡುತ್ತಾರೆ.

ರಾಜಕೀಯ ಮೀಸಲಾತಿ :

ಒಟ್ಟು 28 ಸಂಸತ್‌ ಸದಸ್ಯರಲ್ಲಿ 5 ಕ್ಷೇತ್ರಗಳು SCಗಳಿಗೆ 2 ಕ್ಷೇತ್ರಗಳು STಗಳಿಗೆ ಮೀಸಲಾಗಿದ್ದು ಉಳಿದವರು ಸಾಮಾನ್ಯ ಕ್ಷೇತ್ರಗಳು. 224 ವಿಧಾನ ಸಭಾ ಕ್ಷೇತ್ರಗಳಲ್ಲಿ  36 SC ಮತ್ತು  15 ST ಸಮುದಾಯಕ್ಕೆ ಮೀಸಲಾಗಿವೆ.

ಅದೇ ರೀತಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿಯೂ ಕೂಡ 50% ಶೇಕಡ ಮಹಿಳಾ ಮೀಸಲು ಇದ್ದು, ಮಹಿಳಾ ಮೀಸಲಿನಲ್ಲಿ SC, ST, OBC ಗಳಿಗೆ ಉಪ ಮೀಸಲಾತಿ ಲಭ್ಯವಿದೆ. ಇನ್ನು 101 SC ಜಾತಿಗಳಿಗೆ 15%  ST ಜಾತಿಗಳಿಗೆ 3%, 207 ಹಿಂದುಳಿದ ವರ್ಗಗಳ ಜಾತಿಗಳಿಗೆ 32% ಮೀಸಲಾತಿ ಇದೆ. ಹಿಂದುಳಿದ ವರ್ಗಗಳ ಮೀಸಲಾತಿಯಲ್ಲಿ ಒಕ್ಕಲಿಗ, ಲಿಂಗಾಯಿತ, ಜೈನ, ಕೈಸ್ತ, ರೆಡ್ಡಿ, ಬಂಟ, ಮೊದಲಾದ ಹಲವಾರು ಜಾತಿಗಳು ಬರುತ್ತವೆ. ಮುಸ್ಲಿಂ, ಕುರುಬ, ಈಡಿಗ, ಬಿಲ್ಲವ, ಬಲಿಜ ಈ ರೀತಿ 2ನೇ ವರ್ಗ ವಿಂಗಡನೆ ಮಾಡಲಾಗಿದ್ದು ಹಿಂದುಳಿದ ಮತ್ತು ಅತೀ ಹಿಂದುಳಿದ ವರ್ಗಗಳು ಎನ್ನಲಾಗುತ್ತದೆ.

ಶೈಕ್ಷಣಿಕ ಮತ್ತು ಉದ್ಯೋಗ ಮೀಸಲಾತಿ :

ಈ ಮೇಲೆ ಹೆಸರಿಸಿದ ಎಲ್ಲಾ ಜಾತಿಗಳಿಗೂ ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ಸರಕಾರಿ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಲಾಗಿದೆ. ಆದರೂ ಸಹ ಬಹಳಷ್ಟು ಜನ ಮೀಸಲಾತಿ ಬಗ್ಗೆ ತಪ್ಪು ಅಭಿಪ್ರಾಯಗಳನ್ನು ಹೊಂದಿದ್ದು ಮೀಸಲಾತಿಯನ್ನು ವಿರೋಧಿಸುತ್ತಿದ್ದಾರೆ. ದುರಂತವೆಂದರೆ ಯಾರು ಮೀಸಲಾತಿಯನ್ನು ಪಡೆಯುತ್ತಿದ್ದಾರೋ ಅವರೇ ಮೀಸಲಾತಿಯನ್ನು ನಾವು ಪಡೆಯುತ್ತಲೇ ಇಲ್ಲವೆಂಬ ನಾಟಕವಾಡುತ್ತಿದ್ದಾರೆ.!!

■    ಲಿಂಗಾಯಿತರು ಹಾಗೂ ಅದರ 42 ಒಳಪಂಗಡಗಳೂ ಕೆಟಗರಿ 3ಬಿ ಕೋಟಾದ ಅಡಿಯಲ್ಲಿ ಮೀಸಲಾತಿಯನ್ನು ಪಡೆಯುತ್ತಿವೆ.!!

■    ಇನ್ನು ರೆಡ್ಡಿ, ಒಕ್ಕಲಿಗ, ಬಂಟ, ಬಲಿಜ, ಕೊರವ ಇವರೂ ಸಹ ಕೆಟಗರಿ 3ಎ ಅಡಿಯಲ್ಲಿ ಒಟ್ಟು 12 ಜಾತಿಗಳವರು ಮೀಸಲಾತಿ ಪಡೆಯುತ್ತಿದ್ದಾರೆ.!!

■    ವಿಶ್ವಕರ್ಮ, ಕುರುಬರು, ಮಡಿವಾಳರು, ಕಂಬಾರರು, ಕುಂಬಾರರು, ದೇವಾಂಗ ಹೀಗೆ 102 ಜಾತಿಗಳು ಎಸ್.ಸಿ ಗೆ ಎಷ್ಟು ಮೀಸಲಾತಿ ಇದೆಯೋ ಅವರೂ ಸಹ ಅಷ್ಟೇ  [ಶೇ.15 ] ಮೀಸಲಾತಿ ಪಡೆಯುತ್ತಿದ್ದಾರೆ.!! ಇವರೆಲ್ಲಾ ನಾವು ಮೇಲ್ವರ್ಗದವರು ಎಂದೇ ಹೇಳಿಕೊಳ್ಳುತ್ತಾರೆ.!!

■    ಜೇನುಕುರುಬ, ಕಾಡುಕುರುಬ ಇವರೂ ಸಹ ಮೀಸಲಾತಿ ಪಡೆಯುತ್ತಿದ್ದಾರೆ..

ಪ್ರಶ್ನೆ ಬಂದಿರೋದು ನಾವ್ಯಾರೂ ಮೀಸಲಾತಿಯನ್ನು ಪಡೆಯುತ್ತಿಲ್ಲ ಅನ್ನುವ ಮಟ್ಟಿಗೆ ಈ ಮೇಲಿನವರಲ್ಲಿ ಬಹುತೇಕರು ವರ್ತಿಸುತ್ತಿರುವುದು ಹೇಸಿಗೆ ಹುಟ್ಟಿಸಿ ಅವರ ಚಾಣಾಕ್ಷ್ಯತನಕ್ಕೆ ತಳಮಟ್ಟದ ಸಮುದಾಯಗಳು ಬೆರಗುಗಣ್ಣಿನಿಂದ ನೋಡುವಂತೆ ಮಾಡಿವೆ.!!

■    ಇವರೆಲ್ಲರೂ ಅಸ್ಪೃಷ್ಯತೆಯ ನೋವನ್ನು ಅನುಭವಿಸಿದ್ದಾರೆಯೇ!? ಹೀಗಿದ್ದರೂ ಮೀಸಲಾತಿ ವಿರೋಧಿಸುವ ಬಹುತೇಕರು ಇದೇ ಗುಂಪುಗಳಲ್ಲಿದ್ದಾರೆಂಬುದು ಖೇದಕರ, ದುರದೃಷ್ಟಕರ.!!

■    ಪರಿಶಿಷ್ಟ ಜಾತಿ, ಪಂಗಡದವರು ಮಾತ್ರ ಮೀಸಲಾತಿ ಪಡೆಯುತ್ತಿದ್ದಾರೆ ಅನ್ನೋ ಹುಂಬತನ ಇರುವ ಇಂಥ ಜನ ತಾವೆಲ್ಲಿದ್ದೇವೆ? ಏನು ಮಾಡುತ್ತಿದ್ದೇವೆ!? ಎಂಬುದರ ಅರಿವೇ ಅವರಿಗೆ ಇಲ್ಲ.!!

ಮೀಸಲಾತಿಯನ್ನು ವಿರೋಧಿಸುವ ಧೋರಣೆ ಹೊಂದಿರುವ ಇವರು ತಮಗಿರುವ ಮೀಸಲಾತಿಯನ್ನು ಮೊದಲು ಬಿಟ್ಟುಬಿಡಲಿ.!! ಬಡವರಿಗಾದರೂ ಸಿಗುತ್ತದೆ, ಇದು ಆದರ್ಶ.!

ಕರ್ನಾಟಕದ ಮೀಸಲಾತಿ ವಿವರ ಇಂತಿದೆ.

1) ಪ್ರವರ್ಗ – 1                4 %  ( 95 ಜಾತಿಗಳು )

2) ಪ್ರವರ್ಗ – 2 (ಎ)         15% ( 102 ಜಾತಿಗಳು)

3) ಪ್ರವರ್ಗ  – 2 (ಬಿ)         4% ( ಮುಸ್ಲಿಮರು )

4) ಪ್ರವರ್ಗ  – 3 (ಎ)         4% (ಒಕ್ಕಲಿಗ&ಬಲಿಜ)

5) ಪ್ರವರ್ಗ  – 3 (ಬಿ)         5% ( ಲಿಂಗಾಯತರು & ಇತರೆ 5)

6) ಪ.ಜಾತಿ   –                  15% ( 101 ಜಾತಿಗಳು)

7) ಪ.ಪಂಗಡ-                   3%  (50 ಜಾತಿಗಳು)

ಹಲವಾರು ಪ್ರವರ್ಗಗಳ 206 ಜಾತಿಗಳಿಗೆ ಮೀಸಲಾತಿ ಸಿಗುತ್ತಿದೆ. ಅವರು ಮುಖ್ಯವಾಗಿ ಸಾಮಾಜಿಕವಾಗಿ ಮುಂದುವರೆದು, ತಲತಲಾಂತರದಿಂದ ಹಲವಾರು ಎಕರೆ ಭೂಮಿಯನ್ನು ಹೊಂದಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಮುಂದುವರೆದಿದ್ದಾರೆ. ಆದರೂ ಮೀಸಲಾತಿ ಬೇಕಿದ್ದು ಅವರಿಗೆ 32% ಸಿಗುತ್ತಿದೆ.

ಆದರೆ ಪ.ಜಾತಿ ಮತ್ತು ಪ.ಪಂಗಡದ 151 ಜಾತಿಗಳಿಗಿರುವ 18% ಮೀಸಲಾತಿ ಅವರಿಗಿಂತ ಹೇಗೆ ಹೆಚ್ಚು?

ಇವರು ಸಾಮಾಜಿಕವಾಗಿ ಹಿಂದುಳಿದು, ಉಳುಮೆಗೆ ಭೂಮಿ ಇಲ್ಲದೆ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದವರು, ಇದರಲ್ಲಿನ ಹಲವಾರು ಸಮುದಾಯಗಳು ಅಸ್ಪೃಶ್ಯತೆ ಅನುಭವಿಸಿರುವವರು.

ಇವತ್ತು ಪರಿಶಿಷ್ಟ ಜಾತಿಯ ಕೆಲವೇ ಕೆಲವು ಸಮುದಾಯದವರು ಮಾತ್ರ ಮೀಸಲಾತಿಯ ಸಹಾಯದಿಂದ  ಆರ್ಥಿಕವಾಗಿ, ಶೈಕ್ಷಣಿಕವಾಗಿ ಮುಂದುವರೆಯುತ್ತಲಿದ್ದರೂ, ತಳ ಸಮುದಾಯದವರನ್ನು ಸಾಮಾಜಿಕವಾಗಿ ಮುಂದುವರೆಯಲು ಬಿಡುತ್ತಿಲ್ಲ.

ಭಾರತದ ಯಾವುದೇ ಒಂದು ಸಮುದಾಯ ಮೀಸಲಾತಿಯಿಂದ ಹೊರ ಉಳಿದಿಲ್ಲ. ಯಾವುದಾದರೂ ಒಂದು ರೀತಿಯಲ್ಲಿ ಮೀಸಲಾತಿ ಪಡೆದೆ ಪಡೆದಿರುತ್ತದೆ. ಉದಾ: ಪ್ರಾದೇಶಿಕ ಮೀಸಲಾತಿ (ಹೈದರಾಬಾದ್ ಕರ್ನಾಟಕ)

ನರಸಿಂಹ್ ರಾವ್ ಸರ್ಕಾರ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಳಿದವರಿಗೆ ನೀಡುವ ಮೀಸಲಾತಿಯ ಜೊತೆಗೆ ”ಆರ್ಥಿಕವಾಗಿ ಹಿಂದುಳಿದವರನ್ನೂ ಸೇರಿಸಿ ಮೀಸಲು ನೀಡುವ ನಿಯಮವನ್ನು ಸೇರಿಸಿ ಆದೇಶ ಹೊರಡಿಸಿತು.

ಮೇಲ್ವರ್ಗದವರಿಗೆ ಮೀಸಲಾತಿ :

ರಾಜ್ಯದಲ್ಲಿ 95% ಶೇಕಡ ಜನರಿಗೆ ಈ ಹಿಂದೆ ವಿವಿಧ ರೀತಿಯ ಮೀಸಲಾತಿ ಇದ್ದವು. ರಾಜ್ಯದಲ್ಲಿ ಹಿಂದೆ ಬ್ರಾಹ್ಮಣ, ಆರ್ಯ, ವೈಷ್ಣವ, ಮೊದಲಿಯಾರ್, ಮತ್ತು ನಾಗರಥಾ ಮೊದಲಾದ ಜಾತಿಯವರು ಮಾತ್ರ ಮೀಸಲಾತಿಯಿಂದ ವಂಚಿಸಲ್ಪಟ್ಟಿದ್ದರು. ರಾಜ್ಯದಲ್ಲಿ ಈ ಸಮುದಾಯಗಳ ಜನ ಸಂಖ್ಯೆ ಕೇವಲ 5 ರಿಂದ 6 ಶೇಕಡ. ರಾಷ್ಟ್ರಮಟ್ಟದಲ್ಲಿ ಕೇವಲ 17 ಶೇಕಡ ವಿರುವ ಬಲಿಷ್ಟ ವರ್ಗದವರಿಗೆ ಮಾತ್ರ ಮೀಸಲಾತಿ ಸಿಗುತ್ತಿರಲಿಲ್ಲ.

2019ರಲ್ಲಿ ಮೋದಿ ಸರಕಾರ ಈ ಮೇಲ್ವರ್ಗದವರಿಗೆ 10% ಮೀಸಲಾತಿ ನೀಡುವ ಕಾನೂನು ಜಾರಿಗೆ ತಂದರು. ಇದರಿಂದ 5 ರಿಂದ 6 ಶೇಕಡ ವಿರುವ ಈ ಬಲಿಷ್ಟ ವರ್ಗದವರಿಗೆ 10 ಶೇಕಡ ಮೀಸಲಾತಿ ಸಿಗುತ್ತದೆ. ಆದರೆ ರಾಜ್ಯದಲ್ಲಿ 16 ಶೇಕಡ ವಿರುವ ಮುಸ್ಲಿಮರಿಗೆ ಕೇವಲ 4 ಶೇಕಡ ಮೀಸಲಾತಿ ಲಭ್ಯವಿದೆ. ವಿ.ಪಿ.ಸಿಂಗ್ ರವರು ಪ್ರಧಾನ ಮಂತ್ರಿಯಾಗಿದ್ದಾಗ 27 ಶೇಕಡ ಮೀಸಲಾತಿ ನೀಡುವ ಕಾನೂನು ತಂದರು. ಇದರಲ್ಲಿ ಮುಸ್ಲಿಂ ಸಮುದಯದ ಕಚ್ಚಿ ಮೇಮನ್, ನವಾಯತ್, ಬೊಹ್ರಾ, ಸೈಯದ್, ಶೇಕ್, ಪಠಾನ್, ಮುಗಲ್, ಮೆಹ್ದವಿ, ಜಮಾಯತಿ-ಕೊಂಕಣಿ ಮುಸ್ಲಿಂಮರನ್ನು ಹೊರತು ಪಡಿಸಿ ಎಲ್ಲಾ ಮುಸ್ಲಿಮರಿಗೆ ಈ ಮೀಸಲಾತಿ ಲಭ್ಯವಿದೆ. ಅಲ್ಲದೆ ಇತರ ಹಿಂದುಳಿದ ವರ್ಗಗಳ 199 ಜಾತಿಗಳು ಮತ್ತು ಇತರ ನೊರಾರು ಉಪ ಜಾತಿಗಳಿಗೆ ಈ 27%ದಲ್ಲಿ ಪಾಲಿದೆ.

ಜಾತಿವಾರು ರಾಜಕೀಯ ಅಧಿಕಾರ :

ರಾಜ್ಯದಲ್ಲಿ ರಾಜಕೀಯ ಅಧಿಕಾರದಲ್ಲಿ ಹೆಚ್ಚು ಅವಕಾಶ ಪಡೆದಿರುವುದು ಒಕ್ಕಲಿಗ, ಅಂಗಾಯಿತ ಮತ್ತು ಬ್ರಾಹ್ಮಣ ಸಮುದಾಯಗಳಾಗಿವೆ. ಮುಖ್ಯಮಂತ್ರಿ, ಶಾಸಕರು, ಸಂಸದರು ಹೆಚ್ಚಾಗಿ ಈ ಮೂರು ಸಮುದಾಯಗಳಿಂದ ತಮ್ಮ ಜನ ಸಂಖ್ಯೆಯ ಅನುಪಾತಕಿಂತ ಹೆಚ್ಚು ಇದ್ದಾರೆ. ರಾಜಕೀಯ ಮೀಸಲಾತಿಯಿಂದಾಗಿ ದಲಿತರು ಸಂಸದ, ಶಾಸಕರಾಗಿರಬಹುದು ಆದರೆ ಮುಖ್ಯಮಂತ್ರಿ ಮತ್ತು ಮಂತ್ರಿಮಂಡಲದಲ್ಲೂ ಜನಸಂಖ್ಯೆಗೆ ಅನುಗುಣವಾಗಿ ಪಾಲು ಪಡೆದಿಲ್ಲ.

ಮುಸ್ಲಿಂ ಸಮುದಾಯ ರಾಜ್ಯದಲ್ಲಿ ಎರಡನೇ ದೊಡ್ಡ ಸಮುದಾಯವಾಗಿದ್ದರು ರಾಜಕೀಯ ಪ್ರಾತಿನಿಧಿ ತೀರಾ ಕಡಿಮೆಯಿದೆ. ಇದುವರೆಗೂ ಮುಖ್ಯಮಂತ್ರಿ ಪದವಿ ಸಿಕ್ಕೇ ಇಲ್ಲ. ರಾಜ್ಯದಲ್ಲಿ ಕಳೆದ 15 ವರ್ಷಗಳಿಂದ ಒಬ್ಬನೇ ಒಬ್ಬ ಮುಸ್ಲಿಂ ಸಂಸತ್ ಸದಸ್ಯ ಚುನಾಯಿತನಾಗಿಲ್ಲ. ಶಾಸಕರು, ಸಂಸದರು, ಮಂತ್ರಿಗಳು ಮತ್ತು ರಾಜ್ಯಸಭೆ ಸ್ಥಾನಗಳಲ್ಲಿ ಜನ ಸಂಖ್ಯೆಯ ಅನುಪಾತಕಿಂತ ತೀರಾ ಕಡಿಮೆ ಮುಸ್ಲಿಂ ಸಮುದಾಯಕ್ಕಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಮೀಸಲಾತಿ ಲಭ್ಯವಾಗಿದ್ದರೂ ಸಹ ಇತರ ಹಿಂದುಳಿದ ವರ್ಗಗಳು ಆ ಮೀಸಲು ಪಟ್ಟಿಯಲ್ಲಿ ಸೇರಿರುವುದರಿಂದ ಅಲ್ಲಿಯೂ ಸೂಕ್ತ ಪ್ರಾತಿನಿಧ್ಯ ಸಿಕ್ಕಿಲ್ಲ. ಕನಿಷ್ಟ ಸ್ಥಳೀಯ ಸಂಸ್ಥೆಗಳಲ್ಲಾದರೂ ಮುಸ್ಲಿಮರಿಗೆ ಪ್ರತೇಕ ಮೀಸಲಾತಿ ನಿಗದಿಪಡಿಸಿದರೆ, ತಕ್ಕಮಟ್ಟಿಗೆ ಸ್ಥಳೀಯ ರಾಜಕೀಯ ಅಧಿಕಾರದಲ್ಲಿ ಸ್ವಲ್ಪ ಪಾಲು ಸಿಗಬಹುದು.

ಮುಖ್ಯಮಂತ್ರಿ ಸ್ಥಾನ ವಂಚಿತರು :

ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ಜಾತಿವಾರು ಜನಗಣತಿ ನಡೆಸಿದ್ದರು. ಹಿಂದುಳಿದ ವರ್ಗಗಳ ಆಯೋಗ ಈ ಜನಗಣತಿ ಕಾರ್ಯ ನಡೆಸಿ ದೇಶದಲ್ಲೆ ಮೊದಲ ಬಾರಿಗೆ ಯಶಸ್ವಿಯಾಗಿ ನಡೆಸಿತು. ಇದರ ಅಂಕಿ-ಅಂಶಗಳು ಸೋರಿಕೆಯಾಗಿ ಕೆಲವು ಪ್ರಮುಖ ಮಾಧ್ಯಮಗಳಲ್ಲಿ ಪ್ರಕಟಗೊಂಡಿತ್ತು. ಆ ಪ್ರಕಾರ ರಾಜ್ಯದಲ್ಲಿ ಅತ್ಯಂತ ದೊಡ್ಡ ಜನ ಸಮುದಾಯವಾಗಿ ದಲಿತರಿದ್ದು, ಎರಡನೇ ದೊಡ್ಡ ಸಮುದಾಯ ಮುಸ್ಲಿಮರು, ಮೂರನೇ ಸ್ಥಾನ ಲಿಂಗಾಯಿತರು ಮತ್ತು ನಾಲ್ಕನೇ ಸ್ಥಾನದಲ್ಲಿ ಒಕ್ಕಲಿಗರು ಇದ್ದಾರೆ ಎಂದು ಗುರುತಿಸಲಾಯಿತು.

ಆದರೆ ರಾಜ್ಯದ ಅತಿದೊಡ್ಡ ಸಮುದಾಯವಾದ ದಲಿತರು ಮತ್ತು ಎರಡನೇ ದೊಡ್ಡ ಜನ ಸಮುದಾಯವಾದ ಮುಸ್ಲಿಮರಿಗೆ ರಾಜಕೀಯ ಅಧಿಕಾರ ಮತ್ತು ಸರಕಾರದ ನೀತಿ ನಿರೂಪಣೆಯಲ್ಲಿ ತೀರಾ ಕಡಿಮೆ ಪ್ರಾತಿನಿಧ್ಯ ಸಿಕ್ಕಿದೆ. ಮುಖ್ಯಮಂತ್ರಿ, ಪ್ರಧಾನ ಮಂತ್ರಿ ಸ್ಥಾನಗಳಿಂದ 73 ವರ್ಷಗಳಿಂದ ದಲಿತರು ಮತ್ತು ಕ್ರೈಸ್ತರನ್ನು ದೂರ ಇಡಲಾಗಿತ್ತು. 25 ಅಕ್ಟೋಬರ್ 1947 ರಿಂದ 26 ಜುಲೈ 2019 ರವರೆ ರಾಜ್ಯದಲ್ಲಿ ಒಟ್ಟು 38 ಮುಖ್ಯಮಂತ್ರಿಗಳು ಬಂದು ಹೋಗಿದ್ದರೂ ಒಬ್ಬನೇ ಒಬ್ಬ ದಲಿತ ಅಥವಾ ಮುಸ್ಲಿಮ್‌ ವ್ಯಕ್ತಿ ಇಲ್ಲ ಎಂಬುದನ್ನು ಗಮನಿಸಬೇಕು.

ಕಾಂಗ್ರೆಸ್ ಪಕ್ಷದಿಂದ ಒಕ್ಕಲಿಗ ಸಮುದಾಯದಿಂದ ಕೆ.ಸಿ ರೆಡ್ಡಿ, ಕೆಂಗಲ್‌ ಹನುಮಂತಯ್ಯ, ಕೆ.ಮಂಜಪ್ಪ, ಎಸ್.ಎಂ.ಕೃಷ್ಣ ಅಧಿಕಾರ ಚಲಾಯಿಸಿದರು. ಬಿಜೆಪಿಯಿಂದ ಒಕ್ಕಲಿಗ ಸಮುದಾಯದ ಸದಾನಂದ ಗೌಡ, ಮತ್ತು ಜನತಾ ಪರಿವಾರದಿಂದ ದೇವೇಗೌಡ ಮತ್ತು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ಒಟ್ಟು 7 ಜನ ಒಟ್ಟು 9 ಬಾರಿ ಒಕ್ಕಲಿಗ ಮುಖ್ಯಮಂತ್ರಿಗಳಿದ್ದಾರೆ.

ಲಿಂಗಾಯಿತ ಸಮುದಾಯದಿಂದ ಕಾಂಗ್ರೆಸ್ ಪಕ್ಷದಲ್ಲಿ ನಿಜಲಿಂಗಪ್ಪ, ಬಿ.ಡಿ.ಜತ್ತಿ, ಎಸ್.ಆರ್.ಕಂಠಿ, ಮತ್ತು ವೀರೇಂದ್ರ ಪಾಟಿಲ್ ಸೇರಿ ನಾಲ್ಕು ಮುಖ್ಯಮಂತ್ರಿಗಳು 6 ಬಾರಿ ಅಧಿಕಾರ ಚಲಾಯಿಸಿದರು. ಬಿಜೆಪಿಯಿಂದ ಯಾಡಿಯೂರಪ್ಪ ಮತ್ತು ಜಗದೀಶ್ ಶೆಟ್ಟರ್‌ ಸೇರಿ ಇಬ್ಬರು 5 ಬಾರಿ ಮುಖ್ಯಮಂತ್ರಿದಾದರು. ಜನತಾ ಪರಿವಾರದಿಂದ ಎಸ್‌.ಆರ್.ಬೊಮ್ಮಾಯಿ, ಜೆ.ಹೆಚ್.ಪಟೇಲ್ ಮುಖ್ಯಮಂತ್ರಿಗಳಾಗಿದ್ದರು.

ಹಿಂದುಳಿದ ವರ್ಗದಿಂದ ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಮುಖ್ಯಮಂತ್ರಿಗಳಾಗಿದ್ದಾರೆ. ದೇವರಾಜ್ ಅರಸು (ಅರಸು), ಧರ್ಮ‌ಸಿಂಗ್‌ (ರಜಪೂತ), ವೀರಪ್ಪ ಮೋಯ್ಲಿ(ದೇವಾಡಿಗ), ಬಂಗಾರಪ್ಪ (ಈಡಿಗ), ಮತ್ತು ಸಿದ್ದರಾಮಯ್ಯ (ಕುರುಬ). ಹೀಗೆ 5 ಜನ 6 ಬಾರಿ ಆಯ್ಕೆಯಾಗಿದ್ದಾರೆ.

ಬ್ರಾಹ್ಮಣ ಸಮುದಾಯದಿಂದ ಕಾಂಗ್ರೆಸ್ ಪಕ್ಷದಲ್ಲಿ ಗುಂಡೂರಾವ್ ಒಮ್ಮೆ ಮತ್ತು ಜನತಾ ಪರಿವಾರದಲ್ಲಿ ರಾಮಕೃಷ್ಣ ಹೆಗ್ಡೆ ಎರಡು ಬಾರಿ ಆಯ್ಕೆಯಾಗಿದ್ದಾರೆ. ರಾಜ್ಯದಲ್ಲಿ ಬ್ರಾಹ್ಮಣ ಸಮುದಾಯ ಕೇವಲ 3% ಮಾತ್ರವಿದ್ದರು ಸಹ ಈ ಇಬ್ಬರು 3 ಬಾರಿ ಮುಖ್ಯಮಂತ್ರಿಯಾಗಿದ್ದಾರೆ.

ಒಕ್ಕಲಿಗ ಸಮುದಾಯದ ಮುಖ್ಯಮಂತ್ರಿಗಳು 19 ವರ್ಷ ರಾಜ್ಯವಾಳಿದ್ದಾರೆ. ಲಿಂಗಾಯಿತ ಮುಖ್ಯಮಂತ್ರಿಗಳು 25 ವರ್ಷ ಅಧಿಕಾರದಲ್ಲಿದ್ದರು. ಹಿಂದುಳಿದ ವರ್ಗಗಳ ಮುಖ್ಯಮಂತ್ರಿಗಳು 18 ವರ್ಷ ರಾಜ್ಯವಾಳಿದ್ದರು. ಬ್ರಾಹ್ಮಣ ಮುಖ್ಯಮಂತ್ರಿಗಳು 8 ವರ್ಷ ಅಧಿಕಾರದಲ್ಲಿದ್ದರು. ಆದುದರಿಂದ ಹಿಂದುಳಿದ ವರ್ಗಗಳಲ್ಲಿ ಕೆಲವು ಜಾತಿ ವರ್ಗದವರು, ದಲಿತರು, ಕ್ರೈಸ್ತರು ಮತ್ತು ಮುಸ್ಲಿಮ್ ಸಮುದಾಯಗಳಿಂದ ಮುಖ್ಯಮಂತ್ರಿ ಸ್ಥಾನಕ್ಕೆ ಅವಕಾಶ ನೀಡುವ ಬಗ್ಗೆ ಎಲ್ಲಾ ಪಕ್ಷಗಳು ಚಿಂತಿಸಿ ಸರ್ವರಿಗೂ ಸಮಪಾಲು ಸಿದ್ದಾಂತ ಅನುಕರಿಸಬೇಕಾಗಿದೆ. ಅಲ್ಲದೇ ಮಹಿಳೆಯರಿಗೂ ಕೂಡ ರಾಜಕೀಯ ಅಧಿಕಾರ ಮತ್ತು ಮುಖ್ಯಮಂತ್ರಿ ಸ್ಥಾನ ನೀಡುವ ಬಗ್ಗೆ ಗಮನ ವಹಿಸಬೇಕಾಗಿದೆ.

(ಲೇಖಕರು SDPI ಪಕ್ಷ ರಾಜ್ಯ ಕಾರ್ಯದರ್ಶಿಗಳು. ಅಭಿಪ್ರಾಯಗಳು ಅವರ ವೈಯಕ್ತಿಕವಾದವುಗಳು)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚಿತ್ರದುರ್ಗ: ಪ್ರೌಢಶಾಲಾ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿ ಗರ್ಭಪಾತ ಮಾಡಿಸಿದ ಶಿಕ್ಷಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲು

ನಾಯಕನಹಟ್ಟಿ (ಚಿತ್ರದುರ್ಗ ಜಿಲ್ಲೆ): ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಮತ್ತು ಆಕೆಯ ಗರ್ಭಪಾತ ಮಾಡಿದ ಆರೋಪದ ಮೇಲೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನೀಡಿದ ದೂರು ಆಧರಿಸಿ...

ಎಸ್‌ಐಆರ್‌ನಲ್ಲಿ ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ : ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕೋರಿದ್ದ ಮಹಿಳೆಯ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವೇಳೆ ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕಿರುವ ಮಹಿಳೆಯೊಬ್ಬರು ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡುವಂತೆ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ (ಏ.10) ತಿರಸ್ಕರಿಸಿದೆ ಎಂದು ಕಾನೂನು...

ಇಸ್ಲಾಮಾಬಾದ್‌ನಲ್ಲಿ ಅಮೆರಿಕ–ಇರಾನ್ ಶಾಂತಿ ಮಾತುಕತೆ; ಪಾಕಿಸ್ತಾನ ಮಧ್ಯಸ್ಥಿಕೆ

ಹಲವು ರೀತಿಯ ಪ್ರತಿಷ್ಠೆ ಪ್ರದರ್ಶನ, ಭಿನ್ನಾಭಿಪ್ರಾಯಗಳ ನಡುವೆ ಅಮೆರಿಕ-ಇರಾನ್ ಶಾಂತಿ ಮಾತುಕತೆ ಶನಿವಾರ (ಏ.11) ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಪ್ರಾರಂಭಗೊಳ್ಳಲಿದೆ. ಪಾಕಿಸ್ತಾನದ ಪಾಲಿಗೆ ಇದು ಅತ್ಯಂತ ಪ್ರತಿಷ್ಠೆಯ ವಿಷಯವಾಗಿ ಮಾರ್ಪಟ್ಟಿದೆ. ಅಮೆರಿಕದ ಪರವಾಗಿ ಉಪಾಧ್ಯಕ್ಷ ಜೆ.ಡಿ....

ಕಾಂಗ್ರೆಸ್ ನಿಂದ ಏಪ್ರಿಲ್ 12ರಂದು ‘ರನ್ ಫಾರ್ ಅಂಬೇಡ್ಕರ್, ರನ್ ಫಾರ್ ಕಾನ್ಸ್ಟಿಟ್ಯೂಷನ್’ ಮ್ಯಾರಥಾನ್ ಆಯೋಜನೆ

ನವದೆಹಲಿ: ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯ ಅಂಗವಾಗಿ ಕಾಂಗ್ರೆಸ್ ಭಾನುವಾರ 'ಅಂಬೇಡ್ಕರ್‌ಗಾಗಿ ಓಟ, ಸಂವಿಧಾನಕ್ಕಾಗಿ ಓಟ' ಮ್ಯಾರಥಾನ್ ಆಯೋಜಿಸಿದೆ. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಇಲ್ಲಿನ ಮಂಡಿ ಹೌಸ್‌ನಿಂದ ಮ್ಯಾರಥಾನ್‌ಗೆ...

ಮುಖ್ಯವಾಹಿನಿಗೆ ಬಂದ 42 ಕೇಡರ್‌ಗಳು; ರಾಜ್ಯದಲ್ಲಿ’ಮಾವೋವಾದಿ ಕಾರ್ಯಾಚರಣೆ’ ಅಂತ್ಯವಾಗಿದೆ ಎಂದ ತೆಲಂಗಾಣ ಪೊಲೀಸರು

ರಾಜ್ಯದಲ್ಲಿ ಸಿಪಿಐ (ಮಾವೋವಾದಿ) ಸಂಘಟನೆಯ ಕಾರ್ಯಚರಣೆ ಅಂತಿಮವಾಗಿದೆ ಎಂದು ತೆಲಂಗಾಣ ಪೊಲೀಸರು ಘೋಷಣೆ ಮಾಡಿದ್ದಾರೆ. ಬೆಟಾಲಿಯನ್ ಕಮಾಂಡರ್ ಮತ್ತು ಎರಡು ಪ್ರಮುಖ ಗುಂಪುಗಳ ಹಿರಿಯ ನಾಯಕತ್ವ ಸೇರಿದಂತೆ ನಿಷೇಧಿತ ಸಂಘಟನೆಯ 42 ಕೇಡರ್‌ಗಳು...

‘ಹಿಂದಿ ನಿರ್ಮೂಲನೆ ಮಾಡುತ್ತೇವೆ’ ಎಂದು ಸಚಿವರು ಹೇಳಿಲ್ಲ; ಹಿಂದಿ ಪರ ಅರ್ಜಿ ವಜಾ; ₹1 ಲಕ್ಷ ದಂಡ ವಿಧಿಸಿದ ಹೈಕೋರ್ಟ್‌

ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷಾ ವಿಷಯಗಳ ಮೌಲ್ಯಮಾಪನ ಸಂಬಂಧ ರಾಜ್ಯ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ನೀಡಿದ ಹೇಳಿಕೆಯ ವಿರುದ್ಧ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು (ಪಿಐಎಲ್) ಕರ್ನಾಟಕ...

ದೆಹಲಿ| ಮುಸ್ಲಿಮರ ಮೇಲಿನ ದ್ವೇಷಕ್ಕೆ ಜೀವಂತ ಹಂದಿಗಳನ್ನು ಪೂಜಿಸುತ್ತಿರುವ ಹಿಂದೂಗಳು

ಹಳೆಯ ದೆಹಲಿಯ ಹಿಂದೂ-ಮುಸ್ಲಿಂ ಜನರು ವಾಸಿಸುವ ತ್ರನಗರದ ನೆರೆಹೊರೆಯಲ್ಲಿ ಹಿಂದೂ ಕುಟುಂಬಗಳು ಜೀವಂತ ಹಂದಿಗಳನ್ನು ಪೂಜಿಸುತ್ತಿದ್ದಾರೆ. ಮುಸ್ಲಿಮರ ಮೇಲಿನ ದ್ವೇಷಕ್ಕೆ ಮನೆಯ ಮುಂಭಾಗ ಅಲಂಕೃತ ಹಂದಿ (ವರಹಾಸ್ವಾಮಿ) ಚಿತ್ರಗಳನ್ನು ಅಳವಡಿಸಿದ್ದಾರೆ ಎಂದು 'ದಿ...

ಪ. ಬಂಗಾಳ: ಮಹಿಳೆಯರಿಗೆ ₹3,000 ರಿಂದ 6 ತಿಂಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಸೇರಿದಂತೆ ಹಲವು ಭರವಸೆ ನೀಡಿದ ಬಿಜೆಪಿ 

ಕೋಲ್ಕತ್ತಾ : ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಪ್ರಚಾರ ಆರಂಭವಾಗಿದ್ದು, ಮೊದಲ ಹಂತದ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ, ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಪಶ್ಚಿಮ ಬಂಗಾಳದ ಬಿಜೆಪಿ...

ಹಾಸನ| ರೈತ ಮುಖಂಡ ವಾಸುದೇವ ಕಲ್ಕೆರೆ ಮೇಲೆ ಹಲ್ಲೆ; ದುಷ್ಕರ್ಮಿಗಳ ಬಂಧನಕ್ಕೆ ಕೆಪಿಆರ್‌ಎಸ್‌ ಆಗ್ರಹ

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಕರ್ನಾಟಕ ಪ್ರಾಂತ ರೈತ ಸಂಘದ (ಕೆಪಿಆರ್‌ಎಸ್‌) ಕಾರ್ಯದರ್ಶಿ ಹಾಗೂ ಕಲ್ಕೆರೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ, ಡಿವೈಎಫ್‌ಐ ಜಿಲ್ಲಾಧ್ಯಕ್ಷ ವಾಸುದೇವ ಕಲ್ಕೆರೆ ಮೇಲೆ ಹಲ್ಲೆ-ದೌರ್ಜನ್ಯ ನಡೆಸಿರುವ ಗೂಂಡಾಗಳನ್ನು...

ಉತ್ತರ ಪ್ರದೇಶ| ಡಿಜಿಟಲ್ ಬಂಧನದಿಂದ ಪೋಷಕರನ್ನು ರಕ್ಷಿಸಿದ 8ನೇ ತರಗತಿ ವಿದ್ಯಾರ್ಥಿ

ಸುಮಾರು 10 ಗಂಟೆಗಳ ಕಾಲ ವೀಡಿಯೊ ಕರೆ ಮೂಲಕ ಡಿಜಿಟಲ್ ಬಂಧನಕ್ಕೆ ಒಳಗಾಗಿದ್ದ ತನ್ನ ಹೆತ್ತವರು ಹಣ ಕಳೆದುಕೊಳ್ಳದಂತೆ 8ನೇ ತರಗತಿಯ ಬಾಲಕನೊಬ್ಬ ರಕ್ಷಿಸಿರುವ ಘಟನೆ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಬರೇಲಿಯಲ್ಲಿ...