Homeಮುಖಪುಟಧರ್ಮಾಧಾರಿತ ಪೌರತ್ವ: ಇಂದಿನ ಭಾರತದ ಬಗ್ಗೆ 70 ವರ್ಷಗಳ ಹಿಂದೆಯೇ ಚರ್ಚಿಸಿದ್ದ ಸಂವಿಧಾನ ಸಭೆ

ಧರ್ಮಾಧಾರಿತ ಪೌರತ್ವ: ಇಂದಿನ ಭಾರತದ ಬಗ್ಗೆ 70 ವರ್ಷಗಳ ಹಿಂದೆಯೇ ಚರ್ಚಿಸಿದ್ದ ಸಂವಿಧಾನ ಸಭೆ

ಭಾರತೀಯ ಮುಸ್ಲಿಮರು ಮತ್ತು ಅಲ್ಪಸಂಖ್ಯಾತರ ಹಕ್ಕುಗಳ ಕುರಿತು ಇಂದು ವ್ಯಕ್ತಪಡಿಸಲಾಗುತ್ತಿರುವ ಅಭಿಪ್ರಾಯಗಳನ್ನು ಸಂವಿಧಾನ ಸಭೆಯು 70 ವರ್ಷಗಳ ಹಿಂದೆಯೇ ಚರ್ಚಿಸಿತ್ತು.

- Advertisement -
- Advertisement -

ಸಂಗ್ರಹಾನುವಾದ: ನಿಖಿಲ್ ಕೋಲ್ಪೆ

ನವಂಬರ್ 1948ರಲ್ಲಿ ಸದಸ್ಯ ಝಡ್.ಎಚ್. ಲಾರಿ ಅವರು ಅಲ್ಪಸಂಖ್ಯಾತರ ಹಕ್ಕುಗಳ ಪರವಾಗಿ ಸಂವಿಧಾನ ಸಭೆಯಲ್ಲಿ ತನ್ನ ವಾದವನ್ನು ಮಂಡಿಸುತ್ತಿದ್ದಾಗ ಅವರನ್ನು ಮತ್ತೆಮತ್ತೆ ಅಣಕಿಸಲಾಗಿತ್ತು. ಯುನೈಟೆಡ್ ಪ್ರಾವಿನ್ಸಸ್ (ಬಹುತೇಕ ಈಗಿನ ಉತ್ತರ ಪ್ರದೇಶ)ನ ಈ ಮುಸ್ಲಿಮ್ ನಾಯಕನಲ್ಲಿ ಕೆಲವು ಸದಸ್ಯರು, ಪಾಕಿಸ್ತಾನದಲ್ಲಿ “ನಿಮ್ಮ ನಾಯಕರು” ಅಲ್ಲಿನ ಅಲ್ಪಸಂಖ್ಯಾತರ ರಕ್ಷಣೆಗೆ ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸುವ ಮೂಲಕ ಅವರ ಭಾರತೀಯ ಪೌರತ್ವವನ್ನೇ ಪ್ರಶ್ನೆ ಮಾಡಿದ್ದರು.

“ನಾನು ನನ್ನ ಹಕ್ಕುಗಳನ್ನು ಪಾಕಿಸ್ತಾನಕ್ಕೆ ಅಡವು ಇಟ್ಟಿಲ್ಲ. ಪಾಕಿಸ್ತಾನ ಏನು ಮಾಡುತ್ತದೆ, ಏನು ಮಾಡುವುದಿಲ್ಲ ಎಂಬುದು ನನಗೆ ಸಂಬಂಧಿಸಿದ ವಿಷಯವಲ್ಲ” ಎಂದು ಅವರು ಅಂತವರಿಗೆ ಸರಿಯಾದ ಉತ್ತರವನ್ನೇ ನೀಡಿದ್ದರು. “ಭಾರತೀಯ ಮುಸ್ಲಿಮರು ಈ ಮಣ್ಣಿನ ಮಕ್ಕಳು. ಆದುದರಿಂದ ನಾವು ಭಾರತೀಯ ಪೌರರ ಹಕ್ಕುಗಳನ್ನು ಕೇಳುತ್ತಿದ್ದೇವೆ” ಎಂದು ವಕೀಲರಾದ ಅವರು ಹೇಳಿದ್ದರು.

ಇದೀಗ ಏಳು ದಶಕಗಳ ನಂತರ ಮುಸ್ಲಿಂ ಸಮುದಾಯವನ್ನು ಅದೇ ರೀತಿಯ, ಅಥವಾ ಅದಕ್ಕಿಂತ ಹೆಚ್ಚಿನ ಸಾರ್ವಜನಿಕ ಅಣಕಕ್ಕೆ ಗುರಿಪಡಿಸಲಾಗುತ್ತಿದೆ. ದೇಶದ ಪೌರತ್ವ ಕಾಯಿದೆಗೆ ಧಾರ್ಮಿಕ ಮಾನದಂಡ ನೀಡುವ ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ), ಎನ್‌ಪಿಎ ಮತ್ತು ಎನ್‌ಆರ್‌ಸಿ ವಿರುದ್ಧ ಲಕ್ಷಾಂತರ ಭಾರತೀಯರು ಬೀದಿಗಿಳಿದಿರುವ ಹೊತ್ತಿನಲ್ಲಿ ಅಂದು ಸಂವಿಧಾನ ಸಭೆಯಲ್ಲಿ ಎತ್ತಲಾಗಿದ್ದ ಕೆಲವು ಪ್ರಶ್ನೆಗಳನ್ನೇ ಈಗ ಎತ್ತಲಾಗುತ್ತಿದೆ.

ಸಂವಿಧಾನದ ಕುರಿತು ಹಲವಾರು ಭಯಗಳು, ಅಸಮ್ಮತಿಗಳು ಮತ್ತು ಟೀಕೆಗಳು ಇದ್ದ ಹೊರತಾಗಿಯೂ, ಭಾರತದ ಭವಿಷ್ಯ ಏನಾಗಿರಬೇಕು ಎಂಬದಕ್ಕಿಂತ ಹೆಚ್ಚಾಗಿ, ಏನಾಗಿರಬಾರದು ಎಂಬ ವಿವೇಕ ಅಂದು ಜಯಿಸಿತ್ತು. ಆಗಲೂ ಭಾರತವನ್ನು ಬಹುಸಂಖ್ಯಾತರ ದೇಶವನ್ನಾಗಿ ಮಾಡುವುದರ ಪರವಾಗಿ ಬೊಬ್ಬೆಗಳು ಇದ್ದರೂ, ಅದನ್ನು ಜಾತ್ಯಾತೀತ ಪ್ರಜಾಪ್ರಭುತ್ವವನ್ನಾಗಿ ಮಾಡಬೇಕು ಎಂದು ಅಂಬೇಡ್ಕರ್ ಮತ್ತು ನೆಹರೂ ನೇತೃತ್ವದಲ್ಲಿ ಸಂವಿಧಾನ ಸಭೆಯ ಸದಸ್ಯರು ನಿರ್ಣಾಯಕವಾಗಿ ನಿರ್ಧರಿಸಿದ್ದರು. ಆಗ ನಡೆದ ಚರ್ಚೆಗಳು ಇಂದಿನ ಸಂದರ್ಭವನ್ನು ಅರ್ಥ ಮಾಡಿಕೊಳ್ಳಲು ನೆರವಾಗಬಹುದು.

ರಕ್ತವೇ? ಹುಟ್ಟೇ?

ಸಂವಿಧಾನ ಸಭೆಯಲ್ಲಿ ನಡೆದ ಅತ್ಯಂತ ಕಠಿಣವಾದ ಕದನವು, ಭಾರತದ ಪೌರತ್ವವನ್ನು ಯಾವ ಆಧಾರದಲ್ಲಿ ನಿರ್ಣಯಿಸಬೇಕು ಎಂಬುದಾಗಿತ್ತು. ಇದು ಲೆಕ್ಸ್ ಸೋಲಿ (lex soli) ಅಂದರೆ, ಜನ್ಮಸ್ಥಾನದ ಕಾನೂನು ಮತ್ತು ಲೆಕ್ಸ್ ಸಾಂಗ್ವಿನಿಸ್ (lex sanguinis) ಅಂದರೆ, ರಕ್ತ ಸಂಬಂಧದ ಕಾನೂನುಗಳೆರಡರ ಪ್ರಕಾರವೂ ಪೌರತ್ವವು ನಿರ್ಧಾರವಾಗುತ್ತದೆ ಎಂದು ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯಂಗಾರ್ ವಾದಿಸಿದ್ದರು. ಸಂವಿಧಾನದಲ್ಲಿರುವ “ನಾವು ಜನರು” ಎಂಬ ಉಲ್ಲೇಖದಂತೆ ದೇಶದಲ್ಲಿ ಹುಟ್ಟಿದ ಎಲ್ಲರನ್ನೂ ಯಾವುದೇ ಧರ್ಮದ ಹಂಗಿಲ್ಲದೆ ಭಾರತೀಯ ಪ್ರಜೆಗಳೆಂದು ಪರಿಗಣಿಸಬೇಕು ಎಂದು ಹಲವರು ವಾದಿಸಿದ್ದರು.

ಇದಕ್ಕೆ ವ್ಯತಿರಿಕ್ತವಾಗಿ ಎಲ್ಲಿಯೇ ಹುಟ್ಟಿದ್ದರೂ ರಕ್ತಸಂಬಂಧ, ನಿರ್ದಿಷ್ಟ ಜನಾಂಗಕ್ಕೆ ಸೇರಿದವರಿಗೆ ಪೌರತ್ವ ನೀಡಬೇಕು ಎಂದು ಕೆಲವರು ವಾದಿಸಿದ್ದರು. ಇಂದು ಇದೇ ವಾದ ಸಿಎಎ ಮೂಲಕ ಮತ್ತೆ ತಲೆಯೆತ್ತಿದೆ. ಅದರ ಪ್ರಕಾರ ನಿರ್ದಿಷ್ಟ ಜನಾಂಗಕ್ಕೆ, ಅಥವಾ ಧರ್ಮಕ್ಕೆ ಸೇರದ ಜನರು (ಮುಖ್ಯವಾಗಿ ಮುಸ್ಲಿಮರು) ಸಮಾನ ಹಕ್ಕುಗಳನ್ನು ಹೊಂದಿಲ್ಲ ಮತ್ತು ಅವರನ್ನು ನೈಸರ್ಗಿಕ ಪೌರರು ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂಬುದು ಸಿಎಎ ಬೆಂಬಲಿಗರ ವಾದವಾಗಿದೆ.

ಜಾತ್ಯಾತೀತತೆ ಅಪರಾಧವೇ?

ಧರ್ಮಾಧರಿತ ಪೌರತ್ವವನ್ನು ಬಿ.ಆರ್. ಅಂಬೇಡ್ಕರ್, ಜವಾಹರಲಾಲ್ ನೆಹರೂ ಮತ್ತು ಹಲವಾರು ಇತರರು ವಿರೋಧಿಸಿದ್ದರು. ಆದರೆ ಕೆಲವರು- ನಾಝಿ ಜರ್ಮನಿಯ ತತ್ವಗಳು ಮತ್ತು ಫ್ಯಾಸಿಸ್ಟ್ ಇಟಲಿಯ ತತ್ವಗಳಿಂದ ಪ್ರಭಾವಿತರಾಗಿ ಅವುಗಳನ್ನು ಮೆಚ್ಚಿ ಅನುಸರಿಸುತ್ತಿದ್ದ ಕೆಲವು ಸಂಘಟನೆಗಳಿಗೆ ಸೇರಿದವರೇ ಧರ್ಮ ಮತ್ತು ಪೌರತ್ವಗಳ ನಡುವೆ ಸಂಬಂಧ ಕಲ್ಪಿಸಲು ಪಟ್ಟುಹಿಡಿದಿದ್ದರು. (ಅವರೇ ಇಂದಿಲ್ಲಿ ಅಧಿಕಾರ ಹಿಡಿದಿದ್ದಾರೆ.)  ಇವರಲ್ಲಿ ಪ್ರಮುಖರೆಂದರೆ ಪಿ. ಎಸ್. ದೇಶ್‌ಮುಖ್. ಅವರು ಆಗಸ್ಟ್ 11, 1949ರಂದು ಮಾಡಿದ ಭಾಷಣದ ಸಾರಾಂಶ ಕೆಳಗಿದೆ:

ಡಾ. ಬಿ.ಆರ್.  ಅಂಬೇಡ್ಕರ್ ಅವರ ಪೌರತ್ವ ಕುರಿತ ವ್ಯಾಖ್ಯಾನವು  ಭಾರತೀಯ ಪೌರತ್ವವನ್ನು “ವಿಶ್ವದಲ್ಲಿಯೇ ಅತ್ಯಂತ ಅಗ್ಗದ ಪೌರತ್ವ”ವನ್ನಾಗಿ ಮಾಡುವುದೆಂದು ದೇಶ್‌ಮುಖ್ ಅವರು ಭಾವಿಸಿದ್ದರು. ಹುಟ್ಟಿನಿಂದ ಪೌರತ್ವ ನೀಡುವ ಕುರಿತು ಅವರಿಗೆ ಅಸಮಾಧಾನವಿತ್ತು. ಕರಡು ವಿಧಿಯನ್ನು ಸ್ವೀಕರಿಸಿದರೆ ಮುಂಬಯಿ ಬಂದರಿನ ಮೂಲಕ ಪ್ರಯಾಣಿಸುವ ಮಹಿಳೆಯೊಬ್ಬಳು ಹೆತ್ತ ಮಗುವಿಗೂ ಪೌರತ್ವ ನೀಡಬೇಕಾಗುತ್ತದೆ ಎಂದು ಅವರು ವಾದಿಸಿದ್ದರು ದೇಶ್‌ಮುಖ್ ಅವರು ಕನಿಷ್ಟ ಎರಡು ತಿದ್ದುಪಡಿಗಳಿಗೆ ಬೇಡಿಕೆ ಇಟ್ಟಿದ್ದರು.

ಮೊದಲನೆಯದು ಕೇವಲ ಭಾರತದಲ್ಲಿ ಹುಟ್ಟುವುದು ಸಾಕಾಗದು; ಮಗು ಭಾರತೀಯ ಹೆತ್ತವರಿಗೆ ಹುಟ್ಟಿರಬೇಕು ಎಂಬುದು. ಎರಡನೆಯದೆಂದರೆ, ಹಿಂದೂಗಳು ಮತ್ತು ಸಿಕ್ಖರು ಪ್ರಪಂಚದ ಯಾವುದೇ ಕಡೆಯಲ್ಲಿ ವಾಸಿಸುತ್ತಿದ್ದರೂ ಭಾರತೀಯ ಪೌರತ್ವಕ್ಕೆ ಅರ್ಹರಾಗಿರಬೇಕು ಎಂಬುದು.

ಇದೇ ಅಭಿಪ್ರಾಯಗಳು ನರೇಂದ್ರ ಮೋದಿ ಚುನಾವಣಾ ಗೆಲುವಿನ ನಂತರ ಮೇ 2019ರಂದು ಮಾಡಿದ ಭಾಷಣದಲ್ಲಿ ಪ್ರತಿಫಲಿಸಿದೆ. ಅದರಲ್ಲಿ ಅವರು ಜಾತ್ಯತೀತ ಪರಿಕಲ್ಪನೆಯನ್ನು ದೂರಿ, ಯಾವ ರಾಜಕೀಯ ಪಕ್ಷವೂ ಜಾತ್ಯತೀತತೆಯ ಮುಖವಾಡದ ಹಿಂದೆ ಅಡಗುವ ಧೈರ್ಯ ತೋರಿಲ್ಲ ಎಂದು ಹೇಳಿದ್ದರು. ಅದರ ಬೆನ್ನಲ್ಲೇ ಪೌರತ್ವದ ಪ್ರಶ್ನೆ ಎದ್ದಿದೆ. ದೇಶವನ್ನು ತಳಮಳಕ್ಕೆ ದೂಡಿದೆ. ಇದು 1948ರ ನಾಝಿ, ಫ್ಯಾಸಿಸ್ಟ್ ಬೆಂಬಲಿಗರ ಪ್ರಯತ್ನವನ್ನು ಮುಂದುವರಿಸುವ ಯತ್ನ.

(ಜಾತ್ಯತೀತತೆಯ ಪರವಾಗಿ ಸಂವಿಧಾನ ಸಭೆಯಲ್ಲಿ ಅಂದು ನಡೆದ ಚರ್ಚೆಗಳ ಕುರಿತು ಪ್ರತ್ಯೇಕ ಲೇಖನವನ್ನು ನಿರೀಕ್ಷಿಸಿ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...