Homeಮುಖಪುಟಪವನ್‌ ಗುಪ್ತ ಕ್ಯೂರೇಟಿವ್‌ ಅರ್ಜಿ ವಜಾ : ನಿರ್ಭಯಾ ಅಪರಾಧಿಗಳಿಗೆ ನಾಳೆಯೇ ಗಲ್ಲು

ಪವನ್‌ ಗುಪ್ತ ಕ್ಯೂರೇಟಿವ್‌ ಅರ್ಜಿ ವಜಾ : ನಿರ್ಭಯಾ ಅಪರಾಧಿಗಳಿಗೆ ನಾಳೆಯೇ ಗಲ್ಲು

- Advertisement -
- Advertisement -

ಗಲ್ಲು ಶಿಕ್ಷೆಯನ್ನು ತಡೆಯಿಡಿಯುವಂತೆ ಸುಪ್ರೀಂ ಕೋರ್ಟ್‌‌ನಲ್ಲಿ ಪವನ್‌ ಗುಪ್ತ ಸಲ್ಲಿಸಿದ್ದ ಕ್ಯೂರೇಟಿವ್‌ ಅರ್ಜಿಯನ್ನು ಕೋರ್ಟ್‌ ತಿರಸ್ಕರಿಸಿದ್ದು ಇದರಿಂದ ನಾಳೆ ನಿಗಧಿಯಾಗಿದ್ದ ನಿರ್ಭಯಾ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಪಕ್ಕಾ ಆಗಿದೆ.

ಈ ಹಿಂದೆ ದೆಹಲಿ ನಿರ್ಭಯ ಪ್ರಕರಣದ ನಾಲ್ವರು ಅಪರಾಧಿಗಳ ವಿರುದ್ಧ ದೆಹಲಿ ನ್ಯಾಯಾಲಯ ಹೊಸ ಡೆತ್ ವಾರಂಟ್ ಹೊರಡಿಸಿದೆ. ಅವರನ್ನು ಮಾರ್ಚ್ 20 ರಂದು ಬೆಳಿಗ್ಗೆ 5.30 ಕ್ಕೆ ಗಲ್ಲಿಗೇರಿಸಲಾಗುವುದು ಎಂದು  ನ್ಯಾಯಾಲಯ ತಾನು ಹೊರಡಿಸಿದ ನಾಲ್ಕನೇ ಡೆತ್ ವಾರಂಟ್‌ನಲ್ಲಿ ತಿಳಿಸಿತ್ತು.

ಜನವರಿ 22 ಮತ್ತು ಫೆಬ್ರವರಿ 1 ರಂದು ಮರಣದಂಡನೆಯನ್ನು ರದ್ದುಗೊಳಿಸುವಂತೆ ಅಪರಾಧಿಗಳು ಅರ್ಜಿಯನ್ನು ಸಲ್ಲಿಸಿದರು. ಫೆಬ್ರವರಿ 5ರಂದು ದೆಹಲಿ ಹೈಕೋರ್ಟ್ ರಾಷ್ಟ್ರಪತಿಗೆ ಕ್ಷಮಾದಾನದ ಅರ್ಜಿಗಳು ಸೇರಿದಂತೆ ಎಲ್ಲಾ ಕಾನೂನು ಪರಿಹಾರಗಳನ್ನು ಮುಗಿಸಲು ನಾಲ್ವರಿಗೂ ಒಂದು ವಾರವಿದೆ ಎಂದು ಆದೇಶಿಸಿತ್ತು.

ಅತ್ಯಾಚಾರ ಪ್ರಕರಣದ ಅಪರಾಧಿ ಪವನ್ ಮಾರ್ಚ್ 2 ಸೋಮವಾರದಂದು ಮರಣದಂಡನೆಯನ್ನು ತಡೆಯಲು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿತ್ತು. ನಂತರ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಗೆ ಕ್ಷಮಾದಾನ ನೀಡುವಂತೆ ಅರ್ಜಿ ಹಾಕಲಾಗಿತ್ತು ಅದನ್ನು ರಾಷ್ಟ್ರಪತಿ ಮಾರ್ಚ್‌ 04ರಂದು ತಿರಸ್ಕರಿಸಿದ್ದರು. ಹಾಗಾಗಿ ನಾಳೆ ಬೆಳಿಗ್ಗೆ ಅಪರಾಧಿಗಳು ಗಲ್ಲಿಗೇರುವುದು ಪಕ್ಕಾ ಆಗಿದೆ.

2012ರಲ್ಲಿ ಯುವತಿಯ ಮೇಲೆ ಚಲಿಸುವ ಬಸ್‌ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರದಲ್ಲಿ ಹದಿಹರೆಯದ ಬಾಲಕನನ್ನು ಸೇರಿಸಿ ಆರು ಮಂದಿಯನ್ನು ಬಂಧಿಸಲಾಗಿತ್ತು. ಮುಖ್ಯ ಆರೋಪಿಗಳಲ್ಲಿ ಒಬ್ಬರಾದ ರಾಮ್ ಸಿಂಗ್ ಈ ಹಿಂದೆ ಜೈಲಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಹದಿಹರೆಯದ ಬಾಲಕನನ್ನು ಮೂರು ವರ್ಷಗಳ ನಂತರ ಬಿಡುಗಡೆ ಮಾಡಲಾಗಿತ್ತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read