Homeಮುಖಪುಟಮಧ್ಯಪ್ರದೇಶ ಬಿಕ್ಕಟ್ಟು : ಬಹುಮತ ಸಾಬೀತಿಗೆ ಎರಡು ವಾರ ಸಮಯ ಕೇಳಿದ ಕಾಂಗ್ರೆಸ್‌-ಕಷ್ಟ ಎಂದ ಸುಪ್ರೀಂ

ಮಧ್ಯಪ್ರದೇಶ ಬಿಕ್ಕಟ್ಟು : ಬಹುಮತ ಸಾಬೀತಿಗೆ ಎರಡು ವಾರ ಸಮಯ ಕೇಳಿದ ಕಾಂಗ್ರೆಸ್‌-ಕಷ್ಟ ಎಂದ ಸುಪ್ರೀಂ

- Advertisement -
- Advertisement -

ನಮ್ಮ ಶಾಸಕರು ಒತ್ತಡದಲ್ಲಿದ್ದಾರೆ. ಹಾಗಾಗಿ ಅವರು ತಮ್ಮ ಮನಗಳಿಗೆ ಹಿಂದಿರುಗಿ ವಿಶ್ರಾಂತಿ ಪಡೆಯಲಿ. ನಂತರ ಎರಡು ವಾರಗಳಲ್ಲಿ ಬಹುಮತ ಸಾಬೀತುಪಡಿಸುತ್ತೇವೆ ಎಂದು ಸುಪ್ರೀಂ ಕೋರ್ಟ್‌‌ಗೆ ಕಾಂಗ್ರೆಸ್‌ ತಿಳಿಸಿದೆ.

ಬೆಂಗಳೂರಿನಲ್ಲಿರುವ ಅತೃಪ್ತ ಕಾಂಗ್ರೆಸ್ ಶಾಸಕರೊಂದಿಗೆ ವಿಡಿಯೋ ಕಾಲ್‌ ಮೂಲಕ ಮಾತನಾಡಬಹುದೇ ಎಂದು ಸುಪ್ರೀಂ ಕೋರ್ಟ್ ಮಧ್ಯಪ್ರದೇಶ ಸ್ಪೀಕರ್ ಪ್ರಜಾಪತಿಯವರನ್ನು ಕೇಳಿದೆ.

ಪ್ರತಿಯಾಗಿ ಸುಪ್ರೀಂ ಕೋರ್ಟ್‌ ನಾನು ಶಾಸಕರಿಗೆ ಖುದ್ದಾಗಿ ಬಂದು ರಾಜೀನಾಮೆ ನೀಡುವಂತೆ ಸೂಚಿಸಿದ್ದೇನೆ ಎಂದಿದ್ದಾರೆ.

ಆದರೆ ಕಾಂಗ್ರೆಸ್‌ ಶಾಸಕರು ರಕ್ಷಣೆ ಇಲ್ಲದೆ ಸ್ಪೀಕರ್‌ ಬಳಿಗೆ ಬರಲು ಸಾಧ್ಯವಿಲ್ಲ. ತಮ್ಮ ರಾಜೀನಾಮೆಯನ್ನು ಹಿಂತೆಗೆದುಕೊಳ್ಳುವಂತೆ ಕಾಂಗ್ರೆಸ್ ಪಕ್ಷವು ಒತ್ತಾಯಿಸಲು ಪ್ರಯತ್ನಿಸುತ್ತಿದೆ ಆದ್ದರಿಂದ ಅವರು ತೀವ್ರ ಒತ್ತಡದಲ್ಲಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

“ಅವರ ರಾಜೀನಾಮೆಯು ನಿಜವಾಗಿಯೂ ಸ್ವಯಂಪ್ರೇರಿತವಾಗಿದೆಯೆ ಎಂದು ಖಚಿತಪಡಿಸಿಕೊಳ್ಳಬೇಕು. ಹಾಗಾಗಿ ನಾವು ಬೆಂಗಳೂರು ಅಥವಾ ಇನ್ನಿತರ ಸ್ಥಳಗಳಿಗೆ ವೀಕ್ಷಕರನ್ನು ನೇಮಿಸಬಹುದು. ಅವರು ವೀಡಿಯೊ ಕಾನ್ಫರೆನ್ಸಿಂಗ್‌ನಲ್ಲಿ ನಿಮ್ಮೊಂದಿಗೆ ಸಂಪರ್ಕ ಸಾಧಿಸಬಹುದು ಮತ್ತು ನಂತರ ನೀವು ನಿರ್ಧರಿಸಬಹುದು” ಎಂದು ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಸ್ಪೀಕರ್‌ಗೆ ತಿಳಿಸಿದ್ದಾರೆ.

ಇದರ ಕುರಿತು ತೀರ್ಮಾನಿಸಲು ಸ್ಪೀಕರ್ ಎರಡು ವಾರಗಳ ಕಾಲ ಸಮಯ ಬೇಕೆಂದು ಸುಪ್ರೀಂ ಕೋರ್ಟ್‌ಗೆ ಕೇಳಿದರು.

“ನಿರ್ಧರಿಸಲು ನನಗೆ ಎರಡು ವಾರ ಕಾಲಾವಕಾಶ ನೀಡಿ. ಬಂಡಾಯ ಶಾಸಕರು ತಮ್ಮ ಮನೆಗಳಿಗೆ ಮಧ್ಯಪ್ರದೇಶಕ್ಕೆ ಹಿಂತಿರುಗಲಿ. ಅವರು ತಮ್ಮ ಕುಟುಂಬಗಳಿಂದ ದೂರವಿರುವ ಅಸ್ವಾಭಾವಿಕ ಆವಾಸಸ್ಥಾನದಲ್ಲಿ ವಾಸಿಸುತ್ತಿದ್ದಾರೆ. ವಿಡಿಯೋ-ಕಾನ್ಫರೆನ್ಸಿಂಗ್ ಕಲ್ಪನೆಯು ನನ್ನ ಆತಂಕಗಳನ್ನು ಮಾತ್ರ ದೃಢೀಕರಿಸುತ್ತದೆ” ಎಂದು ಹಿರಿಯ ವಕೀಲ ಮತ್ತು ಕಾಂಗ್ರೆಸ್ ಮುಖಂಡ ಅಭಿಷೇಕ್ ಮನು ಸಿಂಗ್ವಿ ಹೇಳಿದ್ದಾರೆ.

ಅದಕ್ಕೆ ಇದಕ್ಕೆ ಒಪ್ಪದ ನ್ಯಾಯಮೂರ್ತಿ ಚಂದ್ರಚೂಡ್ ಅವರು “ವಾರಗಳು ಕುದುರೆ ವ್ಯಾಪಾರ ನಡೆಸಲು ಬೇಕಾದ ಚಿನ್ನದ ಗಣಿಗಳಾಗಿವೆ. ಅದಕ್ಕಾಗಿಯೇ ನ್ಯಾಯಾಲಯವು ಬಹುಮತ ಸಾಬೀತುಪಡಿಸಲು ಮಾಡಬೇಕಾದ ಕೆಲಸಗಳ ಬಗ್ಗೆ ಯೋಚಿಸುತ್ತಿದೆ. ವಿಶ್ವಾಸಮತ ಯಾಚನೆ ನಡೆಯುವಂತೆ ನೋಡಿಕೊಳ್ಳಿರಿ ಎಂದು ಸೂಚಿಸಿದ್ದಾರೆ.

ಆರು ಕಾಂಗ್ರೆಸ್ ಶಾಸಕರ ರಾಜೀನಾಮೆಯನ್ನು ಸ್ಪೀಕರ್ ಶನಿವಾರ ಅಂಗೀಕರಿಸಿದ ನಂತರ, ಪಕ್ಷವು ಈಗ 108 ಶಾಸಕರನ್ನು ಹೊಂದಿದೆ. ಇವರಲ್ಲಿ ಬೆಂಗಳೂರಿನಲ್ಲಿರುವ 16 ಅತೃಪ್ತರು ಸಹ ಸೇರಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...