Homeಮುಖಪುಟಮೋದಿ ಸೃಷ್ಟಿಸಿದ 10ಕೋಟಿ ಉದ್ಯೋಗಗಳು ಎಲ್ಲಿವೆ? ಸಿದ್ದರಾಮಯ್ಯ ಪ್ರಶ್ನೆ

ಮೋದಿ ಸೃಷ್ಟಿಸಿದ 10ಕೋಟಿ ಉದ್ಯೋಗಗಳು ಎಲ್ಲಿವೆ? ಸಿದ್ದರಾಮಯ್ಯ ಪ್ರಶ್ನೆ

- Advertisement -
- Advertisement -

ನೋಟು ರದ್ದತಿ, ಜಿಎಸ್‌ಟಿ ಜಾರಿ ನಂತರದಿಂದ ದೇಶದ ಜಿಡಿಪಿ ಇಳಿಮುಖದಲ್ಲಿ ಸಾಗುತ್ತಿದೆ. ಪ್ರಧಾನಿ ಮೋದಿಯವರು ಮೊದಲ ಬಾರಿ ಆಯ್ಕೆಯಾದಾಗ 5 ವರ್ಷಗಳಲ್ಲಿ 10 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ ಅಂದಿದ್ದರು. ಈವರೆಗೆ ಎಷ್ಟು ಉದ್ಯೋಗ ಸೃಷ್ಟಿಯಾಗಿದೆ ಎಂದು ಲೆಕ್ಕಕೊಡಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಅಧಿವೇಶನದಲ್ಲಿ ಬಜೆಟ್‌ ಮೇಲಿನ ಚರ್ಚೆಯ ಕುತು ಮಾತನಾಡಿದ ಅವರು, ಹೊಸ ಉದ್ಯೋಗ ಸೃಷ್ಟಿಯ ಕತೆ ಇರಲಿ, ಕೋಟ್ಯಂತರ ಮಂದಿ ಇದ್ದ ಉದ್ಯೋಗವನ್ನೇ ಕಳೆದುಕೊಂಡಿದ್ದಾರೆ. ಬಿಜೆಪಿ ನಾಯಕರು ಒಮ್ಮೆ ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿ. ಅಲ್ಲಿನ ಬಹುತೇಕ ಉದ್ದಿಮೆಗಳು ಬಾಗಿಲು ಮುಚ್ಚುವ ಹಂತದಲ್ಲಿವೆ. ದೇಶದ ಆರ್ಥಿಕ ಸ್ಥಿತಿ ಪ್ರಗತಿಯ ಹಾದಿಯಲ್ಲಿದ್ದರೆ ಉದ್ದಿಮೆಗಳೇಕೆ ಬಾಗಿಲು ಮುಚ್ಚುತ್ತವೆ? ನಿನ್ನೆ ಬಿಜೆಪಿ ಸಚಿವರೊಬ್ಬರು ಭಾರತ ಬಹುದೊಡ್ಡ ಆರ್ಥಿಕ ಶಕ್ತಿಯಾಗಿ ಬದಲಾಗಿದೆ ಅಂದಿದ್ದರು. ಹಾಗಾದರೆ ನಮ್ಮ‌ ರಾಜ್ಯದ ತೆರಿಗೆ ಪಾಲು, ಜಿಎಸ್‌ಟಿ ಪರಿಹಾರ, ವಿಶೇಷ ಅನುದಾನಗಳಿಗೆ ಕೇಂದ್ರ ಕತ್ತರಿ ಹಾಕಿರುವುದು ಯಾಕೆ? ದೇಶದ ಜಿಡಿಪಿ ಕುಂಟುತ್ತಾ ಸಾಗುತ್ತಿರುವಾಗ ಆರ್ಥಿಕತೆ ಹೇಗೆ ಬೆಳೆಯುತ್ತೆ? ಎಂದು ಪ್ರಶ್ನಿಸಿದ್ದಾರೆ.

2013-14 ರಲ್ಲಿ ರೂ.1,04,000 ಕೋಟಿಯಿದ್ದ ಬಜೆಟ್ ಗಾತ್ರ 2018-19ಕ್ಕೆ ರೂ.2,09,000 ಕೋಟಿಗೆ ಏರಿಕೆಯಾಗಿತ್ತು. 2018-19ರಲ್ಲಿ ನಮ್ಮ‌ ಸರ್ಕಾರ ರೂ.41,000 ಕೋಟಿ ಸಾಲ ಮಾಡಿತ್ತು, ಈಗಿನ ಸರ್ಕಾರ ರೂ.52,918 ಕೋಟಿ ಸಾಲ ಮಾಡುತ್ತಿದೆ. ಈಗ ಹೇಳಲಿ ಸಾಲ ಮಾಡಿ ಹೋಳಿಗೆ ತಿನ್ನುತ್ತಿರೋದು ಯಾರು ಅಂತ? 2019-20ನೇ ಸಾಲಿಗೆ ಕೇಂದ್ರದ ಅನುದಾನ ರೂ.19,840 ಕೋಟಿ ಬರಬೇಕಿತ್ತು, ಆದರೆ ಅದು ರೂ.15,444 ಕೋಟಿಗೆ ಇಳಿದಿದೆ. 15ನೇ ಹಣಕಾಸು ಆಯೋಗದ ವರದಿ ಪ್ರಕಾರ 2023-24ಕ್ಕೆ ಕೇಂದ್ರದಿಂದ ಬರುವ ಅನುದಾನ ರೂ.16,705 ಕೋಟಿ ಆಗಲಿದೆ. ವರ್ಷ ಕಳೆದಂತೆ ಈ ಅನುದಾನದ ಪ್ರಮಾಣ ನಮ್ಮ ರಾಜ್ಯಕ್ಕೆ ಮಾತ್ರ ಕಡಿಮೆಯಾಗುವುದು ಯಾಕೆ ಎಂದಿದ್ದಾರೆ.

2023-24 ರ ವೇಳೆಗೆ ರಾಜಸ್ವ ಆದಾಯ ರೂ.2,07,230 ಕೋಟಿ ಇರಲಿದ್ದು, ರಾಜಸ್ವ ಖರ್ಚು ರೂ. 2,54,062 ಕೋಟಿ ತಲುಪಲಿದೆ. ಇದರಿಂದ ರೂ.46,832 ಕೋಟಿ ರಾಜಸ್ವ ಕೊರತೆ ಎದುರಾಗಲಿದೆ. ಹೀಗಾದಾಗ ಅಭಿವೃದ್ಧಿ ಕಾರ್ಯಗಳ ಅನುಷ್ಠಾನ ಹೇಗೆ ಸಾಧ್ಯ? ಇದರಿಂದ ಸರ್ಕಾರ ಇನ್ನಷ್ಟು ಸಾಲದ ಮೊರೆ ಹೋಗಬೇಕಾಗುತ್ತದೆ. ಪ್ರಸಕ್ತ ಸಾಲಿನ ರಾಜಸ್ವ ಆದಾಯ ರೂ.1,77,255 ಕೋಟಿ ಇದೆ, ಇದರಲ್ಲಿ ಬದ್ಧತಾ ಖರ್ಚು ರೂ.1,55,191 ಕೋಟಿ. ಅಂದರೆ ಬೇರೆ ಅಭಿವೃದ್ಧಿ ಕಾರ್ಯಗಳಿಗೆ ರೂ.22,064 ಕೋಟಿ ಹಣ ಉಳಿಯುತ್ತೆ. ಹೀಗಾದರೆ ರಾಜ್ಯದ ನೀರಾವರಿ ಯೋಜನೆಗಳಿಗೆ ಸರ್ಕಾರ ಹಣ ಎಲ್ಲಿಂದ ತರುತ್ತೆ ಎಂದು ಕೇಳಿದರು.

15ನೇ ಹಣಕಾಸು ಆಯೋಗವು ಜನಸಂಖ್ಯೆ ಆಧಾರದ ಮೇಲೆ ರಾಜ್ಯಗಳ ಪಾಲು ಹಂಚಿಕೆ ಮಾಡಿದೆ. ಜನಸಂಖ್ಯಾ ನಿಯಂತ್ರಣವನ್ನು ಕರ್ನಾಟಕ ಸರಿಯಾಗಿ ನಿಭಾಯಿಸಿರುವುದಕ್ಕೆ ಬೋನಸ್ ಕೊಡುವುದರ ಬದಲು ನಮ್ಮ ಪಾಲು ಕಡಿತಗೊಳಿಸಿ ಬರೆ ಹಾಕಿದ್ದಾರೆ. ಇದ್ಯಾವ ರೀತಿಯ ನ್ಯಾಯ? ಇನ್ನೂ ಕಾಲ ಮಿಂಚಿಲ್ಲ, ನವೆಂಬರ್ 20ಕ್ಕೆ ಹಣಕಾಸು ಆಯೋಗ ತನ್ನ ಅಂತಿಮ ವರದಿ ನೀಡಲಿದೆ, ಅಷ್ಟರೊಳಗೆ ಪ್ರಧಾನಿಗಳು, ಹಣಕಾಸು ಸಚಿವರ ಜೊತೆ ಮಾತನಾಡಿ ಉಳಿದ 4 ವರ್ಷಗಳಿಗಾದ್ರೂ ನಮಗೆ ನ್ಯಾಯಯುತ ಪಾಲು ನೀಡುವಂತೆ ಮನವರಿಕೆ ಮಾಡಬೇಕು. ರಾಜ್ಯದ ಬಿಜೆಪಿ ಸಂಸದರು, ಸಚಿವರು, ನಾಯಕರುಗಳು ಈಗಲೇ ಎಚ್ಚೆತ್ತುಕೊಳ್ಳುವುದು ಸೂಕ್ತ ಎಂದಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಿಎಂ ಹುದ್ದೆಗೆ 500 ಕೋಟಿ’ : ಚರ್ಚೆಗೆ ಕಾರಣವಾದ ನವಜೋತ್ ಕೌರ್ ಹೇಳಿಕೆ; ಕಾಂಗ್ರೆಸ್‌ ಮೇಲೆ ಮುಗಿಬಿದ್ದ ಎಎಪಿ, ಬಿಜೆಪಿ

"ಐನೂರು ಕೋಟಿ ರೂಪಾಯಿಯ ಸೂಟ್ ಕೇಸ್ ಕೊಡುವವರು ಸಿಎಂ ಆಗುತ್ತಾರೆ" ಎಂಬ ಪಕ್ಷದ ನಾಯಕ ನವಜೋತ್ ಸಿಂಗ್ ಸಿಧು ಅವರ ಪತ್ನಿ ನವಜೋತ್ ಕೌರ್ ಅವರ ಹೇಳಿಕೆ ಕುರಿತು ಸ್ಪಷ್ಟನೆ ನೀಡುವಂತೆ ಪಂಜಾಬ್‌ನ...

ಡಿಕೆಶಿ ಅವಕಾಶ ಕೇಳಿದ್ರು, ನಾಯಕತ್ವ ಬದಲಾವಣೆಗೆ ಹೈಕಮಾಂಡ್ ಸಮ್ಮತಿಸಿಲ್ಲ: ಯತೀಂದ್ರ ಸಿದ್ದರಾಮಯ್ಯ

ಸಿದ್ದರಾಮಯ್ಯ 5 ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂಬ ವಿಶ್ವಾಸ ವೈಯಕ್ತಿಕವಾಗಿ ನನಗಿದೆ ಎಂದು ಯತೀಂದ್ರ ಸಿದ್ದರಾಮಯ್ಯ ಬೆಳಗಾವಿಯಲ್ಲಿ ಸ್ಪಷ್ಟಪಡಿಸಿದ್ದಾರೆ. ಡಿಕೆಶಿ ಅವಕಾಶ ಕೇಳಿದ್ದರು. ಆದರೆ, ನಾಯಕತ್ವ ಬದಲಾವಣೆ ಪರಿಸ್ಥಿತಿ ಇಲ್ಲ ಎಂದು ಹೈಕಮಾಂಡ್...

ಇಂಡಿಗೋ ಬಿಕ್ಕಟ್ಟು : ತುರ್ತು ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ

ಇಂಡಿಗೋ ವಿಮಾನ ಬಿಕ್ಕಟ್ಟಿಗೆ ಸಂಬಂಧಿಸಿದ ಅರ್ಜಿಯನ್ನು ತುರ್ತು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸೋಮವಾರ (ಡಿಸೆಂಬರ್ 8) ನಿರಾಕರಿಸಿದೆ. ಈ ವಿಷಯದ ಬಗ್ಗೆ ಭಾರತ ಸರ್ಕಾರ ಈಗಾಗಲೇ ಗಮನ ಹರಿಸಿ ಕ್ರಮ ಕೈಗೊಂಡಿದೆ....

ಮಂಡ್ಯದಲ್ಲಿ ಭೀಕರ ಅಪಘಾತ: ಸೇತುವೆಯಿಂದ ಕೆಳಗೆ ಬಿದ್ದ ಕಾರು: ಒಂದೇ ಕುಟುಂಬದ ಮೂವರು ಸಾವು

ಚಾಲಕನ ನಿಯಂತ್ರಣ ತಪ್ಪಿ ಕಾರು ಸೇತುವೆಗೆ ಡಿಕ್ಕಿ ಹೊಡೆದು, ಬಳಿಕ ಹಳ್ಳಕ್ಕೆ ಬಿದ್ದಿದ್ದು, ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ನಾಗಮಂಗಲ ತಾಲ್ಲೂಕಿನ ತಿಟ್ಟನಹೊಸಹಳ್ಳಿ ಮತ್ತು ಎ.ನಾಗತಿಹಳ್ಳಿ...

ಮುಖ್ಯಮಂತ್ರಿ ಸಿದ್ದರಾಮಯ್ಯ ಆಯ್ಕೆ ಅಸಿಂಧು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರುಣಾ ವಿಧಾನಸಭಾ ಕ್ಷೇತ್ರದಿಂದ 2023ರಲ್ಲಿ ಆಯ್ಕೆಯಾಗಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಈ ಸಂಬಂಧ ಪ್ರತಿಕ್ರಿಯಿಸುವಂತೆ ಸಿದ್ದರಾಮಯ್ಯ ಅವರಿಗೆ ಸೂಚಿಸಿ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ...

ನಟಿಯ ಅಪಹರಣ, ಅತ್ಯಾಚಾರ ಪ್ರಕರಣ : ಮಲಯಾಳಂ ನಟ ದಿಲೀಪ್ ಖುಲಾಸೆ

ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ (2017ರ ಪ್ರಕರಣ) ಮಲಯಾಳಂನ ಪ್ರಮುಖ ನಟ ದಿಲೀಪ್ ಅವರನ್ನು ಎರ್ನಾಕುಲಂನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಸೋಮವಾರ (ಡಿಸೆಂಬರ್ 8) ಖುಲಾಸೆಗೊಳಿಸಿದೆ. ನ್ಯಾಯಮೂರ್ತಿ ಹನಿ ಎಂ....

ಇಂದಿನಿಂದ ಬೆಳಗಾವಿ ಚಳಿಗಾಲದ ಅಧಿವೇಶನ

ರಾಜ್ಯದಲ್ಲಿ ಅಧಿಕಾರ ಹಂಚಿಕೆಯ ಚರ್ಚೆಯ ನಡುವೆ ಇಂದಿನಿಂದ (ಡಿಸೆಂಬರ್ 8) ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ವಿಧಾನಮಂಡಲದ ಚಳಿಗಾಲದ ಅಧಿವೇಶನ ಪ್ರಾರಂಭಗೊಂಡಿದೆ. ಉತ್ತರ ಕರ್ನಾಟಕದ ಸಮಸ್ಯೆಗಳು, ರೈತರ ಸಂಕಷ್ಟ ಮತ್ತು ಬೆಲೆ ಏರಿಕೆಯ ವಿಷಯಗಳನ್ನು ಮುಂದಿಟ್ಟುಕೊಂಡು...

ಕೆಲಸದ ಅವಧಿ ಬಳಿಕ ಯಾವುದೇ ಕರೆಗಳು, ಇಮೇಲ್‌ಗಳಿಗೆ ಉತ್ತರಿಸಬೇಕಿಲ್ಲ : ಸಂಪರ್ಕ ಕಡಿತ ಹಕ್ಕು ಮಸೂದೆ ಹೇಳುವುದೇನು?

ದೇಶದಲ್ಲಿ ಕಾರ್ಪೋರೇಟ್ ಸಂಸ್ಥೆಗಳು ಉದ್ಯೋಗಿಗಳ ಮೇಲೆ ಅತೀವ ಕೆಲಸದ ಹೊರೆಯನ್ನು ಹೇರಿ ಅವರ ಖಾಸಗಿ ಜೀವನವನ್ನು ಕಿತ್ತುಕೊಳ್ಳುವ ಮೂಲಕ ಮಾನಸಿಕ ಒತ್ತಡಕ್ಕೆ ತಳ್ಳುತ್ತಿರುವ ಪರಿಸ್ಥಿತಿ ಗಂಭೀರ ಹಂತಕ್ಕೆ ತಲುಪಿದೆ. ಅದಾಗ್ಯೂ ಕೆಲ ಕಾರ್ಪೋರೇಟ್‌...

ಯುದ್ಧ ವಿರೋಧಿ ವಾಟ್ಸಾಪ್ ಸ್ಟೇಟಸ್ : ಬಲಪಂಥೀಯರ ಕೆಂಗಣ್ಣಿಗೆ ಗುರಿಯಾಗಿದ್ದ ದಲಿತ ಪ್ರಾಧ್ಯಾಪಕಿ ವಜಾ

ಭಾರತೀಯ ಸೇನೆಯ ಆಪರೇಷನ್ ಸಿಂಧೂರ್ ವೇಳೆ ಯುದ್ಧ ವಿರೋಧಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದ ಚೆನ್ನೈನ ಎಸ್‌ಆರ್‌ಎಂ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಲೋರಾ ಶಾಂತಕುಮಾರ್ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಎಸ್‌ಆರ್‌ಎಂನ ಆಂತರಿಕ ಸಮಿತಿಯ ವರದಿಯು ಲೋರಾ...

ಗಾಝಾದಲ್ಲಿ ಕದನ ವಿರಾಮ : ಎರಡು ವರ್ಷಗಳ ಬಳಿಕ ಬೆಥ್ಲೆಹೆಮ್‌ನಲ್ಲಿ ಮರುಕಳಿಸಿದ ಕ್ರಿಸ್‌ಮಸ್ ಸಂಭ್ರಮ

ಗಾಝಾದಲ್ಲಿ ಕದನ ವಿರಾಮ ಜಾರಿಯಾಗಿರುವ ಹಿನ್ನೆಲೆ, ಎರಡು ವರ್ಷಗಳ ನಂತರ ಈ ಬಾರಿ ಯೇಸು ಕ್ರಿಸ್ತನ ಜನ್ಮಸ್ಥಳ ಜೆರುಸಲೇಂನ ಬೆಥ್ಲೆಹೆಮ್‌ನಲ್ಲಿ ಕ್ರಿಸ್‌ಮಸ್‌ ಸಂಭ್ರಮಾಚರಣೆ ಮರುಕಳಿಸಿದೆ. ಶನಿವಾರ (ಡಿಸೆಂಬರ್ 6) ಬೆಥ್ಲೆಹೆಮ್‌ನ ಮ್ಯಾಂಗರ್ ಸ್ಕ್ವೇರ್‌ನಲ್ಲಿರುವ ಚರ್ಚ್...